ಶೋಭಾ ಕರಂದ್ಲಾಜೆ ಎಂಬ ಮಹಿಳಾ ಬಲಿಪಶು

ಬರೆದವರು: ಪಾರ್ವತಿ.ಜಿ.ಆರ್ - ಕಳುಹಿಸಿದ ದಿನ 21 November 2009

ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ...

ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು ರಾಜಿನಾಮೆಯನ್ನು ಕೊಟ್ಟ ದ್ದಾಯಿತು, ಕೇಂದ್ರ ವಸ್ತುವಾಗಿರುವ ಯಡಿಯೂರಪ್ಪನವರ ಸಾಧನೆಗೆ ಮತ್ತೊಂದು ಗರಿ ಬಂತು, ಅಂತು ಇಂತು ಬಿಜೆಪಿಯ ಹದಿನಾಲ್ಕು ದಿನಗಳ ಬೀದಿ ನಾಟಕದಲ್ಲಿ ಒಂದು ಮಹಿಳಾ ಬಲಿಪಶುವಿನ ಮೂಲಕ ನಾಟಕ ಅಂತ್ಯಗೊಂಡಿತು. ಆದರೆ ಇಲ್ಲಿ ಎಲ್ಲರ ಮನದಲ್ಲೂ ಮೂಡುವ ಪ್ರಶ್ನೆ ಒಂದೇ "ಶೋಭಾ ಕರಂದ್ಲಾಜೆ ಮಾಡಿದ ತಪ್ಪೇನು? "

ಶೋಭಾ ಸಿಕ್ಕ ಸಿಕ್ಕ ಮಾಧ್ಯಮಗಳಲೆಲ್ಲಾ ಪ್ರಶ್ನಿಸುತ್ತಿದ್ದಾರೆ ’ನಾನು ಮಾಡಿದ ತಪ್ಪೇನು?’

ನಾವು ಕೂಡಾ ನಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದೇವೆ ’ಶೋಭಾ ಮಾಡಿದ ತಪ್ಪಾದರೂ ಏನು?’
ನಮ್ಮ ರಾಜ್ಯ ಸಚಿವ ಸಂಪುಟದಲ್ಲಿ ಮುವತ್ತಮೂರು ಜನ ಸಚಿವರಿದ್ದಾರೆ. ಅದರಲ್ಲಿರುವ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ. ರಾಜ್ಯದ ಮೂರು ಕೋಟಿ ಮಹಿಳೆಯರ ಪ್ರತಿನಿಧಿ. ಆದರೂ ಆಕೆಯ ರಾಜಿನಾಮೆಯ ಬಗ್ಗೆ ಒಂದೇ ಒಂದು ಮಹಿಳಾ ಧ್ವನಿಯಿಲ್ಲ ಯಾಕೆ? ಆಕೆಯ ರಾಜಿನಾಮೆ ಪಡೆಯಬಾರದು ಎಂದು ಆಕೆ ಪ್ರತಿನಿಧಿಸುತ್ತಿರುವ ಯಶವಂತಪುರದ ಒಂದಷ್ಟು ಜನ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿಯೂ ಮಹಿಳೆಯರ್ಯಾರೂ ಕಾಣಿಸಲಿಲ್ಲ. ಹೋಗಲಿ ಅವರ ಊರಿನ ಜನರಾದರೂ ಪ್ರತಿಕ್ರಿಯಿಸಿದರಾ ಅದೂ ಇಲ್ಲ.

ಯಾಕೆಂದರೆ ಆಕೆ ಹಿಂದಿನಂತಿಲ್ಲ; ಆಕೆಗೆ ಅಹಂಕಾರ ಬಂದಿದೆ ಎಂಬುದು ಅವರೆಲ್ಲರ ಆಪಾದನೆ.
’ಶೋಭಾ ಸೂಪರ್ ಸಿಎಂ ತರಹ ವರ್ತಿಸುತ್ತಾರೆ ಎಂದೆಲ್ಲಾ ಬಿರುದುಗಳು, ಪುಕ್ಕಟ್ಟೆಯಾಗೆ ಸಿಕ್ಕಿದವು,
ಅಹಂಕಾರ ಮತ್ತು ಸ್ವಾಭಿಮಾನದ ಮಧ್ಯೆ ಬಹಳ ತೆಳುವಾದ ಗೆರೆಯಿರುತ್ತದೆ. ಮಹಿಳೆಯ ಸ್ವಾಬಿಮಾನ ಪುರುಷನ ಕಣ್ಣಿಗೆ ಅಹಂಕಾರವಾಗಿ ಏಕೆ ಕಾಣಿಸುತ್ತದೆ ಅದು ಅರಿವಿನಾಚೆಗಿನ ಪ್ರಶ್ನೆ? ಇನ್ನೂ ಶೋಭಾರವರು ಸ್ವಾಬಿಮಾನಿ. ಇದು ಅವರ ಹುಟ್ಟುಗುಣ ಇರಬಹುದು.

ಶೋಭಾ ರೈತಾಪಿ ಮನೆತನದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹೆಣ್ಣುಮಗಳು. ಅವಿಭಜಿತ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮ ಒಂದು ಸಾಧಾರಣ ಹಳ್ಳಿ. ಸಮಸ್ಯೆಗಳನ್ನೆ ಎದುರಿಸುತ್ತಾ ಬೆಳೆದವರಿಗೆ, ಸಮಾಜ ಸೇವೆ ಮಾಡುವ ಹಂಬಲ ಅದೇ ನಿಟ್ಟಿನಲ್ಲಿ ಅವರ ಕಾರ್ಯ ಅವರನ್ನು ರಾಜಕೀಯಕ್ಕೆ ಎಳೆದು ತಂದಿತು.

ಆಕೆಯ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಹಗರಣಗಳಿಲ್ಲ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿಲ್ಲ. ಹೈಕಮಾಂಡ್ ಆಕೆಯ ರಾಜಿನಾಮೆ ಕೇಳುವಾಗ ಅದಕ್ಕೆ ಕಾರಣಗಳನ್ನೇ ನೀಡಿಲ್ಲ.ಆದರೂ ಆಕೆಯ ರಾಜಿನಾಮೆಗಾಗಿ ಏಕಕಾಲದಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ರಂಗಮಂದಿರಗಳಲ್ಲಿ ನಡೆದ ನಾಟಕದ ಫಲಶ್ರುತಿಯೆಂದರೆ ಶೋಭಾ ದುರಂತನಾಯಕಿಯಾಗಿ ಹೊರ ಹೊಮ್ಮಿದಳು.ಈ ನಾಟಕದಲ್ಲಿ ’ಮೇಲ್ ಇಗೋ’ ತನ್ನ ಕೆಲಸ ಮಾಡಿರುವುದಂತು ನಿಜ,ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ; ತನ್ನ ಖಾತೆಯ ಸಮರ್ಥ ನಿರ್ವಹಣೆ.

ಅಂತಹ ದೌರ್ಬಲ್ಯವೊಂದು ಶೋಭನಲ್ಲಿತ್ತೆ?

