ದಿನಚರಿ..

ಬರೆದವರು: ಉಮಾಶಂಕರ ಬಿ.ಎಸ್ - ಕಳುಹಿಸಿದ ದಿನ 19 November 2009

ಮುಸ್ಸಂಜೆಯಲಿ ದುಡಿದು ಮನೆಗೆ ಬಂದಾಗ
ಬಾಗಿಲಲಿ ನನ್ನವಳ ಮಲ್ಲಿಗೆಯ ನಗು
ಹಬೆಯಾಡುವ ಬಿಸಿ ಕಾಫಿ
ಕೈಯಲ್ಲಿ ಟಿ. ವಿ. ಯ ರಿಮೋಟು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಆಧುನಿಕ ಸರ್ವಜ್ನ

ಕೈಲೇಕೆ ಲ್ಯಾಪ್ ಟಾಪು?
ಕಿವಿಯಲ್ಲೇಕೆ ಮೊಬೈಲು ಬಿಟ್ಟಾಕಿ ಈ ಐಲು ಪೈಲು
ಇತ್ಯಾದಿ ಬೈಗುಳಗಳ ಸಾಲು
ಮಡದಿಯ ಬಾಯಿಂದ ಮುತ್ತುದುರಲು
ಕರ್ಣಗಳ ಕೈಯಿಂದ ಮುಚ್ಚಿಕೊ ಎಂದ ಆಧುನಿಕ ಸರ್ವಜ್ನ

ಗಂಟೆಯಾಯ್ತು ಹತ್ತು
ಕಣ್ಣುರೆಪ್ಪೆಗಳು ಕೂಡಿಕೊಳ್ಳುವ ಹೊತ್ತು
ಕಣ್ಮುಚ್ಚಲು ಬಾಸಿನಿಂದ ಫೋನು ಬತ್ತು
ತಲೆಯಾಡಿಸಿ ಮಲಗಲು ನಿದ್ದೆಹಾರಿ ಹೋಗಿತ್ತು
ಹಾಸಿಗೆಯಲಿ ಹೊರಳಾಡಿ ಬೆಳಕು ಹರಿದಿತ್ತು ಆಧುನಿಕ ಸರ್ವಜ್ನ

ಸರ್ವಜ್ನನ ಕ್ಷಮೆ ಕೋರಿ.......

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಎಚ್.ಎಸ್. ಪ್ರಭಾಕರ's picture
ಶನಿ, 21/11/2009 - 01:14 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಕೊನೆಗೂ ಕಣ್ಣ ರೆಪ್ಪೆಗಳು

ಕೊನೆಗೂ ಕಣ್ಣ ರೆಪ್ಪೆಗಳು ಕೂಡಿಕೊಳ್ಳಲಾಗದೆ `ಟಾಪು ಲ್ಯಾಪ್ಸಾಗಿತ್ತೇ ಸರ್ವಜ್ಞ? ಆಧುನಿಕತೆ ಮಹಿಮೆ ಅಯ್ಯೋ...ಪಾಪ!!

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
6 + 11 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಉಮಾಶಂಕರ ಬಿದರಕೋಟೆ ಸಣ್ಣೇಗೌಡ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content