ವ್ಯಾಪಾರ

15 ನೇ ಲೋಕಸಭಾ ಚುನಾವಣೆಯಲ್ಲಿ ಯುಪಿಏ 262 ಸೀಟು ಗೆದ್ದು ಸುಭದ್ರ ಸರಕಾರ ರಚಿಸುವ ಲಕ್ಷಣ ಕಂಡಾಕ್ಷಣ ಇಂದು ಶೇರು ಮಾರುಕಟ್ಟೆಯಲ್ಲಿ ಉಲ್ಲಾಸ ಕಂಡು ಬಂತು. ಮೊದಲ ಎರಡು ಗಂಟೆಯಲ್ಲೇ ಸೆನ್ಸೆಕ್ಸ 14000 ದ ಗಡಿ ದಾಟಿತು. ಭಾರತದ ಶೇರು ಮಾರುಕಟ್ಟೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹೆಚ್ಚಳದ ಮಿತಿಯನ್ನು ವಿಧಿಸಲಾಯಿತು. ಹಾಗೂ ದಿನದ ಮಟ್ಟಿಗೆ ಶೇರು ವ್ಯಾಪಾರವನ್ನು ನಿಲ್ಲಿಸಲಾಯಿತು.

ಆರ್ಥಿಕ ಬಿಕ್ಕಟ್ಟಿನಿಂದ ಅಮೇರಿಕವನ್ನು ಹೊರತರಲು ಪ್ರಯತ್ನಿಸುತ್ತಿರುವ ಓಬಾಮಾ ಈಗಿನ ಮಂತ್ರ "ಬೆಂಗಳೂರಿಗೆ ನೋ ಬಫೆಲೋಗೆ ಯೆಸ್" ಬೆಂಗಳೂರಿನಂತಹ ಹೊರದೇಶಗಳಲ್ಲಿ ನೌಕರಿ ಉಂಟು ಮಾಡುವ ಅಮೇರಿಕದ ಕಂಪನಿಗಳಿಗೆ ತೆರಿಗೆ ವಿನಾಯತಿ ಇಲ್ಲ ಎಂದು ಓಬಾಮಾ ಘೋಷಿಸಿದ್ದಾರೆ. ಈಗ ಆ ವಿನಾಯತಿ ಅಮೇರಿಕದ ಬಫೇಲೋ ಸಿಟಿಯಂತಹ ಜಾಗದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕಂಪನಿಗಳಿಗೆ ಹೋಗಲಿದೆ.ಮುಂದೆ ಓದು

ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ಟಾಟಾ ನ್ಯಾನೋ ಟಾಟಾ ಮೋಟಾರ್ಸ್ ನ ಚೇರ್ ಮನ್ ರತನ್ ಟಾಟಾ ಬಿಡುಗಡೆ ಮಾಡಿದರು. ಎಪ್ರಿಲ್ 9 ರಿಂದ 25 2009 ರವರೆಗೆ ಬುಕಿಂಗ್ ಇರುತ್ತದೆ. ಜುಲೈ ನಲ್ಲಿ ಡೆಲಿವರಿ ಆರಂಭ. ಶೋರೂಂ ಬೆಲೆ 1 ಲಕ್ಷ ಇದ್ದು ರಸ್ತೆ ಮೇಲಿನ ಬೆಲೆ 1.2 ರಿಂದ 1.3 ಲಕ್ಷ ಇರಬಹುದು. 20 ಕೀಮಿ / ಲೀಟರ್ ಮೈಲೇಜ್ ಕೊಡಲಿದೆ.

2009ರ ಮಾರ್ಚ ಮೊದಲ ವಾರ ಹಣದುಬ್ಬರ 0.44 % ಕ್ಕೆ ಇಳಿದಿದ್ದು ಹಿಂದಿನ 20 ವರ್ಷಗಳಲ್ಲಿ ಅತಿ ಕಡಿಮೆಯಾಗಿದೆ. ಆಹಾರ ಮತ್ತು ಇಂಧನ ಬೆಲೆ ಕಡಿಮೆ ಆಗಿರುವದು ಇದಕ್ಕೆ ಕಾರಣ. ಅನುಭವಿಗಳ ಪ್ರಕಾರ ಹಣದುಬ್ಬರ ಋಣಾತ್ಮಕ ಬೆಲೆಯನ್ನು ಶೀಘ್ರದಲ್ಲಿ ಹೊಂದಲಿದೆ.

ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಮೈಕ್ರೋಸಾಫ್ಟ ನ ಬಿಲ್ ಗೇಟ್ಸ್ ಪ್ರಪಂಚದ ಅತಿ ಶ್ರೀಮಂತ ಮನುಷ್ಯ ಆಗಿದ್ದಾರೆ. ಹಿಂದಿನ ಬಾರಿ ಮೂರನೇ ಸ್ಥಾನಕ್ಕೆ ಇಳಿದಿದ್ದ ಅವರು ಆಗ 58 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದರು. ಈಗ ಬರೀ 40 ಬಿಲಿಯನ್ ಡಾಲರ್ ಹೊಂದಿದ್ದರೂ ಪ್ರಥಮ ಸ್ಥಾನದಲ್ಲಿದ್ದಾರೆ!