ಎಲ್ಲಾ ಸಚಿವರ ಖಾತೆಗಳಲ್ಲಿ ಮೂಗು ತೂರಿಸುತ್ತಾರೆ ಎಂದು ಶಾಸಕರೊಬ್ಬರು ಆರೋಪಿಸುತ್ತಾರೆ; ಸಚಿವರಲ್ಲ. ಮುಖ್ಯಮಂತ್ರಿಗಳ ಬಳಿಗೆ ಬರುವ ಫೈಲುಗಳನ್ನೆಲ್ಲಾ ಅವರು, ’ಶೋಭಾ ಒಮ್ಮೆ ನೋಡಿ ಬಿಡಲಿ’ ಅನ್ನುತ್ತಿದ್ದರಂತೆ.ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ ಅವರನ್ನು ಆ ರೀತಿ ಅವಲಂಬಿಸುವಂತೆ ಮಾಡಿರ ಬಹುದು.

ಸ್ವಸಾಮರ್ಥ್ಯದಿಂದ ತನ್ನ ಕೇತ್ರದಲ್ಲಿ ಹಂತ ಹಂತವಾಗಿ ಮೇಲೆರುತ್ತಿರುವ ಮಹಿಳೆಯನ್ನು ಪ್ರಪಾತಕ್ಕೆ ದೂಡಿಬಿಡಲು ಏನು ಮಾಡಬೇಕು? ಅವಳ ಚಾರಿತ್ಯವಧೆ ಮಾಡಿದರಾಯ್ತು.ಇಲ್ಲಿ ಎರಡೂ ಆಗಿದೆ. ಶೋಭಾಳ ಚಾರಿತ್ರ್ಯ ವಧೆಯನ್ನು ಕೇವಲ ರೆಡ್ಡಿ ಬಣದವರು ಮಾತ್ರ ಮಾಡಲಿಲ್ಲ. ಮುಖ್ಯಮಂತ್ರಿಗಳು ಅದಕ್ಕೆ ತುಪ್ಪ ಎರೆದಿದ್ದಾರೆ. ಆಕೆಯ ರಾಜಿನಾಮೆಯನ್ನು ಪಡೆದುಕೊಳ್ಳುವ ಸಂದರ್ಭ ಬಂದಾಗ ಸಾರ್ವಜನಿಕವಾಗಿ ಕಣ್ಣೀರು ಹಾಕಿ ಮುಖ್ಯಮಂತ್ರಿ ಘನತೆಗೆ ಕುಂದು ತಂದಿದ್ದಾರೆ. ತನ್ನ ದೌರ್ಬಲ್ಯವನ್ನು ಜಗಜ್ಜಾಹಿರುಗೊಳ್ಸಿದ್ದಾರೆ. ಅಷ್ಟಿದ್ದರೆ ಅವರು ಆಕೆಯನ್ನು ಸಂಪುಟದಿಂದ ಕೈ ಬಿಡಲೇಬಾರದಿತ್ತು. ಅಧಿಕಾರದಾಸೆ ಎಲ್ಲಾ ಸಂಬಂಧಗಳನ್ನು ಗೌಣವಾಗಿಸುತ್ತದೆ. ರಾಜಿನಾಮೆ ಸಂದರ್ಭದಲ್ಲಿ ಶೋಭಾ ತೋರಿದ ಸಂಯಮದಲ್ಲಿ ಒಂಚೂರಾದರೂ ಮುಖ್ಯ ಮಂತ್ರಿಗಳು ತೋರಿದ್ದರೆ ನಗುವವರ ಮುಂದೆ ಎಡವಿ ಬಿದ್ದಂತಾಗುತ್ತಿರಲಿಲ್ಲ.

ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆಯೋ ಅದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿರುವವರು ತಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಯಾಕೆಂದರೆ ಅವರು ಹಲವು ಜನರಿಗೆ ಮಾದರಿಗಳಾಗಿರುತ್ತಾರೆ.

ಶೋಭಾ ಮಾಧ್ಯಮವನ್ನು ಎದುರಿಸಿದ ರೀತಿಯಲ್ಲೇ ಗೊತ್ತಾಗುತ್ತದೆ; ಆಕೆ ಸ್ವಾಬಿಮಾನದ ದಿಟ್ಟ ಹೆಣ್ಣು ಮಗಳು. ಆಕೆಯಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. ಪತ್ರಕರ್ತರ ಪ್ರಶ್ನೆಗಳಿಗೆ ಅಳುಕಿಲ್ಲದೆ ಉತ್ತರಿಸುತ್ತಿದ್ದರು. ಕಾಂಟ್ರವರ್ಸಿ ಆಗಬಹುದಾಗಿದ್ದ ಪ್ರಶ್ನೆಗಳಿಗೆ ’ನನಗೆ ಗೊತ್ತಿಲ್ಲ, ನನ್ನಲ್ಲೂ ಆ ಪ್ರಶ್ನೆ ಇದೆ, ಯಾಕೆ ಅಂತಹ ಗೊತ್ತಾಗ್ಲಿಲ್ಲ, ’ಅದು ಹಿರಿಯರ ತೀರ್ಮಾನ...’ ಎಂಬ ಜಾಣತನದ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದರು. ಆದರೆ ಅತ್ತ ರೆಡ್ಡಿಬಣ್ಣದವರು ಸಂಸರೆ ಸದಸ್ಯೆ ಶಾಂತಳನ್ನು ಹೋಲಿಸಿ ನೋಡಿದಾಗ ’ನಾಲಗೆ ಕುಲವನರುಹಿತು’ ಎಂದು ಇಂತಹ ಸಂದರ್ಭವನ್ನು ನೋಡಿಯೇ ಬರೆದಿರಬೇಕೆನಿಸುತ್ತದೆ.

ಹೆಣ್ಣೆನ ತಪ್ಪುಗಳನ್ನು ಜಗತ್ತಿಗೆ ಅರಿವಾಗುವಂತೆ ಮಾಡುತ್ತಾ, ಗಂಡಸಿನ ತಪ್ಪನ್ನು ಮಂದಲಿಗೆಯ ಕೆಳಗೆ ಮಡಿಚಿಡುವ ಪದ್ದಿತಿ ಇನ್ನೂ ನಿಂತಿಲ್ಲ, ಅದು ಸಂಸಾರವಾದರೇನು ಅಥವಾ ರಾಜಕೀಯ ವಾದರೇನು, ಎಲ್ಲ ಕಡೆಯಲ್ಲೂ ತ್ಯಾಗ ಮಾತ್ರ ಹೆಣ್ಣೆಗೆ ಮೀಸಲು, ಬಿಜೆಪಿಯ ರಾಜ್ಯ ಸಂಸಾರ ಉಳಿಸಲು ಶೋಭಾ ಕರಂದ್ಲಾಜೆ ಎಂಬ ಮಹಿಳೆಯಂತು ಬಲಿಪಶು ಆಗಿದ್ದಾಯಿತು,

ಇತ್ತೀಚೆಗೆ ನಡೆದ ಪ್ರಿಯಾಂಕ & ಆನಂದ ಪ್ರಕರಣದಲ್ಲಿ ನಮ್ಮ ಮಹಿಳಾ ಸಮಾಜದವರು ವಹಿಸಿದ ಕಾಳಜಿಯಲ್ಲಿ ಒಂದು ಭಾಗವನ್ನಾದರು ಇಲ್ಲಿ ತೋರಿಸ ಬಹುದಿತ್ತು. ಬಹುಶಃ ಇವರಿಗೂ ರೆಡ್ಡಿ ಬಣದವರ ಬಗ್ಗೆ ಭಯವಿರ ಬಹುದು.

