ಪ್ರಾಕ್ಟರ್ ಎಂಡ್ ಗ್ಯಾಂಬಲ್ ಅವರ ಟೈಡ್ ಡಿಟರ್ಜಂಟ್ ಯಶಸ್ವಿಯಾಗಿ ಹಿಂದೂಸ್ಥಾನ್ ಲಿವರ್ ಅವರ ಡಿಟರ್ಜಂಟ್ ಮಾರುಕಟ್ಟೆಯಲ್ಲಿ ಪಾಲನ್ನು ಕಿತ್ತುಕೊಳ್ಳುತ್ತಿರುವದು ಎಚ್ ಎಲ್ ಎಲ್ ಅವರಿಗೆ ಚೆನ್ನಾಗಿ ಬಿಸಿ ಮುಟ್ಟಿದೆ ಅನ್ಸುತ್ತೆ. ಅದಕ್ಕೆ ನೇರವಾಗಿ ಟೈಡ್ ಗಿಂತ ರಿನ್ ಚೆನ್ನಾಗಿದೆ ಎಂದು ಟಿವಿಯಲ್ಲಿ ಬಾಯಿ ಬಡಕೊಳ್ತಾ ಇದೆ. ಇದಕ್ಕೆ ಪ್ರಾಕ್ಟರ್ ಎಂಡ್ ಗ್ಯಾಂಬಲ್ ಏನು ಉತ್ತರ ಕೊಡುತ್ತೋ ನೋಡಬೇಕು. ಈ ಸ್ಪರ್ಧೆಯಿಂದ ಡಿಟರ್ಜೆಂಟ್ ಗಳ ಬೆಲೆ ಇಳಿದಿರುವದಂತೂ ನಿಜ.
ಕೊನೆ ಮಾತು: ಈ ಜಾಹಿರಾತಿನಿಂದ ರಿನ್ ಗೆ ಲಾಭ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಟೈಡ್ ಹೆಸರು ಕೇಳದಿದ್ದವರಿಗೂ ಈ ಜಾಹಿರಾತು ಪರಿಚಯ ಮಾಡಿಕೊಡುತ್ತಿರುವದು ನಿಜ.

Re: ರಿನ್ ಒಳ್ಳೆಯದಾ ಟೈಡಾ?
ರಾಜೇಶ್ ಸರ್,
ಇದೇ ರೀತಿಯ ಘಟನೆಗಳು ನಮ್ಮ ದಿನ ನಿತ್ಯದ ಕೆಲಸಗಳಲ್ಲಿ ನಡೆಯುತ್ತಿರುತ್ತವೆ. ನಮ್ಮ ಪ್ರೊಡಕ್ಟ್ ಗಳನ್ನು ಚೆನ್ನಗಿವೆ ಎಂದು ಹೇಳುವ ಬರದಲ್ಲಿ ಬೇರೇ ಕಂಪನಿಯ ಉತ್ಪನ್ನಗಳನ್ನು ಅವುಗಳ ಹೆಸರು ಹೇಳಿ ನಮ್ಮ ಕಂಪನಿಯ ಉತ್ಪನ್ನವೇ ಮೇಲು ಎಂದು ಹೇಳುವ ಜೊತೆಗೆ ಬೇರೆ ಕಂಪನಿಯ ಉತ್ಪನ್ನಗಳನ್ನೂ ಬಿಟ್ಟಿ ಪ್ರಚಾರ ಮಾಡಿ ಬಂದು ಬಿಡುತ್ತೇವೆ
ನಿಮ್ಮ ಅನಿಸಿಕೆ ತಿಳಿಸಿ