ಶಿವಾಜಿ - ರಜನಿಕಾಂತ ೬ಶಿವಾಜಿ ರಾವ್ ಗಾಯಕ್ವಾಡ್ ಎಂಬ ಬೆಂಗಳೂರಿನಲ್ಲಿನ ಬಸ್‌ಕಂಡಕ್ಟರ್ ಇಡೀ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಅಗಿದ್ದು ಈಗ ಇತಿಹಾಸ.
ಈಗ ರಜನಿಕಾಂತ್ ಭಾರತದಲ್ಲಿ ಅತಿ ಹೆಚ್ಚು ಹಣ ಪಡೆಯುವ ನಟ. ಅವರ ಹಿಂದಿನ ಚಿತ್ರ ಚಂದ್ರಮುಖಿ (ಕನ್ನಡ ಚಿತ್ರ ಆಪ್ತಮಿತ್ರದ ರೀಮೇಕ್ - ಆಪ್ತಮಿತ್ರ ಮಲೆಯಾಳಂ ಚಿತ್ರವೊಂದರ ರಿಮೇಕ್!) ಸೂಪರ್ ಹಿಟ್ ಆಗಿತ್ತು.
ಈಗ ಇನ್ನೇನು ಮೇ ತಿಂಗಳಲ್ಲಿ 17 ರಂದು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿರುವ ಅವರ ತಮಿಳು ಚಿತ್ರ "ಶಿವಾಜಿ - ದ ಬಾಸ್" ಪ್ರಪಂಚಾದ್ಯಂತ ಅವರ
ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ಈ ಚಿತ್ರದ ಆಡಿಯೋ ಕ್ಯಾಸೆಟ್ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.
ಶಿವಾಜಿ - ರಜನಿಕಾಂತ್ಈ ಚಿತ್ರಕ್ಕೆ 100 ಕೋಟಿಗೂ ಹೆಚ್ಚು ಖರ್ಚು ಆಗಿದೆ ಅಂತಾ ಹೇಳಲಾಗಿದೆ. ಅದರಲ್ಲಿ ರಜನಿಕಾಂತ್ ಸಂಬಳ 40 ಕೋಟಿ!
ಹಿಂದೆ ಬಾಬಾ ಚಿತ್ರಕ್ಕೆ ಸುಮಾರು 40 ಕೋಟಿ ಪಡೆದಿದ್ದ ರಜನಿಕಾಂತ್ ಆ ಚಿತ್ರ ಹೀನಾಯವಾಗಿ ಸೋತಾಗ ಹಣವನ್ನು ವಾಪಸ್ ಮಾಡಿ ಮಾನವೀಯತೆ ಮೆರೆದಿದ್ದರು. ಅನೇಕ ವಿತರಕರು ಮನೆ-ಮಠ ಕಳೆದುಕೊಳ್ಳುವದನ್ನು ತಪ್ಪಿಸಿದ್ದರು.
ಕಾವೇರಿ ವಿವಾದದ ಕರಿನೆರಳಲ್ಲಿರುವ ಕರ್ನಾಟಕದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೆ ಬಾರಿ ವಿರೋಧ ವ್ಯಕ್ತ ಆಗುತ್ತಿರುವ ದಿನಗಳಲ್ಲಿ ಈ ಚಿತ್ರ ಬಿಡುಗಡೆ ಯಾವುದೇ ತೊಂದರೆ ಇಲ್ಲದೇ ಆಗುತ್ತದೆಯೇ ಅನ್ನುವದು ಯಕ್ಷ ಪ್ರಶ್ನೆ.
ಏನೆ ಇರಲಿ ನಮ್ಮ ಬೆಂಗಳೂರಿನ ರಜನಿಕಾಂತ್ ಈ "ಶಿವಾಜಿ - ದ ಬಾಸ್" ಚಿತ್ರ ಯಶಸ್ವಿ ಆಗ್ಲಿ ಅಂತಾ ಹಾರೈಸೋಣ ಅಲ್ವಾ?
