ಭಾಗ - 1 --> "ವಂದೇ ಮಾತರಂ" ನಮ್ಮ ರಾಷ್ಟ್ರಗೀತೆಯಾಗಬೇಕಿತ್ತೆ...? - ೧
ಮುಂದುವರಿಯುತ್ತ...
"ವಂದೇ ಮಾತರಂ" ಗೀತೆ ಬಂಕಿಮ್ ಚಂದ್ರ ಚಾಟರ್ಜಿ ರವರಿಂದ ನವಂಬರ್ ೭, ೧೮೭೫ ರಲ್ಲಿ ಸಂಸ್ಕ್ರತ ಮತ್ತು ಬೆಂಗಾಳಿ ಮಿಶ್ರಿತ ಸಾಲುಗಳಲ್ಲಿ ರಚಿತವಾಗಿತ್ತು. ಅಂದು ಶೈಶವ್ಯದಲ್ಲಿ ಇದ್ದ ಭಾರತದ ಸ್ವಾತಂತ್ರ ಅಂದೋಲನಕ್ಕೆ ಈ ಗೀತೆಯೇ ಒಂದು ಪ್ರೇರಣೆ. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತ ಜನರಿಗೆ ಸ್ಪೂರ್ತಿಯ ಸಾಲು... ೧೮೯೬ ರಲ್ಲಿ ನೆಡೆದ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಈ ಗೀತೆಯನ್ನು ಪ್ರಥಮ ಬಾರಿ ಹಾಡಲಾಯಿತು. ಈ ಗೀತೆ ೧೮೭೬ ರಲ್ಲೇ ರಚಿತಗೊಂಡಿದ್ದರೂ, ೬ ವರ್ಷಗಳ ಸುದೀರ್ಘ ಸಮಯದ ನಂತರ, ಬ್ರಿಟಿಷ್ ರಾಜ್ ಸರ್ಕಾರದ ನಿಷೇಧದ ಭೀತಿಯ ನೆರಳಿನಲ್ಲಿ ಚಾಟರ್ಜಿಯವರ ಪುಸ್ತಕ "ಆನಂದ ಮಠ" ರಲ್ಲಿ ೧೮೮೨ರ ಇಸವಿಯಂದು ಪ್ರಕಾಶಿತಗೊಂಡಿತ್ತು.
"ವಂದೇ ಮಾತರಂ" ನ ಸಾಲುಗಳೇ ಅಷ್ಟು ಪರಿಣಾಮಕಾರಿಯಾಗಿದ್ದವೆಂದರೆ ಈ ಗೀತೆ ಬ್ರಿಟಿಷರ ವಿರುದ್ಧದ ಆರಂಭಗೊಂಡಿದ್ದ ಸ್ವಾತಂತ್ರ ಅಂದೋಲನದ ಒಂದು ರಾಷ್ಟ್ರೀಯ ಕರೆಯೇ ಆಗಿಹೋಯಿತು. ಬೆಂಗಾಳದಲ್ಲಿ ಆಗ ಏಳುತ್ತಿದ್ದ ಪ್ರತಿಭಟನೆ, ಬೃಹತ್ ರಾಲಿ... ಅದು ಯಾವ ಮೂಲೆಯಾಗಿದ್ದರೂ ಸರಿ.., "ವಂದೇ ಮಾತರಂ" ನ ಜಯಘೋಷವಿರದೆ ಇರುತಿರಲಿಲ್ಲ. ಅಂತೂ ಬ್ರಿಟಿಷರಿಗೆ ಇದರ ಬಿಸಿ ಕೊನೆಗೂ ತಟ್ಟಿ ಅಂದು ನಡೆಯುತ್ತಿದ್ದ ಸಮಾರಂಭಗಳಲ್ಲಿ ಈ ಗೀತೆಯ ಸಾಲುಗಳನ್ನು ಹಾಡದಂತೆ ನಿಷೇಧ ಹೇರಿದ್ದಲ್ಲದೇ ಅದನ್ನು ಉಲ್ಲಂಗಿಸಿದವರಿಗೆ ಜೈಲು ಶಿಕ್ಷೆ ಸಹ ಜಾರಿಗೊಳಿಸಿದರು. ಅದಕ್ಕೆ ಏನೋ, ಇಂದು ಸಹ ಈ ಗೀತೆ ಭಾರತೀಯ ಹೃದಯಗಳಲ್ಲಿ ದೇಶ ಭಕ್ತಿ ಉಕ್ಕಿಸುವ ಮಹಾ ಮಂತ್ರವಾಗಿ ಸದಾ ಕಾಲ ನಿಂತಿದೆ.
