ಜೀವ ಉಳಿಸಿದ ಭಾಗ್ಯ
ಇವತ್ತು ನಾನು ಒಂದು ಜೀವ ಉಳಿಸಿದೆ... !!!
:)
ಅದು ಹೇಗೆ ಎಂದು ಯೋಚಿಸುತ್ತಿದ್ದೀರ !?
ಅದು ಸಿಂಪಲ್, ನಾನು ಒಬ್ಬ ಭಿಕ್ಷುಕನ್ನ ಕೇಳಿದೆ : 1 ಲಕ್ಷ ರೂ. ಕೊಟ್ರೆ ಏನು ಮಾಡ್ತೀಯಾ ಅಂತ. ಅದಕ್ಕೆ ಅವನು ಖುಷಿಯಿಂದ ಸತ್ತೇ ಹೋಗ್ತೇನೆ ಅಂದ.
ನಾನು ಅವನಿಗೆ 1 ಲಕ್ಷ ರೂ. ಕೊಡದೆ, ಜೀವ ಉಳಿಸಿದಂತೆ ಆಗಲಿಲ್ವ... 
ಮದುವೆ !
ಡಾಕ್ಟರ್ : ನಿಮಗೆ ಮದುವೆ ಆಗಿದೆಯಾ ?
ಸರ್ದಾರ್ : ಹುಡುಗಿ ಜೊತೆ ಆಗಿದೆ. !
ಡಾಕ್ಟರ್ : ಎಲ್ರೂ ಹುಡುಗಿ ಜೊತೆನೇ ಮದುವೆ ಆಗೋದು.
ಸರ್ದಾರ್ : ಹಾಗೇನೂ ಇಲ್ಲವಲ್ಲ. ನನ್ನ ತಂಗಿಗೆ ಹುಡುಗನ ಜೊತೆ ಮದುವೆ ಆಗಿದೆ !!!
ಸೋಪ್‍ನಲ್ಲಿ ಕೈ ತೊಳೆ
ಗುಂಡ : ಒಳ್ಳೆಯ ಸೋಪ್ ಯಾವುದಿದೆ ?
ಅಂಗಡಿಯವ : ಒಳ್ಳೆಯ ಸೋಪ್ ಅಂದ್ರೆ ಮೈಸೂರು ಸ್ಯಾಂಡಲ್ ಇದೆ.
ಗುಂಡ : ಹಾಗಿದ್ರೆ ಅದ್ರಲ್ಲಿ ಕೈ ತೊಳೆದುಕೊಂಡ ೧ ಕೆ.ಜಿ ಬೆಲ್ಲ ಕೊಡಿ.
ತೇರಾ ಬಾಪ್ !
ಒಬ್ಬ ತಮಿಳಿನವ ಮತ್ತು ಮತ್ತೊಬ್ಬ ಮಂಟಾ ಸಿಂಗ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ತಮಿಳು ಆಸಾಮಿಗೆ ಸಿಂಗ್ ಜೊತೆಗೆ ಮಾತನಾಡುವ ಆಸೆ. ಆದರೆ ಅವನಿಗೆ ಹಿಂದಿ ಬರುತ್ತಿರಲಿಲ್ಲ. ಸಿಂಗ್‍ಗೆ ತಮಿಳು ಗೊತ್ತಿದೆಯೇ ಎಂದು ತಿಳಿಯಲು ಕೇಳಿದ,
- 'ತಮಿಳು ತೇರೀಮಾ',
ಅದಕ್ಕೆ ಮಂಟಾ ಸಿಂಗ್ ದುರುಗುಟ್ಟಿಕೊಂಡು ಗುಡುಗಿದ - 'ಹಿಂದಿ ತೇರಾ ಬಾಪ್' !
ಬ್ರೇಕ್ ಡ್ಯಾನ್ಸ್
ಸರ್ದಾರ್ ಸೈಕಲ್ ಬ್ರೇಕ್‍ನ ಕೈಯಲ್ಲಿ ಹಿಡಿದುಕೊಂಡು ಡ್ಯಾನ್ಸ್ ಮಾಡ್ತಾ ಇರುತ್ತಾನೆ.
ಸ್ನೇಹಿತ : ಲೊ ಏನೋ ಮಾಡ್ತಿದ್ದೀಯಾ ನೀನು ?
ಸರ್ದಾರ್ : ಒಯ್ ಅಷ್ಟು ಗೊತ್ತಾಗೊಲ್ವ, ಬ್ರೇಕ್ ಡ್ಯಾನ್ಸ್ ಆಡ್ತಿದ್ದೀನಿ !!!

ನಿಮ್ಮ ಅನಿಸಿಕೆ ತಿಳಿಸಿ