ಶಿವಾಜಿ - ರಜನಿಕಾಂತ್ ೩
ನಿರ್ದೇಶನ; ಶಂಕರ್
ನಿರ್ಮಾಣ: ಎ.ವಿ.ಎಂ ಪ್ರೋಡಕ್ಷನ್ಸ್
ಪಾತ್ರದಾರಿಗಳು: ರಜನಿಕಾಂತ್, ಶ್ರೇಯಾ, ಪ್ರಕಾಶ್ ರಾಜ್, ನಯನಂತರ, ರಘುವರನ್
ಸಂಗೀತ ನಿರ್ದೇಶಕ: ಎ. ಆರ್. ರೆಹೆಮಾನ್
ಶಿವಾಜಿ ಚಿತ್ರದ ಕೆಲವು ಸ್ಟಿಲ್ ಗಳು ನಿಮಗಾಗಿ.
ಶಿವಾಜಿ - ರಜನಿಕಾಂತ್ ೨
ಶಿವಾಜಿ - ರಜನಿಕಾಂತ್ ೪
ಶಿವಾಜಿ - ರಜನಿಕಾಂತ ೫
ಶಿವಾಜಿ - ರಜನಿಕಾಂತ್ ೬
ಚಿತ್ರ ಕೃಪೆ: http://www.masalatalk.com/masalaboard/showthread.php?t=242226

There was this tamil film
There was this tamil film called " Imsai arasan immadi pulikeshi". You know Immadi pulikeshi was a kannadiga emperor who once ruled half of India. But these tamilians have made a mockery of us kannadigas by making a comedy film insulting our Kannadiga emperor. They have also given a character a name" Sangolli Rayanna" and he is shown as being faithful to british. While Sangolli rayanna was a kannadiga freedom fighter who was hanged to death by British for fighting against them. Why didn't the tamilians feel a film like this would hurt kannadiga feelings? Are they not our brothers, are they not indians?
Other than the Kaveri issue, why Shivaji needs to be banned is because the director of Shivaji and Imsai Arasan Immadi pulikeshi are both one and the same.
Know what, in one article this director had said that he always meets Kannada Actress Ramya whenever he is in Bangalore. They both are very good friends it seems.
Kannada actres Ramya, a Kannadathi..don't understand why she needs to make friendship with such a narrowminded idiotic and insane director
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ರಾಜೇಶ್ ಹೆಗಡೆಯವರ ಮಾತುಗಳನ್ನು ನಾನು ಅನುಮೋದಿಸುತ್ತೇನೆ. ರಜನೀಕಾಂತ್ ಈಗ ತಮಿಳು ಚಿತ್ರರಂಗದವನಾಗಿದ್ದರೂ ಮೂಲತಃ ಅಪ್ಪಟ ಕನ್ನಡ ಹುಡುದ. ವಿಜಯ ಕರ್ನಾಟಕದಲ್ಲಿ ಅವನ ಬಗ್ಗೆ ಬಂದಿದ್ದ ಲೇಖನಗಳು ಧೃಡಪಡಿಸುತ್ತವೆ. ಕನ್ನಡಿಗರಲ್ಲಿ ರಜನಿಯ ಬಗ್ಗೆ ಇತರ ಪರಭಾಷಾ ನಟರಿಗಿಂತ ಬೇರೊಂದು ರೀತಿಯ ಅಭಿಮಾನವಿದೆ. ಒಂದಕ್ಷರ ಕನ್ನಡ ಬಾರದ ಐಶ್ವರ್ಯ ರೈ, ಶಿಲ್ಪಾಶೆಟ್ಟಿಯರನ್ನೇ ಕನ್ನಡತಿಯರೆಂದು ನಮ್ಮ ಯುವಜನಾಂಗ ಆರಾಧಿಸುತ್ತಿರುವಾಗ ಕನ್ನಡದಲ್ಲಿ ಓದು, ಬರಹೆ, ಮಾತು ಬಲ್ಲ ರಜನಿಯನ್ನು ಕೇವಲ ತಮಿಳು ನಟನೆಂಬ ಕಾರಣಕ್ಕೆ ಹಿಯಾಳಿಸುವುದು ಸರಿಯಲ್ಲ ಎಂದು ನನ್ನ ಅಭಿಪ್ರಾಯ.
