ವಿಸ್ಮಯ ನಗರಿಯಲ್ಲಿ ಬ್ಲಾಗ್, ಚರ್ಚೆ ಮಾಡಿ. ಕನ್ನಡವನ್ನು ಅಂತರ್ಜಾಲದಲ್ಲಿ ಮೆರೆಸಿ.
ಜಯ ಹೇ!
ಮೊನ್ನೆ ಆಗಸ್ಟ್ ಹದಿನೈದರಂದು ಟೀವಿ ನೋಡ್ತಾ ಇದ್ದೆ. ಉದಯದಲ್ಲೋ, ಸುವರ್ಣದಲ್ಲೋ ಮರೆತು ಹೋಯ್ತು - 'ಅಡುಗೆ ಕಾರ್ಯಕ್ರಮ' ಪ್ರಸಾರ ಆಗ್ತಾ ಇತ್ತು. ಅಡುಗೆ ಮಾಡ್ತಾ ಇದ್ದವರು 'ತ್ರಿವರ್ಣ ದೋಸೆ' ಅಂತಾ 'ಖಾರಾಪುಡಿ, ಹಸಿರು ಚಟ್ನಿಪುಡಿ ಸೇರಿದ ಮೂರು ಪಟ್ಟೆ ಇರುವ ದೋಸೆ ಮಾಡಿ, 'ಸ್ವಾತಂತ್ರ್ಯ ದಿವಸದ ಸ್ಪೆಷಲ್ಲು' ಅಂತಾ ಮಧ್ಯಕ್ಕೆ ನೀಲಿ ಬಣ್ಣ ಹಾಕಿದ ಮೂಲಂಗಿಯ ಗಾಲಿಯನ್ನೋ ಅಥವಾ ಮತ್ತೇನನ್ನೋ ಇಟ್ಟು ತ್ರಿವರ್ಣ ಧ್ವಜವನ್ನು 'ಈಗ ಕಂಪ್ಲೀಟ್ ಆಯ್ತು' ಎಂದುಲಿದು ತೋರಿಸಿದರು. ನನಗೆ ತಲೆಕೆಟ್ಟು ಹೋಯ್ತು, 'ಈ ತ್ರಿವರ್ಣ ಧ್ವಜದ ದೋಸೆಯನ್ನು ಹರಿಯದೇ ತಿನ್ನುವುದು ಹೇಗೆ'?
ಮಾತನಾಡುವ ಗಿಡದ ಮನಸು...
ಮಾತನಾಡುವ ಗಿಡದ ಮನಸ್ಸು.....
ಒಂದೂರು ಮನುಷ್ಯರಿರುವ, ಮನಸುಗಳಿರುವ ಜನ.. ಅಲ್ಲೊಂದು ಗಿಡ ಹೆಸರಿಲ್ಲದಿರುವ ಗಿಡ... ಹೆಸರಿಲ್ಲದಿರುವುದಕ್ಕೆ ಕಾರಣ ಅದರಿಂದ ಮನುಷ್ಯರಿಗೆ ಪ್ರಯೋಜನವಿಲ್ಲ ಎಂದು ತಿಳಿದಿರುವ ಮನುಷ್ಯರ ವಿಕೃತ ಮನಸ್ಸು. ಭಗವಂತನ ಕೃಪೆಯಿಂದಲೋ ಅಥವಾ ತನ್ನೊಡಲ ಭಾವನೆಯನ್ನು ಹಂಚಿಕೊಳ್ಳಲೆಂದೋ ಅಂತಹ ಜಾತಿಯ ಒಂದು ಗಿಡಕ್ಕೆ ಮಾತನಾಡುವ ಗುಣ.. ಆ ಗಿಡ ಬೆಳೆಯೋದಿಲ್ಲ ಎಂಬ ನಂಬಿಕೆ ಜನಗಳದು. ಆ ಕಾರಣದಿಂದಲೋ ಏನೊ ಅದಕ್ಕೆ ನೀರಿಲ್ಲ. ತನ್ನ ಬಗ್ಗೆ ಜನಗಳು ಭಾವಿಸಿರುವ, ಪ್ರಯೋಜನವಿಲ್ಲ, ಬೆಳೆಯುವುದಿಲ್ಲ ಎನ್ನುವುದು ಮನಸ್ಸಿನಲ್ಲಿ ಹುಟ್ಟಿರುವಾಗ ಪಾಪ ಆ ಗಿಡವಾದರೂ ಏನು ಮಾಡೀತು?
ಗುಂಡನ ಉತ್ತರಗಳು
ನಮ್ಮ ಗುಂಡ ಪರೀಕ್ಷೆಯಲ್ಲಿ ಕೊಡುವ ಉತ್ತರ ಹೇಗಿರುತ್ತೆ? ಕೆಲವು ಸ್ಯಾಂಪಲ್ ಗಳು ಹೀಗಿವೆ....
ಪ್ರಶ್ನೆಃ ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಉತ್ತರಃ ಕುಳಿತುಕೊಂಡನು.
