ಇಂದಿರೆಯ ಪತಿ ಫಿರೋಜ್ "ಖಾನ್"... ಫಿರೋಜ್ "ಗಾಂಧಿ"ಯಾಗಿ ಬದಲಾವಣೆಯಾದ ಹಿಂದಿರುವ ರೋಚಕ ಕಥೆ..???

ಬರೆದವರು: Ullas Hindustani - ಕಳುಹಿಸಿದ ದಿನ 13 November 2009

ವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಚಂಚಲ ಚಿತ್ತದ ಇಂದಿರಾ ಪ್ರಿಯದರ್ಶಿನಿ ಗಾಂಧಿ , ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ಫಿರೋಜ್‌ ಖಾನ್‌ನನ್ನು ಪ್ರೇಮಿಸಿ, ಲಂಡನ್‌‌ನ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು. ಇದು ನೆಹರುಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು. ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂಬುದಾಗಿ ಬದಯಿಸಲಾಗಿತ್ತು, ಅಷ್ಟೇ ಅಲ್ಲದೆ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಳು. ಫಿರೋಜ್ ಖಾನ್‌ನನ್ನು ಮದುವೆಯಾಗಿದ್ದು, ನೆಹರುರವರನ್ನು ಸಹಜವಾಗಿಯೇ ಕೆಂಡಮಂಡಲರನ್ನಾಗಿಸಿತ್ತು. ಆದ್ದರಿಂದ ಅವರಿಬ್ಬರನ್ನು ಕೂಡಲೇ ಭಾರತಕ್ಕೆ ಕರೆಯಿಸಿ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಿದರು. ಇಂತಹ ಸಂಗತಿಗಳನ್ನು ರಹಸ್ಯವಾಗಿಡುವಲ್ಲಿ ಜವಾಹರಲಾಲ್ ನೆಹರು ತುಂಬಾ ಮುತುವರ್ಜಿ ವಹಿಸುತ್ತಿದ್ದರು.

'ಫಿರೋಜ್ ಖಾನ್‌' ಅವರ ತಂದೆಯ ಹೆಸರು 'ನವಾಬ್ ಖಾನ್' ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ, ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು. ಆಕೆಯ ಕುಟುಂಬದ ಹೆಸರು “ಗಾಂಡಿ”. ಫಿರೋಜ್ ಖಾನ್‌ನ ತಾಯಿ ಕುಟುಂಬದ “ ಗಾಂಡಿ “ ಎಂಬ ಹೆಸರನ್ನು ಬಳಸಿಕೊಂಡು ಇಂದಿರಾಗಾಂಧಿಯ ಮದುವೆ ಬಳಿಕ ಆತನ ಹೆಸರನ್ನು “ ಫಿರೋಜ್ ಗಾಂಧಿ “ ಎಂದು ಬದಲಾಯಿಸಿದವರು ನಮ್ಮ ನಿಮ್ಮೆಲ್ಲರ ನೆಚ್ಚಿನ 'ಜಾತ್ಯಾತೀತವಾದಿ'..? "ರಾಷ್ಟ್ರಪಿತ ‘ಮಹಾತ್ಮ’ ಗಾಂಧಿ"..!!.
ಇಷ್ಟೆಲ್ಲಾ ಆದರು , ಇಂದಿರಾ ಪತಿ ಫಿರೋಜ್ ಖಾನ್‌‌ ಅವರನ್ನು ಪ್ರಧಾನಿ ನಿವಾಸ ತೀನ್‌‌‌ಮೂರ್ತಿ ಭವನದೊಳಗೆ ಕಾಲಿಡದಂತೆ ನೆಹರು ಕಟ್ಟಪ್ಪಣೆ ಹೊರಡಿಸಿದ್ದರು. ಇಂತಹ ಜಂಜಾಟಗಳ ನಡುವೆ ಇಂದಿರಾ ಮತ್ತು ಫಿರೋಜ್ ಕಾನೂನು ಬದ್ಧವಾಗಿ ಅಲ್ಲದಿದ್ದರೂ ಅವರು ಪ್ರತ್ಯೇಕವಾಗಿಯೇ ವಾಸಿಸತೊಡಗಿದ್ದರು.
ತನ್ನ ವೈವಾಹಿಕ ಜೀವನದ ಆನಂದವನ್ನು ಪಡೆಯಲು ಸಾಧ್ಯವಾಗದಿದ್ದುದರಿಂದ ತನಗಾದ ವೈಯಕ್ತಿಕ ನಷ್ಟವನ್ನು ತುಂಬಿಕೊಳ್ಳಲು ಫಿರೋಜ್ ಖಾನ್ ಮತ್ತೊಂದು ಮದುವೆಯಾಗುವ ಸಿದ್ದತೆ ನಡೆಸತೊಡಗಿದರು..! ಆದರೆ ದುರದೃಷ್ಟವಶಾತ್ ಮದುವೆಯ ಸಿದ್ದತೆ ನಡೆಸಿದ ಕೆಲವೇ ದಿನಗಳಲ್ಲಿ ಅವರು 'ನಿಗೂಢ'ವಾಗಿ ಸಾವನ್ನಪ್ಪಿದರು...!!! 1960ರಲ್ಲಿ ಫಿರೋಜ್ ಸಾವನ್ನಪ್ಪಿದ್ದರು ಕೂಡ ಈ ಸಾವು ಕೂಡ ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ಮತ್ತೊಂದು ಮದುವೆಯ ಸಿದ್ಧತೆಯೇ ಫಿರೋಜ್ ಪಾಲಿಗೆ ಮುಳುವಾಯಿತೇ...???.. ಎಂಬುದು ನನ್ನ ಪ್ರಶ್ನೆ ನೀವೇನಂತೀರಿ....!!