ಸ್ವಾತಂತ್ರ ಪೂರ್ವದವರೆಗೂ ಭಾರತದ ರಾಷ್ಟ್ರಗೀತೆಯೆಂದೇ ಭಾವಿಸಲ್ಪಟ್ಟಿದ್ದ "ವಂದೇ ಮಾತರಂ" ಗೀತೆ ಕೊನೆಗೂ "ಜನ ಗಣ ಮನ..." ದ ಮುಂದೆ ತನ್ನ ಸ್ಥಾನ ಬಿಟ್ಟುಕೊಡಬೇಕಾಯಿತು. ಸ್ವತಂತ್ರ ಭಾರತದ ರಾಷ್ಟ್ರಗೀತೆಯನ್ನಾಗಿ ಅಯ್ಕೆಯಾಗಲು ಇವೆರೆಡು ಗೀತೆಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಾಗ ವಿವಾದಗಳ ನಡುವೆಯೇ "ಜನ ಗಣ ಮನ..." ಅಯ್ಕೆಯಾಗಿತ್ತು. "ವಂದೇ ಮಾತರಂ" ಗೀತೆಯಲ್ಲಿ ದೇಶಭಕ್ತಿಯ ಜೀವರಸ ತುಂಬಿ ಹರಿಯುತ್ತಿದ್ದರೂ ಅನ್ಯ ಧರ್ಮೀಯರು ಆ ಗೀತೆಯಲ್ಲಿ ಭಾರತ ಮಾತೆಯನ್ನು(ದೇಶವನ್ನು) "ದುರ್ಗ ಮಾತೆ" ಗೆ ಹೋಲಿಸಿದ್ದನ್ನು ಇಷ್ಟಪಟ್ಟಿರಲಿಲ್ಲ. ಗೀತೆಯಲ್ಲಿನ ಹಿಂದು ದೇವತೆಯ ಹೆಸರಿನ ಪ್ರಯೋಗ, "ಶಕ್ತಿ" ಸ್ವರೂಪದ ವರ್ಣನೆ ಮತ್ತು ಈ ಗೀತೆ ಮೊದಲಬಾರಿಗೆ ಪ್ರಕಟಗೊಂಡಿದ್ದ "ಅನಂದ ಮಠ" ಪುಸ್ತಕದ "ಅನ್ಯಧರ್ಮದ ವಿರುದ್ಧ ಭಾವನೆ/ಸಂದೇಶ"(!) ಬಿತ್ತುವ ನೆರಳು ಈ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಅಗದಿರಲು ಮೂಲ ಕಾರಣಗಳಾದವು.
(ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಗಳನ್ನು ಕ್ಲಿಕಿಸಿ: ಮಾಹಿತಿ-೧ ಮತ್ತು ಮಾಹಿತಿ-೨)
ವಿವಾದಗೊಳಪಟ್ಟ ಆ ಸಾಲುಗಳು ಹೀಗಿವೆ:
ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣಿ
ವಾಣಿ ವಿದ್ಯಾದಾಯಿನಿ, ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
೧೯೩೭ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಗೀತೆಯ ಬಗ್ಗೆ ಚರ್ಚೆ ಅರಂಭಿಸಿದಾಗ, ಮೊದಲೆರಡು ಪದ್ಯದ ಸಾಲುಗಳು (Stanza) ಮಾತೃ ಭೂಮಿಯ ವರ್ಣನೆ ಬಣ್ಣಿಸಲು, (ಇದರ ಬಗ್ಗೆ ಯಾರಿಗೂ ಅಭ್ಯಂತರವಿರಲಿಲ್ಲ...) ಮುಂದುವರೆದ ಭಾಗಗಳಲ್ಲಿ ಮಾತೃ ಭೂಮಿಯನ್ನು (ಅಂದರೆ ಭಾರತವನ್ನು) ಮಾತೆ ದುರ್ಗೆ ಗೆ ಹೋಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿತು. ಈ ಎಲ್ಲಾ ವಾದ-ವಿವಾದಗಳ ನಡುವೆ ಕೇವಲ ಮೊದಲೆರಡು ಪದ್ಯದ ಸಾಲುಗಳನ್ನು (Stanza) ಮಾತ್ರ ರಾಷ್ಟ್ರಗೀತೆಯ ಭಾಗವನ್ನಾಗಿ ಅಯ್ಕೆ ಮಾಡಲಾಯಿತು. ಇಂದು ಕೂಡ ಈ ಎರಡು ಪದ್ಯದ ಸಾಲುಗಳನ್ನು ಮಾತ್ರ "ಜನ ಗಣ ಮನ" ಮತ್ತು ೧೯೧೦ ರಲ್ಲಿ ಕವಿ ಇಕ್ಬಾಲ್ ರವರು ಬರೆದ " ಸಾರೆ ಜಹ ಸೇ ಅಚ್ಚಾ" ಗೀತೆಯ ಜೊತೆ ಅಧಿಕೃತವಾಗಿ ಉಳಿಸಿಕೊಳ್ಳಲಾಗಿದೆ.
