"ಭಾರತದ ಸ್ವಾತಂತ್ರ್ಯದ ನೈಜ ಹಿನ್ನಲೆ".

ಬರೆದವರು: Ullas Hindustani - ಕಳುಹಿಸಿದ ದಿನ 23 November 2009

ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಪ್ರಬಲ ಹೋರಾಟ , ಚಳುವಳಿ , ಅಸಹಕಾರ ಮುಂತಾದವುಗಳು ನಿರಂತರವಾಗಿ ನಡೆದೇ ಇದ್ದವು. ಆದರೆ ಬ್ರಿಟೀಷರು ಅವುಗಳನ್ನು ಅಷ್ಟೇ ಪ್ರಬಲವಾಗಿ ಹತ್ತಿಕ್ಕುತ್ತಿದ್ದರು. ಆದರೆ 1946ರಲ್ಲಿ ಭಾರತೀಯ ಮಹಾನೌಕಾಪಡೆಯ ದಂಗೆ ಮತ್ತು ಅದರ ನಂತರದ ಘಟನೆಗಳು 1947ರ ಭಾರತದ ಸ್ವಾತಂತ್ರ್ಯದ ನೈಜ ಕಾರಣಗಳಾಗಿವೆ..
.
"ಅಂದು 18 ಫೆಬ್ರವರಿ 1946ರಲ್ಲಿ ಮುಂಬೈನ ಬಂದರಿನಲ್ಲಿ ಭಾರತೀಯ ನೌಕಾಪಡೆಯ ನಾವಿಕರು ದಂಗೆಯೆದ್ದರು. ಈ ದಂಗೆ ಬಹು ಬೇಗ ಕರಾಚಿ ಮತ್ತು ಕಲ್ಕತ್ತೆಯ ಬಂದರುಗಳಿಗೂ ಹರಡಿತು. ಒಟ್ಟು 78 ಹಡಗುಗಳು, ಮತ್ತು ಸುಮಾರು 20,000 ನಾವಿಕರು ಈ ದಂಗೆಯಲ್ಲಿ ಪಾಲ್ಗೊಂಡರು.

ಬ್ರಿಟೀಷ್ ಅಧಿಕಾರಿಗಳ ಜನಾಂಗೀಯ ಬೇಧ ತೋರುವ ನಡವಳಿಕೆ, ಸಾಮಾನ್ಯ ಜೀವನ ಸ್ಥಿತಿಗಳು ಈ ದಂಗೆಗೆ ಕಾರಣವಾಗಿದ್ದವು ಅಧಿಕಾರಿಗಳ ಅಪ್ಪಣೆಗಳ ನಿರ್ಲಕ್ಷೆ, ಹಡಗುಗಳಲ್ಲಿ ಭಾರತೀಯ ಧ್ವಜಗಳ ಹಾರಾಡುವಿಕೆ, ಮುಂತಾದ ಚಟುವಟಿಕೆಗಳು ನಡೆದವು. ಭಾರತೀಯ ನಾಗರೀಕರು ಈ ದಂಗೆಗೆ ಬೆಂಬಲ ನೀಡಿದರು. ನಂತರ ವಾಯು ಸೇನೆ ಮತ್ತು ಮುಂಬೈ ಪೋಲೀಸ್ ಕೂಡ ದಂಗೆಯಲ್ಲಿ ಸೇರಿದರು. ಮದ್ರಾಸು ಮತ್ತು ಪೂನೆಗಳಲ್ಲಿ ಸೇನಾ ತುಕಡಿಗಳು ಕೂಡ ದಂಗೆಯುದ್ದವು.. ಈ ಘಟನೆಗಳು ಭಾರತದ ಸ್ವಾತಂತ್ರ್ಯಕ್ಕೆ ನಾಂದಿಯಾಯಿತು "

ಎರಡನೇ ಮಹಾಯುದ್ಧದಲ್ಲಿ ಆರ್ಥಿಕ, ರಾಜಕೀಯ ಮತ್ತು ಸೇನೆಗಳ ಅಪಾರ ಬೆಲೆಯನ್ನು ತೆತ್ತಿದ್ದ ಬ್ರಿಟೀಷ್ ಸಾಮ್ರಾಜ್ಯ ಈ ಆಂದೋಲನದಿಂದ ಎಚ್ಚೆದ್ದ ಭಾರತೀಯರನ್ನು ಸದೆಬಡೆಯುವ ಬಲವನ್ನು ಹೊಂದಿರಲಿಲ್ಲ. ಈ ನಾಗರೀಕ ಆಂದೋಲನದೊಂದಿಗೆ ನೌಕಾಪಡೆಯ ದಂಗೆ ಸೇರಿದಾಗ, ಇವುಗಳ ಒಟ್ಟು ಸಾಮರ್ಥ್ಯದ ಸ್ಪಷ್ಟ ಅರಿವಿದ್ದ ಬ್ರಿಟೀಷರಿಗೆ ಇನ್ನು ಮುಂದೆ ಭಾರತವನ್ನು ಆಳುವುದು ದುಸ್ಸಾಹಸವೇ ಸರಿ ಎಂಬುವುದು ಅರಿವಾಯಿತು.

ಈ ಕಾರಣದಿಂದ 1946ರ ಮಧ್ಯದೊಳಗೆ ಎಲ್ಲಾ ರಾಜಕೀಯ ಕಾರಣಕ್ಕೆ ಬಂಧಿತರಾದವರನ್ನು ಬ್ರಿಟೀಷ್ ಸರ್ಕಾರ ವಿಮೋಚನೆಗೊಳಿಸಿತು. ಭಾರತದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಗುರಿಯಿಂದ ಕಾಂಗ್ರೆಸ್ ಬ್ರಿಟೀಷ್ ಸರ್ಕಾರದೊಂದಿಗೆ ಮಾತುಕತೆ ಪ್ರಾರಂಭ ಮಾಡಿತು.

ಜೂನ್ 3, 1947ರಂದು, ಕೊನೆಯ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಆದ , ಲಾರ್ಡ್ ಲೂಯಿ ಮೌಂಟ್‍ಬ್ಯಾಟನ್‍ರವರು ಜಾತ್ಯತೀತ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ಭಾರತದ ವಿಭಜನೆಯನ್ನು ಪ್ರಕಟಿಸಿದರು. ಅಗಸ್ಟ್ ೧೫, ೧೯೪೭ರ ಮಧ್ಯರಾತ್ರಿ ಭಾರತವು ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು."

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
14 + 2 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
Ullas Hindustani
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Hi I am Ullas Hindustani. I think am a great person compare to You....!!! Ha...ha..ha Just for a joke, Don't feel bad OK..
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content