ರೆಡ್ಡಿ ಬಳಗ ಚಕ್ರವ್ಯೂಹವನ್ನೇನೋ ಎಣೆದಿದೆ ಅದನ್ನೆಲ್ಲಾ ಕೊಡವಿಕೊಂಡು ಎದ್ದು ನಿಲ್ಲುವ ಶಕ್ತಿ ಆಕೆಗೆ ನಮ್ಮ ಸಮಾಜ ನೀಡಬೇಕಿದೆ.

ಯೋಗವು ಬಂತಲ್ಲ, ಬದುಕು ವಿಭಾಗವಾಯಿತಲ್ಲ
ಭೋಗಿಶಯನ ಶ್ರೀ ಪುರಂದರ ವಿಠಲನ‌
ಆಗ ನೆನೆಯಲಿಲ್ಲ .....

“HOPE FOR THE BEST “

ಇನ್ನಾದರೂ ನಮ್ಮ ಸಮಾಜದಲ್ಲಿ ಮಹಿಳೆಯರು ಬಲಿಪಶುವಾಗುವುದನ್ನು ನಿಲ್ಲಿಸಲಿ ಎಂದೂ,
ವಿಶ್ವ ಗಂಡಸರ ದಿನವನ್ನೂ ಆಚರಿಸಿ ಕೊಂಡವರಿಗೆ ಈ ಲೇಖನವನ್ನೂ ಅರ್ಪಿಸಲಿಚ್ಚಿಸುತ್ತೇನೆ.
.
.
.
.
.
.
.
.
ಈ ನಿಟ್ಟಿನಲ್ಲಿ ಇದು ನನ್ನ ಮೊದಲ ಬರವಣೆಗೆ ಹಲವು ಸಂಗ್ರಹ ಗಳನ್ನೂ ಓದಿ ನನ್ನದೇ ಆದ ಶೈಲಿಯಲ್ಲಿ ಬರಿದಿದ್ದೇನೆ , ತೀರ ಮೊನಚಾಗಿ ಬರೆಯುವ ಆಸೆ ಇತ್ತು. ಆದರೆ ಪ್ರಥಮ ಪ್ರಯತ್ನಂ ದಂತ ಭಗ್ನಂ ಎಂದಾಗ ಬಾರದೆಂದು ತಿಳಿಯಾಗಿಸಿದ್ದೇನೆ ,ಉಳಿದದ್ದು ಓದುಗರಿಗೆ ಬಿಟ್ಟದ್ದು.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.3 (3 ಓಟುಗಳು)
kiranroy's picture
ಶುಕ್ರ, 27/11/2009 - 10:04 ರಂದು kiranroy ಅವರು ಹೇಳುತ್ತಾರೆ
Hey Paaru, Again you are

Hey Paaru, Again you are rocking,, good good, keep it up........!

ವಿ.ಎಂ.ಶ್ರೀನಿವಾಸ's picture
ಗುರು, 26/11/2009 - 10:43 ರಂದು ವಿ.ಎಂ.ಶ್ರೀನಿವಾಸ ಅವರು ಹೇಳುತ್ತಾರೆ
ಶೋಭಕ್ಕನ ಬಗ್ಗೆ ಅಲ್ಲದಿದ್ದರೂ

ಶೋಭಕ್ಕನ ಬಗ್ಗೆ ಅಲ್ಲದಿದ್ದರೂ ಆಕೆಯ ಕೆಲಸದ ಬಗ್ಗೆ ನನಗೆ ಅಲ್ಪ ಸ್ವಲ್ಪ ನಂಬಿಕೆಯಿತ್ತು. ಆಕೆ ಈ ಮಟ್ಟಕ್ಕೆ ಬೆಳೆದು ಬಂದದ್ದು ಹೇಗೆ ಎಂಬುದು ರಾಜ್ಯದ ಜನತೆಗೆ ತಿಳಿಯದ್ದೇನಲ್ಲ.! ಅಥವಾ ಅದೇನು ಅಪರಾಧವೂ ಅಲ್ಲ ಹಾಗೂ ಆ ರೀತಿ ಮಾಡಿದವರಲ್ಲಿ ಇವರು ಮೊದಲಿಗರೂ ಅಲ್ಲ. ಈ ಬಗ್ಗೆ ಯಾರಿಗೂ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಯಾವಾಗ ಟಿವಿ9 ಸಂದರ್ಶನದಲ್ಲಿ, ಯಡಿಯೂರಪ್ಪ ನನಗೆ ತಂದೆ ಸಮಾನ "ಅಂದರೋ ಆವತ್ತಿನಿಂದ ಅಧಿಕಾರಕ್ಕಾಗಿ ಸಂಬಂಧಗಳನ್ನೆ ಬಲಿಕೊಡೋ ಇಂಥವರನ್ನು ಯಾಕೆ ನಂಬಬೇಕೋ ಗೊತ್ತಾಗುತ್ತಿಲ್ಲ, ಅದಿರಲಿ ಇಂಥಹವರ ಪರವಾಗಿ ಪಾರ್ವತಿಯಂತಹವರು ಯಾಕೆ ಹೀಗೆ ವಾದಿಸ್ತಾರೋ ಅಂತಾನೂ ತಿಳೀತಿಲ್ಲ.
ಕೊನೆಮಾತು. ಅಧಿಕಾರದ ಮದ, ಅತಿಯಾದ ಸ್ವಾಭಿಮಾನ ಉಂಟುಮಾಡೋ ಲಾಭಕ್ಕಿಂತ, ನಷ್ಟವೇ ಹೆಚ್ಚು.

ಪ್ರಶಾಂತ.ಪ's picture
ಬುಧ, 25/11/2009 - 18:17 ರಂದು ಪ್ರಶಾಂತ.ಪ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಅನಾಮಿಕವೆಂಬ ಕಡಲಮಂಡೂಕಕ್ಕೆ ಶರಣು

ಅನಾಮಿಕವೆಂಬ ಕಡಲಮಂಡೂಕಕ್ಕೆ ಶರಣು ಶರಣಾರ್ಥೀಗಳು.

ಅನಾಮಿಕನು's picture
ಗುರು, 26/11/2009 - 14:12 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಅನಾಮಿಕವೆಂಬ ಕಡಲಮಂಡೂಕಕ್ಕೆ

ಅನಾಮಿಕವೆಂಬ ಕಡಲಮಂಡೂಕಕ್ಕೆ ಅರ್ಥವಾಯಿತು. ಶರಣು ಶರಣಾರ್ಥೀಗಳು ಅಂದರೇನು?