ಭಾರತದ ಮೊದಲ ರಾಷ್ತ್ರಪತಿಯಾದ ಡಾ|| ರಾಜೇಂದ್ರ ಪ್ರಸಾದ್ ರವರು ಜನವರಿ ೨೪ ೧೯೫೦ ರಂದು ನೆಡೆದ ಮೊದಲ ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದಾಗ "ವಂದೇ ಮಾತರಂ" ಗೀತೆಯ ಬಗ್ಗೆ ಈ ಕೆಳಗಿನ ಮಾತುಗಳನ್ನು ಹೇಳಿದ್ದರು. (ನಂತರ ಇದನ್ನೇ ರಾಷ್ಟ್ರಗೀತೆಯ ಕುರಿತಾದ ಚರ್ಚೆಯ ಕೊನೆಯ ಮತ್ತು ಅಂತಿಮ ನಿರ್ಣಯ ಎಂದೇ ಭಾವಿಸಲಾಯಿತು):
"ಜನ ಗಣ ಮನ ಎಂಬ ಸಾಲನ್ನು ಹೊಂದಿರುವ ಗೀತೆಯನ್ನು ಇಂದು ನಾವು ರಾಷ್ಟ್ರ ಗೀತೆಯೆಂದು ಒಪ್ಪಿಕೊಳ್ಳುತ್ತೇವೆ. ಈ ಗೀತೆಯಯಲ್ಲಿ ಮುಂದೆ ಬರುವ ಎಲ್ಲಾ ಬದಲಾವಣೆಗಳು ಸರ್ಕಾರದ ಮೇಲ್ವಿಚಾರಣೆಯಲ್ಲಿರುತ್ತದೆ. ಇಲ್ಲಿ ನಾವು "ವಂದೇ ಮಾತರಂ" ಗೀತೆಗೂ "ಜನ ಗಣ ಮನ" ಗೀತೆಗೆ ಕೊಟ್ಟಿರುವಷ್ಟೆ ಮಹತ್ವ ಮತ್ತು ಸಮ್ಮಾನವನ್ನು ನೀಡುತ್ತೇವೆ. ಏಕೆಂದರೆ ಈ ಗೀತೆ ನಮ್ಮ ಭಾರತದ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಹಾಗೇ ಇಂದು ಇದರ ಕುರಿತಾಗಿ ನೆಡೆದ ಚರ್ಚೆ ನಿಮಗೆ ನ್ಯಾಯಸಮ್ಮತವಾಗಿ ಒಪ್ಪಿಗೆಯಾಗಿದೆ ಎಂದು ನಂಬಿರುತ್ತೇನೆ..."
