ಗೂಗಲ್ ನಲ್ಲಿ ಕನ್ನಡ....

ಬರೆದವರು: ವಿನಯ್_ಜಿ - ಕಳುಹಿಸಿದ ದಿನ 13 January 2010

ನಿಮಗೆಲ್ಲರಿಗೂ ತಿಳಿದಂತೆ ಗೂಗಲ್ ಸದ್ಯಕ್ಕೆ ಹಿಂದಿ ಭಾಷೆಯಲ್ಲಿ ಮಾತ್ರ ತನ್ನ Translator Option ಕೊಟ್ಟಿದೆ. ಕನ್ನಡ ಇನ್ನೂ ಅಭಿವೃದ್ಧಿ ಪಡಿಸುವ ಹಂತದಲ್ಲಿದೆ. ನಮ್ಮ ಮಾತೃಭಾಷೆ ಕನ್ನಡ ಆದಷ್ಟು ಬೇಗ ಗೂಗಲ್ Translator Page ನಲ್ಲಿ ಬರಬೇಕೆಂದರೆ ಮತ್ತು ಅದು ಒಂದು Translator Option ಆಗಬೇಕಾದರೆ ಸಾಕಷ್ಟು Update ಮಾಡುವ ಕಾರ್ಯ ಇನ್ನೂ ಆಗುವುದಿದೆ. ನಿಮ್ಮೆಲ್ಲರ ಸಹಕಾರ, ಸಹಾಯ ಇದನ್ನು ಮಾಡಬಲ್ಲದು. ನಿಮ್ಮ ಸಲ್ಪ ಬಿಡುವಿನ ಹೊತ್ತಿನಲ್ಲಿ ಕೆಳಗಿನ ಲಿಂಕಿಗೆ:


http://services.google.com/tcbin/tc.py


ನಿಮ್ಮ ಜಿ ಮೇಲ್ ಐ.ಡಿ ನಲ್ಲಿ ಲಾಗಿನ್ ಆಗಿ, ಲಭ್ಯವಿರುವ Options ಸೆಲೆಕ್ಟ್ ಮಾಡಿ Updating ಕಾರ್ಯ ಮಾಡಬಹುದು. ಹಾಗೆಯೇ ಕನ್ನಡಮ್ಮನಿಗೆ ನಿಮ್ಮ ಅಳಿಲು ಸೇವೆ ಸಲ್ಲಿಸಬಹುದು Smile


ನಿಮ್ಮೆಲ್ಲರ ಸಹಕಾರದಿಂದ ಗೂಗಲ್ ನಲ್ಲಿ ಕನ್ನಡ Translation Page ಬಂದರೆ ಕನ್ನಡಿಗರಿಗೆ ಇದ್ದಕಿಂತ ದೊಡ್ಡ ಬಹುಮಾನ ಯಾವುದಿದೆ ಹೇಳಿ....

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3 (1 vote)
ವಿನಯ್_ಜಿ's picture
ಶುಕ್ರ, 15/01/2010 - 11:07 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಗೂಗಲ್ ನಲ್ಲಿ ಕನ್ನಡ....

ಹೌದು ರಾಜೇಶ್ ರವರೆ,


ನಾ ಕೊಟ್ಟಿರುವ ಲಿಂಕ್ ಗೂಗಲ್ ನ ತಾಣಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಅಥವಾ ಬ್ರೌಸರ್ನಲ್ಲಿ ಒಂದು ಪೇಜ್ ತೆರೆದಾಗ ಗೂಗಲ್ ಟೂಲ್ ಬಾರ್ ನಲ್ಲಿ ಲಭ್ಯವಿರುವ Tools Option --> Translate (ಅನ್ಯಭಾಷೆಯಿಂದ ಕನ್ನಡಕ್ಕೆ...) ಉಪಯೋಗಿಸುವ ಅಯ್ಕೆಗೆ ಮಾತ್ರ ಸೀಮಿತವಷ್ಟೆ... Sad. ನನ್ನ ಈವರಿಗಿನ ಬಹುದೊಡ್ಡ ಆಸೆ ಗೂಗಲ್ ಅದಷ್ಟು ಕನ್ನಡಮಯವಾಗಬೇಕಂತ, ಅದರಲ್ಲಿ ಕನ್ನಡ ಭಾಷಾಂತರ ಅಯ್ಕೆ ನಮಗೆ ಲಭಿಸಿದರೆ ಮುಂದೆ ಮುಖ್ಯ ಮಾಹಿತಿಗಳನ್ನ ಕನ್ನಡದಲ್ಲಿ ಓದಿ ಸಂತಸಪಡಬಹುದು Smile :)


ನಿಮ್ಮ "ವಿಸ್ಮಯ ಯೋಜನೆಯ ಅಂಗವಾದರೂ ಕನ್ನಡ ಭಾಷಾಂತರ ಸಾಫ್ಟ್ ವೇರ್ ಮಾಡುವ ಬಗ್ಗೆ" ಹೇಳುವುದಾದರೆ ನಾವು ಅದಕ್ಕೆ ಸದಾ ಸಿದ್ಧ. ನಿಮ್ಮ ಸೂಚನೆ/ಸಲಹೆಗೆ ಸದಾ ಸ್ವಾಗತ.... Smile. ನಾನಂತೂ ಈ ಯೋಜನೆ ಕಾರ್ಯ ರೂಪಕ್ಕೆ ಬಂದರೆ ನಿಮಗೆ ನನ್ನ ಕೈಲಾದಷ್ಟು ಸಹಾಯ ಮಾಡುವೆ. 