ಪಾರ್ವತಿ.ಜಿ.ಆರ್'s picture
ಬುಧ, 25/11/2009 - 16:19 ರಂದು ಪಾರ್ವತಿ.ಜಿ.ಆರ್ ಅವರು ಹೇಳುತ್ತಾರೆ
ವಿಸ್ಮಯನಗರಿಯು ವ್ಯಕ್ತಿಗತವಾಗಿ

ವಿಸ್ಮಯನಗರಿಯು ವ್ಯಕ್ತಿಗತವಾಗಿ ತಮಗನ್ನಿಸಿದ್ದನ್ನು ತಿಳಿಸುವುದಕ್ಕೆ ಇರುವ ವೇದಿಕೆ, ಇಲ್ಲಿ ಎಲ್ಲರೂ ಒಂದೇ ರೀತಿ ಯೋಚಿಸಲು ಅಸಾಧ್ಯ, ಇಲ್ಲಿರುವ ಲೇಖನ ರಾಜಕೀಯವಾದುದ್ದಲ್ಲ, ಇದು ಕೇವಲ ನನ್ನ ಮಟ್ಟಿನ ಯೋಚನೆಗಳಷ್ಟೆ, ನನಗನ್ನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ನನಗಿದೆ, ನಿಮಗನ್ನಿಸಿದ್ದನ್ನು ನಾನು ಕಲ್ಪಿಸಿ ಬರೆಯುವುದು ಅಸಾಧ್ಯ, ಇನ್ನೂ ಅನಗತ್ಯವಾದ ಸಲ್ಲದು, ಇನ್ನೂ ನನ್ನ ಧೃಡನಿಲುವಿನ ಬಗ್ಗೆ ನಿಮಗೆ ತಿಳಿಸುವ ಅಗತ್ಯ ನನಗಿಲ್ಲ.

ನೀರಿನ ಆಳ ಇಳಿದವರಿಗೆ ತಿಳಿದಿರುತ್ತದೆ ಹೊರತು ನೋಡಿದವರಿಗಲ್ಲ,ಬಹುಶ: ನಾನು ನಿಮ್ಮಷ್ಟು ನೀರಿನ ಆಳವನ್ನು ತಿಳಿದಿಲ್ಲವಿರ ಬಹುದು, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಬಾಲ ಚಂದ್ರ's picture
ಗುರು, 26/11/2009 - 10:32 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಪಾರ್ವತಿಯವರೇ, ಖಂಡಿತಾ

ಪಾರ್ವತಿಯವರೇ,
ಖಂಡಿತಾ ನಿಮಗನಿಸಿದ್ದನ್ನು ಹೇಳುವ ವ್ಯಕ್ತಿ ಸ್ವಾತಂತ್ರ್ಯ ನಿಮಗಿದೆ. ಅದರ ಬಗ್ಗೆ ಎರಡು ಮಾತಿಲ್ಲ.
ಆದರೆ ಇನ್ನೂ ಅನಗತ್ಯವಾದ ಸಲ್ಲದು ನೀವೇಕೆ ನಮ್ಮ ಅಭಿವ್ಯಕ್ತಿಗೆ ಅಡ್ಡಿಪಡಿಸುತ್ತಿದ್ದೀರಿ ಅರ್ಥವಾಗಲಿಲ್ಲ.
ಇಷ್ಟಕ್ಕೂ ನಾನು ಇಲ್ಲಿ ಇಲ್ಲದಿರುವುದೇನನ್ನೂ ಸೃಜಿಸಿ ಬರೆದಿಲ್ಲ. ನಿಮ್ಮ ಬರಹದಲ್ಲೇ ಇರುವ ವೈರುಧ್ಯವನ್ನು, ಧ್ವಂಧ್ವವನ್ನೂ ಗುರುತಿಸಿ ಹೇಳಿದ್ದೇನೆ ಅಷ್ಟೇ?
any how ನೀರಿನ ಆಳ ಇಳಿದವರಿಗೆ ತಿಳಿದಿರುತ್ತದೆ ಹೊರತು ನೋಡಿದವರಿಗಲ್ಲ,ಬಹುಶ: ನಾನು ನಿಮ್ಮಷ್ಟು ನೀರಿನ ಆಳವನ್ನು ತಿಳಿದಿಲ್ಲವಿರ ಬಹುದು.
ಎಂದು ಹೇಳುವ ಸೌಜನ್ಯದ ಮಾತು ಇಷ್ಟವಾಯಿತು, ತಿಳಿಯದ ವಿಷಯದ ಬಗ್ಗೆ ಇಂತಹ ವಿನಯ ತೋರ್ಪಡಿಸುವ ನಿಮಗೆ ನಪುಂಸಕ ಅನಾ ಮಿಕಗಳ ಸಲಹೆ ಅಗತ್ಯವಿಲ್ಲ ಅಲ್ಲವೇ?

ಸಸ್ನೇಹ
ಬಾಲ ಚಂದ್ರ

ಅನಾಮಿಕನು's picture
ಬುಧ, 25/11/2009 - 16:23 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
"ವಿಸ್ಮಯನಗರಿಯು ವ್ಯಕ್ತಿಗತವಾಗಿ

"ವಿಸ್ಮಯನಗರಿಯು ವ್ಯಕ್ತಿಗತವಾಗಿ ತಮಗನ್ನಿಸಿದ್ದನ್ನು ತಿಳಿಸುವುದಕ್ಕೆ ಇರುವ ವೇದಿಕೆ,"
ನೀವು ಹೇಳಿದ್ದು ಸರಿ. ಅದಕ್ಕೇ ಇಲ್ಲಿರುವ ಹಲ ಕೆಲ ಸರ್ವವಿದ್ಯಾಪಾರಂಗತರ ಅಗಾಧ ಜ್ನಾನ ಪ್ರದರ್ಶನ ಆಗಾಗ ನಡೆಯುತ್ತಿರುತ್ತದೆ. ನೀವು ಹೇಳುವ ಎಲ್ಲ ವಿಷಯಗಳಿಗೆ ಈ ದೊಣ್ಣೆನಾಯಕರ ಅಪ್ಪಣೆ/ಅನುಮೋದನೆ ಬೇಕೇ ಬೇಕು. ನೀವು ಎಲ್ಲಿ ತಪ್ಪಿದ್ದೀರಿ ಎಂಬುದನ್ನು ಉಹಿಸಿ ತಾವು ವಾಸವಿರುವ ಬಾವಿಯಡಿಯಿಂದೇ ವಟಗುಟ್ಟಿ ವಟಗುಟ್ಟಿ ಹೇಳುವ ಕೂಪಮಂಡೂಕಗಳಿಗೆ ಏಕೆ ಇಷ್ಟೊಂದು ವಿವರಣೆ ಕೊಡುತ್ತೀರಿ?

ಬೇರೆಯವರ ಲೇಖನಗಳ ಕಪೋಲಕಲ್ಪಿತ ತಪ್ಪುಗಳನ್ನು ತಮ್ಮ ಚಂದ್ರಕಾಂತಿಯಲ್ಲಿ ಎತ್ತಿ ಕಾಣಿಸುವ ಮೊದಲು ತಮ್ಮ ಬಾಲ ಮುಟ್ಟಿ ನೋಡಿಕೊಂಡರೆ ತಾನು ಕವಿಯಲ್ಲ ಕಪಿ ಎಂದು ಅರಿವಾದೀತು.

