ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ಬರೆದವರು: ವಿನಯ್_ಜಿ - ಕಳುಹಿಸಿದ ದಿನ 19 January 2010

ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೧


ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.


ಒಮ್ಮೆ ಒಬ್ಬ ಪತ್ರಕರ್ತರು ಅವರ ಬೇಸಾಯದ ಯಶಸ್ಸಿನ ಹಿಂದಿನ ಕಾರಣ ತಿಳಿಯಲು ಸಂದರ್ಶಿಸಿದಾಗ ಒಂದು ಕೂತುಹಲಕಾರಿ ಅಂಶ ಆ ಪತ್ರಕರ್ತರಿಗೆ ತಿಳಿಯಿತು... ಅದೆನೆಂದರೆ ಈ ರೈತರು ತನ್ನ ಅಕ್ಕ ಪಕ್ಕದ ರೈತರೊಡನೆ ಆ ಬೆಳೆಯ ಉತ್ತಮ ಕಾಳುಗಳನ್ನು ಹಂಚಿಕೊಳ್ಳುತ್ತಿದದ್ದು....!


"ನೀವು ನಿಮ್ಮ ಉತ್ತಮ ಕಾಳುಗಳನ್ನು ಅವರೊಡನೆ ಏನೋ ಹಂಚಿಕೊಳ್ಳುತ್ತಿದ್ದೀರಿ, ಆದರೆ ಅವರು ನಿಮ್ಮ ಪ್ರತಿಸ್ಪರ್ಧಿಗಳಾಗಿ ನಿಮ್ಮೆದುರಿಗೆ ಪ್ರತಿ ವರ್ಷ ನಿಲ್ಲುತ್ತಾರಲ್ಲಾ...! ಅದಕ್ಕೆ ನೀವೇನು ಹೇಳುತ್ತೀರಿ...?" ಎಂದು ಆ ಪತ್ರಕರ್ತರು ಕೇಳಲು, ಇವರು:


"ಸರ್, ಅದೇಕೆ ಹಂಗ್ ಹೇಳ್ತಿದ್ದೀರಿ...!, ನಿಮಗೆ ಗೊತ್ತಿಲ್ಲವೇ, ಸಾಮಾನ್ಯವಾಗಿ ತೆನೆ ಬೆಳೆಯುವಾಗ ತನ್ನ ಪರಾಗವನ್ನು ಗಾಳಿಯಲ್ಲಿ ತೇಲಿಬಿಡುತ್ತದೆ. ಅದು ಹೊಲದಿಂದ ಹೊಲಕ್ಕೆ ಹಾರುತ್ತ ತೇಲುತ್ತಿರುತ್ತದೆ. ನನ್ನ ಪಕ್ಕದ ಹೊಲದಲ್ಲಿರುವ ರೈತರು ಕಡಿಮೆ ಗುಣಮಟ್ಟದ ಬೇಜ ನೆಟ್ಟರೆ ಅಲ್ಲಿಂದ ಹಾರಿ ಬರುವ ಪರಾಗವು ನನ್ನ ಫಸಲಿನ ಬೆಳೆಯ ಗುಣಮಟ್ಟವನ್ನ ಕಡಿಮೆ ಮಾಡುವುದಿಲ್ಲವೇ? ಅದಕ್ಕೆ ನಾನು ಉತ್ತಮ ಮಟ್ಟದ ಬೆಳೆ ಬೆಳೆಯಬೇಕೆಂದರೆ ನನ್ನ ಅಕ್ಕ ಪಕ್ಕ ಹೊಲದಲ್ಲಿರುವ ರೈತರು ಸಹ ನನ್ನಂತೆ ಉತ್ತಮ ಬೆಳೆ ಬೆಳೆಯಲೇಬೇಕು..."


... ಆ ರೈತನಿಗೆ ಸಹಜೀವನದ ಮಹತ್ವ ಗೊತ್ತಿತ್ತು. ಅದಕ್ಕೆ ಅವನು ತನ್ನ ಬೆಳೆ ಉತ್ತಮಗೊಳ್ಳಲು ತನ್ನ ಪಕ್ಕದ ಹೊಲದಲ್ಲಿರುವ ಇತರ ರೈತ ಬಾಂಧವರ ಬೆಳೆಯು ಉತ್ತಮಮಟ್ಟದಾಗಿರುಬೇಕು ಎಂದು ಅಶಿಸುತ್ತಿದ್ದನು...