Basavaraj G's picture
ಶುಕ್ರ, 07/05/2010 - 20:02 ರಂದು Basavaraj G ಅವರು ಹೇಳುತ್ತಾರೆ
Re: ಗೂಗಲ್ ನಲ್ಲಿ ಕನ್ನಡ....

ಗೂಗಲ್‌ನಲ್ಲಿ ಮಾತ್ರವಲ್ಲ ಯಾಹೂ, ಮೈಕ್ರೋ ಸ್ಫಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಇತ್ಯಾದಿಗಳಲ್ಲಿ ಕನ್ನಡ ಓದಿ ಟೈಪ್ ಮಾಡುವಂತಹ ತಂತ್ರಾಂಶ ಬರಬೇಕು. ಮೋಜಿಲ್ಲ ಫೈರ್‌ಫಾಕ್ಸ್ ತನ್ನ ತಾಣವನ್ನು ಕನ್ನಡೀಕರಿಸಿದೆ. ಸಂತೋಷದ ವಿಷಯ. ಈಗ ಜಾಸ್ತಿ ಜಾಸ್ತಿ ಮೋಬೈಲ್ ಬಳಕೆ ಅಗುತ್ತಿದ್ದು ಮೋಬೈಲನಲ್ಲಿ ಇಂಟರ್‌ನೆಟ್ ಬಳಕೆ ಜಾಸ್ತಿ ಆಗುತ್ತಿದೆ. ಕಾರಣ ಮೋಬೈನಲ್ಲಿ ಸಹ ಕನ್ನಡ ತಂತ್ರಾಂಶ ಬರಬೇಕು. ಈಗಾಗಲೆ ಕನ್ನಡ ತಾಣಗಳನ್ನು ವೀಕ್ಷಿಸಲು  ಅತ್ಯುತಮ ಮೋಬೈಲ್ ಬ್ರೌಸರ್ ಸ್ಕೈಫೈರ್ ಬ್ರೌಸರ್ ಮತ್ತು ಬದಲಾವಣೆ ಮಾಡಿಕೊಂಡರೆ ಒಪೆರ ಬ್ರೌಸರ್‌ನಲ್ಲೂ ಸಹ ಕನ್ನಡ ವೀಕ್ಷಿಸಬಹುದು. ಇನ್ನೂ ಕನ್ನಡ ತಂತ್ರಾಂಶದ ಅಭಿವ್ರುದ್ಧಿಯ ಅಗತ್ಯತೆ ಇದೆ. ಇತರೆ ಭಾರತೀಯ ಭಾಷೆಗಳಿ ಹೋಲಿಸಿದರೆ ನಾವು ಇನ್ನೂ ಬಹಳ ಹಿಂದೆ ಇದ್ದೇವೆ.

ರಾಜೇಶ ಹೆಗಡೆ's picture
ಗುರು, 14/01/2010 - 15:01 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
ಹಾಯ್ ವಿನಯ್ ಅವರೇ, ಬಹುಶಃ ನೀವು

ಹಾಯ್ ವಿನಯ್ ಅವರೇ,


ಬಹುಶಃ ನೀವು ಹೇಳುತ್ತಿರುವದು ಗೂಗಲ್ ನ ತಾಣಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಬಗ್ಗೆ ಹೊರತು ಭಾಷಾಂತರ ಸಾಫ್ಟ್ ವೇರ್ ಬಗ್ಗೆ ಅಲ್ಲ ಎಂದು ಭಾವಿಸುತ್ತೇನೆ. ಯಾಕೆಂದರೆ ನೀವು ಕೊಟ್ಟ ಲಿಂಕ್ ನಲ್ಲಿ  ಗೂಗಲ್ ತಾಣ ಭಾಷಾಂತರಿಸುವ ವಿವರ ಇತ್ತು.


ಗೂಗಲ್ ತಾಣಗಳು ಕನ್ನಡಕ್ಕೆ ಬರುವದು ಸಿಹಿ ಸುದ್ದಿಯೇ ಆದರೂ ಕನ್ನಡ ಭಾಷಾಂತರ ಸಾಫ್ಟ್ ವೇರ್ ಬರುವಂತಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಯುನಿಕೋಡ್ ನ ಕ್ರಾಂತಿಯಿಂದ ಕನ್ನಡ ಬ್ಲಾಗ್ ಲೋಕ ಕಾರಂಜಿಯಂತೆ ಚಿಮ್ಮಿದೆ. ದೊಡ್ಡ ಕಂಪನಿಗಳಿಂದ ಅದೂ ಬರುತ್ತೆ ಎಂಬುದು ನನ್ನ ಅನಿಸಿಕೆ. ಇಲ್ಲದಿದ್ದರೆ ವಿಸ್ಮಯ ಯೋಜನೆಯ ಅಂಗವಾದರೂ ಕನ್ನಡ ಭಾಷಾಂತರ ಸಾಫ್ಟ್ ವೇರ್ ಮಾಡುವ ಬಗ್ಗೆ ಪರಿಶೀಲಿಸೋಣ. Smile

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
4 ಕೂಡಿಸು 8 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ವಿನಯ್ ಜಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )
ಇವರ ವಿಸ್ಮಯ ಪುಟ