ಬೇಸಿಗೆಯ ಒಂದು ಸಂಜೆಯಲಿ ಬಿರುಮಳೆ,
ತಣ್ಣನೆಯ ಸುಳಿಗಾಳಿ,
ಬಿಸಿಲಲಿ ಕಾದು, ಹೊಸ ಮಳೆಹನಿಗೆ ಬೆಂದ-
ನೆಲದ ಮಣ್ಣ ವಾಸನೆ,
ಬೆಳಕು ಸತ್ತ ಒದ್ದೆ ಮುದ್ದೆ ಸಂಜೆ ಯಾಕೋ
ಅಸಹನೀಯ ಅನಿಸುತಿದೆ;
ಇಂದು ರಾತ್ರಿಗೆ ಸೆಖೆ ಇನ್ನೂ ಹೆಚ್ಚಾಗುವುದ ನೆನೆದೋ,
ಅಥವಾ ಈ ಕ್ಷಣ, ನೀನೀಗ ಇಲ್ಲಿ ನನ್ನೊಂದಿಗೆ ಇಲ್ಲವೆಂದೋ?

Re: ಸಂಜೆಯ ಬಿರುಮಳೆ
ಸೂಪರ್ ಆಗಿದೆ. ಬೇಸಿಗೆಯ ಮಧ್ಯದ ಈ ಎರಡು ದಿನಗಳ ಮಳೆ ಮೈ-ಮನಗಳಿಗೆ ತಂಪೆರೆದಿದೆ. ನಿಮ್ಮ ಹನಿಗವನ ಕೂಡಾ ಬೇರೆಡೆಗೆಲ್ಲೋ ಕೊಂಡೈದಿದೆ.......
ನಿಮ್ಮ ಅನಿಸಿಕೆ ತಿಳಿಸಿ