ಬಾಲ ಚಂದ್ರ's picture
ಗುರು, 26/11/2009 - 10:38 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ದುರ್ಗಂಧವೇ, ನೀವು ಅನಾಮಿಕರೆಂದು

ದುರ್ಗಂಧವೇ,
ನೀವು ಅನಾಮಿಕರೆಂದು ಗುರುತಿಸಿಕೊಂಡ ಮಾತ್ರಕ್ಕೆ ನಿಮ್ಮನ್ನು ಕಂಡು ಹಿಡಿಯಲಾಗದಷ್ಟು ದಡ್ಡರೇನಲ್ಲ ನಾವು.
ವಿಸ್ಮಯದಲ್ಲಿ ಹೀಗೆ ಕಂಡ ಕಂಡ ಲೇಖನಗಳಿಗೆ ಕಮೆಂಟು ಹಾಕಿ ಸಿಕ್ಕಿ ಸಿಕ್ಕಿದವರಿಂದ ಒದೆ ತಿಂದು ಈಗ ಈ ರೀತಿ ಬೃಹನ್ನಳೆಯ ವೇಷ ಧರಿಸಿದವನಂತೆ ಆಡಿದರೆ ಹೇಗೆ ಗಂಧ?
ನಿಮ್ಮ ಪದಗಟ್ಟುಗಳು, ನಿಮ್ಮ ಭಾಷೆ ಪ್ರತಿಯೊಂದರ ಪರಿಚಯವೂ ನನಗಿದೆ.

ಕೊನೆಯದಾಗಿ ಒಂದು ಮಾತುಃ-
ಒಂದಕ್ಷರ ಲೇಖನ ಬರಿಯದೆ ಬರೀ ಹೀಗೆ ವಿಮರ್ಷೆ ಕೊಡುವವರು, ವೇಶ್ಯಾ ಗೃಹಗಳಲ್ಲಿರುವ ಖೋಜಾಗಳ ಹಾಗೆ. ಯಾಕೆಂದರೆ ಅಲ್ಲಿ ಏನು ಮಾಡಬೇಕೆಂದು ಅವರಿಗೆ ತಿಳಿದಿರುತ್ತದೆ. ಆದರೆ ಅವರ ಕೈಲಿ ಮಾಡಲು ಸಾಧ್ಯವಾಗುವುದಿಲ್ಲ ಅಷ್ಟೇ

ಬಾಲ ಚಂದ್ರ

ಅನಾಮಿಕನು's picture
ಗುರು, 26/11/2009 - 14:28 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಏನು ಸಂಸ್ಕಾರ...ಏನು ವಿನಯ.

ಏನು ಸಂಸ್ಕಾರ...ಏನು ವಿನಯ.

ದೂರದಲ್ಲೆಲ್ಲೋ ಗಣಕಯಂತ್ರದ ಹಿಂದೆ ಭುಜಬಲದ ಪರಾಕ್ರಮ ತೋರಿಸುವ ವೀರ ಬಾಲಕನೇ ನಿನ್ನ ತೋಳಸತುವನು ತಿಳಿಯದೇ ದುಡುಕಿಬಿಟ್ಟೆ. ನಿನ್ನ ಪೌರುಷದ ಒಂದಲಗೂ ನನಗಿಲ್ಲ. ನಿನ್ನ ಹೆಸರನ್ನು, ನಿನ್ನ ಕರ್ಮಭೂಮಿಯ ಸುಳುಹನ್ನು ವಿಸ್ಮಯನಗರಿ ಎಂಬ ರಣಾಂಗಣದಲ್ಲಿ ನೀಡಿ ನೀನು ತೋರಿಸುತ್ತಿರುವ ಅಸೀಮ ಧೈರ್ಯ ನನಗಿಲ್ಲದೇ ಹೋಯಿತೇ. ಅಕಟಕಟಾ.

ನಾನೇಕೆ ಈ ಪರಿಯ ಹೇಡಿ. ಗಂಧನೆಂಬ ಹೆಸರಿನಲ್ಲಿ ಎಲ್ಲರಿಂದೊದೆ ತಿಂದರೂ ನಿನ್ನ ಬಗ್ಗೆ ಬರೆಯುವಾಗ ಹೆಸರು ಬರೆಯಲಾಗದ ಹೇಡಿತನ ನನಗೇಕೆ. ಅರಿಯದು ಪ್ರಭುವೇ ಅರಿಯದು.

ಅಲ್ಲದೇ ನಿನ್ನ ಅಗಾಧ ಜ್ನಾನವೊಂದೆಡೆಗಿರಲಿ, ನೀನು ಅದೆಷ್ಟು ಅನುಭವಿ ವೀರಪುರುಷ ಪುಂಗವಾ. ವೇಷ್ಯಾಗೃಹಗಳನ್ನು ವಿಟಪುರುಷನಾಗಿ ಹೊಕ್ಕಿ ಕಂಡು ಬಂದು ಅಲ್ಲಿರುವ ಖೋಜಾಗಳನ್ನು ಅದೆಷ್ಟು ಸಮರ್ಥವಾಗಿ ವರ್ಣಿಸಿದ್ದಿ. ನೀನೇ ಖೋಜಾ ಆಗಿದ್ದಿಯೇನೋ ಎನ್ನು ರೀತಿ ಬಣ್ಣಿಸಿರುವೆಯಲ್ಲ ಅಸೀಮ ಬಲನೇ.

ಆದರೆ ಪದಗಟ್ಟು,ಭಾಷೆ ಗುರುತಿಸುವದರಲ್ಲಿ ಮಾತ್ರ ಸ್ವಲ್ಪ ಯಡವಟ್ಟಾಗಿ ಹೋಯಿತೇ ಕಂದಾ. ಚಿಂತಿಸದಿರು. ನಿನ್ನ ಪಾಂಡಿತ್ಯ ಪ್ರದರ್ಶನ ನಡೆಸುತಲಿರು.

ಬಾಲ ಚಂದ್ರ's picture
ಶುಕ್ರ, 27/11/2009 - 10:59 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಅಹುದಹುದು ನೀಚನೇ, ನಾನು

ಅಹುದಹುದು ನೀಚನೇ,
ನಾನು ವೀರಬಾಲಕನೇ ಅಬ್ದಿಯೊರೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ (ಸಮುದ್ರವೇ ಒಮ್ಮೊಮ್ಮೆ ಕಾಲವಶವಾಗಿ ತನ್ನ ಸೀಮೆಯನ್ನು ದಾಟುವುದಿಲ್ಲವೇ-ನಾಗಚಂದ್ರ) ಎಂಬ ತೆರದಿ ನಿಮ್ಮನ್ನು ಗಂಧ ಎಂದು ಕರೆದಿದ್ದು ಎನ್ನ ಅಪರಾಧವೈ. ಏಕೆಂದರೆ ಗಂಧ ಒಬ್ಬ ಪುರುಷನಿಹನು. ನಿನ್ನಂತಲ್ಲ.
ಮನ್ನಿಸೆನ್ನನು ಮಂಗಳ ಮುಖೀ