ಹಾಗಂತ ಕನ್ನಡಿಗರೆಲ್ಲರೂ ಮುಗಿಬಿದ್ದು ಎಲ್ಲಾ ತಮಿಳು ಸಿನಿಮಾಗಳನ್ನು ನೋಡಿ, ಕನ್ನಡ ಸಿನಿಮಾಗಳನ್ನು ಕಡೆಗಣಿಸುವುದು ಅಸಹ್ಯಕರ ವಿಷಯವಾಗಿದೆ. ನಾನು ರಜನಿಕಾಂತ್ ಸಿನಿಮಾಗಳನ್ನು ಬಹಳ ಇಷ್ಟಪಟ್ಟರೂ ಸಹಾ ಈಗಿನ ಕಾವೇರಿ ಸಮಸ್ಯೆ ನನ್ನ ವೈಯಕ್ತಿಕ ಮನರಂಜನೆಗಿಂತ ಮುಖ್ಯವಾದದ್ದು ಎಂದು ನಂಬಿದ್ದೇನೆ. ಈ ಸಮಸ್ಯೆಯತ್ತ ರಾಷ್ಟ್ರದ ಗಮನ ಸೆಳೆಯಲು ರಕ್ಷಣಾ ವೇದಿಕೆ ಈ ಚಿತ್ರಪ್ರದರ್ಶನವನ್ನು ರದ್ದುಪಡಿಸಲು ಹೋರಾಡುತ್ತಿದೆ. ಸಾಮಾನ್ಯ ನೋಡುಗರಿಗೆ ಈ ಕ್ರಮ ಉದ್ಧಟತನವೆಂದು ಕಂಡುಬಂದರೂ ಕರ್ನಾಟಕದ ಭವಿಷ್ಯದ ಪ್ರಶ್ನೆ ಇಲ್ಲಿದೆ. ಆದ್ದರಿಂದ ನಾವು ಕನ್ನಡಿಗರು ಪರಭಾಷಾ ವ್ಯಾಮೋಹವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಈ ವೆಬ್‌ಸೈಟಿನ ನಿರ್ವಾಹಕರು ಕನ್ನಡಕ್ಕೆ ಮೊದಲಸ್ಥಾನ ನೀಡಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ತಾಣದಲ್ಲಿ ಅಭಿಪ್ರಾಯಗಳನ್ನು ಬರೆಯುವವರು ಎಲ್ಲವನ್ನೂ ಕನ್ನಡದಲ್ಲೇ ಬರೆದರೆ ಚೆನ್ನಾಗಿರುತ್ತೆ.
ಶುಭಾಶಯಗಳು
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ನನಗೆ ಅದು ಗೊತ್ತಿಲ್ಲ ,ಅಥವಾ ಅದು ಹೇಗೆ ಬರೆಯುತ್ತಾರೆ ಅಂತ ಕೇಳಬೇಡ.
ಅಭಿಮಾನ ,
ಇದ್ರೆ ಅದು ಸಿಕ್ಕೇ ಸಿಗುತ್ತೆ
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ:
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ನಿಮ್ಮ ಮಾತಾಡುವ ಭಾಷೆ ಮೇಲೆ ನಿಗಾ ಇರಲಿ ,
ಕನ್ನಡದ ಮೇಲೆ ಅಷ್ಟು ಅಭಿಮಾನ ಇರುವವರು ,ನೀವು ಕನ್ನಡದಲ್ಲೇ ಬರೆಯುವ ಪ್ರಯತ್ನ ಯಾಕೆ ಮಾಡಲಿಲ್ಲ,
ನನಗೆ ಅದು ಗೊತ್ತಿಲ್ಲ ,ಅಥವಾ ಅದು ಹೇಗೆ ಬರೆಯುತ್ತಾರೆ ಅಂತ ಕೇಳಬೇಡ.