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಅನಿವಾಸಿ ಕನ್ನಡತಿ's picture
ರವಿ, 22/11/2009 - 00:13 ರಂದು ಅನಿವಾಸಿ ಕನ್ನಡತಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
'ಜಾತ್ಯಾತೀತವಾದಿ'..?

'ಜಾತ್ಯಾತೀತವಾದಿ'..? "ರಾಷ್ಟ್ರಪಿತ ‘ಮಹಾತ್ಮ’ ಗಾಂಧಿ"..!!....... ನೀವು ಯಾರಿಗೆ ಈ ರೀತಿ ಹೇಳುತ್ತಿರುವಿರಿ ಅನ್ನೋ ಕನಿಶ್ಠ ಪ್ರಜ್ಞೆ ಉಂಟ ನಿಮಗೆ.. ವ್ಯಂಗ ಮಾತುಗಳು ಹೀಗೆ ಗಾಂಧಿ ಅವರ ಬಗ್ಗೆ ಆಡೊದು ಸರಿಯಲ್ಲ. ನನ್ನ ವಯಸ್ಸಿನ ಅರ್ಧ ಭಾಗವು ಆಗಿರಲಿಕ್ಕಿಲ್ಲ ನಿಮಗೆ. ಗಾಂಧಿ ಇಡೀ ಜೀವನ ಇದ್ದ ಹಾಗೆ ನಿಮಗೆ ೧ ದಿನ ಇರಲಿಕ್ಕೆ ಆಗುವುದೇ. ಅವರ ಜೀವನದ ಮಹತ್ವ ಅರಿಯಾದೇ ಯಾರೋ ಹೇಳಿದ ದೇಶ ವಿಭಜನೆಯ ಕಥೆ ಕೆಳಿ ಹೀಗೆ ನಿಮ್ಮ ವಿಚಾರವನ್ನು ಮನ್ಡಿಸುವುದು ತಪ್ಪು. ನೀವೆಲ್ಲ ಶಿಕ್ಷಿತರುಗಳ ಹಾಗೆ ಇದ್ದೀರಿ. ವಿವೇಚಿಸೋ ಸೌಜನ್ಯ ಕೂಡ ಇಲ್ಲವ ನಿಮಗೆ. ಜಾತಿ ಧರ್ಮವನ್ನು ಮೀರಿ ಬೆಳೆದ ಮಹಾಪುರುಷಾರವರು. ಸ್ವಾಮಿ ವಿವೇಕಾನಂದರ ನಂತರ ಹಿಂದೂ ದೇಶ ಕಂಡ ದೇವ ಮಾನವ. ನಿಮಗೆ ನೋವಾಗಿದ್ದಲ್ಲಿ ಕ್ಷಮಿಸಿ ನಿಮ್ಮ ಅಕ್ಕನ ವಯಸು ನನ್ನದು ನನ್ನ ಅನುಭವ ಹೇಳಿರುವೆ. ಒಂದು ಮಾತು ದಯವಿಟ್ಟು ನೀವು ಹೀಗೆ ಸಹನೀಯವಲ್ಲದ ಅಭಿಪ್ರಾಯಗಳನ್ನ ಮಂಡಿಸುವುದು ನಿಲ್ಲಿಸಿ. ನನಗೆ ನಿಜಕ್ಕೂ ದುಃಖವಾಗಿದೆ ನಿಮ್ಮ ಈ ಕೆಟ್ಟ ಆಲೋಚನೆಗಳಿಂದ.

