ಶಿವಕುಮಾರ ಕೆ. ಎಸ್. ಪಿಸುಮಾತು

ರಾತ್ರಿ ಆಫೀಸಿನಿಂದ ವಾಪಸ್ಸು ಬರುತ್ತ, ಆಗ ತಾನೇ ಶುರುವಾಗಿದ್ದ ಜಿಟಿ ಜಿಟಿ ಮಳೆ ಧಾರಾಕಾರವಾಗುವ ಮೊದಲು ರೂಮ್ ತಲುಪಬೇಕೆಂದು ಬೈಕಿನ ಆಕ್ಸಿಲರೇಟರ್ ತಿರುವಿ ನಾಗಾಲೋಟಕ್ಕೆ ಅಣಿಯಾದವನು, ಥಟ್ಟನೆ ಕಣ್ಣು ಕೆಂಪು ಮಾಡಿಕೊಂಡ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸ ಹೋಗಿ ನೆನೆದ ರೋಡಿನ ಮೇಲೆ ಅರಗಿನಂತೆ ಒರೆದುಕೊಂಡಿದ್ದ ಗುಲ್ಮೊಹರ್ ಮರಗಳ ಅರೆದ ಬೀಜಗಳ ಅಂಟಿನ ಮೇಲೆ ಜಾರಿ ಬಿದ್ದು, ಆಚೀಚಿನವರು ಬಂದು, ಬೈಕು ಎತ್ತಿ, ಇವನನ್ನೂ ಎತ್ತಿ “ಏನೋ ಪೆಟ್ಟಾಗಿಲ್ಲ ತಾನೇ? ಸ್ವಲ್ಪ ನೋಡಿಕೊಂಡು ರೈಡ್ ಮಾಡಿ ಸರ್, ಮಳೆಗೆ ರೋಡುಗಳೆಲ್ಲ ಜಾರ್ತವೆ” ಅಂದು, ಇವನ ಬೈಕಿನ ನಾಗಾಲೋಟ ಎದೆಗೂಡಿಗೆ ರವಾನೆಯಾಗಿ, ಕೈಗಳು ಅದುರುತಿದ್ದರೂ, ತೊಡೆಗಳು ನಡುಗುತಿದ್ದರೂ, ನಿಲ್ಲದೇ ಮನೆಗೆ ಬಂದವನು ಮೊದಲು ‘ಡ್ಯಾಮೇಜ್ ಅಸ್ಸೆಸ್‌ಮೆಂಟ್’ ಮಾಡಿಕೊಂಡು ‘ಏನೂ ಆಗಿಲ್ಲ’  ಅಂದು ಸಮಾಧಾನದಿಂದ ಕೋಟಿನ ಜೇಬಿನೊಳಗಿದ್ದ ಮೊಬೈಲಿನ ಪರದೆ ನೋಡಿದರೆ ಆಗಲೇ ಆಗಲೇ ಒಂಬತ್ತು ಮಿಸ್ಡ್ ಕಾಲ್ಸ್, ಮೂರು ಸಂದೇಶಗಳು, ‘ಎಲ್ಲಿದೀಯಾ? ಆಫೀಸ್ ಬಿಟ್ಯಾ?’, ‘ಯಾಕೆ ಫೋನ್ ಎತ್ಕೋತಾ ಇಲ್ಲ’, ‘ಮೆಸೇಜ್ ಕಂಡ ತಕ್ಷಣ ಕಾಲ್ ಮಾಡು’...ಮುಂದೆ ಓದು


ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ)  ಮುಂದೆ ಓದು

"ಐ ಲವ್ ಯೂ"
ಚಕ್ರತೀರ್ಥದ ಉತ್ತುಂಗದಲ್ಲಿ ಈರ್ವರ ಮೈಮನಗಳೂ ಝೇಂಕರಿಸುತ್ತಿರುವಾಗ, ತಾನು ಊಟೆ ಊಟೆಯಾಗಿ ಅವಳಾಳದೊಳಗೆ ಬರಿದಾಗುತ್ತಿರುವಾಗ; ತನ್ನದೇ ತಲೆಗೂದಲಿನಲ್ಲಿ ಉತ್ಪತ್ತಿಯಾಗಿ, ಹಣೆ, ಹುಬ್ಬಿನ ಮೇಲೆಲ್ಲ ಧಾರಾಕಾರವಾಗಿ, ಅವಳ ಮುಖಕ್ಕಿಳಿದು ತೋಯಿಸಿದ ತನ್ನ ಬೆವರು, ಅವಳ ಕೆನ್ನೆಯನ್ನು ಸುಡುತ್ತಿದ್ದ ತನ್ನದೇ ಹಸಿ ಬಿಸಿ ತುಟಿಗಳಿಗೆ ತಾಕಿ ಒದ್ದೆ ಒದ್ದೆಯೆನ್ನಿಸುತ್ತಿರುವಾಗ ಅವನು ನಿಲ್ಲದುಸಿರಿನಲ್ಲಿ ಮೆಲ್ಲನುಸುರಿದ, ಮುಂದೆ ಓದು

ಅರವತ್ಮೂರನೇ ಸ್ವಾತಂತ್ಯ ದಿನಾಚರಣೆಯ ಶುಭಾಶಯಗಳು...

ವಂದೇ ಮಾತರಂ
--------------------
ವಂದೇ ಮಾತರಂ, ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ ||

ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ, ವರದಾಂ ಮಾತರಂ ||

ಸಪ್ತ ಕೋಟಿ ಕಂಠ ಕಲಕಲ ನಿನಾದ ಕರಾಲೇ
ದ್ವಿಸಪ್ತ ಕೋಟಿ ಭುಜೈರ್ಧ್ರತ ಖರಕರವಾಲೇ ಮುಂದೆ ಓದು

ಹೊಸ ಬೈಕು ಖರೀದಿಸಿದ ಮೇಲೆ ಸುಕುಮಾರನಿಗೆ ಭೂತ-ಪ್ರೇತಗಳ ಇರುವಿಕೆಯ ಬಗ್ಗೆ ನಂಬಿಕೆ ಬಂತು! ಅಂದರೆ ಇದೂವರೆಗೂ ಈ ವಿಷಯದಲ್ಲಿ ಇವನಿಗೆ ಆಸಕ್ತಿಯಿರಲಿಲ್ಲವೆಂದಾಗಲೀ ಅಥವಾ ಇವೆಲ್ಲವನ್ನೂ ನಂಬದ ಧೈರ್ಯವಿತ್ತೆಂದಾಗಲೀ ಇದರರ್ಥವಲ್ಲ. ಇವನ ಸ್ನೇಹಿತರಿಗೆ ಹೋಲಿಸಿದರೆ ಇವನೇ ಅಳ್ಳೆದೆಯವನು, ಪುಕ್ಕಲ. ಹೇಗೋ ಮೆತ್ತ ಮೆತ್ತಗೆ ಕಾಲೇಜು ಮುಗಿಸಿ ಕೊಂಡು ಬೆಂಗಳೂರಿನಲ್ಲಿ ಕೆಲಸ ಹಿಡಿದ. ಕೆಲಸ ಹಿಡಿದು ನಾಲ್ಕೈದು ವರ್ಷಗಳಾದ ಮೇಲೆ ಅವರಿವರ ಮತ್ತು ಸ್ನೇಹಿತರನೇಕರ ಸಲಹೆ, ಸೂಚನೆಗಳೆಲ್ಲ ಖಾಲಿಯಾಗಿ, ನಾಲ್ಕು ವರ್ಷಗಳಾದರೂ ಕೆಲಸಕ್ಕೆ ಹೋಗಲು ಇನ್ನೂ 'ನಗರ ಸಾರಿಗೆ' ಬಸ್ಸುಗಳನ್ನೇ ಅವಲಂಬಿಸಿಕೊಂಡಿದ್ದ ಇವನ ಪುಕ್ಕಲತನದ ಬಗ್ಗೆ ಬೈಗುಳಗಳು, ಬೆದರಿಕೆಗಳು ಶುರುವಾದ ಮೇಲೆ 'ಅದ್ಯಾವ ಬ್ರಹ್ಮವಿದ್ಯೆಯೋ ನೋಡಿಬಿಡೋಣ' ಎಂದುಕೊಂಡು ಬೈಕು ಖರೀದಿಸಿಯೇ ಬಿಟ್ಟ. ಮತ್ತೆ ಅವರಿವರ ಸಲಹೆ ಸೂಚನೆ, ಬೆದರಿಕೆಗಳನೆಲ್ಲ ಗಾಳಿಗೆ ತೂರಿ, 'ಹೇಗಿದ್ದರೂ ಬೈಕೂಂತ ತಗೋತಾ ಇದೀನಿ' ಎಂದುಕೊಂಡು ಬಲವಾಗಿಯೇ ಇದ್ದ ದೊಡ್ಡ ಬೈಕನ್ನೇ ತೆಗೆದುಕೊಂಡ. ಮುಂದೆ ಓದು

