ಒಮ್ಮೆ ರಾಂಪಣ್ಣನಿಗೆ ಫಾರಿನ್ ಟೂರ್ ಹೋಗೊ ಅವಕಾಶ ಸಿಗ್ತು..!
ರಾಂಪಣ್ಣ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಒಬ್ಬ ವಿಧ್ಯಾರ್ಥಿ, ಅವನ ಗುರು, ಪೈಲೆಟ್ ಹಾಗು ರಾಂಪಣ್ಣ ಸೇರಿದಂತೆ ಒಟ್ಟು ನಾಲ್ಕು ಜನ ಮಾತ್ರ ಇದ್ರು. ಅಚಾನಕ್ಕಾಗಿ ವಿಮಾನದಲ್ಲಿ ಏನೋ ತೊಂದರೆ ಕಾಣಿಸಿಕೊಳ್ತು..!!
ಆಗ ಪೈಲೆಟ ಈ ವಿಮಾನ ಇನ್ನು ಐದು ನಿಮಿಶದಲ್ಲಿ ಸ್ಪೋಟ ಆಗುತ್ತೆ..! ಈ ರೂಮ್ ನಲ್ಲಿ 3 ಪ್ಯಾರಾಚೂಟ್ ಇದೆ ನಾನ್ ಒಂದ್ ತಗೊಂಡ ಹಾರ್ ತೀನಿ ನೀವ್ ಏನ್ ಬೇಕಾದ್ರು ಮಾಡ್ಕೊಳ್ಳಿ.. ಅಂತ ಹೇಳಿ ಒಂದನ್ನ ತಗೊಂಡು ಹಾರಿದ.
ಆಗ ರಾಂಪಣ್ಣ ತಡಮಾಡಿದ್ರೆ ಕೊನೆಗೆ ಪ್ಯಾರಾಚೂಟ್ ತನಗೆ ಸಿಗೊಲ್ಲ ಅಂದುಕೊಂಡು ಆ ರೂಮ್ ನಲ್ಲಿದ್ದದ್ದೊಂದನ್ನು ತಗೊಂಡು ಹಾರಿದ. ಆಗ ಗುರುಗಳು ತನ್ನ ವಿಧ್ಯಾರ್ಥಿಗೆ "ನನಗೆ ವಯಸ್ಸಾಗಿದೆ. ನೀನಿನ್ನು ಚಿಕ್ಕ ಹುಡುಗ ಅಲ್ಲಿರುವ ಒಂದು ಪ್ಯಾರಾಚೂಟನ್ನು ನೀನು ತಗೆದುಕೊಂಡು ಹಾರು" ಎಂದರು.
ಆಗ ವಿಧ್ಯಾರ್ಥಿಯು "ಇಲ್ಲ ಗುರುಗಳೆ ನೀವು ದೊಡ್ಡ ವಿಧ್ವಾಂಸರು ನನ್ನಂತ ಅನೇಕ ವಿಧ್ಯಾರ್ಥಿಗಳಿಗೆ ನಿಮ್ಮ ಅವಶ್ಯಕತೆ ಇದೆ ನೀವೆ ಹೋಗಿ" ಎಂದು ಹೇಳಿದನು. ಆದರೆ ಗುರುಗಳು ಹೇಗೋ ತನ್ನ ವಿಧ್ಯಾರ್ಥಿಯನ್ನು ಒಪ್ಪಿಸಿದರು. ವಿಧ್ಯಾರ್ಥಿಯು ಕೊನೆಯದಾಗಿ ತನ್ನ ಗುರುವಿಗೆ ವಂದಿಸಿ ಪ್ಯಾರಾಚೂಟ ಇರುವ ರೂಮಿಗೆ ಹೋದನು. ಆದರೆ ಆಶ್ಚರ್ಯ ಎಂಬಂತೆ ಅಲ್ಲಿ ಎರಡು ಪ್ಯಾರಾಚೂಟ ಇತ್ತು..! ಹಾಗದರೆ
ನಮ್ಮ ರಾಂಪಣ್ಣ ತಗೊಂಡ್ ಹಾರಿದ್ದೇನು....????
....
........
...........
.............
................" ಆ ವಿಧ್ಯಾರ್ಥಿಯ ಸ್ಕೂಲ್ ಬ್ಯಾಗ್.." ಹ್ಹ..ಹ್ಹ...ಹ್ಹ..ಹ್ಹ...

ಸುಪೆರ್
ಸುಪೆರ್
ನಿಮ್ಮ ಅನಿಸಿಕೆ ತಿಳಿಸಿ