ಸಸ್ನೇಹ
ಬಾಲ ಚಂದ್ರ

ಗಂಧ 's picture
ಗುರು, 26/11/2009 - 14:05 ರಂದು ಗಂಧ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಅಯ್ಯಾ ಬಾಲಣ್ಣ, ತಮಗೆ

ಅಯ್ಯಾ ಬಾಲಣ್ಣ, ತಮಗೆ ಬೈಯ್ಯುವವರು ಗಂಧ ಮಾತ್ರ ಅಂತಾ ತಿಳಿದಿರುವದು ತಮ್ಮ ಮಿತಿಯೋ ಅಥವಾ ಭಯವೋ ಎಂಬುದರಿಯೆ. ಅದರಲ್ಲೂ ಈ ಹಿಂದೆ ನಾನೆಲ್ಲೂ ನಿಮ್ಮನ್ನು ಬೈದಿಲ್ಲ( ನೀವೇ ರೊಚ್ಚಿಗೆದ್ದು ನನ್ನ ವ್ಯಕ್ತಿಗತ ನಿಂದನೆ ಪ್ರಾರಂಬಿಸಿದ್ದರಿಂದ ನಾನೂ ಅಲ್ಲಲ್ಲಿ ಚುಚ್ಚಬೇಕಾಯಿತು ನಿಜ) ನಿಮ್ಮ view ಯಾ ಲೇಖನಕ್ಕೆ ವಿರೋಧ ತೋರಿದೆ ಅಷ್ಟೇ. ನಿಮ್ಮ ವಯಸ್ಸು ;ಅದಕ್ಕೆ ತಕ್ಕ ಗುಣ ನಾನರಿಯಬಲ್ಲೆ. 'ಸೊಲುವದೇ ಇಲ್ಲ' ಎಂಬ ಹಠ ನಿಮಗೆ. ಅದು ನನಗಿಷ್ಟ ಏಕೆಂದರೆ, ನಿಮ್ಮ ವಯಸ್ಸಿಗೆ ನಾನೂ ಹಾಗೇ ಇದ್ದೆ!! ವಿಸ್ಮಯದ ಅನೇಕಾನೇಕ ಪ್ರಜೆಗಳಲ್ಲಿ ನೀವು ಎಷ್ಟೋ ಪಾಲು ಮೇಲು, ವಿತಂಡ ವಾದಿಯಾದರೂ ಚೊಕ್ಕ ಕನ್ನಡ ಬರೆಯುತ್ತಿರಿ, ಸಾಹಿತ್ಯದಲ್ಲಿ ಅಕ್ಕರೆ ಇದೆ.
ಶೋಭಕ್ಕನ ಲೇಖನಕ್ಕೆ ಬಂದರೆ, ನಿಮ್ಮ ಅಭಿಪ್ರಾಯ ವಿರೋಧಿಸುವ ಮೂರ್ಖ ನಾನೆಂದು ಕೊಳ್ಳುವಷ್ಟು ಮೂಢರು ತಾವೆಂದುಕೊಂಡಿರಲಿಲ್ಲ! ನೀವು ಹೇಳಿದ್ದು , ನಂತರ ಪಾರ್ವತಿಯ ಅಭಿಪ್ರಾಯಕ್ಕೆ ಕೊಟ್ಟ ಸಮಝಾಯಿಸಿ ಎರಡೂ ನನಗೆ ಸೈ!
ಮತ್ತಾವುದಾದರೂ ವಿಷಯದಲ್ಲಿ ಎಡತಾಕೋಣ.......ಅಲ್ಲಿವರೆಗೆ keep rocking ! !

ಬಾಲ ಚಂದ್ರ's picture
ಶುಕ್ರ, 27/11/2009 - 11:07 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಪ್ರೀತಿಯ ಗಂಧ, ಇಷ್ಟು ದಿನಗಳ ನಂತರ

ಪ್ರೀತಿಯ ಗಂಧ, ಇಷ್ಟು ದಿನಗಳ ನಂತರ ಕಾಣಿಸುತ್ತಿರಿವುದು ಸಂತೋಷ, ಎಲ್ಲಿ ಹೋಗಿದ್ದಿರಿ?
ಎನಗೆ ಬೈಯ್ಯುವವರು ಗಂಧ ಮಾತ್ರ ಅಂತಾ ತಿಳಿದಿರುವದು ನನ್ನ ಮಿತಿಯೂ ಅಲ್ಲ , ಭಯವೂ ಅಲ್ಲ. ಕೇವಲ ತಪ್ಪು ತಿಳುವಳಿಕೆ ಅಷ್ಟೇ? ಇರಲಿ
ನನ್ನನ್ನು ವಿತಂಡ ವಾದಿ ಎಂದು ಕರೆದು ಅದರ ಮೇಲೆ ಚೊಕ್ಕವಾಗಿ ಕನ್ನಡ ಬಲ್ಲವರು, ಸಾಹಿತ್ಯದ ಬಗ್ಗೆ ಅಕ್ಕರೆ ಉಳ್ಳವರು ಎಂದು ಹೇಳಿದ್ದೀರಿ.
ಇದು ಹೊಗಳಿಕೆಯೋ ಅಥವಾ ತೆಗಳಿಕೆಯೋ?
ಸಸ್ನೇಹ
ಬಾಲ ಚಂದ್ರ

ಬಾಲ ಚಂದ್ರ's picture
ಬುಧ, 25/11/2009 - 13:44 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಪಾರ್ವತಿಯವರೇ, ಈ ಕೆಳಗಿನ

ಪಾರ್ವತಿಯವರೇ,

ಈ ಕೆಳಗಿನ ಹೇಳಿಕೆಗಳನ್ನು ದಯವಿಟ್ಟು ಗಮನಿಸಿ

ಭಾಗ 1

ಪಾರ್ವತಿಯವರು ಮೊದಲು ಹೇಳಿದ್ದು

ಆಕೆಯ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಹಗರಣಗಳಿಲ್ಲ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿಲ್ಲ

ಅದಕ್ಕೆ ನಾನು ಪ್ರತಿಕ್ರಿಯಿಸಿದ್ದು
ಶೋಭಾ ಕರಂದ್ಲಾಜೆಯವರು ಭ್ರಷ್ಟಾಚಾರಕ್ಕೆ ಅತೀತರಾಗೇನೂ ಇಲ್ಲ. ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರವೊಂದು ನಡೆಸುವ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಲ್ಲಿ ಶೋಭಾ ಹೆಸರು ಮೊದಲಿಂದ ಕೊನೆಯವರೆಗೂ ಕೇಳಿಬಂದಿದ್ದು ಸುಳ್ಳೇನಲ್ಲ.