ಸಾಗರದೆಲ್ಲ ಅಲೆಗಳು ದಡವ ತಲುಪುವುದಿಲ್ಲ,
ಹೃದಯದೆಲ್ಲ ಮಿಡಿತಗಳು ಮನವ ತಾಕುವುದಿಲ್ಲ!
ಕಂಡ ಕಣ್ಣಿನೆಲ್ಲ ಬಿಂಬಗಳು ಎದೆಗಿಳಿಯುವುದಿಲ್ಲ
ತಲುಪಿದ್ದಕ್ಕಿಂತ ತಲುಪದಿದ್ದಕ್ಕೇ ತಪನೆ
ತಾಕದಿದ್ದನ್ನೂ ಕಳೆದುಕೊಂಡ ಬೇನೆ
ಎದೆಗಿಳಿಯದುದಕೆ ಎದೆಯುರಿ-ಸೋನೆ
ದಡವ ತಲುಪದಲೆಯ ನುಂಗಿ ನೊಣೆದ
ಅದರ ಹಿಂದಿನಲೆಯದೇನೂ ಹೆಚ್ಚಲಿಲ್ಲ ಗಮನ -
ಸಣ್ಣಲೆಯ ನುಂಗಿದುದಕೆ ಶಾಪವದಕೆ-ದಡ ಮುಟ್ಟಿ
ಅಂದುಕೊಂಡಷ್ಟೂ ದೂರ ತಲುಪದೇ ಅದರ ಶಕ್ತಿ ಪತನ!
ಸಿಕ್ಕಿದ್ದನ್ನೂ ಸಿಗಲಾರದುದರ ನೋವಿನಲಿ ದೂರ ಸರಿಸಿ, ಮುಂದೆ ಓದು

ಟರ್ಮಿನೇಟರ ಸಾಲ್ವೇಶನ್ಟರ್ಮಿನೇಟರ ಸಾಲ್ವೇಶನ್

'ಟರ್ಮಿನೇಟರ್' ಚಲನಚಿತ್ರಗಳ ಸಾಲಿನಲ್ಲಿ ನಾಲ್ಕನೆಯ ಚಿತ್ರವಾಗಿ ಇವತ್ತು (26/ಜೂನ್/2009) ಭಾರತದಲ್ಲಿ ಬಿಡುಗಡೆಯಾಗಿರುವ ಇಂಗ್ಲೀಷ್ ಚಿತ್ರ - 'ಟರ್ಮಿನೇಟರ್ ಸಾಲ್ವೇಶನ್'.

ಮುಂದೆ ಓದು

ಬರೆದವರು
ಶಿವಕುಮಾರ ಶೇಷಪ್ಪ ಕುಂದೂರು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ಇವರ ವಿಸ್ಮಯ ಪುಟ