ಮುಂದೆ ಓದು

ಮಹಾತ್ಮಾ ಗಾಂಧಿ ಅವರು ಬಳಸುತ್ತಿದ್ದ ವಸ್ತುಗಳನ್ನು ವಿಜಯ ಮಲ್ಯ ಅವರು 1.8 ಮಿಲಯನ್ ಡಾಲರ್ ( ಸುಮಾರು 9 ಕೋಟಿ) ಗೆ ಹರಾಜಿನಲ್ಲಿ ಖರೀದಿಸಿ ಮರಳಿ ಭಾರತಕ್ಕೆ ತಂದಿದ್ದಾರೆ. ಇದರಲ್ಲಿ ಗಾಂದೀಜಿಯವರ ಚಪ್ಪಲಿ, ಪಾಕೆಟ್ ಗಡಿಯಾರ, ಕನ್ನಡಕ, ಪ್ಲೇಟ್, ಹಾಗೂ ಪಾತ್ರೆ ಸೇರಿದೆ.

ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ಎಂಬ ಪ್ರಚಾರ ಪಡೆದ ಟಾಟಾ ನ್ಯಾನೋ ಮಾರ್ಚ 23 ಕ್ಕೆ ಬಿಡುಗಡೆ ಮಾಡುವದಾಗಿ ಟಾಟಾ ಮೋಟಾರ್ಸ ಇಂದು ತಿಳಿಸಿದೆ. ಎಪ್ರಿಲ್ ಎರಡನೆಯ ವಾರದಿಂದ ಬುಕಿಂಗ್ ಶುರು ಆಗಲಿದೆ.

ಇತ್ತೀಚಿನ ಅಭಿಪ್ರಾಯಗಳು
  • Re: ಕಮರಿದ ಕನಸು. ಯೆನ್ರಿ ಇದು, ಇದು ನಿಜವಾದ ಕಥೆ ? ಸಿಕಾಪಟೆ ನೊವೀನ್ ಕಥೆ ರೀ ... ಓದಿ ಮನಸು ದುಬಾರೆ ಅಯ್ತು... -- gopalidm
    ಅನಾಮಿಕನು's picture
  • Re: ವಸ್ತುಗಳನ್ನು ಉಪಯೋಗಿಸೋಣ ! ಸ್ನೇಹ ಸಂಬಂಧಗಳನ್ನು ಪ್ರೀತಿಸೋಣ ! ಪ್ರೀತಿಯ ಶಿವು ! ನಾನು ನಿನ್ನ ಚುಟುಕು ಲೆಖನೆಗಲನ್ನು ಓದಿದ್ದೆ ! ಈ ಲೆಖನೆ ಓದಿ ತುಂಬಾ ಖುಶಿ ಆಯಿತು ! ಮನುಷ್ಯನ ಜೀವನದಲ್ಲಿ ತುಂಬಾ ಅಹಮ್ ಭಾವನೆ ಇಟ್ಕೊಂಡಿರ್ತನೆ ! ಈ ಭಾವನೆ ಸಮ್... -- Lingraj Gavimath
    ಅನಾಮಿಕನು's picture
  • Re: ಒಂದು ಬೇಜಾರಿನ ಸಂಗತಿ ವಸಂತಕುಮಾರ ರವರೆ,  ಬಸವರಾಜ್ ರವರು ಹೇಳಿದಾಗೆ, ಇಂದಿನವರಿಗೆ, ಮೊಬೈಲೆ ಎಲ್ಲಾ!, ಬೇಕೆಂದಾಗ ಕಾಸಿದ್ರೆ ಬದಲಾಯಿಸ್ತಾರೆ, ಇಲ್ಲಾ ಮತ್ತೊಂದು ತೆಗೆದುಕೊಳ್ತಾರೆ.... -- LPL R
    LPL R's picture
  • Re: ಕಮರಿದ ಕನಸು. ಕಥೆ ಉತ್ತಮವಾಗಿ ಅರ್ಥ ಪೂರ್ಣವಾಗಿದೆ ಸರ್ ಧನ್ಯವಾದಗಳು. -- ವಸಂತ್
    ವಸಂತ್'s picture
  • Re: ಕಮರಿದ ಕನಸು. ನಾವಂದುಕೊಂಡಂತೆ ನಡೆದುಕೊಳ್ಳುವುದಿಲ್ಲ ವಿಧಿ ತನ್ನಿಷ್ಟದಂತೆ ತಾನೇ ತಿರುಗುವ ಪರಮಾವಧಿ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳಲಾಗದಂತಾ ಪರಿಸ್ಥಿತಿ.... -- ವಸಂತ್
    ವಸಂತ್'s picture
  • Re: ಚುನಾವಣೆ -ಶ್ರೀಸಾಮಾನ್ಯ ಚುನಾವಣೆಯೆಂದರೆ ಅದು ರಾಜಕೀಯ ಸಂತೆ ಸಮುದ್ರದಲ್ಲಿ ಮೀನುಗಳಿಗೆ ಬೀಸುವ ಗಾಳದಂತೆ ಬರಿ ಆಶ್ವಾಸನೆಗಳ ಕೂಪ ಆದರೆ ಪಾಪ ಜನರಿಗೇನುಗೊತ್ತು ಇವರುಗಳು ಗೆದ್ದಮೇಲೆ ತೋರುವ ಪ್ರತಾಪ.... -- ವಸಂತ್
    ವಸಂತ್'s picture