'ಮುಂಗಾರು ಮಳೆಯ' ನೀತಿ?

ಬರೆದವರು: ಶಿವಕುಮಾರ ಕೆ. ಎಸ್. - ಕಳುಹಿಸಿದ ದಿನ 11 April 2007

ಪ್ರೀತಮ್-
ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದ, ಹೆಚ್ಚು ಓದಿರದ (ಪಿಯೂಸಿ ಫೇಲು)ಅಪ್ಪನ ಶ್ರೀಮಂತಿಕೆ ಬಗ್ಗೆ ನಿರಾದರವುಳ್ಳ ಒಳ್ಳೇ ಹುಡುಗ. ಜೀವನದಲ್ಲಿ ಯಾವುದನ್ನೂ ಗಂಭೀರವಾಗಿ ತಗೊಂಡವನೂ, ಅನುಭವಿಸಿದವನೂ ಅಲ್ಲ. ಅವನಿಗೆ ಈ ಹುಡುಗಿ ಕಂಡದ್ದು ತನ್ನ ಜೀವನಕ್ಕೆ ಒಳ್ಳೇ ಗುರಿ ಸಿಕ್ಕಿದಂತಾಗುತ್ತದೆ. ಹೇಗೋ ಸರಾಗವಾಗಿ, ಗೊತ್ತುಗುರಿಯಿಲ್ಲದಂತೆ ಸಾಗುತಿದ್ದ ಅವನ ಜೀವನಕ್ಕೆ ಗುರಿ-ಲಕ್ಷ್ಯ ಸಿಕ್ಕುತ್ತದೆ. ಹಿಂದೆ-ಮುಂದೆ ಯೋಚಿಸದೇ ಪ್ರೀತಿಯೊಳಕ್ಕೆ ಬೀಳುವ ಅವನು ತನ್ನ ಜೀವನದ ಎಲ್ಲ ಪುಟಗಳನ್ನೂ ಬರೀ ಹತ್ತು ದಿನಗಳಲ್ಲಿ ಬರೆದುಕೊಂಡುಬಿಡುತ್ತಾನೆ. ಎಲ್ಲ ಸರಿ, ಮುಂದೇನು ಎಂಬ ಪ್ರಶ್ನೆಗೆ ಅವನಲ್ಲಿ ಉತ್ತರವಿಲ್ಲ. ಹುಂಬ ಪ್ರೀತಿ, ಹೇಗಾದರೂ ಎಲ್ಲವನ್ನು ಜಯಿಸಿ ಪ್ರೀತಿಯನ್ನು ತನ್ನದನ್ನಾಗಿಸಿಕೊಂಡೇ ಬಿಡುತ್ತೇನೆ ಅಂತ ಹೊರಟವನಿಗೆ ಮೆಲ್ಲನೆ ವಾಸ್ತವದ ಅರಿವಾಗುತ್ತದೆ. ಕೊನೆಗೆ ತಾನಾಗೇ ತನ್ನ ಪ್ರೀತಿಯನ್ನು ಕೊಂದುಕೊಳ್ಳುವ ನಿರ್ಧಾರಕ್ಕೆ ಬರುತ್ತಾನೆ.