ಮಾಹಿತಿಗೆ ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ಕಿಸಿ:
ಆಂತೂ "ವಂದೇ ಮಾತರಂ" ಅಂದು ರಾಷ್ಟ್ರ ಗೀತೆಯಾಗುವ ಅವಕಾಶ ತಪ್ಪಿಸಿಕೊಂಡಿದ್ದರೂ ತನ್ನ ಅಪ್ಪಟ ದೇಶಭಕ್ತ ನುಡಿಗಳಿಂದ ಭಾರತದ ಪ್ರತಿಯೊಬ್ಬ ಪ್ರಜೆಯ ಹ್ರದಯದಲ್ಲಿ ಎಬ್ಬಿಸಿದ ಸ್ವತಂತ್ರದ ಕಿಡಿ ದೊಡ್ಡ ಜ್ವಾಲೆಯಾಗಿ ಹರಡಿ, ದೇಶದ ಜನರನ್ನು ಒಗ್ಗುಡಿಸುವಲ್ಲಿ ಮಾಡಿದ ಪರಿಣಾಮಕಾರಿ ಪಾತ್ರ... "ಸೂರ್ಯ ಮುಳುಗದ ದೇಶ" ವೇ ಹೆದರಿ ನಮ್ಮ ಭಾರತವನ್ನು ಬಿಟ್ಟು ಓಡುವಂತೆ ಮಾಡಿದ್ದು ಎಂದೂ ಮರೆಯಲಾಗದು... ನಮ್ಮ ಇಂದಿನ ಸ್ವಾತಂತ್ರಕ್ಕೆ ಅಂದು ಈ ಗೀತೆ ಸಲ್ಲಿಸಿದ ಮಹತ್ತರ ಕಾಣಿಕೆ ಆಪಾರ. ಬನ್ನಿ, ನಾವೆಲ್ಲರೂ ಕೂಗಿ-ಕೂಗಿ ಹೇಳೋಣ --- "ವಂದೇ ಮಾತರಂ".
ಜಯ್ ಹಿಂದ್.
ಮುಗಿಯಿತು...

ಅನಾಮಿಕರೇ, ನೀವು ಹೇಳಿದ
ಅನಾಮಿಕರೇ,
ನೀವು ಹೇಳಿದ ಪ್ರತಿಯೊಂದು ಸಾಲು ಅಕ್ಷರಸಹ ಸತ್ಯ.... ಅದರೂ ಅಪ್ಪಟ ಭಾರತೀಯರಾದ ನಾವು ಈ ಗೀತೆಗೆ ಗೌರವ-ಮನ್ನಣೆ ಕೊಟ್ಟರೆ ಅದಕ್ಕಿಂತ ಹೆಚ್ಚು ಬೇರೇನು ಇಲ್ಲ..
ಗೆಳೆಯ ವಿನಯ, ತುಂಬ
ಗೆಳೆಯ ವಿನಯ, ತುಂಬ ಮಾರ್ಮಿಕವಾಗಿದೆ ನಿಮ್ಮ ಲೆಖನ. ನನ್ನ ಸ್ವಂತ ಅನುಭವಕ್ಕೆ ಬಂದಂತೆ ವಂದೇ ಮಾತರಂ ಗೀತೆ ಉಕ್ಕಿಸೊ ಆ ಭಾವ ತೀವ್ರತೆ,ದೇಶಭಕ್ತಿ,ದೇಶದಡೆಗಿನ ಸಮರ್ಪನಾ ಭಾವ ಈಗಿನ ಜನ ಮನ ಗನ ಗೀತೆಯಲ್ಲಿಲ್ಲ. ಈ ಕಾರಣಗಳಿಂದಾಗಿ ಅಂದು ಇದು ದೇಶದ ಸ್ವತಂತ್ರಕ್ಕಾಗಿ ಜನರನ್ನು ಒಗ್ಗುಡಿಸುವಲ್ಲಿ ಪರಿಣಾಮಕಾರಿಯಾಗಿತ್ತಲ್ಲದೆ, ಅಮ್ದು ಇದನ್ನು ದೇಶಕ್ಕೆ ದೇಶವೆ ಜಾತಿ ಬೆಧವಿಲ್ಲದೆ ಒಪ್ಪಿಕೊಂಡಿತ್ತು. ಆದ್ರೆ ಕೆಲವರು ರಾಜಕೀಯ ಲಾಭಕ್ಕಾಗಿ,ಅಧಿಕಾರದ ಆಸೆಗೊಸ್ಕರ,ಯಾರನ್ನೊ ರಮಿಸೊದಕ್ಕೊಸ್ಕರ ಸಮಸ್ತ ದೆಶವಾಸಿಗಳ ಹೃದಯ ಗೀತೆಯನ್ನೆ ತಿರಸ್ಕರಿಸಿ, ಜನ ಗನ ಮನ ಗೀತೆನಾ ರಾಷ್ಟ್ರಗೀತೆಯಾಗಿ ಆರಿಸಿದ್ರು...
