'ವೃಕ್ಷ ರಾಜ'ನ ಸ್ವಗತ.....

ಬರೆದವರು: ಉಮಾಶಂಕರ ಬಿ.ಎಸ್ - ಕಳುಹಿಸಿದ ದಿನ 07 February 2010

ನಿಜಕ್ಕೂ ಮರವಾಗಿ ಹುಟ್ಟಲು ಪುಣ್ಯ ಮಾಡಿರಬೇಕು. ಪೂರ್ವಜನ್ಮದ ಸುಕೃತದಿಂದ ನಾನು ಈ ಜನ್ಮದಲ್ಲಿ ಮರವಾಗಿ ಜನಿಸಿದ್ದೀನಿ, ಅದರಲ್ಲೂ ಬೃಹದಾಕಾರವಾಗಿ ಬೆಳೆಯಬಲ್ಲ 'ವೃಕ್ಷಗಳ ರಾಜ'  ಆಲದ ಮರವಾಗಿದ್ದೇನೆ.

ವಿಶಾಲ ಆಲದಮರ 'ಗತಕಾಲವಿಶಾಲ ಆಲದಮರ 'ಗತಕಾಲ

ನೋಡಿ ಎಷ್ಟು ವಿಶಾಲವಾಗಿದ್ದೇನೆ.

       ಸುಮಾರು ೧೦೦-೧೫೦ ವರ್ಷಗಳಿರಬಹುದು, ಒಬ್ಬ ಪುಣ್ಯಾತ್ಮನಾದ ರೈತ ಬೇರ್ಯಾವುದೋ ಆಲದ ಮರದಿಂದ ಒಂದು ಸಣ್ಣಕೊಂಬೆ ಕಡಿದು ಅವನ ಹೊಲದಲ್ಲಿ ನನ್ನನ್ನು ನೆಟ್ಟು ಪ್ರತಿಸ್ಠಾಪಿಸಿದ. ದಿನವೂ ನನಗೆ ನೀರೆರೆದು, ಕಾಲಕಾಲಕ್ಕೆ ಆಹಾರ ನೀಡಿ, ಮೇಕೆ ಕುರಿದನಗಳ ದಾಳಿಯಿಂದ ನನ್ನನ್ನು ರಕ್ಷಿಸಿದ ಆ ಮಹಾನುಭಾವ. ಅವನಿಗೆ ನಾನು ಚಿರರುಣಿ.

       ನಾನು ನೆಲಕ್ಕೆ ಬೇರೂರಿ ಸುಮಾರು ೧೫ ವರ್ಷವಾದಾಗ ನನ್ನ ಹೊಟ್ಟೆಯ ಮೇಲೆ ಮೊದಲ ಸಣ್ಣ ಪೆಟ್ಟು ಬಿತ್ತು, ಅದೂ ಈ ಊರಿನ ಯುವಪ್ರೇಮಿಗಳಿಂದ, ಯುವಕನು ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದಿಸಲು ತನ್ನೀರ್ವರ ಹೆಸರುಗಳನ್ನು ನನ್ನ ಹೊಟ್ಟೆಯ ಮೇಲೆ ಕೆತ್ತಿದಾಕ್ಷಣಕ್ಕೆ ನೋವಾದರು ನನಗೆ ಖುಷಿಯೇ ಆಯಿತು 'ನಾನು ಅವರ ಪ್ರೇಮಕ್ಕೆ ಸಾಕ್ಷಿಯಾದೆನಲ್ಲ' ಎಂದು. ಅವರ ನಂತರ ಅದೆಷ್ಟು ಜೋಡಿ ಜೀವಗಳು ನನ್ನ ನೆರಳ ಕೆಳಗೆ ಪಿಸುಗುಟ್ಟಿದ್ದಾರೆ! ಅದೆಷ್ಟು ಜನ ನನ್ನೆದೆಗೊರಗಿ ತಮ್ಮ ದುಃಖತೋಡಿಕೊಂಡು ಸಾಂತ್ವಾನಪಡೆದುಕೊಂಡರು! ಒಂದೆ ಎರಡೇ ಅವುಗಳನ್ನು ಮೆಲುಕುಹಾಕುತ್ತಿದ್ದರೆ ಅದೆಂತಹ ಮಧುರಾನುಭೂತಿ!! "ನಾನೇನು ಭೂತಾಯಿಗಿಂತಲೂ ಒಂದು ಕೈ ಮೇಲೇನೋ' ಎಂಬ ಅಹಂ ನನ್ನನ್ನು ಆಗಾಗ ಕಾಡುವುದುಂಟು.

