ಶಿವಕುಮಾರ ಕೆ. ಎಸ್. ಪಿಸುಮಾತು

ಶಿವಕುಮಾರ ಕೆ. ಎಸ್.'s picture

 


 


ಸುಮ್ನಿರಕಾಗ್ದೇ ಅದೇನೋ ಮಾಡಿದ್ರೂ ಅಂತಾರಲ್ಲ ಹಂಗೇ ನಾನೂ ನಿನ್ನೆ ಹೋಗಿ 'ಪಂಚರಂಗಿ' ಸಿನೆಮಾ ನೋಡ್ಕಂಡ್ ಬಂದೆ... 'ಗಾಳಿಪಟ' ಪಿಚ್ಚರ್ರಿಗೆ ಆ ಹೆಸ್ರು ಯೋಗರಾಜ್ ಭಟ್ಟರು ಯಾಕಿಟ್ರು ಅಂತಾ ತಲೆ ಕೆಡಿಸಿಕೊಂಡವನಿಗೆ ಈಗ ಈ ಸಿನೆಮಾಕ್ಕೆ 'ಪಂಚರಂಗಿ' ಅಂತಾ ಹೆಸರ್ಯಾಕೆ ಅಂತಾ ತಲೆ ಕೆರೆದುಕೊಳ್ಳೊ ಪರಿಸ್ಥಿತಿಗಳು...

ಶಿವಕುಮಾರ ಕೆ. ಎಸ್.'s picture

ರಾತ್ರಿ ಆಫೀಸಿನಿಂದ ವಾಪಸ್ಸು ಬರುತ್ತ, ಆಗ ತಾನೇ ಶುರುವಾಗಿದ್ದ ಜಿಟಿ ಜಿಟಿ ಮಳೆ ಧಾರಾಕಾರವಾಗುವ ಮೊದಲು ರೂಮ್ ತಲುಪಬೇಕೆಂದು ಬೈಕಿನ ಆಕ್ಸಿಲರೇಟರ್ ತಿರುವಿ ನಾಗಾಲೋಟಕ್ಕೆ ಅಣಿಯಾದವನು, ಥಟ್ಟನೆ ಕಣ್ಣು ಕೆಂಪು ಮಾಡಿಕೊಂಡ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸ ಹೋಗಿ ನೆನೆದ ರೋಡಿನ ಮೇಲೆ ಅರಗಿನಂತೆ ಒರೆದುಕೊಂಡಿದ್ದ ಗುಲ್ಮೊಹರ್ ಮರಗಳ ಅರೆದ ಬೀಜಗಳ ಅಂಟಿನ ಮೇಲೆ ಜಾರಿ ಬಿದ್ದು, ಆಚೀಚಿನವರು ಬಂದು, ಬೈಕು ಎತ್ತಿ, ಇವನನ್ನೂ ಎತ್ತಿ “ಏನೋ ಪೆಟ್ಟಾಗಿಲ್ಲ ತಾನೇ? ಸ್ವಲ್ಪ ನೋಡಿಕೊಂಡು ರೈಡ್ ಮಾಡಿ ಸರ್, ಮಳೆಗೆ ರೋಡುಗಳೆಲ್ಲ ಜಾರ್ತವೆ” ಅಂದು, ಇವನ ಬೈಕಿನ ನಾಗಾಲೋಟ ಎದೆಗೂಡಿಗೆ ರವಾನೆಯಾಗಿ, ಕೈಗಳು ಅದುರುತಿದ್ದರೂ, ತೊಡೆಗಳು ನಡುಗುತಿದ್ದರೂ, ನಿಲ್ಲದೇ ಮನೆಗೆ ಬಂದವನು ಮೊದಲು ‘ಡ್ಯಾಮೇಜ್ ಅಸ್ಸೆಸ್‌ಮೆಂಟ್’ ಮಾಡಿಕೊಂಡು ‘ಏನೂ ಆಗಿಲ್ಲ’  ಅಂದು ಸಮಾಧಾನದಿಂದ ಕೋಟಿನ ಜೇಬಿನೊಳಗಿದ್ದ ಮೊಬೈಲಿನ ಪರದೆ ನೋಡಿದರೆ ಆಗಲೇ ಆಗಲೇ ಒಂಬತ್ತು ಮಿಸ್ಡ್ ಕಾಲ್ಸ್, ಮೂರು ಸಂದೇಶಗಳು, ‘ಎಲ್ಲಿದೀಯಾ? ಆಫೀಸ್ ಬಿಟ್ಯಾ?’, ‘ಯಾಕೆ ಫೋನ್ ಎತ್ಕೋತಾ ಇಲ್ಲ’, ‘ಮೆಸೇಜ್ ಕಂಡ ತಕ್ಷಣ ಕಾಲ್ ಮಾಡು’...