ಯಾಕೆಂದ್ರೆ ನಾವು ನಮ್ಮತನವನ್ನು,ದೇಶದ ಹಿರಿಮೆಯನ್ನು ಎತ್ತಿಹಿಡಿದ್ರೆ , ಈ ದೇಶಾನ ಪೂಜಿಸೊಕೆ, ಅದು ಇದು ಅಡ್ದ ಬರುತ್ತೆ ಅನ್ನೊರ್ಗೆಎಲ್ಲಿ ಬೇರೆಯವರಿಗೆ ನೊವಾಗುತ್ತೆ ಯೊಚಿಸೊ ಜನ ಅಲ್ವಾ!
ಆದ್ರು ಈ ಭಾರತದ ಹಿರಿಮೆ ಇರೊದು ಅದರ ತತ್ವದಲ್ಲಿ,ಭಾರತಮಾತೆಯ ಮಕ್ಕಳಲ್ಲಿ.
ವಂದೇ ಮಾತರಮ್.
ಹರಿಪ್ರಸಾದ್ ರವರೆ, ನಿಮ್ಮ
ಹರಿಪ್ರಸಾದ್ ರವರೆ,
ನಿಮ್ಮ ಮೆಚ್ಚುಗೆಯ ಸಾಲುಗಳಿಗೆ ಬಹಳ ಧನ್ಯವಾದಗಳು...

ಇತಿ.. ನಿಮ್ಮ ವಿನಯ
ವಿನಯರವರೆ ನಿಮ್ಮ ಲೇಖನ ತುಂಬಾ
ವಿನಯರವರೆ ನಿಮ್ಮ ಲೇಖನ ತುಂಬಾ ಚೆನ್ನಾಗ್ಗಿತ್ತು ವಂದೇ ಮಾತರಂ ರಾಷ್ಟ್ರ ಗೀತೆಯಾಗುವ ಅವಕಾಶ ತಪ್ಪಿಸಿಕೊಂಡಿದ್ದರ ನಿಜವಾದ ಕಾರಣವನ್ನು ಸರ್ಮತಿನಿಯವಾಗಿ ಹೇಳಿದ್ದಿರಿ ಅದು ನನ್ನ ಮನಸ್ಸಿನಲ್ಲಿ ವಂದೇ ಮಾತರಂ ನ್ನು ರಾಷ್ಟ್ರ ಗೀತೆಯಾನ್ನಗಿ ಮಾಡದ್ದಕ್ಕೆ ಇದ್ದ ತಿಳುವಳಿಕೆಯನ್ನು ಸರಿಯಾಗಿಸಿದೆ.
ನಿಮ್ಮ ಲೇಖನದ ಕೊನೆಯ ಪ್ಯಾರ ನಮ್ಮೆಲ್ಲರ ವಂದೇ ಮಾತರಾಂ ಗೀತೆಯ ಭಾವನೆಯನ್ನು ಹೇಳಿದಂತೆ ಇತ್ತು ಅದಕ್ಕಾಗಿ ನನ್ನ ಮಾತನ್ನು ನಿಮ್ಮ ಮಾತಿನಲ್ಲೆ ಹೇಳ ಬಯಸುತ್ತೆನೆ
ಆಂತೂ "ವಂದೇ ಮಾತರಂ" ಅಂದು ರಾಷ್ಟ್ರ ಗೀತೆಯಾಗುವ ಅವಕಾಶ ತಪ್ಪಿಸಿಕೊಂಡಿದ್ದರೂ ತನ್ನ ಅಪ್ಪಟ ದೇಶಭಕ್ತ ನುಡಿಗಳಿಂದ ಭಾರತದ ಪ್ರತಿಯೊಬ್ಬ ಪ್ರಜೆಯ ಹ್ರದಯದಲ್ಲಿ ಎಬ್ಬಿಸಿದ ಸ್ವತಂತ್ರದ ಕಿಡಿ ದೊಡ್ಡ ಜ್ವಾಲೆಯಾಗಿ ಹರಡಿ, ದೇಶದ ಜನರನ್ನು ಒಗ್ಗುಡಿಸುವಲ್ಲಿ ಮಾಡಿದ ಪರಿಣಾಮಕಾರಿ ಪಾತ್ರ... "ಸೂರ್ಯ ಮುಳುಗದ ದೇಶ" ವೇ ಹೆದರಿ ನಮ್ಮ ಭಾರತವನ್ನು ಬಿಟ್ಟು ಓಡುವಂತೆ ಮಾಡಿದ್ದು ಎಂದೂ ಮರೆಯಲಾಗದು... ನಮ್ಮ ಇಂದಿನ ಸ್ವಾತಂತ್ರಕ್ಕೆ ಅಂದು ಈ ಗೀತೆ ಸಲ್ಲಿಸಿದ ಮಹತ್ತರ ಕಾಣಿಕೆ ಆಪಾರ. ಬನ್ನಿ, ನಾವೆಲ್ಲರೂ ಕೂಗಿ-ಕೂಗಿ ಹೇಳೋಣ --- "ವಂದೇ ಮಾತರಂ".