ಪ್ರಶ್ನೆಃ ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಉತ್ತರಃ ಸ್ನಾನದ ಕೋಣೆಗೆ ಬಾಗಿಲು ಇರಬೇಕಾದದ್ದು ಅತೀ ಅವಶ್ಯ
ಪ್ರಶ್ನೆಃ ವಾಸ್ಕೋಡಿಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಉತ್ತರಃ ಏರಡನೇ ಹೆಜ್ಜೆ ಇಟ್ಟನು.
ಈ ಮೇಲ್ ಫಾರ್ ವಾರ್ಡ ಆಧಾರಿತ
ಹುಡುಗ-ಹುಡುಗಿಯರ ನಡುವೆ ಸ್ನೇಹ ಸಾಧ್ಯವೇ?
ಆಗಸ್ಟ ಮೊದಲ ಭಾನುವಾರ ಬಂತೆಂದರೆ, ಸ್ನೇಹಿತರ ದಿನಾಚರಣೆ.. ಅದೂ ಇತ್ತೀಚಿಗಂತೂ ಮೊಬೈಲ್ ಸಂದೇಶಗಳದೇ ಕಾರುಬಾರು. ಸ್ನೇಹ ಹಾಗೆ ಸ್ನೇಹ ಹೀಗೆ... ಕೊನೆವರೆಗೆ.. ನಿರಂತರ... ಹೀಗೆ ಸಾಗುವ,ಕೊನೆಗೊಳ್ಳುವ ಮನಸ್ಸಿಗೆ ಮುದಕೊಡುವ ಸಂದೇಶಗಳು, ಇ-ಮೇಲ್ ನಲ್ಲಿ ಗ್ರೀಟಿಂಗ್ ಕಳುಹಿಸುವುದೊಂದು ಪದ್ಧತಿ.. ಅದಕ್ಕಾಗಿ ಸಾವಿರಾರು ವಿಚಿತ್ರ ಸಂದೇಶಗಳುಳ್ಳ ಗ್ರೀಟಿಂಗ್ಸ್
ಮನಸಿಗೊಂದು ಪತ್ರ
ಮನಸಿನ ಗೆಳತಿಗೆ
ನಮ್ಮಿಬ್ಬರ ಮಧ್ಯೆ ಇದ್ದದ್ದು ಸ್ನೇಹವಾ, ವಿಶ್ವಾಸವಾ, ಶುಧ್ಧ ನಂಬಿಕೆಯಾ, ಆಕರ್ಶಣೆಯಾ ಅಥವಾ ಪ್ರತಿಕ್ಷಣ ಬರೀ ಮನಸ್ಸನ್ನ ತೋಯಿಸುತ್ತಿದ್ದ ಮಾತುಗಳಾ ಅನ್ನೋ ನಿಶ್ಕರ್ಶೆ ಇನ್ನೂ ಚಾಲ್ತಿಯಲ್ಲಿರುವಾಗಲೇ ಇಬ್ಬರೂ ನಮ್ಮ ನಮ್ಮ ಬದುಕಿನ ತಿರುವುಗಳಲ್ಲಿ ನಿಂತು ಭವಿಶ್ಯದ ರೂಟ್ ಮ್ಯಾಪನ್ನ ಹುಡುಕ್ತಿದ್ವಿ. ನಾನಂತೂ Excel or Exit ಅನ್ನುವವರ ಲೋಕದೊಳಗೆ ತೂರಿಕೊಂಡು ಮನಸಿನ ಮಾತುಗಳಿಗೆ ಕಿವುಡಾಗಿ ಬಿಟ್ಟಿದ್ದೆ ಕಣೇ!
ಈ ನಡುವೆ ಕೆಲಸದ ಕೊರತೆಯಿಂದ ನಿನ್ನ ನೆನಪುಗಳಿಗೆ ಕೊರತೆಯಿಲ್ಲ. ಹತ್ರತ್ರ ಎರಡು ವರ್ಶವಾಯಿತಲ್ಲವೇ ನಮ್ಮ ಕೊನೆಯ ಮಾತಿಗೆ?
ಬೀChi ಉವಾಚ
ಬೀChi ಅವರ 'ಬೆಳ್ಳಿ ತಿಮ್ಮ 108 ಹೇಳಿದ' ದಿಂದ...
-ಆಳವು ಕಡಿಮೆಯಾದಂತೆಲ್ಲಾ ಉದ್ದದಲ್ಲಿ ಜಾಸ್ತಿಯಾಗುವಂತಹ ರಬ್ಬರ್ ನಂತಹುದಕ್ಕೆ ಭಾಶಣ ಎಂದು ಹೆಸರು.
-ಕಂಡುದರಲ್ಲಿ ಮರೆಯಬೇಕಾದ್ದೆಶ್ಟು, ಅರಿಯಬೇಕಾದ್ದೆಶ್ಟು, ಎಂಬುದನ್ನು ಅರಿತವನೇ ಕಡುಜಾಣ.
'ಆನೇಕರು ನನ್ನ ಗ್ರಂಥವನ್ನು ಓದಿ ಹೊಗಳುತ್ತಾರೆ. ಒಬ್ಬ ಸಾಹಿತಿ ಓದದೆಯೇ ಬಯ್ಯುತ್ತಾನೆ. ಊಟಕ್ಕೆ ಬಂದ ಅತಿಥಿಗಳು ಹೆಚ್ಚೋ ಅಥವಾ ನನ್ನಂತಹ ಇನ್ನೊಬ್ಬ ಅಡಿಗೆಯವನೋ ?' ಎಂದು ಕೇಳುತ್ತಾನೆ ಅವಿವೇಕಿ ತಿಮ್ಮ.
-'ವಿಡಂಬ'ನ ಸಾಹಿತ್ಯ! ಯಾರು ಸ್ವಾಮಿ ವಿಡಂಬ? ಅವನ ಹೆಸರನ್ನೇ ಕೇಳಿಲ್ಲವಲ್ಲ ನಾವು! ಯಾವ ಶತಮಾನದ ಕವಿ 'ವಿಡಂಬ' ಎಂಬುವವನು?
-ಕಟ್ಟಕಡೆಗೆ ನಗುವವನಿಗೆ ಉಬ್ಬುಹಲ್ಲೇ ಇರಬೇಕು.
ವಿರಹ (combined ಕವನ)
ನಿನ್ನ ನೆರಳೇ ಸೋಕಿದೆ
ಮಳೆಯಿಂದು ಕಾಡಿದೆ
ನಿನ್ನ ನೆನಪೇ ಸುರಿದಿದೆ
ನನ್ನ ಉಸಿರ ಸುಡುತಿದೆ
ಬಾಡದ ಹೂವದು ಸ್ನೇಹ..........
ಮತ್ತೆ ಬಂದಿದೆ ಗೆಳೆಯರ ದಿನ ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲಿ ಬಂದಿಸುತ್ತಾ, ಬಂದಿತೆ ಮತ್ತೆ ಮೆಲು ನಗೆಯ ಬೀರುತ್ತಾ, ಗೆಳೆಯರ ದಿನ ಆತ್ಮೀಯ ಗೆಳೆಯ ಗೆಳತಿಯರಿಗಾಗಿ,
ಸ್ನೇಹ ಅದು ಎರಡು ಮನಗಳ ನಡುವೆ ದೇದಿಪ್ಯ ಮಾನವಾಗಿ ಉರಿಯುವ ಹಣತೆ, ಬದುಕಿನ ದಾರಿಗೆ ಬೆಳಕದುವೆ, ಸ್ನೇಹದ ಹಣತೆ, ಸ್ನೇಹ ಅದು ಸೊಗಸು, ಈ ಬದುಕಿನ ಬವಣೆಗಳ ನಡುವೆ ನೆನಪಿಸಲು ಬಂದಿದೆ, ಗೆಳೆಯ / ಗೆಳತಿಯರ ಹೆಸರು, ಮರೆಯದಿರಿ ಸ್ನೇಹದ ಅಂಗಳದಲ್ಲಿ ಬಂದು ಚಿನ್ನಾಟವಾಡಿದವರ,
ಕುಚೇಲನ್ ಚಿತ್ರವನ್ನು ಕರ್ನಾಟಕದಲ್ಲಿ ಬಹಿಷ್ಕರಿಸಬೇಕಿತ್ತೇ?
ರಜನೀಕಾಂತ್ ಕನ್ನಡಿಗರ ಕ್ಷಮೆ ಕೇಳಿದರೂ,
ರಜನೀಕಾಂತ್ ಕನ್ನಡಿಗರ ಕ್ಷಮ ಕೇಳಿದರೂ,
ನೆನ್ನೆ ಎಲ್ಲಾ ಚಾನಲ್ ಗಳಲ್ಲೂ ರಜನೀಕಾಂತ್ ಅವರೇ, ಕಾರಣ ಅವರು ಕನ್ನಡಿಗರ ಕ್ಷಮೆ ಕೇಳಿದರು ಅಂತ, ಈ ವಿಷಯ ಕೇಳಿದಾಗಿನಿಂದ ಎಲ್ಲರಲ್ಲೂ ಒಂದು ಪ್ರಶ್ನೆ ಮೂಡುವುದಂತು ನಿಜ, ಕಾರಣ ರಜನೀಕಾಂತ್ ಅವರಿಗೆ ಇಲ್ಲಿಯವರೆಗೂ ತಾವೂ ತಪ್ಪು ಮಾಡಿದ್ದೆ ಎಂದು ಯಾಕೆ ಅನ್ನಿಸಿರಲಿಲ್ಲ, ಅದೂ ಅವರ ಕುಚೇಲನ್ ಚಿತ್ರ ಬಿಡುಗಡೆಯ ಸಮಯದಲ್ಲಿ ಮಾತ್ರ ಹೀಗನ್ನಿಸಲೂ ಕಾರಣವೇನು,