ನಂದಿನಿ-
ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ, ಸ್ನೇಹಿತೆಯರಿದ್ದೂ ಒಂಟಿಯಾಗಿರಬಲ್ಲ, (ಬಾಂಬೆಯಲ್ಲಿ ಓದಿರುವ) ಕನಸುಗಣ್ಣಿನ ಹುಡುಗಿ. ಅವಳ ಪುಟ್ಟ ಪ್ರಪಂಚದಲ್ಲಿ-ಕೇವಲ ಅವಳು, ಅವಳಪ್ಪ, ಅಮ್ಮ ಅಷ್ಟೇ! ಅಂಥವಳ ಪ್ರಪಂಚದಲ್ಲಿ ಈಗ್ಗೆ ಆರು ತಿಂಗಳ ಹಿಂದೆ ಹುಡುಗನೊಬ್ಬನ ಪ್ರವೇಶವಾಗಿದೆ-ಅವನೊಂದಿಗೆ ಅವಳ ಎಂಗೇಜ್-ಮೆಂಟ್ ಕೂಡ ಆಗಿದೆ. ಅವಳ ಕನಸುಗಳಿಗೆ-ಹೊಸ ಬಣ್ಣಗಳ ಪ್ರವೇಶವಾಗಿದೆ. ಅಂಥಾದರಲ್ಲಿ ಬರುತ್ತಾನೆ ಹೊಸ ಹುಡುಗ, ನಿನ್ನನ್ನು ಪ್ರೀತಿಸುತ್ತೇನೆ, ಸತ್ತಮೇಲೂ ಪ್ರೀತಿಸುತ್ತಲೇ ಇರುತ್ತೇನೆ ಅನ್ನುತ್ತಾನೆ, ಹತ್ತೇ ದಿನದಲ್ಲಿ ಉಸಿರಿಗುಸಿರು ತಾಕುವಷ್ಟು ಹತ್ತಿರಕ್ಕೆ ಬಂದುಬಿಡುತ್ತಾನೆ. ಹುಡುಗಿ ಹಾರಲೆತ್ನಿಸುತ್ತಾಳೆ. ಕೊನೆಯಲ್ಲಿ ಅವನಿಂದ ತಿರಸ್ಕೃತಗೊಂಡರೂ ಅವಳು ಹೆಚ್ಚು ಚಿಂತಿಸದೇ ಮೊದಲು ಕಂಡ ಕನಸನ್ನೇ ಅಪ್ಪಿಕೊಳ್ಳುವುದಕ್ಕೆ ಕಾರಣ-ಈ ಹೊಸ ಹುಡುಗನ ಜೊತೆಗಿನ ತನ್ನ ಜೀವನದ ಬಗ್ಗೆ ಅವಳು ಕನಸು ಕಂಡಿರಲೇ ಇಲ್ಲ. ಹತ್ತು ದಿನಗಳಲ್ಲ್ಲಿ ನೂರು ಚಿತ್ತಾರ ಮೂಡಿಸಿ, ಸಾವಿರ ಮಾತುಗಳನ್ನಾಡಿದವರಿಗೆ ಮುಂದೇನು ಅಂತಾ ಗೊತ್ತೇ ಇರುವುದಿಲ್ಲ. ಹಾಗಾಗಿಯೇ ಅವನು ತೊರೆದ ತಕ್ಷಣ ಅವಳು ತನ್ನ ಹಳೆಯ ಕನಸಿಗೆ, ಅದು ಹಾಕಿಕೊಡುತ್ತಿರುವ ಭಧ್ರ ಬುನಾದಿಯ ನನಸಿಗೆ ವಾಪಸ್ಸಾಗುತ್ತಳೆ. ಆದರೆ ಆ ಹತ್ತು ದಿನಗಳನ್ನು ತಕ್ಷಣಕ್ಕೆ ಮರೆತುಬಿಡುವಷ್ಟು ಕ್ರೂರಿಯಾಗುವುದಿಲ್ಲ. ಆ ಹತ್ತು ದಿನಗಳಲ್ಲಿ ಹೊಸಬನನ್ನು ಪ್ರೀತಿಸಿದ್ದೂ ನಿಜ, ಪ್ರೀತಿ ಮುಳ್ಳಾದಾಗ ಮೊದಲೇ ಕಟ್ಟಿಕೊಂಡಿದ್ದ ಕನಸಿಗೆ ಮರಳಿದ್ದೂ ನಿಜ. ಯಾವುದೂ ಆತ್ಮ ವಂಚನೆಯಲ್ಲ.