ಇವತ್ತು ವಂದೇ ಮಾತರಂ ಬಗ್ಗೆ ತುಂಬಾ
ಇವತ್ತು ವಂದೇ ಮಾತರಂ ಬಗ್ಗೆ ತುಂಬಾ ಯೋಚ್ನೆ ಮಾಡ್ದೇ ವಿನಯ್ ಅವರೇ.. ವಂದೇ ಮಾತರಂ ನ ವಿರೋಧಿಸೋ ಮುಸ್ಲಿಮ್ ವೈಚಾರಿಕತೇನ ಪ್ರಶ್ನಿಸ ಬೇಕಾಗಿರೋದೇ.. ಅದರಲಿ ೨ನೇ ಮಾತಿಲ್ಲ.. ಆದ್ರೆ ಜನಗನಮನ ವಿರುದ್ಧ ಇದನ್ನ ನಿಲ್ಸಿ ನಾವು ಇಬ್ಬರು ಖ್ಯಾತ ದಾರ್ಶನಿಕರ ಮಧ್ಯ ಬಿರುಕು ಹುಟ್ಟಿಸಿದ ಹಾಗೆ ಆಗತ್ತೆ. ಅವರಿಗೆ ಇಲ್ಲದ ವಿರೋಧನ ನಾವ್ ಸೃಷ್ಟಿ ಮಾಡಿದ ಹಾಗೆ ಆಗತ್ತೆ. ಅದು ಅಲ್ಲದೇ ನಾನು ಧಾರ್ಮಿಕ ನೆಲೆಗಟ್ಟಿನ ಮೇಲೆ ನಿಂತು ಯೋಚ್ನೆ ಮಾಡ್ದೇ ಇರೊನಾದರಿಂದ ವಂದೇ ಮಾತ್ರಂ ಅಲ್ಲಿ ಧಾರ್ಮಿಕ ವಿರೋಧ ಇರೋದರಿಂದ ಜನಗಣಮನ ನ ರಾಷ್ಟ್ರಗೀತೆ ಆಗಿ ಆಯ್ಕೆ ಮಾಡಿರೊದ್ರಲ್ಲಿ ತಪ್ಪಿಲ್ಲ.. ಆದ್ರೆ ನಂ ಮನಸಲ್ಲಿ ವಂದೇ ಮಾತರಾಂಗು ಅದೇ ಬೆಲೆ ಇದೆ. ಇಲ್ಲಿ ನಂ ವಾಡದಿಂದ ಸುಮ್ನೇ ಇಬ್ಬರು ದಾರ್ಶನಿಕರ ಮಧ್ಯ ವಿರೋಧ ಭಾವ ತಾಲೋದು ಸರಿ ಅಲ್ಲ ಅನ್ಸತೆ.
ಯಾಕ್ರಿ ಇಲ್ಲಿ ಬನ್ಡವಳಶಹಿ ಅಂತ
ಯಾಕ್ರಿ ಇಲ್ಲಿ ಬನ್ಡವಳಶಹಿ ಅಂತ ಯಾಕ್ ಬಂತು ಅಂತ ಅರ್ಥ ಆಗ್ಲಿಲ್ಲ. ಎನೀ ಮನಸ್ಕಾರು ಅಂದ್ರೆ ನಾಸ್ತಿಕರು ಇರ್ಬೋದು ಅಥವಾ ಕಮ್ಯೂನಿಸ್ಟ್ ಇರ್ಬೋದು. ಅಷ್ಟೇ ಯಾಕೆ ತೇಜಸ್ವಿ, ಲಕೇಶ್, ಕಾರಂತ್ ಅಂತ ಜನಪರ ಚಿಂತಕರಿರ್ಬೋದು..