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ:
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
loh bladi fool
rajani hoda thika keseskondu tamilge. magane idu kannada site. neenu kannadigano illa katpapadino. adhastu bega kitha haku iddana.mundhe innu bekadre kadhu nodu.
thoristhini illindane
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ಹಾಯ್ ಕನಿ,
ವಿಸ್ಮಯ ನಗರಿಯಲ್ಲಿ ಅಸಹ್ಯ ಭಾಷೆ ಬಳಸಬೇಡಿ. ಇಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ, ಲೇಖನ ಬರೆಯುವ ಸಂಪೂರ್ಣ ಸ್ವಾತಂತ್ರ್ಯ ಇದೆ.
ಇಲ್ಲಿರುವವರು ಯಾರೂ ಕನ್ನಡ ವಿರೋಧಿಗಳಲ್ಲ. ಬದಲಾಗಿ ಅಪ್ಪಟ ಕನ್ನಡ ಪ್ರೇಮಿಗಳು. ನಮ್ಮ ಉದ್ದೇಶ ಕನ್ನಡವನ್ನು ಉಳಿಸಿ ಬೆಳೆಸುವದು.
ಇಂಗ್ಲೀಷನಲ್ಲಿ ಕನ್ನಡ ಕನ್ನಡ ಅಂತಾ ಕೂಗಿದರೆ ಕನ್ನಡ ಉಳಿಯದು. ಬನ್ನಿ ಕನ್ನಡ ಬಳಸಿ ನಿಮ್ಮ ಅಭಿಮಾನ ವ್ಯಕ್ತ ಪಡಿಸಿ. ನಿಮ್ಮ ಅಭಿಪ್ರಾಯ ವಿನಯವಾಗಿ ತಿಳಿಸಿ.
ಕನ್ನಡದಲ್ಲಿ ಬರೆಯಲು
www.quillpad.com/kannada ಅಥವಾ www.baraha.com ಬಳಸಿ.
ವಂದನೆಗಳೊಂದಿಗೆ
--ಮೇಲಧಿಕಾರಿ
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ಕನ್ನಡದ ತಾಣವಾದ ವಿಸ್ಮಯ ನಾಗ ರಿಯಲ್ಲಿ ತಮಿಳು ಚಿತ್ರದ ಬಗ್ಗೆ ಚರ್ಚಿಸುವುದು ನಿಜಕ್ಕೂ ಅಸಹ್ಯ ಕ ರ ಅದೂ ಕಾವೇರಿ ಜ ಲ ವಿವಾದದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿ ಇಡೀ ರಾಜ್ಯವೆ ಇದರ ಬಗ್ಗೆ ಹೋರಾಡುತ್ತಿರುವಾಗ.. ನಮ್ಮ ಕನ್ನಡಿಗರ ನಿರಾಭಿಮಾನಕ್ಕೆ ಧಿಕ್ಕಾರವಿರಲಿ..
ನಾವು ನಿಜವಾದ ಕನ್ನಡಿಗರಾಗಿದ್ದಾರೆ ಶಿವಾಜಿ ಚಿತ್ರ ಪ್ರದರ್ಶನವನ್ನು ನಿಲ್ಲಿಸುವ ಬಗ್ಗೆ ಇಲ್ಲಿ ಚರ್ಚಿಸಬೇಕು.. ಅದು ಬಿಟ್ಟು ರ ಜ ನೀ ಕಾಂತ ಗುನಗಾನ ಮಾಡುವುದು ಶೋಚನೀಯ ಹಾಗೂ ತಲೆ ತಗ್ಗಿಸುವಂಥ ವಿಚಾರ.
ಮುಂಗಾರು ಮಳೆ - ಇದೊಂದು ಸಿನಿಮಾ ಅಲ್ಲ, ಮಧುರ ಯಾತನೇ
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
Is it make any difference for you?