       ಮತ್ತೆ ನನಗೆ ಸ್ವಲ್ಪಜಾಸ್ತಿ ಅನ್ನುವಷ್ಟು ಏಟು ಬಿದ್ದದ್ದು ನನ್ನನ್ನು ನೆಟ್ಟ ರೈತನಿಂದಲೆ!!! ಹೌದು ಅದೊಂದು ದಿನ ತನ್ನಿಬ್ಬರು ಸ್ನೇಹಿತರೊಡನೆ ಬೆೞಂಬೆಳಿಗ್ಗೆ ಹೊಲಕ್ಕೆ ಬಂದ ರೈತ ನನ್ನ ರೆಂಬೆ ಕೊಂಬೆಗಳನ್ನು ಕತ್ತರಿಸತೊಡಗಿದ. ತುಂಬಾನೇ ನೋವಾಯ್ತು! ಕಡಿಬೇಡಿ! ಕಡಿಬೇಡಿ! ಅಂತ ಕೂಗಿಕೊಂಡೆ. ಆದರೆ ನನ್ನ ಮಾತನ್ನು ಯಾರೂ ಕೇಳಲಿಲ್ಲ. ನನ್ನ ಜೀವನ ಇಲ್ಲಿಗೆ ಸಮಾಧಿಯಾಯ್ತು ಅಂದುಕೊಡೇ ೨ ವಾರ ಕಳೆದೆ. ಆದರೇನಾಶ್ಚರ್ಯ!!!!!!! ಅವರು ಕತ್ತರಿ ಜಾಗದಲ್ಲೇಲ್ಲಾ ಮೊದಲಿದ್ದದ್ದಕ್ಕಿಂತಾ ಹೆಚ್ಚು ಹೆಚ್ಚು ರೆಂಬೆಗಳು ಚಿಗುರೊಡೆಯತೊಡಗಿದವು, ನನ್ನ ಹೊಟ್ಟೆ, ಕೈಕಾಲುಗಳು ಮತ್ತಷ್ಟು ದಪ್ಪವಾಗತೊಡಗಿದವು. ಕೆಲದಿನಗಳ ನಂತರ ನಾನು ಮೊದಲಿಗಿಂತಲೂ ಎತ್ತರೆತ್ತರಕ್ಕೆ ಅಗಲಕ್ಕೆ ಬೆಳೆಯತೊಡಗಿದೆ. ಕುರಿ ಮೇಕೆ ಮೇಯಿಸುವವರು ನನ್ನ ಸಣ್ಣ ಕೊಂಬೆಗಳನ್ನು ಕಡಿದು ಅವುಗಳಿಗೆ ತಿನ್ನಿಸುವಾಗ "ಮಗುವಿಗೆ ಹಾಲುಣಿಸುವ ತಾಯ್ತನವನ್ನು ನನಗೂ ಕರುಣಿಸಿದೆಯಲ್ಲಾ ಭಗವಂತಾ! ನಿನಗೆ ನಾನು ಚಿರರುಣಿ" ಎಂದು ಆ ದಯಾಮಯನಿಗೆ ವಂದಿಸಿದೆ.

       ಅಬ್ಭಾ!! ಅದೆಷ್ಟು ವರ್ಷಗಳುರುಳಿದವು ನನ್ನ ಕೊಂಬೆಗಳು ನನಗಿಂತಲೂ ಬಲಿತು "ಬೀಳು"ಗಳ ಚಿಗುರಿಸಲು. ಮೊದಲ ಬೀಳು ಚಿಗುರಿ ಇನ್ನೇನು ನೆಲ ಮುಟ್ಟುತ್ತದೆ ಎನ್ನುವಾಗ ಒಂದಿಷ್ಟು ಮಕ್ಕಳು ಬಂದು ಆ ಬೀಳಿಗೆ ಜೋತಾಡಿ ಕುಣಿದು ಕುಪ್ಪಳಿಸುವಾಗ ನನಗೆಷ್ಟು ಆತಂಕವಾಯ್ತು ಗೊತ್ತೇ? ನನ್ನ ಬೀಳುಗಳು ಮುರಿದುಹೋದಾವೆಂದಲ್ಲ ಆ ಮುದ್ದು ಮಕ್ಕಳು ಕೆಳಗೆ ಬಿದ್ದಾವೆಂದು!!! ಸಧ್ಯ!! ಹಾಗಾಗಲಿಲ್ಲ.

       ಆದರೆ ಕೆಲದಿನಗಳಲ್ಲಿಯೇ ನನಗೊಂದು ಆಘಾತ ಕಾದಿತ್ತು. ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ.