ನೀವ್ ಹೇಳಿದ್ದು ಸರಿ ಪ್ರವೀಣ್ ,
ನೀವ್ ಹೇಳಿದ್ದು ಸರಿ ಪ್ರವೀಣ್ , ಇವರೆಲ್ಲ "ಸ್ವಸ್ಥ" ಚಿಂತಕರ ಜೊತೆ ಕೆಲವು ರೋಗಗ್ರಸ್ತ ಮನಸ್ಸುಗಳು ಇರುತ್ತಲ್ಲವೇ...? ಕೆಲಸಕ್ಕೆ ಬರದವು ಮತ್ತೆ ತರಲೆ ತಗೆಯುವವು... ಸುಮ್ಮನೆ ಎನನ್ನೋ ಬರೆದು/ಹೇಳಿ ಕಿತಪತಿ ಮಾಡುವ ಜನ...
ನನ್ನ ಪ್ರಕಾರ ಅವರೇ "ಬಂಡವಾಳಶಾಹಿ " ಅಥವ "ಬೆಳೆ ಬೇಯಿಸಿಕೊಳ್ಳುವ " ಜನರು...
ಹೌದಾ.. ನೀವ್ ಹೇಳೋ ಆ ದುರ್ಗ ಮಾತೆ
ಹೌದಾ.. ನೀವ್ ಹೇಳೋ ಆ ದುರ್ಗ ಮಾತೆ ಅನ್ನೋ ಮೂಢ ನಂಬಿಕೆಗೆ ಹೊಂದದ ಮನಸನ್ನ ತಿರಸ್ಕಾರ ಮಾಡಿ ದೇಶ ಕಟ್ಟಬೇಕು ಅಂತನ.. ಆಗ್ಲೇ ಹೇಳಿದ ಹಾಗೆ ಇಲ್ಲಿ ಬೌದ್ಧರು ಇದರೆ ಅವರು ನಮ್ಮದೇಶದವರೆ ಅವರ ಭಾವಣೆಗೆ ಬೆಲೆ ಇಲ್ವಾ, ಜೈನರು ಅಷ್ಟೇ ಅಲ್ವಾ.. ಧರ್ಮದ ಮೇಲೆ ನಿಂತು ಕಟ್ಟೋ ದೇಶ ಎಷ್ಟ್ ದಿನ ಶಾಶ್ವತ. ಹಿಟ್ಲರ್ ತರನ, ಮುಸಲೋನಿ ಹಾಗ?
ಇಲ್ಲಾ ಪ್ರವೀಣ್ ರವರೆ, ನನ್ನ
ಇಲ್ಲಾ ಪ್ರವೀಣ್ ರವರೆ, ನನ್ನ ಪ್ರಕಾರ "ಆನ್ಯಮನಸ್ಕ್ತನ" ಯಾವ ಧರ್ಮದ ಜನಕ್ಕೆ ಅಥವಾ ಜಾತಿಗೆ ಸಂಬಂಧಿಸಿದ್ದಲ್ಲಾ... ಎಕೆಂದರೆ ನಮ್ಮ ಜನ "ಸ್ನೇಹಪ್ರಿಯರು" ಮತ್ತು ನಮ್ಮ ರಾಷ್ಟ್ರ ಒಂದು "ಸರ್ವಜನಾಂಗದ ಶಾಂತಿಯ ತೋಟ". ನನ್ನ ಪ್ರಕಾರ "ಆನ್ಯಮನಸ್ಕ್ತನ" ಅಂದರೆ ಅದು ಇತರ ಜನರ ಮನ್ಸಸನ್ನು ಕೆದಡುವ/ಒಡೆಯುವ ಕೆಟ್ಟ ಪ್ರವೃತ್ತಿಯ ವಿಷ ಜಂತುಗಳಿಗೆ (ಬಂಡವಾಳಶಾಹಿ ಜನಕ್ಕೆ) ಹೋಲಿಕೆ ಅಷ್ಟೆ...
ಪ್ರತಿಕ್ರಿಯೆಗೆ ಧನ್ಯವಾದಗಳು
ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರವೀಣ್ ರವರೆ....
ಹೌದು, ನೀವು ಹೇಳಿದ್ದು ನಿಜ... ನೀವು ಬರೆದಂತೆ "ಅನ್ಯ ಧರ್ಮೀಯರು ಅನ್ನೋಕಿಂತ ಅನ್ಯ ಮನಸ್ಕರು ಇದಾರೆ " ಆ "ಅನ್ಯಮನಸ್ಕತನ"ವೇ ಸಾಕಲ್ಲವೇ ಜನರ ಮನಸ್ಸನ್ನು ಒಡೆಯಲು... ಬಹುಶಃ ನಮ್ಮ ಜನ ಈ "ಅನ್ಯಮನಸ್ಕ್ತನ" ವನ್ನ ಬಿಟ್ಟಿದ್ದರೆ ಎಂದೋ ಬಹಳ ಮುಂದುವರಿಯಬಹುದಿತ್ತೇನೋ!