ಅದಕ್ಕೆ ಪಾರ್ವತಿಯವರ ಪ್ರತಿಕ್ರಿಯೆ
ನನ್ನ ಲೇಖನ ಭ್ರಷ್ಟಾಚಾರಕ್ಕೆ ಸಂಬಂದಿಸಿಲ್ಲ ಕಾರಣ ಅದನ್ನು ಕೇವಲ ಪದಗಳಲ್ಲಿ ಹಿಡಿದಿಡುವ ಮಟ್ಟಿಗೆ ಇಲ್ಲ,

ಭಾಗ 2

ಪಾರ್ವತಿಯವರು ಮೊದಲು ಹೇಳಿದ್ದು
ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆಯೋ ಅದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿರುವವರು ತಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಯಾಕೆಂದರೆ ಅವರು ಹಲವು ಜನರಿಗೆ ಮಾದರಿಗಳಾಗಿರುತ್ತಾರೆ

ಅದಕ್ಕೆ ನಾನು ಪ್ರತಿಕ್ರಿಯಿಸಿದ್ದು
ಇರಲಿ ಇಷ್ಟು ವಯಸ್ಸಾದರೂ ಇನ್ನೂ ಕುಮಾರಿ ಶೋಭಾ ಕರಂದ್ಲಾಜೆ ಎಂದು ಕರೆಸಿಕೊಳ್ಳುತ್ತಿರುವುದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಲಾರರು. ಆದರೆ ಅವರ ಹೆಸರು ಯಡಿಯೂರಪ್ಪನವರೊಂದಿಗೆ ಥಳಕು ಹಾಕಿಕೊಂಡು ಕರ್ನಾಟಕದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ರಾರಾಜಿಸಿದ್ದು?. ಇದಕ್ಕೇನಂತೀರಿ ಪಾರ್ವತಿ?

ಅದಕ್ಕೆ ಪಾರ್ವತಿಯವರ ಪ್ರತಿಕ್ರಿಯೆ

ಇನ್ನೂ ಶೋಭಾ ಕರಂದ್ಲಾಜೆ ಕುಮಾರಿ , ಶ್ರೀಮತಿಯೋ ಅದು ಆಕೆಯ ವೈಯಕ್ತಿಕವಾದದ್ದು.

ನಿಮ್ಮ ಒಂದು ಹೇಳಿಕೆಯನ್ನು ಇನ್ನೊಂದರ ಪಕ್ಕ ಇಟ್ಟು ನೋಡಿದರೆ, ಈ ವಿಷಯದ ಬಗ್ಗೆ ನಿಮಗೇ ಧೃಢ ನಿಲುವು ಇಲ್ಲ ಎನಿಸುತ್ತದೆ.

ಸಸ್ನೇಹ
ಬಾಲ ಚಂದ್ರ

ಪಾರ್ವತಿ.ಜಿ.ಆರ್'s picture
ಬುಧ, 25/11/2009 - 11:48 ರಂದು ಪಾರ್ವತಿ.ಜಿ.ಆರ್ ಅವರು ಹೇಳುತ್ತಾರೆ
ಧನ್ಯವಾದಗಳು , ಪ್ರಭಾಕರ ಸಾರ್ ,

ಧನ್ಯವಾದಗಳು ,
ಪ್ರಭಾಕರ ಸಾರ್ , ಪ್ರಶಾಂತ ರವರೇ, ಜಲಜನಕ ರವರೇ & ಬಾಲಚಂದ್ರ ರವರೇ ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು,

ಜಲಜನಕ ರವರೇ 'HOPE FOR THE BEST' ಅಂದ್ರೆ NEXT ರೆಡ್ಡಿ ಅಂತಾ ಅರ್ಥಾನಾ??????
ಅದು ನಿಮಗೆ ಬಿಟ್ಟದ್ದು ಕಾರಣ ಅವರವರ ಭಾವಕ್ಕೆ ಅದು ನಿಮ್ಮಿಷ್ಟ,

ಇನ್ನೂ ಬಾಲಚಂದ್ರರವರೇ ನಾನು ನಿಮ್ಮಷ್ಟು ಚರ್ಚಾ ನಿಪುಣೆಯಲ್ಲ ಆದರೂ ನಿಮ್ಮ ಕೆಲವು ಪ್ರಶ್ನೆಗಳಿಗೆ ಉತ್ತಿರಿಸಲೇ ಬೇಕು - ನನ್ನ ಲೇಖನ ಭ್ರಷ್ಟಾಚಾರಕ್ಕೆ ಸಂಬಂದಿಸಿಲ್ಲ ಕಾರಣ ಅದನ್ನು ಕೇವಲ ಪದಗಳಲ್ಲಿ ಹಿಡಿದಿಡುವ ಮಟ್ಟಿಗೆ ಇಲ್ಲ,

ಇನ್ನೂ ಶೋಭಾ ಕರಂದ್ಲಾಜೆ ಕುಮಾರಿ , ಶ್ರೀಮತಿಯೋ ಅದು ಆಕೆಯ ವೈಯಕ್ತಿಕವಾದದ್ದು, ಆದರೂ ಪ್ರಭಾಕರ ಸಾರ್
ಹೇಳಿದಂತೆ ಸಾರ್ವಜನಿಕ ಜೀವನದಲ್ಲಿ ಒಂದು ಮಾತಿದೆ: `ಸೀಸರನ ಹೆಂಡತಿ ಎಂದೂ ಸಂಶಯಾತೀತಳಾಗಿರಬೇಕು' ಎಂದು! ಆದರೆ ನನ್ನ ದೃಷ್ಟಿಯಲ್ಲಿ ಇದು ಹೆಣ್ಣಿಗೆ ಎಷ್ಟು ಅನ್ವಯಿಸುವುದೋ ಗಂಡಿಗೂ ಅಷ್ಟೇ ಅನ್ವಯಿಸಬೇಕು.ಇದಿಷ್ಟೇ ನನ್ನ ವಾದ

’ಮೇಲ್ ಇಗೋ’ ಅಂತ ಬಿರುದು ನೀಡಿದ್ದು, ಆಕೆಯ ರಾಜಿನಾಮೆಗಾಗಿ ಇಷ್ಟೆಲ್ಲಾ ಹರಸಾಹಸ ನೆಡಸಿದ್ದಕ್ಕೆ.

ಒಟ್ಟಿನಲ್ಲಿ ಎಲ್ಲಾ ರಾಜಕೀಯ.

ಬಾಲ ಚಂದ್ರ's picture
ಬುಧ, 25/11/2009 - 11:12 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಪಾರ್ವತಿಯವರರೇ, ನಿಮ್ಮ ಲೇಖನ

