ಸಿನಿಮಾ ಸುದ್ದಿ

ಬಳ್ಳಾರಿಗೆ ಕನ್ನಡ ಚಿತ್ರಗಳು ಬರುವುದು ಅಪರೂಪ.ಕೆಲವೊಂದು ಉತ್ತಮ ಚಿತ್ರಗಳು ಬಂದು ಹೋದುದ್ದೆ ತಿಳಿಯುವುದಿಲ್ಲ. ಮೊನ್ನೆ ಎರಡನೆ ಆಟಕ್ಕೆ ಕನ್ನಡದ  ಎರಡನೆ ಮದುವೆ ಚಲನ ಚಿತ್ರಕ್ಕೆ ಹೋದೆ. ಬಳ್ಳಾರಿಯಲ್ಲಿ ಸದಾಭಿರುಚಿಯ ಚಿತ್ರಗಳ ನೋಡಗರು ಕಡಿಮೆ, ಪೂರ್ಣ ಚಾಕು ಚೂರಿ ಸಂಸ್ಕೃತಿಯ ಚಿತ್ರಗಳೇ ನಡೆಯುವುದು. ಎರಡನೆ ಮದುವೆ ಅತ್ಯುತ್ತಮ ಚಿತ್ರವಲ್ಲದಿದ್ದರು, ಸದಾಭಿರುಚಿಯ ಚಿತ್ರ.ಮುಂದೆ ಓದು

ಅಮರನಾಥ್'s picture
ಸಿಗ್ನಲ್ !!!

ಶುಕ್ರ, 23/07/2010 - 08:30 - ಅಮರನಾಥ್

"ಹೇ ನಡೀಲೆ, ಪೋಲೀಸು ಯಾರದೋ ಜೊತೆ ಮಾತಾಡ್ತಾಯಿದ್ದಾರೆ, ಯಾವ ಗಾಡೀನು ಬರ್ತಾಯಿಲ್ಲ" ಇನ್ನೂ ರೆಡ್ ಸಿಗ್ನಲ್ ಇದ್ದಿದ್ರೂ ಹೋಗು ಅಂತ ಮಿತ್ರ ಪುಸಲಾಯಿಸುತ್ತಿದ್ದ. "ಗ್ರೀನ್
ಸಿಗ್ನಲ್ ಬರ್ಲಿ ತಾಳು" ಅಂದರೆ, "ಅದೇನ್ ಹೆದರ್ತಿಯೋ ಪೋಲೀಸ್ ಕಂಡ್ರೆ" ಅಂತ ಒಂದೆ
ಸಮನೆ ಗೊಣಗುತ್ತಲೆ ಇದ್ದ. ಜೊತೆಗೆ ಹಿಂದುಗಡೆಯಿಂದ ಹಾರ್ನ್ ಬೇರೆ. ಇನ್ನೂ ಗ್ರೀನ್
ಸಿಗ್ನಲ್ ಬರದಿದ್ದರೂ ಅದೇನ್ ಅವಸರ ಅಂತಿರಾ ಇವರಿಗೆಲ್ಲಾ ಅಂತ ಅಂದುಕೊಳ್ಳುವಷ್ಟರಲ್ಲಿ ಮುಂದೆ ಓದು

ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಎಪ್ರಿಲ್ ೧೮ ಭಾನುವಾರ ದಂದು ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ ಕಾರ್ಯಕ್ರಮದಡಿಯಲ್ಲಿ ಉಮಾಶಂಕರ ಸ್ವಾಮಿ ನಿರ್ದೇಶನದ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ‘ಬನದ ನೆರಳು’ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
ಬನದ ನೆರಳು ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಮುಂದೆ ಓದು

ನಮಸ್ತೆ ಗುರು ಸರ್........