ಕೊನೆಯಲ್ಲಿ ಪ್ರೀತಮ್-ನಿಗೆ ಅವನ ಹುಡುಗಿ ಸಿಕ್ಕದಿದ್ದರೂ ನಮಗೆ ಭಯಂಕರ ಬೇಜಾರೇನೂ ಆಗುವುದಿಲ್ಲ. ಯಾಕೆಂದರೆ ಅಷ್ಟುಹೊತ್ತಿಗಾಗಲೇ ನಮ್ಮ ಒಳಮನಸ್ಸಿಗೆ ಗೊತ್ತಾಗಿರುತ್ತದೆ, ಪ್ರೀತಮ್ ಭಗ್ನಪ್ರೇಮಿಯಾಗಲಾರ. ಹಾಗಂತ ಅವನು ಫಟ್ಟನೆ ಇನ್ನೊಂದು ಹುಡುಗಿಯ ಪ್ರೇಮದಲ್ಲಿ ಸಿಲುಕುತ್ತಾನೆ ಅಂತಲ್ಲ, ಆದರೆ ಅವನಿಗೆ ಕೊನೆಗೂ ಪ್ರೀತಿಯ ಅರ್ಥ ಗೊತ್ತಾಗಿದೆ, ಪ್ರೀತಿಯ ಜೊತೆಗೇ ಬರುವ ಬಂಧದ, ಜವಾಬ್ದಾರಿಯ ಅರಿವು ಆಗಿರುತ್ತದೆ. ಹಾಗಾಗಿ ಅವನು (ಒಂದಿಡೀ ಸಿನೆಮಾದಲ್ಲಿ ಅವನ ವ್ಯಕ್ತಿ/ವ್ಯಕ್ತಿತ್ವದ ಪರಿಚಯಮಾಡಿಕೊಂಡ ನಮಗೆ ಗೊತ್ತಾಗುತ್ತದೆ) ದೇವದಾಸ್-ನಂತಾಗದೇ 'ಟೈಟಾನಿಕ್'-ನ ರೋಸ್ ನ ಹಾಗೆ, 'ಕಭಿ ಹಾಂ, ಕಭಿ ನಾ' ದ ಸುನಿಲ್-ನ ಹಾಗೆ ಸಹೃದಯಿಯಾಗುತ್ತಾನೆ, ಹುಡುಗನಾಗಿ ಬೆಳೆಯುತ್ತಾನೆ, ಅವನಿಗೆ (ಫಿಲಾಸಫಿಕಲ್ಲಾಗಿ ಅಲ್ಲ) ಜೀವನದರ್ಶನವಾಗುತ್ತದೆ. ಆಮೇಲೆ ಅವನು ಖಂಡಿತಾ ಇನ್ನೊಮ್ಮೆ ಇಷ್ಟೇ ಉತ್ಕಟವಾದ ಪ್ರೇಮದಲ್ಲಿ ಸಿಲುಕುತ್ತಾನೆ, ಗೆಲ್ಲುತ್ತಾನೆ.

ಪ್ರೀತಿಸುವುದು ಅಂದರೆ, ನಾವು ಬಯಸಿದ ಪ್ರೀತಿ ದೊರಕದ ತಕ್ಷಣ ಇಡೀ ಲೋಕವನ್ನು, ಅದರಲ್ಲಿರುವ ಪ್ರೀತಿಗರ್ಹವಾದುದೆಲ್ಲವನ್ನೂ, ನಿಮ್ಮನ್ನು ನಿಮಗಿಂತ ಹೆಚ್ಚಾಗಿ ಪ್ರೀತಿಸುವವರನ್ನೂ ತೊರೆದು ಭಗ್ನ ಪ್ರೇಮಿಯಾಗುವುದಲ್ಲ...

ಪ್ರೀತಿಯೆಂದರೆ, ದೊರಕದಿದ್ದರೂ ಅದರ ಸವಿನೆನಪಿನಲ್ಲಿ, ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡುವ ಜೀವ-ಭಾವವಾಗಬೇಕು...

ದೊರಕದ ಪ್ರೀತಿಯ ನೆನಪುಗಳು ಮನಸನ್ನು ದಗ್ದಗೊಳಿಸುವ ದಾವನಲವಾಗಬಾರದು, ಮರುಕಳಿಸಿದಾಗಲೆಲ್ಲ ನಮ್ಮನ್ನು ಇನ್ನಷ್ಟು ಪ್ರೀತಿಗೆ ತಹತಹಿಸುವಂತೆ ಮಾಡುವ ಸ್ಪೂರ್ತಿದೀಪವಾಗಬೇಕು...

ಕೊನೆಯಲ್ಲಿ ನಮ್ಮ ಪ್ರೀತಮ್-ಗೆ ಹಾಗೇ ಅನಿಸಿರಬೇಕು, ಏನಂತೀರಾ?