ಆದ್ರೆ ಆ ಗೀತೆ ಸ್ವಾತಂತ್ರ
ಆದ್ರೆ ಆ ಗೀತೆ ಸ್ವಾತಂತ್ರ ಚಳುವಳಿಯ ಒಂದು ಪ್ರಮುಖ ಪಾತ್ರ ಅನ್ನೋದರ ಬಗ್ಗೆ ನಂಗೂ ಹೆಮ್ಮೆ ಇದೆ.
ನಾನು ಇಷ್ಟ್ ದಿನ ವಂದೇ ಮಾತರಂ ನಾ
ನಾನು ಇಷ್ಟ್ ದಿನ ವಂದೇ ಮಾತರಂ ನಾ ಕೇಳಿದಾಗ ಅದರ ಮಹತ್ವ ಕೇಳಿದಾಗ ಅದರ ಬಗ್ಗೆ ಎಲ್ಲಿಲ್ಲದ ಗೌರ ಇತ್ತೂು, ಇನ್ ಮುದೆನೂ ಇರತ್ತೆ ಬೀದಿ. ಆದ್ರೆ ನೀವ್ ಹೇಳೋ ಹಾಗೆ ಅದು ನಂ ದೇಶನ ದುರ್ಗ ಮಾತೆಗೆ ಹೋಲಿಸಿದ್ದ ಕಾರಣಕ್ಕೆ ಅದನ್ನ ರಾಷ್ಟ್ರ ಗೀತೆಯಾಗಿ ಆಯ್ಕೆ ಆಗ್ದೇ ಇದ್ದಿದ್ರೆ ಆದರೆ ಅದ್ರಲ್ಲಿ ತಪ್ಪೇನೂ ಇಲ್ಲ. ಹೌದು ಇಲ್ಲಿ ಅನ್ಯ ಧರ್ಮೀಯರು ಅನ್ನೋಕಿಂತ ಅನ್ಯ ಮನಸ್ಕರು ಇದಾರೆ. ಇರ್‍ಲಿ ಈಗ ಅನ್ಯ ಧರ್ಮೀಯರು ಆನೊ ಕಾರಣಕ್ಕೆ ಬರೋಣ. ಎನ್ ತಪ್ಪು ಅಂತ ಅರ್ಥ ಆಗ್ಲಿಲ್ಲ. ನಂ ದೇಶದಲ್ಲಿ ಬೌದ್ಧರಿದಾರೆ ಅವರ್ಯರಿಗೂ ಮಾಟೆಅ ಇರ್‍ಲಿ ದೇವರು ಅನ್ನೋದೇ ಇಲ್ಲ. ಮತ್ತೆ ಜೈನರಿದಾರೆ. ಬಾರಿ ಮುಸ್ಲಿಮ್ ಭಂದವರನ್ನ ಮೆಚ್ಚಿಸೋ ಪ್ರಯತ್ನ ಅಂದ್ರೆ ತಪ್ಪಗತ್ಟೆ. ಇಲ್ಲಿ ನಾಸ್ತಿಕ ಜನ ಕೂಡ ಇದ್ದಾರೆ. ನಾನು ಯಾವತ್ತಿಗೂ ವಂದೇ ಮಾತರಂ ಗೀತೆನ ಆಗ್ಲೀ ಅಥವಾ ಬಂಕಿಮ ಚಂದ್ರ ಚಟರ್ಜಿ ಅವರನ್ನೇ ಆಗ್ಲೀ ಏಗೊಳೋಕೆ ಹೋಗೋದಿಲ್ಲ. ಆದ್ರೆ ನೀವ್ ಹೇಳಿಡ್ ಕಾರಾಮ ಬಾರಿ ಮಾತೆ ಅನ್ನೋದೇ ಆಗಿದೆ ಇರ್‍ಲಿ ಒಳ್ಳೇದೇ ಆಯ್ತು. vande maataram...
ಅದು. ನಮ್ಮ ದೈಶಿಯ.
ಅದು. ನಮ್ಮ ದೈಶಿಯ.
ನಿಮ್ಮ ಅನಿಸಿಕೆ ತಿಳಿಸಿ