ಪ್ರಿಯ ವಿಸ್ಮಯ ನಗರಿಗರೆ,
ಈ ಕೆಳಗಿನ ಕವನ ದಿನಂಕ-09-11-2009 ರಂದು ಪಿಸುಮಾತು ವಿಭಾಗದಲ್ಲಿ ಅರ್ಧವಷ್ಟೇ ಪ್ರಕಟವಾಗಿತ್ತು.
ಈಗ ಕವನ ವಿಭಾಗದಲ್ಲಿ ಪೂರ್ತಿ ಪ್ರಕಟಿಸಿದ್ದೇನೆ
ಬೆಟ್ಟಗಳು ಬರಿದಾಗಿ
ರಸ್ತೆಗಳು ಬಸಿರಾದವು
ನೆಲಕುರುಳಿದವು
ಅರಳಿ ನೆರಳನೀವ ಮರ
ಕಂದಮ್ಮನ ಹಾಲು!
ಹಾಲಹಲ
ನಂಜಾದವು ಸಸ್ಯ ಸಂಕುಲ
ಸೃಷ್ಟಿಸಿದ ಸಂಜಾತನಿಗೇ ಸೆಡ್ಡು
ಹಾಹಕಾರವೆಬ್ಬಿಸಿದೆ ಗುಟುಕು ಜಲ
ಸ್ವಾರ್ಥದ ತಿಮಿರವೇ ಅಮರ!!
ಅಮ್ಮನ ಪಾಲನೆ
ಕಂದನ ನಲ್ನುಡಿ
ಅಪ್ಪನ ಹಿತನುಡಿ
ಆಸ್ವಾಧಿಸುವ ಮುಗ್ದ ಮನಗಳಿಗೆ ಬರ!
ಪ್ರೇಮಿಯಲ್ಲಿ ಪ್ರೀತಿಯಿಲ್ಲ
ಸ್ನೇಹದಲ್ಲಿ ಸ್ವಾರ್ಥ
ಕುರುಡು ಕಾಂಚಾಣದ ಮುಂದೆ
ಉಳಿದಿದ್ದೆಲ್ಲಾ ವ್ಯರ್ಥ
ಕಾಲನ ಕಟ್ಟೆಯಲಿ
ಸೊಟ್ಟಗಾದ ಪ್ರಸ್ತುತದಲ್ಲಿ
ನೆಟ್ಟಗಾಗುವ ವ್ಯವಧಾನವೆಲ್ಲಿ?
ಕಾಲನಿಗೂ ಅವಸರ
ದಾಂಗುಡಿಯ ಧಾವಂತ!!
ಪ್ರಕೃತಿಯ ಪ್ರಹಾರದ ಮುಂದೆ
ಹುಲು ಮಾನವನ ಪಂಥ!

ಕಾಲನಿಗೂ ಅವಸರವಲ್ಲ ಉಮಾ...ಕಾಲನ
ಕಾಲನಿಗೂ ಅವಸರವಲ್ಲ ಉಮಾ...ಕಾಲನ ಬಳಿಗೇ ನಾವು ದಾಂಗುಡಿಯಿಡುತ್ತಾ ಧಾವಿಸಲು ಮಾಡಿಕೊಂಡಿರುವ ಅವಸರವಿದು...! ಪರವಾಗಿಲ್ಲ!! ನೀನೂ ನನ್ನ ಹಾಗೆಯೇ ಪರಿಸರ ಪ್ರೇಮಿ!?
ನಿಮ್ಮ ಅನಿಸಿಕೆ ತಿಳಿಸಿ