        ಕಾಲಚಕ್ರ ಉರುಳಿತು, ವರ್ಷಗಳು ಕಳೆದಂತೆ ಅದೆಷ್ಟು ಲೆಕ್ಕವಿಲ್ಲದಷ್ಟು ಬದಲಾವಣೆಗಳಾದವು. ನನ್ನನ್ನು ಸಾಕಿ ಬೆಳೆಸಿದ ರೈತ ಅಸುನೀಗಿದ, ಅವನ ಸಮಾಧಿ ನನ್ನೊಡಲಲ್ಲೇ ಇದೆ ಅನ್ನುವುದು ನನಗೆ ಸಿಕ್ಕ ಅಲ್ಪತೃಪ್ತಿ. ಅವನ ಅನಂತರ ಆತನ ಮಕ್ಕಳು ನನ್ನನ್ನು ಬಹಳ ಪ್ರೀತಿ ಆದರಗಳಿಂದ ನೋಡಿಕೊಂಡರು. ನನ್ನ ಸುತ್ತಮುತ್ತಲಿದ್ದ ಹೊಲದಲ್ಲಿ ದನಕರುಗಳ ಆಸ್ಪತ್ರೆ ಕಟ್ಟಿಸಿದರು, ಆಸ್ಪತ್ರೆಗೆ ಬರುತ್ತಿದ್ದ ಜನ ದನಗಳಿಗೆ ನನ್ನ ನೆರಳೇ ಆಶ್ರಯ, ದಾರಿಹೋಕರಿಗೆ ನನ್ನೊಡಲ ತಂಪು ಬಹಳ ಹಿತ.

 

         "ಹಾಂ!! ಅದೆಲ್ಲಾ ಬರೀ ನೆನಪು ಮಾತ್ರ!! ಆಧುನಿಕತೆಯ ದಾಳಿಗೆ ಸಿಲುಕಿ ನಾನು ಸಹ ನಲುಗಿಹೋದೆ. ನಂತರ ನನ್ನದೆಲ್ಲಾ ಕಣ್ಣೀರ ಕಥೆ. ನಾನೀಗ ಹೇಗಿದ್ದೇನೆ ಅಂತ ನೀವೆ ನೋಡಿ

 

 

 

 

ಇಂದಿನ ನನ್ನ ಸ್ಥಿತಿಇಂದಿನ ನನ್ನ ಸ್ಥಿತಿ

ನೀವೆ ಹೇಳಿ ನಾ ಮಾಡಿದ ತಪ್ಪೇನು?

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.8 (11 ಓಟುಗಳು)
B SRIKANTH's picture
ಬುಧ, 03/03/2010 - 17:43 ರಂದು B SRIKANTH (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

SIR


THE STORY IS VERY TRUE THIS IS HAPPENING EVERY DAY IN THE NAME OF GROWTH(ACTUALY IT IS DEGROWTH) .THE ONE AND ONLY WAY OF SOLUTION FOR THIS IS BY PLANTING NEW PLANTS AND TAKING CARE OF THEM  EXAMPLE SALUMARADA THIMMAKA.


HOPE YOUR LESSON REACH TO NO OF PEOPLE AND LET IT GENERATE NEW YOUNG THIMMAKAS


 


Regards


Srikanth


 

ಅನಾಮಿಕನು's picture
ಗುರು, 25/02/2010 - 19:13 ರಂದು ಅನಾಮಿಕನು ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಚಿಂತನಾ ಲಹರಿ ಚೆನ್ನಾಗಿದೆ

shiv's picture
ಮಂಗಳ, 23/02/2010 - 19:58 ರಂದು shiv (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಏನ ಮಾತನಾಡಿದರೇನು ಫಲ


ಈ ಬುದ್ದಿಗೇಡಿಗಳಿಗೆ ಬುದ್ದಿಹೇಳಿದ್ರೆ ಕೇಳುವ ಸ್ತಿಹ್ತಿಯಲ್ಲಿಲ್ಲ


ಆದರೂ ನಿಮ್ಮ ಕಥೆ ಚಿಂತೆಗೆ ಹಚ್ಚಿರುವುದು ಮಾತ್ರ ಸತ್ಯ

ಅನಾಮಿಕನು's picture
ಶನಿ, 13/02/2010 - 11:32 ರಂದು ಅನಾಮಿಕನು ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಬಹಲ ಚೆನ್ನಾಗಿದೆ...............


