"""""....ಟೈಮ್ ಎಷ್ಟಾಯ್ತು...."""""
.
.
.
ಒಮ್ಮೆ ನಮ್ಮ ಗುಂಡಣ್ಣ ಯಾವುದೋ ಕೆಲಸದ ಮೇಲೆ ಬೇರೆ ಊರಿಗೆ ಹೋಗ್ತಾಯಿದ್ದ. ಆದರೆ ಅವನು ತನ್ನ ವಾಚ್ ನ್ನು ಮನೆಯಲ್ಲೇ ಮರೆತು ಬಂದಿದ್ದ. ಸಮಯ ಎಷ್ಟಾಗಿರಬಹುದು ಅಂತ ತಿಳಿದುಕೊಳ್ಳಲು..
ಕೈಯಲ್ಲೊಂದು ದೊಣ್ಣೆ ಹಿಡಿದು ಕೊಂಡು ನಿಂತಿದ್ದ , ಅರೆಹುಚ್ಚನಂತಿರುವ ವ್ಯಕ್ತಿಯನ್ನು "ಟೈಮ್ ಎಷ್ಟಾಯ್ತು" ಸರ್. ಎಂದು ವಿಚಾರಿಸಿದ..
ಟೈಮ್ ಕೇಳಿದ್ದ ತಡ ಆ ವ್ಯಕ್ತಿ , ತನ್ನ ಕೈಲಿದ್ದ ದೊಣ್ಣೆಯಿಂದ ಗುಂಡಣ್ಣನ ತಲೆಗೊಂದು " ಢಣ್ " ಎಂದು ಬಲವಾದ ಏಟು ಕೊಟ್ಟು " ಒಂದ್ " ಗಂಟೆ ಆಯ್ತು ಎಂದು ಹೇಳಿದ..
ಗುಂಡಣ್ಣನಿಗೆ ತಾನೆಲ್ಲಿದ್ದೇನೆ ಅಂತ ತಿಳಿದುಕೊಳ್ಳಲಿಕ್ಕೇ.. ಎರಡು ನಿಮಿಷ ಬೇಕಾಯ್ತು..
ಆದರೆ ಮನಸ್ಸಿನಲ್ಲಿಯೇ ಏನೋ.. ಆಲೋಚಿಸಿ ಹ್ಹ್...ಹ್ಹ್..ಹ್ಹಾ... ಎಂದು ನಗುತ್ತಾ.. ತಾನು ಬಂದ ದಿಕ್ಕಿನಲ್ಲಿಯೇ.. ವಾಪಾಸ್ ಹೋಗುತ್ತಿಲ್ಲವಲ್ಲ ಅಂದು ಸರಿಯಾಗಿ ಕನ್ ಫರ್ಮ್ ಮಾಡಿಕೊಂಡು ಮುಂದೆ ಹೋದ..!
.
ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ದಾರಿಹೋಕನೊಬ್ಬ "ಅಲ್ಲಾ... ಸರ್ ಅವನು ನಿಮ್ಮನ್ನು ಅಷ್ಟು ಜೋರಾಗಿ ಹೊಡೆದರು ನೀವು ಒಂದು ಮಾತು ಬೈಯದೇ ನಗತಾ ಹೋಗ್ತಿದ್ದೀರಲ್ಲಾ " ಅಂತ ಆಶ್ಚರ್ಯದಿಂದ ಕೇಳಿದ.
.
ಅದಕ್ಕೆ ಗುಂಡಣ್ಣ ನಗುತ್ತಾ ಹೇಳಿದ " ಸದ್ಯ ನಾನು ಅವನ ಬಳಿ ಒಂದ್ ಗಂಟೆ ಮುಂಚೆ ಟೈಮ್ ಕೇಳಲಿಲ್ವಲ್ಲ ಅದಕ್ಕೆ ಖುಷಿ ಆಯ್ತು.. ಆ ದೊಣ್ಣೆಯಿಂದ ಒಂದು ಏಟು ತಿಂದ ನನಗೆ ಸುಧಾರಿಸಿಕೊಳ್ಳಲು ಸಾಕು ಸಾಕಾಯಿತು. ಅಂತಹುದರಲ್ಲಿ ಇವನ ಬಳಿ ಹನ್ನೆರಡು ಗಂಟೆಗೆ ಟೈಮ್ ಕೇಳಿ ಹನ್ನೆರಡು ಬಾರಿ ಹೊಡೆಸಿಕೊಂಡವರೆಲ್ಲ.. ಈಗ ಯಾವ ಸ್ಥಿತಿ ತಲುಪಿರಬಹುದು" Mostly ಅವರೆಲ್ಲಾ ಸತ್ತೇ ಹೋಗಿರಬಹುದೇನೊ..ಹ್ಹ್...ಹ್ಹ..ಹ್ಹಾ ..!."

ಗುಡ್ ಜೋಕು................
ಗುಡ್ ಜೋಕು................
ಧನ್ಯವಾದಗಳು ಸರ್..
ಧನ್ಯವಾದಗಳು ಸರ್..
ನಿಮ್ಮ ಅನಿಸಿಕೆ ತಿಳಿಸಿ