Ullas Hindustani's picture
ರವಿ, 22/11/2009 - 11:51 ರಂದು Ullas Hindustani ಅವರು ಹೇಳುತ್ತಾರೆ
ಮೈ ಡಿಯರ್ ಸಿಸ್ಟರ್

ಮೈ ಡಿಯರ್ ಸಿಸ್ಟರ್ ಕನ್ನಡತಿಯವರೆ...
ಮೊದಲನೆಯದಾಗಿ ನನ್ನ ಬರಹದಿಂದ ನಿಮ್ಮ ಮನಸ್ಸಿಗೆ ದುಃಖ ಆಗಿರುವುದಕ್ಕೆ ಕ್ಷಮೆ ಇರಲಿ. ಸತ್ಯ ಯಾವಾಗಲು ಕಠೋರವಾಗಿರುವುದರಿಂದ ಈ ರೀತಿ ದುಃಖ ಆಗುವುದು ಸಹಜ. ನಿಮಗದು (ಅಂಧ ಅಭಿಮಾನಿಗಳಿಗೆ) ಸಹನೀಯವಲ್ಲದ ಅಭಿಪ್ರಾಯವಾಗಿರಬಹುದು ಆದರೆ ಅದು ಸುಳ್ಳಂತು ಅಲ್ಲ. ನೀವಂದಂತೆ ಅವರು ಮಹಾ ಜಾತ್ಯಾತೀತವಾದಿಯಾಗಿದ್ದರೆ ನವಾಜ್ ಖಾನ್ ರ ಮಗನಾದ ಫಿರೋಜ್ ಖಾನ್ ನನ್ನು ಹಾಗೇ ಒಪ್ಪಿಕೊಳ್ಳಬಹುದಾಗಿತ್ತು. ಫಿರೋಜ್ ಗಾಂಧಿ ಎಂದು ಬದಲಾಯಿಸುವ ಅವಶ್ಯಕತೆಯಾದರು ಏನಿತ್ತು. ತಪ್ಪು ದೇವರೇ ಮಾಡಿದರು ಇಲ್ಲಾ ದೇವ ಮಾನವನೇ(ನಿಮ್ಮ ಪ್ರಕಾರ) ಮಾಡಿದರೂ ತಪ್ಪು ತಪ್ಪೇ.
ನಾನು ನನ್ನ ಲೇಖನದಲ್ಲಿ ಬರೆದ ವಿಚಾರಗಳು ನನ್ನ ಕಲ್ಪನೆಯ ಮಾತುಗಳಲ್ಲ , ಸುಧೀರ್ಘ ಅವಧಿಯವರೆಗೆ ನೆಹರೂರವರ ಆಪ್ತ ಕಾರ್ಯದರ್ಶಿಯಾಗಿದ್ದ M.O. Mathai ರವರು ತಮ್ಮ ಆತ್ಮ ಚರಿತ್ರೆಯಾದ "Reminiscences of the Nehru Age" ನಲ್ಲಿ ಬರೆದಿರುವ ವಿಚಾರವಾಗಿದೆ.
ಗಾಂಧೀ ಎಂದರೆ ನನಗೂ ಅಭಿಮಾನವಿದ್ದಿತ್ತು . ಆದರೆ "ದೊಡ್ಡವರಾದ ಹಾಗೆ ನಮ್ಮ ಅಜ್ನಾನ ತಿಳಿಯುತ್ತದೆ" ಅನ್ನೋ ಮಾತಿನಂತೆ ಗಾಂಧಿ ಬಗ್ಗೆ ಹೆಚ್ಚು ಹೆಚ್ಚು ತಿಳಿದಂತೆಲ್ಲ ಅವರು ತುಚ್ಚವಾಗಿ ಕಾಣಿಸಲಾರಂಭಿಸಿದರು. ತಮ್ಮ ಸ್ವ ನಿಗ್ರಹ ಶಕ್ತಿಯ ತಾಕತ್ತನ್ನು ತೋರಿಸಲು ವಯಸ್ಸಿಗೆ ಬಂದ ಹುಡುಗಿಯರನ್ನು ತನ್ನ ಅಕ್ಕಪಕ್ಕದಲ್ಲಿ ಬೆತ್ತಲೆಯಾಗಿ ಮಲಗಿಸಿಕೊಂಡದ್ದನ್ನು ನೀವು ಸಹಿಸಿಕೊಳ್ಲುತ್ತೀರಾ..? ಅವರು ಆ ಹೆಣ್ಣು ಮಕ್ಕಳನ್ನು ಸ್ಪರ್ಶಿಸಲಿಲ್ಲ ಎನ್ನುವ ಕಾರಣಕ್ಕೆ ನಿಮ್ಮಂತ ಅಂಧ ಅಭಿಮಾನಿಗಳಿಗೆ ಆಗಲು ಗಾಂಧಿ ಗ್ರೇಟ್ ಆಗಿ ಕಾಣಿಸುತ್ತಾರೆ. ಆದರೆ ಆ ಹೆಣ್ಣು ಮಕ್ಕಳ ಮನಸ್ಸು ಅದೆಷ್ಟು ಯಾತನೆ ಅನುಭವಿಸಿರ ಬಹುದೆಂದು ನೀವು ಒಬ್ಬ ಹೆಣ್ಣಾಗಿರುವುದರಿಂದ ಸ್ವಲ್ಪ ಯೋಚಿಸಿ ನೋಡಿದರೆ ಆ ಹೆಣ್ಣು ಮಕ್ಕಳ ಮನಸ್ಥಿತಿ ನಿಮಗೆ ಸರಿಯಾಗಿಯೇ ಅರ್ಥವಾಗುತ್ತದೆ .
ಕೆಲವೊಂದು ವಿಚಾರಗಳಲ್ಲಿ ಗಾಂಧೀಜಿಯ ಬಗ್ಗೆ ಈಗಲೂ ಅಭಿಮಾನವಿರುವುದರಿಂದ ನಾನಿದನ್ನು ಗಾಂಧಿಯ ಚಾರಿತ್ರ್ಯ ಹರಣದ ವೇದಿಕೆಯಾಗಿ ಬಳಸಿಕೊಳ್ಳಲು ಬಯಸುವುದಿಲ್ಲ. ಆದ್ದರಿಂದ ನನ್ನ ವಾದವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ.
ಕೊನೆಯ ಮಾತುಃ ಇತಿಹಾಸದಲ್ಲಿರುವ ನೈಜ ವಿಚಾರವನ್ನು ಅರಿಯಲು ಕಣ್ಣಿಗೆ ಸರಿದಿರುವ ಅಂಧಾಭಿಮಾನದ ಪೊರೆಯನ್ನು ಸರಿಸಿಕೊಂಡು ನಿರ್ಭಾವುಕರಾಗಿಯೇ ಓದಬೇಕಾಗುತ್ತದೆ.