 

  ಅನಾಮಿಕರು's picture
ಗುರು, 11/02/2010 - 15:08 ರಂದು ಅನಾಮಿಕರು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

''ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ'' ನಿಜಕ್ಕೂ ಮನಕಲುಕುವಂತಹ ಸಾಲುಗಳು. ಪಾಪ ಮರಕ್ಕೆ ಎಷ್ಟು ಬೇಜಾರಾಗಿರಬೇಕು

ಅನಾಮಿಕ ಮಿತ್ರ's picture
ಗುರು, 11/02/2010 - 15:04 ರಂದು ಅನಾಮಿಕ ಮಿತ್ರ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಚೆನ್ನಾಗಿದೆ

ವಿನಯ್_ಜಿ's picture
ಗುರು, 11/02/2010 - 13:02 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಉಮಾಶಂಕರ್ ರವರೆ,


ಚಿಂತಿಸಬೇಡಿ, ಇಂದು ಮರ ಏನು ಅನುಭವಿಸಿತೋ ಅದನ್ನು ಮುಂದೆ ಮನುಜನು ಅನುಭವಿಸುತ್ತಾನೆ... ತನ್ನ ಗೋರಿ ತೋಡಿಕೊೞುವ ಅಡಿಗೆ ಮೊದಲ ಹೆಜ್ಜೆ...! ತುಂಬ ಚೆನ್ನಾಗಿ ಬರೆದಿದ್ದೀರಿ... Smile ಪ್ರಸ್ತುತ ಕಾಲಕ್ಕೆ ಕೈಗನ್ನಡಿ ಹಿಡಿದಂತಿದೆ...

ಉಮಾಶಂಕರ ಬಿ.ಎಸ್'s picture
ಗುರು, 11/02/2010 - 13:34 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ನಿಮ್ಮ ಮಾತು ಅಕ್ಷರಶಃ ನಿಜ ವಿನಯ್ ರವರೆ, 'ವಿನಾಶಕಾಲೇ ವಿಪರೀತ ಬುದ್ಧಿ' ಎನ್ನುವ ಹಾಗೆ ಮಾನವನ ಸ್ವಾರ್ಥ ಹೆಚ್ಚುತ್ತಿದೆ, ಬಹುಶಃ ಇವೆಲ್ಲಾ ಕಾರಣಗಳಿಂದಾಗಿಯೇ ೨೦೧೨ಕ್ಕೆ ಪ್ರಳಯವಾದರೂ ಆಗಬಹುದು ಅಲ್ಲವೇ?

ಉಮಾಶಂಕರ ಬಿ.ಎಸ್'s picture
ಬುಧ, 10/02/2010 - 22:40 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಮೂರ್ತಿ ಸರ್, ಮಂಜುನಾಥ್ ಸರ್, ಹರಿಪ್ರಸಾದ್ ಸರ್, ರವಿವರ್ಮ ಸರ್ ಮತ್ತು  ಗುರುಪ್ರಸಾದ್ ರವರೆ ನಿಮ್ಮ ಪ್ರೋತ್ಸಾಹಕ್ಕೆ ಬಹಳ ಧನ್ಯವಾದಗಳು

kmurthys's picture
ಬುಧ, 10/02/2010 - 14:28 ರಂದು kmurthys ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಹೊಸ ರೀತಿಯ ಪ್ರಯತ್ನ. ಚೆನ್ನಾಗಿದೆ.

Manjunatha HT's picture
ಮಂಗಳ, 09/02/2010 - 21:58 ರಂದು Manjunatha HT ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಉಮಾಶಂಕರ್, ಚಿಂತನೆಗೆ ಹಚ್ಚುವಂಥ ಕಥೆ, ಒಂದು ಮರವನ್ನು ಉದಾಹರಣೆಯಾಗಿಟ್ಟುಕೊಂಡು ನಾವಿಂದು ಇಡೀ ಪರಿಸರದ ಬಗ್ಗೆ ಚಿಂತಿಸಬೇಕೆಂಬ ಸಂದೇಶ, ಚೆನ್ನಾಗಿದೆ.

Bharath.K's picture
ಮಂಗಳ, 09/02/2010 - 16:07 ರಂದು Bharath.K ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಕಥೆ ತುಂಬನೆ ಡಿಫರೆಂಟ್ ಮತ್ತು ಚೆನ್ನಾಗಿದೆ........

ಹರಿಪ್ರಸಾದ್'s picture
ಮಂಗಳ, 09/02/2010 - 12:13 ರಂದು ಹರಿಪ್ರಸಾದ್ ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಲೇಖನ ತುಂಬಾ ವಿಚಾರ ಪೂರ್ಣವಾಗಿದೆ ಉಮಾಶಂಕರವರೆ

sweet_suma_s@yahoo.com's picture
ಸೋಮ, 08/02/2010 - 21:55 ರಂದು sweet_suma_s@yahoo.com (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....