ಶಿವಕುಮಾರ ಕೆ. ಎಸ್.'s picture


ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ)  

ಶಿವಕುಮಾರ ಕೆ. ಎಸ್.'s picture

"ಐ ಲವ್ ಯೂ"
ಚಕ್ರತೀರ್ಥದ ಉತ್ತುಂಗದಲ್ಲಿ ಈರ್ವರ ಮೈಮನಗಳೂ ಝೇಂಕರಿಸುತ್ತಿರುವಾಗ, ತಾನು ಊಟೆ ಊಟೆಯಾಗಿ ಅವಳಾಳದೊಳಗೆ ಬರಿದಾಗುತ್ತಿರುವಾಗ; ತನ್ನದೇ ತಲೆಗೂದಲಿನಲ್ಲಿ ಉತ್ಪತ್ತಿಯಾಗಿ, ಹಣೆ, ಹುಬ್ಬಿನ ಮೇಲೆಲ್ಲ ಧಾರಾಕಾರವಾಗಿ, ಅವಳ ಮುಖಕ್ಕಿಳಿದು ತೋಯಿಸಿದ ತನ್ನ ಬೆವರು, ಅವಳ ಕೆನ್ನೆಯನ್ನು ಸುಡುತ್ತಿದ್ದ ತನ್ನದೇ ಹಸಿ ಬಿಸಿ ತುಟಿಗಳಿಗೆ ತಾಕಿ ಒದ್ದೆ ಒದ್ದೆಯೆನ್ನಿಸುತ್ತಿರುವಾಗ ಅವನು ನಿಲ್ಲದುಸಿರಿನಲ್ಲಿ ಮೆಲ್ಲನುಸುರಿದ,

ಶಿವಕುಮಾರ ಕೆ. ಎಸ್.'s picture

ಅರವತ್ಮೂರನೇ ಸ್ವಾತಂತ್ಯ ದಿನಾಚರಣೆಯ ಶುಭಾಶಯಗಳು...

ವಂದೇ ಮಾತರಂ
--------------------
ವಂದೇ ಮಾತರಂ, ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ ||

ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ, ವರದಾಂ ಮಾತರಂ ||

ಸಪ್ತ ಕೋಟಿ ಕಂಠ ಕಲಕಲ ನಿನಾದ ಕರಾಲೇ
ದ್ವಿಸಪ್ತ ಕೋಟಿ ಭುಜೈರ್ಧ್ರತ ಖರಕರವಾಲೇ

ಶಿವಕುಮಾರ ಕೆ. ಎಸ್.'s picture

ಹೊಸ ಬೈಕು ಖರೀದಿಸಿದ ಮೇಲೆ ಸುಕುಮಾರನಿಗೆ ಭೂತ-ಪ್ರೇತಗಳ ಇರುವಿಕೆಯ ಬಗ್ಗೆ ನಂಬಿಕೆ ಬಂತು! ಅಂದರೆ ಇದೂವರೆಗೂ ಈ ವಿಷಯದಲ್ಲಿ ಇವನಿಗೆ ಆಸಕ್ತಿಯಿರಲಿಲ್ಲವೆಂದಾಗಲೀ ಅಥವಾ ಇವೆಲ್ಲವನ್ನೂ ನಂಬದ ಧೈರ್ಯವಿತ್ತೆಂದಾಗಲೀ ಇದರರ್ಥವಲ್ಲ. ಇವನ ಸ್ನೇಹಿತರಿಗೆ ಹೋಲಿಸಿದರೆ ಇವನೇ ಅಳ್ಳೆದೆಯವನು, ಪುಕ್ಕಲ. ಹೇಗೋ ಮೆತ್ತ ಮೆತ್ತಗೆ ಕಾಲೇಜು ಮುಗಿಸಿ ಕೊಂಡು ಬೆಂಗಳೂರಿನಲ್ಲಿ ಕೆಲಸ ಹಿಡಿದ. ಕೆಲಸ ಹಿಡಿದು ನಾಲ್ಕೈದು ವರ್ಷಗಳಾದ ಮೇಲೆ ಅವರಿವರ ಮತ್ತು ಸ್ನೇಹಿತರನೇಕರ ಸಲಹೆ, ಸೂಚನೆಗಳೆಲ್ಲ ಖಾಲಿಯಾಗಿ, ನಾಲ್ಕು ವರ್ಷಗಳಾದರೂ ಕೆಲಸಕ್ಕೆ ಹೋಗಲು ಇನ್ನೂ 'ನಗರ ಸಾರಿಗೆ' ಬಸ್ಸುಗಳನ್ನೇ ಅವಲಂಬಿಸಿಕೊಂಡಿದ್ದ ಇವನ ಪುಕ್ಕಲತನದ ಬಗ್ಗೆ ಬೈಗುಳಗಳು, ಬೆದರಿಕೆಗಳು ಶುರುವಾದ ಮೇಲೆ 'ಅದ್ಯಾವ ಬ್ರಹ್ಮವಿದ್ಯೆಯೋ ನೋಡಿಬಿಡೋಣ' ಎಂದುಕೊಂಡು ಬೈಕು ಖರೀದಿಸಿಯೇ ಬಿಟ್ಟ. ಮತ್ತೆ ಅವರಿವರ ಸಲಹೆ ಸೂಚನೆ, ಬೆದರಿಕೆಗಳನೆಲ್ಲ ಗಾಳಿಗೆ ತೂರಿ, 'ಹೇಗಿದ್ದರೂ ಬೈಕೂಂತ ತಗೋತಾ ಇದೀನಿ' ಎಂದುಕೊಂಡು ಬಲವಾಗಿಯೇ ಇದ್ದ ದೊಡ್ಡ ಬೈಕನ್ನೇ ತೆಗೆದುಕೊಂಡ.