There are lot of things to publish in Kannada movies, why can't to u that. I got mail from my friend, regarding the film Mungaru Male, which is now showing in LONDON theatres first time in the London History.
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ಹಾಯ್ ಮಂಜುನಾಥ್ ಅವರೇ,
ನಾನು ಆ ಪ್ರಯತ್ನ ಮಾಡುತ್ತಾ ಇದ್ದೀನಿ. ಕನ್ನಡ ಸಿನಿಮಾ ಬಗ್ಗೆ ಸುದ್ದಿ ಮೂಲ ಹುಡುಕುತ್ತಾ ಇದ್ದೀನಿ. ಒಮ್ಮೆ ಹಾಗೆ ಸಿಕ್ಕ ತಕ್ಷಣ ಕನ್ನಡ ಚಿತ್ರದ ಬಗ್ಗೆ ಇನ್ನಷ್ಟು ಲೇಖನಗಳು ಪ್ರಕಟವಾಗುತ್ತದೆ.
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
God only can tell you
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ:
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ಹಾಯ್ ಕಿರಣ್ ಹಾಗೂ ಪುಟ್ಟಜುಂಜಯ್ಯನವರೇ,
ನಿಮಗೆ ನೋವಾಗಿದ್ದಕ್ಕೆ ಕ್ಷಮೆ ಇರಲಿ.
ಖಂಡಿತ ವಿಸ್ಮಯ ನಗರಿ ಕನ್ನಡಿಗರ ಆತ್ಮವಿಶ್ವಾಸದ ಸಂಕೇತ. ಇಲ್ಲಿ ಬೇರೆ ಭಾಷೆಯ ಚಿತ್ರ ವಿಮರ್ಶೆ ಸಾಮಾನ್ಯವಾಗಿ ಇರುವದಿಲ್ಲ.
ಆದ್ರೂ ಶಿವಾಜಿಗೆ ನಾನು ವಿನಾಯಿತಿ ನೀಡಿದ ಕಾರಣ ಅದು ರಜನಿಕಾಂತ ಅವರು ಮೂಲತಃ ನಮ್ಮ ಬೆಂಗಳೂರಿನ ಕನ್ನಡಿಗರಾಗಿರುವದರಿಂದ. ಎರಡನೇಯ ಕಾರಣ ಅಸಂಖ್ಯಾತ ಕನ್ನಡಿಗರು ಅವರ ಅಭಿಮಾನಿಗಳಾಗಿರುವದರಿಂದ.
ಆದರೂ ವಿಸ್ಮಯ ನಗರಿಯಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ, ಕರ್ನಾಟಕದ ವಿಷಯಗಳಿಗೆ ಯಾವಾಗ್ಲೂ ಪ್ರಥಮ ಆದ್ಯತೆ.
ಮತ್ತೊಮ್ಮೆ ಸ್ಪಷ್ಟನೆ ನೀಡಬಯಸುತ್ತೇನೆ. ವಿಸ್ಮಯ ನಗರಿ ಕನ್ನಡಿಗನಿಂದ, ಕನ್ನಡಿಗರಿಗಾಗಿ, ಕನ್ನಡಕ್ಕೋಸ್ಕರ ಹುಟ್ಟು ಹಾಕಿದ ತಾಣ. ಇದರ ಮುಖ್ಯ ಗುರಿ ಅಂತರ್ಜಾಲದಲ್ಲಿ ಕನ್ನಡ ತಾಣ ಬಳಕೆ ಜನಪ್ರಿಯ ಗೊಳಿಸುವದೇ ಹೊರತು ಬೇರಾವ ಉದ್ದೇಶ ಹೊಂದಿಲ್ಲ.