ಮುಂದೆ ಓದು

NAGU's picture
ಆಪ್ತರಕ್ಷಕ ಸಿನಿಮಾ

ಶನಿ, 10/04/2010 - 13:05 - NAGU

ನನ್ನ ಪ್ರಕಾರ ಆಪ್ತಮಿತ್ರನಿಗಿ೦ತ ಆಪ್ತರಕ್ಷಕನು ಅದ್ಭುತವಾಗಿ ತೆರೆಯ ಮೇಲೆ ರಾರಾಜಿಸಿದ್ದಾನೆ. ಸಿನಿಮಾದ ಸ೦ಗೀತವ೦ತೂ ನನಗೆ ತು೦ಬಾ ಇಷ್ಟವಾಯ್ತು. ಎರಡೂ ಚಿತ್ರಗಳಲ್ಲಿ 'ಮನಸ್ಸಿನಲ್ಲಿ ಇರುವ ವಿಷಯ ಎಷ್ಟೇ ಹತ್ತಿರವಾದವರಿಗೂ ಇನ್ನೊಬ್ಬರಿಗೆ ಹೇಳದೇ ತಿಳಿಯದು' ಹೀಗಿರುವಾಗ ಮನಸ್ಸಿನಲ್ಲಿರುವುದು ಹಾಗೆಯೇ ತಿಳಿಸುವ ಪಾತ್ರ 

ಪ್ರೇಕ್ಷಕರು ಖುಶಿಪಡುವ(ನ೦ಬುವ) ಹಾಗೆ ಚಿತ್ರಿಸಿದ್ದಾರೆ..... ನಿಜಕ್ಕೂ ಅದ್ಭುತ ಅಲ್ವಾ? 

"ಈ ಪ್ರಶಸ್ತಿಗೆ ನನಗಿಂತ ನನ್ನ ಶ್ರೀಮತಿಯವರು ಹೆಚ್ಚು ಅರ್ಹರು" ತನಗೆ ಡಾಕ್ಟರೇಟ್ ಗೌರವ ಸಿಕ್ಕಾಗ ಡಾ.ವಿಷ್ಣು ಇಂತಹದೊಂದು ಮಾತನ್ನು ಹೇಳಿದ್ದರು. ಡಾ.ವಿಷ್ಣು ಮಾತು ನಿಜವಾಗಿದೆ ಮೈಸೂರು ವಿಶ್ವವಿದ್ಯಾಲಯ ಶ್ರೀಮತಿ ಭಾರತಿಯವರಿಗೆ  ಈ ಸಾಲಿನ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದೆ.


ಚತುರ್ಭಾಷಾ ತಾರೆಯಾದ ಭಾರತಿಯವರು, ಈ ನಾಡು ಕಂಡ ಅಪರೂಪದ, ಸ್ನಿಗ್ಧ ಸೌಂದರ್ಯದ ನಟಿಯರಲ್ಲಿ ಒಬ್ಬರು. ಅವರಿಗೆ ಡಾಕ್ಟರೇಟ್ ಸಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಆಪ್ತಮಿತ್ರ ಚಿತ್ರದ ಮುಂದಿನ ಭಾಗವಾದ ಆಪ್ತರಕ್ಷಕಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಡಾ॥ವಿಷ್ಣುವರ್ಧನ ಅವರ 200ನೇ ಹಾಗೂ ಕೊನೆಯ ಚಿತ್ರವಾಗಿರುವದು ದೌರ್ಭಾಗ್ಯ. ಇದರಲ್ಲಿನ ನಾಗವಲ್ಲಿ ಎಂಬ ಕಾಲ್ಪನಿಕ ಪಾತ್ರಕ್ಕೆ ಹೆದರಿ ರಜನಿಕಾಂತ್ ಈ ಚಿತ್ರದ ರಿಮೇಕ್ ಮಾಡಲು ಹಿಂಜರಿದಿದ್ದಾರೆ. ಆಪ್ತಮಿತ್ರ ಮುಗಿದಾಗ ಅದರ ನಾಯಕಿ ಸೌಂದರ್ಯ ಹಾಗೂ ಆಪ್ತರಕ್ಷಕ ಮುಗಿದಾಗ ಅದರ ನಾಯಕ ವಿಷ್ಣುವರ್ಧನ್ ವಿಧಿವಶರಾಗಿರುವದನ್ನು ಸ್ಮರಿಸಬಹುದು.

ಇತ್ತೀಚಿನ ಅಭಿಪ್ರಾಯಗಳು