ಶಿವಕುಮಾರ ಕೆ. ಎಸ್.'s picture

ಟರ್ಮಿನೇಟರ ಸಾಲ್ವೇಶನ್ಟರ್ಮಿನೇಟರ ಸಾಲ್ವೇಶನ್

'ಟರ್ಮಿನೇಟರ್' ಚಲನಚಿತ್ರಗಳ ಸಾಲಿನಲ್ಲಿ ನಾಲ್ಕನೆಯ ಚಿತ್ರವಾಗಿ ಇವತ್ತು (26/ಜೂನ್/2009) ಭಾರತದಲ್ಲಿ ಬಿಡುಗಡೆಯಾಗಿರುವ ಇಂಗ್ಲೀಷ್ ಚಿತ್ರ - 'ಟರ್ಮಿನೇಟರ್ ಸಾಲ್ವೇಶನ್'.

ಶಿವಕುಮಾರ ಕೆ. ಎಸ್.'s picture

ಮ್ಮ ಬಸ್ಸು ನಗರದ ಪರಿದಿಯೊಳಕ್ಕೆ ಬರುತ್ತಿದ್ದಂತೆಯೇ ಶುರುವಾದ ಜನರ ಓಡಾಟ, ವಾಹನ ದಟ್ಟಣಿ, ಧೂಳು ಎಲ್ಲವನ್ನೂ ನೋಡಿ ಕಿಟಕಿ ಪಕ್ಕ ಕುಳಿತ್ತಿದ್ದ ನನ್ನಮ್ಮ ಅಚ್ಚರಿಯಿಂದ ಉದ್ಗರಿಸಿದಳು. “ಅಲ್ಲಾ, ಈ ಪಾಟಿ ಜನ ಎಲ್ಲಿಂದ ಬರ್ತಾರೆ? ಏನು ಮಾಡ್ತಾರೆ?” ನಾನು ಉತ್ತರಿಸಿದೆ,

ಶಿವಕುಮಾರ ಕೆ. ಎಸ್.'s picture

ಒಂದೂರಿನಲ್ಲಿ ಒಬ್ಬಳು ಮಹಾ-ಜಿಪುಣಿ ಮುದುಕಿಯಿದ್ದಳು. ಆಕೆಗೆ ಒಬ್ಬನೇ ಮಗ, ಆ ಮಗನಿಗೊಬ್ಬಳು ಹೆಂಡತಿ. ಮಗ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಮುದುಕಿ ಯಾವಾಗಿನಿಂದಲೂ ತರಕಾರಿ ವ್ಯಾಪಾರ ಮಾಡುತ್ತಿದ್ದಳು. ಹಿತ್ತಲಿನಲ್ಲಿ ಸಣ್ಣ ಸಣ್ಣ ಪಾತಿ ಮಾಡಿ ಇಷ್ಟಿಷ್ಟೇ ಬದನೇಕಾಯಿ, ಗೆಣಸು; ಸಣ್ಣ ಸಣ್ಣ ಚಪ್ಪರ ಹಾಕಿ ತೊಂಡೇಕಾಯಿ, ಚಪ್ಪರದವರೆ; ಬೇಲಿಯ ಮೇಲಕ್ಕೆಲ್ಲ ಬಳ್ಳಿ ಹಬ್ಬಿಸಿ ಹೀರೇಕಾಯಿ, ಸೋರೆಕಾಯಿ, ಹಾಗಲ ಬೆಳೆಯುತ್ತಿದ್ದಳು.

ಶಿವಕುಮಾರ ಕೆ. ಎಸ್.'s picture
ಶಿವಕುಮಾರ ಶೇಷಪ್ಪ ಕುಂದೂರು
ಇರುವ ಸ್ಥಳ:   ಭಾರತ
ನನ್ನ ಬಗ್ಗೆ:   ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ವಿಸ್ಮಯ ಜಾಹೀರಾತು