ಪಾರ್ವತಿಯವರರೇ,
ನಿಮ್ಮ ಲೇಖನ ಮೊನಚಾಗಿ ಇಲ್ಲ ನಿಜ, ಆದರೆ ಪೂರ್ವಾಗ್ರಹದಿಂದ ಕೂಡಿರುವುದಂತೂ ಖಂಡಿತಾ.
ಶೋಭಾ ಕರಂದ್ಲಾಜೆಯವರು ಭ್ರಷ್ಟಾಚಾರಕ್ಕೆ ಅತೀತರಾಗೇನೂ ಇಲ್ಲ. ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರವೊಂದು ನಡೆಸುವ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಲ್ಲಿ ಶೋಭಾ ಹೆಸರು ಮೊದಲಿಂದ ಕೊನೆಯವರೆಗೂ ಕೇಳಿಬಂದಿದ್ದು ಸುಳ್ಳೇನಲ್ಲ.
ಪರೀಕ್ಷೆಯ ಗುತ್ತಿಗೆದಾರಿಕೆಯನ್ನು ಖಾಸಗಿಯವರಿಗೆ ವಹಿಸಿಕೊಟ್ಟಿದ್ದು ಇತಿಹಾಸದಲ್ಲೇ ಮೊದಲು. ಆ ಖಾಸಗಿ ಕಂಪನಿಯ ಮಾಲೀಕರು ಶೋಭಾ ಕರಂಧ್ಲಾಜೆಯ ತಮ್ಮನಾಗಿರುವುದು ಕಾಕತಾಳೀಯವೇ?
ಇರಲಿ ಇಷ್ಟು ವಯಸ್ಸಾದರೂ ಇನ್ನೂ ಕುಮಾರಿ ಶೋಭಾ ಕರಂದ್ಲಾಜೆ ಎಂದು ಕರೆಸಿಕೊಳ್ಳುತ್ತಿರುವುದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಲಾರರು. ಆದರೆ ಅವರ ಹೆಸರು ಯಡಿಯೂರಪ್ಪನವರೊಂದಿಗೆ ಥಳಕು ಹಾಕಿಕೊಂಡು ಕರ್ನಾಟಕದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ರಾರಾಜಿಸಿದ್ದು?. ಇದಕ್ಕೇನಂತೀರಿ ಪಾರ್ವತಿ?
ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ಲವೇ?
ಅಧಿಕಾರದಲ್ಲಿದ್ದಾಗ ಉರವಣಿಗೆ ಮಾಡಿ ಅಧಿಕಾರ ಕಳೆದುಕೊಂಡವರನ್ನು ನಾವು ಕೇವಲ ಹೆಣ್ಣು ಎಂಬ ಕಾರಣಕ್ಕೆ ಗೌರವಿಸಬೇಕೆ. ಹಾಗೆ ಗೌರವಿಸದಿದ್ದರೆ ನೀವು
’ಮೇಲ್ ಇಗೋ’ ಅಂತ ಬಿರುದು ನೀಡುತ್ತೀರಿ.

ಕೊನೆಯದಾಗಿ ಒಂದು ಸಾಲು

ಮುಪ್ಪು ಬಂದಿತಲ್ಲಾ, ತುಪ್ಪದ ಪಾಯಸ ಬಿಡಲಿಲ್ಲ
ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ
ದೊಪ್ಪನೆ ಬಿತ್ತಲ್ಲಾ

ಎಲ್ಲವೂ ಅಷ್ಟೇ,

ಸಸ್ನೇಹ
ಬಾಲ ಚಂದ್ರ

ಜಲಜನಕ 's picture
ಬುಧ, 25/11/2009 - 10:52 ರಂದು ಜಲಜನಕ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಮೊದಲು ರಾಂ ಭಟ್ಟ್....ನಂತರ

ಮೊದಲು ರಾಂ ಭಟ್ಟ್....ನಂತರ ರಾಮಚಂದ್ರ ಗೌಡ...ಅದನಂತರ ಯೆಡ್ಡಿ......'HOPE FOR THE BEST' ಅಂದ್ರೆ NEXT ರೆಡ್ಡಿ ಅಂತಾ ಅರ್ಥಾನಾ??????

ಪ್ರಶಾಂತ.ಪ's picture
ಮಂಗಳ, 24/11/2009 - 16:30 ರಂದು ಪ್ರಶಾಂತ.ಪ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಪಾರ್ವತಿ ಅವರೇ, ನಿಮ್ಮ ಬರವಣಿಗೆ

ಪಾರ್ವತಿ ಅವರೇ,
ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ. ಮಹಿಳೆಯರು ಬಲಿಪಶುಳಾಗುವದು ಖಂಡಿಸತಕ್ಕದ್ದು. ಆದರೆ ಶೋಭಾ ಕರಂದ್ಲಾಜೆ ಅವರನ್ನು ಹೆಣ್ಣೆಂದು ಬಲಿಪಶು ಮಾಡಲಿಲ್ಲ. ಅದು ರಾಜಕೀಯ ಕಾರಣ. ಆ ಜಾಗದಲ್ಲಿ ಯಾರೇ ಇದ್ದರೂ ಅವರನ್ನೂ ಎತ್ತಂಗಡಿ (ಯಡ್ಡಿ ಸಹ) ಮಾಡುತ್ತಿದ್ದರು.ಆದನ್ನೊಂದು ಬಿಟ್ಟು ಉಳಿದ ಮಾತುಗಳಲ್ಲಿ ಸತ್ಯಾಂಶವಿದೆ.

ಎಚ್.ಎಸ್. ಪ್ರಭಾಕರ's picture
ರವಿ, 22/11/2009 - 01:06 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಪಾರ್ವತಿ ಮೇಡಂ, `ಹೆಣ್ಣೆನ

ಪಾರ್ವತಿ ಮೇಡಂ, `ಹೆಣ್ಣೆನ ತಪ್ಪುಗಳನ್ನು ಜಗತ್ತಿಗೆ ಅರಿವಾಗುವಂತೆ ಮಾಡುತ್ತಾ, ಗಂಡಸಿನ ತಪ್ಪನ್ನು ಮಂದಲಿಗೆಯ ಕೆಳಗೆ ಮಡಿಚಿಡುವ ಪದ್ಧತಿ ಇನ್ನೂ ನಿಂತಿಲ್ಲ' ಈ ಮಾತನ್ನು ಒಪ್ಪುತ್ತೇನೆ.
ಉತ್ತರ ನಿಮಗೇ ಗೊತ್ತಿದೆ! ನೀವು ಉಲ್ಲೇಖಿಸಿರುವ `ಮಾಡು ಸಿಕ್ಕದಲ್ಲಾ; ಮಾಡಿನ ಗೂಡು ಸಿಕ್ಕದಲ್ಲಾ...' ಗೀತೆಯಲ್ಲೇ ಎಲ್ಲವೂ ಅಡಗಿದೆ!!
ಒಟ್ಟಾರೆ ಹೇಳಬೇಕೆಂದರೆ, ಸಾರ್ವಜನಿಕ ಜೀವನದಲ್ಲಿ ಒಂದು ಮಾತಿದೆ: `ಸೀಸರನ ಹೆಂಡತಿ ಎಂದೂ ಸಂಶಯಾತೀತಳಾಗಿರಬೇಕು' ಎಂದು! ಆದರೆ ನನ್ನ ದೃಷ್ಟಿಯಲ್ಲಿ ಇದು ಹೆಣ್ಣಿಗೆ ಎಷ್ಟು ಅನ್ವಯಿಸುವುದೋ ಗಂಡಿಗೂ ಅಷ್ಟೇ ಅನ್ವಯಿಸಬೇಕು.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 ಕೂಡಿಸು ಉತ್ತರ 1
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಪಾರ್ವತಿ.ಜಿ.ಆರ್ ಪಾರ್ವತಿ.ಜಿ.ಆರ್
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, , ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,
ಇವರ ವಿಸ್ಮಯ ಪುಟ