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3.4 (5 ಓಟುಗಳು)
Rekha RG's picture
ರವಿ, 03/05/2009 - 15:27 ರಂದು Rekha RG (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
preeti ond maduravada

preeti ond maduravada anubanda,adannu sulabavagi padkolakke yarigu agalla,hage preetam kuda preetina padkolake sadya agilweno anst ide,

madhukeshwart's picture
ಶನಿ, 14/04/2007 - 19:29 ರಂದು madhukeshwart ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ಪ್ರೀತಿಗೆ ಮಾಡುವ ಮನಸ್ಸಿದ್ದ ರೇ ,ನಿಮಗೆ ಸಾವಿರ ಹುಡುಗಿಯರ ಪ್ರೀತಿ ಸಿಗುತ್ತೆ ,ಆದ್ರೆ ಆ ಹುಡುಗಿ ಮಾತ್ರ ಸಿಗುವುದಕ್ಕೆ ಸಾಧ್ಯವಿಲ್ಲ,

ಅವಳು ನಂದಿನಿ-ಆಗಲೂ ಸಾಧ್ಯವಿಲ್ಲ
ಅವನು ಪ್ರೀತಮ್ ಆಗಲೂ ಸಾಧ್ಯವಿಲ್ಲ

you can't get another pritam for nandini
or nandini for pritam....

ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ:

chetanbs's picture
ಶನಿ, 14/04/2007 - 11:24 ರಂದು chetanbs ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ತುಂಬಾ ಆಳವಾಗೇ ಯೋಚಿಸಿದ್ದೀರ ಅನಿಸುತ್ತದೆ. ಹೌದು.... ನೀವು ಹೇಳಿದ ಹಾಗೆ ಇಲ್ಲಿ ಅಂದರೆ ಈ ಜಗತ್ತಿನಲ್ಲಿ ಎಲ್ಲವೂ ಒಂದಲ್ಲಾ ಒಂದು ತರಹದ ಪ್ರೀತಿಯಿಂದ, ಪ್ರೀತಿಗಾಗಿಯೇ ನಡೆಯುತ್ತದೇನೋ ಅನ್ಸ್ತದೆ. ಮುಂಗಾರು ಮಳೆಯಲ್ಲಿನ ಪ್ರತಿ ಸನ್ನಿವೇಶದಲ್ಲೂ ಕೂಡ ನಾವು ನಮ್ಮನ್ನು ನಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ಹೋಲಿಸಿಕೊಳ್ಳುತ್ತಾ ಹೋಗಬಹುದೇನೋ ಅಂತ.... ಅಲ್ವಾ???
ಹಾಗೆಯೇ ಪ್ರೀತಿ ಮಧುರ ತ್ಯಾಗ ಅಮರ ಅನ್ನುವುದು ಮಾತ್ರ ಎಷ್ಟು ಸತ್ಯ..... ಯಾರು ಯಾರನ್ನಾದರು ಎಷ್ಟು ಪ್ರೀತಿ ಮಾಡಿದರೂ ಕೂಡ ... ತ್ಯಾಗದಲ್ಲಿ ಸಿಗುವ ಶಾಂತಿ ಬೇರೆಲ್ಲೂ ಸಿಗುವುದಿಲ್ಲವೇನೋ...... ಹಾಗೆಂದು .. ಪ್ರೀತಿಯನ್ನು ತ್ಯಾಗ ಮಾಡಿದರೆ ಮಾತ್ರ ಶಾಂತಿ ಎಂದು ಪ್ರತಿಪಾದಿಸುತ್ತಿಲ್ಲ... .... Smile

ಶಿವಕುಮಾರ ಕೆ. ಎಸ್.'s picture
ಶುಕ್ರ, 13/04/2007 - 10:18 ರಂದು ಶಿವಕುಮಾರ ಕೆ. ಎಸ್. ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ಕಂಡಿತಾ ಹೌದು - ಪ್ರೀತಿಯೇ ಸತ್ಯ, ಉಳಿದುದೆಲ್ಲ ಮಿಥ್ಯ.
ಸ್ವಲ್ಪ ಯೋಚಿಸಿ, ಪ್ರೀತಿ ಅನ್ನೋದೇ ಇರಲ್ಲಿಲ್ಲ ಅಂದ್ರೆ ಈ ಲೌಕಿಕದ ಯಾವ ಸಂಪತ್ತು, ಯಾವ ಸುಖ ನಮಗೆ ನೆಮ್ಮದಿ ತರ್ತಿತ್ತು?