 


 


ಕಥೆ ತುಂಬ ತುಂಬ ಚೆನ್ನಾಗಿದೆ........


ಕುಮಾರಣ್ಣ ಪರಿಸರದ ಬಗ್ಗೆ ಯೋಚಿಸುವವರರು ಇದ್ದ ಮೇಲೆ ಪರಿಸರ ಉದ್ದಾರವಾಗದೇನು ???


Sweet Suma

ಉಮಾಶಂಕರ ಬಿ.ಎಸ್'s picture
ಮಂಗಳ, 09/02/2010 - 09:34 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ತುಂಬಾ ಧನ್ಯವಾದಗಳು ಸುಮರವರೆ

ಕುಮಾರ್ ಬಿ.ಡಿ's picture
ಸೋಮ, 08/02/2010 - 17:29 ರಂದು ಕುಮಾರ್ ಬಿ.ಡಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಓ.ಕೆ ಅದೇ ಮಾಮೂಲಿ ಪರಿಸರ ಪ್ರೇಮದ ಕಥೆ, ಇದು ಎಂದಿಗೂ ಮುಗಿಯದ ವ್ಯಥೆ. ಅಲ್ಲ ನೀವೆಲ್ಲಾ ಈ ರೀತಿ ಬ್ಲಾಗ್ ಮಾಡಿ ಬರೆದರೆ ಪರಿಸರ ಉದ್ದಾರವಾಗೋಗುತ್ತಾ? ಸುಮ್ಮನೆ ಟೈಮ್ ವೇಸ್ಟ್ ಅಲ್ವಾ?

ಉಮಾಶಂಕರ ಬಿ.ಎಸ್'s picture
ಮಂಗಳ, 09/02/2010 - 09:40 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಕುಮಾರ್ ರವರೆ ನಿಮ್ಮ ಅಭಿಪ್ರಾಯಕ್ಕೆ ಬಹಳ ಧನ್ಯವಾದಗಳು, ನಾವು ಬ್ಲಾಗ್ ಮಾಡೋದ್ರಿಂದ ಪರಿಸರ ಉದ್ದಾರವಾಗುತ್ತೋ ಇಲ್ಲವೋ ಅದು ಬೇರೆಯ ಪ್ರಶ್ನೆ. ಆಗುತ್ತೆ ಅನ್ನುವ ನಂಬಿಕೆ ನಮ್ಮದು. ಇದು ಸುಕಾಸುಮ್ಮನೆ ಸಮಯ ವ್ಯರ್ಥ ಅನ್ನುವ ಹಾಗಿದ್ದರೆ ನಿಮ್ಮಂತಹ ಸಮಯ ಪ್ರಜ್ನೆಯುೞವರು ನಮ್ಮಂತಹವರ ಬ್ಲಾಗ್ ಗಳನ್ನು ಓದಿ ನಿಮ್ಮ ಸಮಯ ಹಾಳು ಮಾಡುತ್ತಿರಲಿಲ್ಲವೆಂದು ನನ್ನ ನಂಬಿಕೆ

ರವಿವರ್ಮ್'s picture
ಸೋಮ, 08/02/2010 - 17:23 ರಂದು ರವಿವರ್ಮ್ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: 'ವೃಕ್ಷ ರಾಜ'ನ ಸ್ವಗತ.....

ಹಾಯ್ ಉಮಾಶಂಕರ್


ನಿಮ್ಮ ಈ ಕಥೆ ಮಾಮೂಲಿ ಪ್ರೇಮ ಕಥೆಗಳನ್ನು ಓದುತ್ತಿದ್ದ ನಮಗೆ ಕೊಂಚ "ಡಿಫರೆಂಟ್" ಅನ್ನುಸುವಂತಿದೆ. ಉತ್ತಮ ಕಥೆ ಓದಿದ ಅನುಭವ

Gurupasd's picture
ರವಿ, 07/02/2010 - 19:06 ರಂದು Gurupasd (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕನ್ನಡದ ಎಫ್.ಎಮ್ ಗಳಲ್ಲೇಕೆ ಹಿ೦ದಿ ಜಾಹಿರಾತು?

Nimma parisara kalajiyulla e kathe chintisuvantide

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
20 + 0 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಉಮಾಶಂಕರ ಬಿದರಕೋಟೆ ಸಣ್ಣೇಗೌಡ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content