ಇಂತಿ ತಮ್ಮ ಪ್ರೀತಿಯ ಸಹೋದರ
ಉಲ್ಲಾಸ್ ಹಿಂದುಸ್ತಾನಿ.

k.m.basavarajappa's picture
ಸೋಮ, 16/11/2009 - 19:12 ರಂದು k.m.basavarajappa ಅವರು ಹೇಳುತ್ತಾರೆ
ಜಾತ್ಯಾತೀತೆ ಅನ್ನೊದು ಕೇವಲ

ಜಾತ್ಯಾತೀತೆ ಅನ್ನೊದು ಕೇವಲ ಮಾತಾಡೋ ಸರಕು ಆಚರಣೆ ವಿಚಾರ ಅಲ್ಲ ಅಲ್ವೆ?

ಉಮಾಶಂಕರ ಬಿ.ಎಸ್'s picture
ಶುಕ್ರ, 13/11/2009 - 22:34 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ಹಾಗಾದರೆ ಮಗ ಸಂಜಯ ಗಾಂಧಿ ಸತ್ತ

ಹಾಗಾದರೆ ಮಗ ಸಂಜಯ ಗಾಂಧಿ ಸತ್ತ ರೀತಿ.........????????!!!!!!!!!!!.....,,.,.,,

ಸಂತೋಶ ಇನಾಮದಾರ್'s picture
ಶುಕ್ರ, 13/11/2009 - 17:43 ರಂದು ಸಂತೋಶ ಇನಾಮದಾರ್ ಅವರು ಹೇಳುತ್ತಾರೆ
, ಅನ್ನೋದೇನು ಗುರುವೆ,

Smile , ಅನ್ನೋದೇನು ಗುರುವೆ, ಮಾಡಿದ್ದುಣ್ಣೋ ಮಹರಾಯ.. ನೆಹರು ಮನೆತನದ ಸಿಕ್ಕುಗಳನ್ನು ಎಣಿಸಿದವರಾರು?

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
9 + 5 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
Ullas Hindustani
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Hi I am Ullas Hindustani. I think am a great person compare to You....!!! Ha...ha..ha Just for a joke, Don't feel bad OK..
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content