ರಾಜೇಶ ಹೆಗಡೆ's picture
ಶುಕ್ರ, 13/04/2007 - 07:47 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ಸೂಪರ್ ಅಗಿದೆ ಕಣ್ರಿ. ಇಷ್ಟನ್ನು ಮುಂಗಾರು ಮಳೆ ಮೂರು ಬಾರಿ ನೋಡಿದ್ರೂ ಯೋಚಿಸೇ ಇರಲಿಲ್ಲ!

ನನಗೆ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ ಅನಿಸ್ತಾ ಇಲ್ಲ. ಯಾಕೆಂದರೆ ಪ್ರೀತಿ, ಪ್ರೇಮ ಇಲ್ಲದ ಜೀವನ ರಸ ಇಲ್ಲದ ಮಾವಿನ ಹಣ್ಣಿದ್ದಂತೆ. ಪ್ರೀತಿಯೇ ಸತ್ಯ. ಉಳಿದುದೆಲ್ಲಾ ಮಿಥ್ಯ! ಏನಂತೀರಾ?

Sudhi's picture
ಗುರು, 12/04/2007 - 08:31 ರಂದು Sudhi (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

Chennagide ninna comment. Yogaraj Bhattaroo istu yochne maadi cinema tegedirlikkilla Smile

Arun's picture
ಬುಧ, 11/04/2007 - 15:51 ರಂದು Arun (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ಆದರೆ ನಮ್ಮ ಸಂತೊಷಕ್ಕೆ ಪ್ರೀತಿ ಮದುರ ತ್ಯಾಗ ಅಮರ ಅಂತ ಹೇಳಿಕೊ ಬಹುದು.......

ಸರಿ ಅಲ್ವ

ಅನಾಮಿಕ's picture
ಬುಧ, 11/04/2007 - 15:49 ರಂದು ಅನಾಮಿಕ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ಚೆನ್ನಗಿದೆ ,

ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆ ಕಾಯಿ ಅಸ್ಟೆ ....................

ಶಿವಕುಮಾರ ಕೆ. ಎಸ್.'s picture
ಬುಧ, 11/04/2007 - 15:36 ರಂದು ಶಿವಕುಮಾರ ಕೆ. ಎಸ್. ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ಇದು ಪ್ರೀತಮ್-ನ ಲೈಫು, ಪರ್ಸ್ಪೆಕ್ಟಿವ್ ಎನೂ ಅಲ್ಲ ಗುರೂ..
ನಂದೇ ಲಿಫು, ಅದರದ್ದೇ ಪರ್ಸ್ಪೆಕ್ಟಿವ್ವು.

ನಿಜ ನೀವು ಹೇಳಿದ್ದು, ನಾನು ಒಂಥರಾ experienced :'(

ಶಿವಕುಮಾರ ಕೆ. ಎಸ್. http://shivakumara.50webs.com

RHSandeep's picture
ಬುಧ, 11/04/2007 - 15:24 ರಂದು RHSandeep (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

It seems like u have gone through Preethams life and analysed life from his perspective.
Only a experienced person can feel like u.

Excellent writeup.

khushi's picture
ಬುಧ, 25/04/2007 - 16:56 ರಂದು khushi (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ಮುಂಗಾರು ಮಳೆಯ' ನೀತಿ?

ಹಲೋ
ನೀವು ಸಿನಿಮಾನ ಚೆನ್ನಾಗಿ ಅನಲೈಸ್ ಮಾಡಿದೀರ excellant..............

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
6 ಕೂಡಿಸು ಉತ್ತರ 13
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಶಿವಕುಮಾರ ಶೇಷಪ್ಪ ಕುಂದೂರು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ಇವರ ವಿಸ್ಮಯ ಪುಟ