....ಹಾಗೆಯೇ ಅದನ್ನ ನಮ್ಮ ಬಾಳಿಗೆ ಅನ್ವಯಿಸುದಾದರೆ, ನಮ್ಮ ನೆಮ್ಮದಿ/ನಮ್ಮ ಸಂತೋಷ ನಮ್ಮ ನೆರೆ ಹೊರೆಯವರ/ಮಿತ್ರರು-ಬಾಂಧವರ ಜೊತೆಗಿರುವ ಉತ್ತಮ ಬಾಂಧವ್ಯದಲ್ಲಿದೆ. ನಾವು ನಮ್ಮ ಸಂತೋಷಕ್ಕೆ ಎಷ್ಟು ಪ್ರಯತ್ನಪಡುತ್ತೇವೇಯೋ ಅಷ್ಟೇ ನಾವು ಇವರ ನಡುವೆಯೂ ಸಹ ಸಂತಸ ತರಲಿಕ್ಕೆ ಪ್ರಯತ್ನಪಡಲೇಬೇಕು. ಎಕೆಂದರೆ ಜೀವನದ ಮಹತ್ವವೇ ಅದು. ಎಷ್ಟು ದಿನ ನಾವು ಬಾಳಿ ಬದುಕಿದೆವು ಎನ್ನುವುದಕ್ಕಿಂತ ನಮ್ಮ ಜೀವನ ಎಷ್ಟು ಜನರನ್ನು ತಲುಪಿತು ಎಂಬುದರಲ್ಲಿ ಅರ್ಥ ಇದೆ. ನಮ್ಮ ಸಂತೋಷದೊಡನೆ ನಮ್ಮ ಜೊತೆ ಬಾಳುತ್ತಿರುವ ಇತರರ ಸಂತೋಷಕ್ಕೂ ನಾವು ಪ್ರಯತ್ನ ಪಟ್ಟರೆ ಅದಕ್ಕಿಂತ ಉತ್ತಮವಾದ ಕಾರ್ಯ ಯಾವುದಿದೆ ಹೇಳಿ....?


ನೀತಿ ಇಷ್ಟೇ: ನಾವು ಸಂತೋಷದಿಂದಿರಬೇಕೆಂದರೆ ನಾವು ನಮ್ಮ ಪ್ರೀತಿಪಾತ್ರರಲ್ಲೂ ಸಹ ಸಂತೋಷವನ್ನು ಬಯಸಬೇಕು....


 


 


(ವಿಸ್ಮಯ ನಗರಿ ಸಮೂಹ ಈಗ Orkut ನಲ್ಲಿ..., ಸದಸ್ಯರಾಗಲು ಈ ಲಿಂಕ್ ಅನ್ನು ಕ್ಲಿಕಿಸಿ: http://www.orkut.co.in/Main#Community?cmm=96442553)

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3.6 (5 ಓಟುಗಳು)
ಹರಿಪ್ರಸಾದ್'s picture
ಸೋಮ, 25/01/2010 - 14:17 ರಂದು ಹರಿಪ್ರಸಾದ್ ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ವಿನಯವರೆ ನೀತಿ ಕಥೆ ತುಂಬಾ ಚೆನ್ನಾಗಿದೆ ನಮ್ಮೆಲ್ಲರ ಬಾಳಿನಲ್ಲಿ ವಾಸ್ತವಾಕಿವಾಗಿ ಒಳ್ಳೆಯ ತೆನೆಯಾಗಿ ಈ ನೀತಿ ಬೆಳಯಲಿ

ವಿನಯ್_ಜಿ's picture
ಸೋಮ, 25/01/2010 - 14:23 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು ಹರಿಪ್ರಸಾದ್ ರವರೆ... Smile

sweety's picture
ರವಿ, 24/01/2010 - 16:03 ರಂದು sweety (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ತು೦ಬಾ ಚೆನ್ನಾಗಿದೆ.......

ವಿನಯ್_ಜಿ's picture
ಸೋಮ, 25/01/2010 - 11:49 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಉಮಾಶಂಕರ್ ರವರೆ ಮತ್ತು ಸ್ವೀಟಿ ಯವರೆ..... Smile

ಉಮಾಶಂಕರ ಬಿ.ಎಸ್'s picture
ರವಿ, 24/01/2010 - 07:23 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ನಾವು ಜಗತ್ತಿಗೆ ಏನನ್ನು ಕೊಡುತ್ತೀವೋ ಜಗತ್ತು ನಮಗೆ ಅದನ್ನೇ ಕೊಡುತ್ತದೆ, ಪ್ರೀತಿ ಕೊಟ್ಟರೆ ಪ್ರೀತಿ, ದ್ವೇಷ ಕೊಟ್ಟರೆ ದ್ವೇಷ

ಪಾರ್ವತಿ.ಜಿ.ಆರ್'s picture
ಗುರು, 21/01/2010 - 13:30 ರಂದು ಪಾರ್ವತಿ.ಜಿ.ಆರ್ ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

 ತುಂಬಾ ಚೆನ್ನಾಗಿದೆ, ಉತ್ತಮ ನೀತಿ


" ನಮ್ಮ ನೆಮ್ಮದಿ/ನಮ್ಮ ಸಂತೋಷ ನಮ್ಮ ನೆರೆ ಹೊರೆಯರವರ/ಮಿತ್ರರು-ಬಾಂಧವರ ಜೊತೆಗಿರುವ ಉತ್ತಮ ಬಾಂಧವ್ಯದಲ್ಲಿದೆ"


 


 

ವಿನಯ್_ಜಿ's picture
ಗುರು, 21/01/2010 - 15:43 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ಧನ್ಯವಾದಗಳು ಪಾರ್ವತಿ ಯವರೆ... Smile

ಮುಸ್ತಾಫ's picture
ಗುರು, 21/01/2010 - 12:34 ರಂದು ಮುಸ್ತಾಫ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ಸಕತಾಗಿದೆ ಕಥೆ.

ವಿನಯ್_ಜಿ's picture
ಗುರು, 21/01/2010 - 12:53 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....? - ನೀತಿ ಕಥೆ

ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು ಮುಸ್ತಾಫ ರವರೆ.... Smile

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 2 ಉತ್ತರ 7
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ವಿನಯ್ ಜಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )
ಇವರ ವಿಸ್ಮಯ ಪುಟ