ನಿಮ್ಮ ಕ್ಷಮೆ ಕೋರುತ್ತಾ
ವಂದನೆಗಳು
--ರಾಜೇಶ ಹೆಗಡೆ
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ದಯವಿಟ್ಟು ತಮಿಳು ಅಥವಾ ಬೇರೆ ಚಿತ್ರಗಳ ವಿಶ್ಲೇಷಣೆ ನಮಗೆ ಬೇಡ. ವಿಸ್ಮಯ ನಗರಿ ಕನ್ನಡಿಗರಾ ಸ್ವಾಭಿಮಾನದ ಸಂಕೇತವಾಗಬೇಕೆ ವಿನಾಃ ರಾಜನೀಕಾಂತ Fan Club ಆಗಬಾರದು. What has he got to do with us? ದಯವಿಟ್ಟು ಯೋಚಿಸಿ ನೋಡಿ.
Re: ನಮ್ಮ ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ?
ಈ ಲೇಖನ ಓದಿ ಕನ್ನಡಿಗರಿಗೆ ನಿಜಕ್ಕೂ ಸ್ವಾಭಿಮಾನ ಇಲ್ಲವೆ ಎಂದೆನಿಸುತ್ತಿದೆ. ತಮಿಳು ಚಿತ್ರಗಳನ್ನು ನೋಡಲು ಕನ್ನಡಿಗರು ಇಷ್ಟೊಂದು ಕಾತರದಿಂದ ಕಾಯುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಬೇಸರವಾಗುತ್ತಿದೆ. ನಮ್ಮ ಮುಂಗಾರು ಮಳೆ ಅಥವಾ ದುನಿಯಾ ಚಿತ್ರಗಳನ್ನು ಬಿಡುಗಡೆ ಮಾಡಲು ತಮಿಳುನಾಡಿನಲ್ಲಿ ಯಾರಾದರೂ ಮುಂದೆ ಬರುತ್ತಾರಾ? ಕನ್ನಡ ಚಿತ್ರಗಳ ಬಗ್ಗೆ ಅವೆರೆಂದಾದರೂ ಒಲವು ತೋರಿದ್ದಾರಾ? ಇವೆರಡೆ ಏಕೆ? ಈ ಚಿತ್ರಗಳು ಬರುವುದಕ್ಕೂ ಮುನ್ನ ಹಲವಾರು ಒಳ್ಳೆಯ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಯಾವ ಚಿತ್ರಗಳೂ ಇಲ್ಲಿಯವರೆಗೆ ಆ ನಾಡಿನಲ್ಲಿ ಬಿಡುಗಡೆಯಾಗಿಲ್ಲ. ಕಾರಣ ಇಷ್ಟೆ... ಅಲ್ಲಿನ ಜನಗಳಿಗೆ ಕನ್ನಡ ಚಿತ್ರಗಳ ಮೇಲಿನ ಅಸಡ್ಡೆ ಮತ್ತು ತಿರಸ್ಕಾರ. ನಿಜ. ಈ ಹಿಂದೆ ಕನ್ನಡ ಚಿತ್ರಗಳು ಗೆಲ್ಲುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಬರುತ್ತಿರುವ ಚಿತ್ರಗಳು ಉತ್ತಮ ಗುಣಮಟ್ಟವುಳ್ಳ ಚಿತ್ರಗಳಾದರೂ ಅಲ್ಲಿನ ಜನ ಅವುಗಳನ್ನು ಸ್ವೀಕರಿಸಲು ತಯಾರಿಲ್ಲ. ನಾನು ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ನನ್ನ ಕಂಪನಿಯಲ್ಲಿ ಎಷ್ಟೋ ಜನ ತಮಿಳರು ಕನ್ನಡ ಚಿತ್ರಗಳು ಎಂದಾಕ್ಷಣ ಉಡಾಫೆಯ ಮಾತುಗಳನ್ನಾಡುತ್ತಾ ಕನ್ನಡಿಗರನ್ನು ಗೇಲಿ ಮಾಡುತ್ತಾರೆ. ಇದು ಒಂದು ರೀತಿಯಾದ ಅವಮಾನ. ಇದನ್ನು ಹೀಗೇ ಸಹಿಸುತ್ತಾ ಇರಬೇಕೆ? ನಮಗೇನು ಸ್ವಾಭಿಮಾನ, ರೋಷ ಇಲ್ಲವೆ? ಅವರಿಗೆ ಇಷ್ಟು ದುರಹಂಕಾರ ಇರುವಾಗ ನಾವೇಕೆ ಅವರ ಚಿತ್ರಗಳನ್ನು ಮುಗಿಬಿದ್ದು ನೋಡಬೇಕು? ನಾವು ಹೀಗೇ ಇದ್ದರೆ ನಮ್ಮ ಚಿತ್ರಗಳಿಗೆ ಹೊರರಾಜ್ಯಗಳಲ್ಲಿ ಮಾರುಕಟ್ಟೆ ಹುಟ್ಟುವುದಿಲ್ಲ. ಮೇಲಾಗಿ ಕರ್ನಾಟಕ ರಕ್ಷಣಾ ವೇದಿಕೆ ಯವರು ಹೋರಡುತ್ತಿರುವುದು ಯಾರಿಗೋಸ್ಕರ? ಕನ್ನಡಿಗರಿಗೋಸ್ಕರ ಅಲ್ಲವೆ? ನಾವು ಹೀಗೆ ಸ್ವಾಭಿಮಾನ ಬಿಟ್ಟು ತಮಿಳು ಚಿತ್ರಗಳನ್ನು ನೋಡುತ್ತಿದ್ದರೆ, ಕ.ರ.ವೇ ಯವರ ಹೋರಾಟ ನಗೆಪಾಟಲಿಗಡಾಗುವುದಿಲ್ಲವೆ? ನಾನು ಒಬ್ಬನೆ ತಮಿಳು ಚಿತ್ರಗಳನ್ನು ನೋಡುವುದಿಲ್ಲ ಎಂದರೆ ಬೇರೆ ಯಾರೂ ನೋಡುವುದೇ ಇಲ್ಲವೆ ಎಂದುಕೊಂಡು ನಿರ್ಲಕ್ಷಿಸಬೇಡಿ. ಹನಿ ಹನಿಗೂಡಿದರೆ ಹಳ್ಳ ಅಲ್ಲವೆ? ಬೇರೆಯವರ ಬಗ್ಗೆ ಚಿಂತಿಸಬೇಡಿ. ನೀವು ಸ್ವಾಭಿಮಾನಿಯಾಗಿದ್ದರೆ ಬೇರೆಯರು ಅದನ್ನು ನೋಡಿ ಕಲಿಯುತ್ತಾರೆ. ಸ್ವಲ್ಪ ಯೋಚಿಸಿ ಕನ್ನಡಿಗರೆ.....
Re: ರಜನಿಕಾಂತ್ ಶಿವಾಜಿ ಸಿನಿಮಾ ಹಿಟ್ ಆಗುತ್ತಾ? ಶಿವಾಜಿ - ದ ಬಾಸ್
ಶಿವಾಜಿ..... ಒಳ್ಳೆಯ ಸಂಗೀತವನ್ನು ಹೊಂದಿದೆ... ಜೊತೆಗೆ ಅದರ ಬಗೆಗಿನ ಲೇಖನಗಳನ್ನು ಓದಿದರೆ... ಹಾಗು ಅದರಲ್ಲಿನ ಸಾಹಸ ದ್ರಶ್ಯಗಳ ಚಿತ್ರೀಕರಣದ ಬಗ್ಗೆ ಓದಿದ ಮೇಲೆ ಇದು ಒಂದು ಒಳ್ಳೆಯ ಚಿತ್ರವಾಗಿರಬಹುದೇನೋ ಅನಿಸುತ್ತದೆ.... ಜೊತೆಗೆ ರಹಮಾನ್ ರವರ ಸಂಗೀತವೂ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ..... ಕಾದು ನೋಡೋಣ........
ನಿಮ್ಮ ಅನಿಸಿಕೆ ತಿಳಿಸಿ