ಮೈಕ್ರೊಸಾಫ್ಟ ವಿಂಡೋಸ್ ನಡೆದು ಬಂದ ದಾರಿ . . . .

ಬರೆದವರು: ಶ್ರೀನಿವಾಸ - ಕಳುಹಿಸಿದ ದಿನ 14 September 2009

ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ವಿಂಡೊಸ್ ಬಂದಿತ್ತು, ವಿಂಡೊಸನ ೧.೦ ಆವೃತ್ತಿಯನ್ನು ನೋಡಿ ಜನ "ಇದು ಮಾರುಕಟ್ಟೆಯಲ್ಲಿ ನಡೆಯೊಲ್ಲ ಏಕೆಂದರೆ ಇದು Apple macintosh ನ ನಕಲು" ಎಂದರು ಮತ್ತೆ ಜನ ಹೇಳಿದಂತೆ Windows ೧.೦ ಆವೃತ್ತಿ Apple Macintosh ನಂತೆಯೇ ಇತ್ತು ಅದರಲ್ಲಿಯ ಮೆನು ಬಾರ್, ಪ್ರೊಗಾಮ್ ವಿಂಡೊ ಡ್ರಾಪ್ ಡೌನ್ ಮೇನು ಹಾಗು ಮೌಸ್ ಸಪೊರ್ಟ್ ಎಲ್ಲದರಲ್ಲಿಯೂ Macintosh ನಂತೆಯೇ. Apple ಕಂಪನಿ ಕೂಡ ಈ ವಿಷಯವಾಗಿ Microsoft ಅನ್ನು ತರಾಟೆಗೆ ತೆಗೆದುಕೊಂಡಿತ್ತು.
ಆ ಸಮಯದಲ್ಲಿ Apple ಮಾಹಿತಿ ತಂತ್ರಜ್ಞಾನದಲ್ಲಿ ದೈತ್ಯವಾಗಿ ಬೆಳೆದು ಮಿಲಿಯನ್ ಡಾಲರ್ ನಷ್ಟು ಟರ್ನ್-ಒವರ್ ಮಾಡುತ್ತಿತ್ತು. ಈ ಸಮಯದಲ್ಲಿ ಮೈಕ್ರೊಸಾಫ್ಟ Apple Macintosh ಗೆ ಆಫಿಸ್ ಪ್ರಾಡಕ್ಟ್ ಗಳನ್ನು ಮಾಡಲು ಮುಂದಾಯಿತು ಆದರೆ Apple ಗೆ ಇದು ಇಷ್ಟವಿರಲಿಲ್ಲ ಆದ್ದರಿಂದ Apple ಕಂಪನಿಯು ಮೈಕ್ರೊಸಾಫ್ಟ ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿತು ಅದೆಂದರೆ Apple ಬಳಸುತ್ತಿದ್ದ Visual Desktop ಲೈಸನ್ಸ್ ಅನ್ನು ಅದು ಮೈಕ್ರೊಸಾಫ್ಟಗೂ ಕೊಟ್ಟುಬಿಟ್ಟಿತು. ಈ ಒಪ್ಪಂದವೇ ಮುಂದೆ ಮೈಕ್ರೊಸಾಫ್ಟ ಬೆಲೆಯಲು ರಹದಾರಿಯಾಯಿತು.

ಇದಾದ ಮೇಲೆ ಮೈಕ್ರೊಸಾಫ್ಟ ವಿಂಡೊಸ್ ೨.೦ ಬಿಡುಗಡೆಯಾಯಿತು ಈ ಆವೃತ್ತಿಯಲ್ಲಿ ಹೊಸ ವಿಶೇಷತೆಗಳಿದ್ದುದರಿಂದ ಇದು ಎಲ್ಲರಿಗೂ ಮೆಚ್ಚುಗೆಯಾಯಿತು ಮತ್ತು ಇಲ್ಲಿಂದ ಮೈಕ್ರೊಸಾಫ್ಟ್ ವಿಂಡೊಸ್ ನ ವಿಜಯ ಯಾತ್ರೆ ಪ್ರಾರಂಭವಾಯಿತು. ತಾಂತ್ರಿಕವಾಗಿ ವಿಂಡೋಸ್‍ನ ಈ ಆವೃತ್ತಿಯು ಹೆಚ್ಚಿನ ಗುಣವಿಶೇಷತೆಗಳನ್ನು ಒಳಗೊಂಡಿತ್ತು. ಈ ಆವೃತ್ತಿಯಲ್ಲಿ ವಿಂಡೊಸ್ ಗಳನ್ನು ಒಂದರ ಮೇಲೊಂದರಂತೆ ಇಡಬಹುದಾಗಿತ್ತು ಮತ್ತು ಇದು ೬೪೦ x ೪೮೦ ವಿ.ಜಿ.ಎ ಸ್ಕ್ರೀನ್ ರಿಸೊಲುಶನ್ ಅನ್ನು ಹೊಂದಿತ್ತು.

ಇದಾದ ನಂತರ ಸ್ವಲ್ಪವೇ ಸಮಯದಲ್ಲಿ ವಿಂಡೊಸ್ ೩.೦ ಯ ಆಗಮನವಾಯಿತು. ಕೇವಲ ನಾಲ್ಕೇ ತಿಂಗಳುಗಳಲ್ಲಿ ಈ ಆವೃತ್ತಿಯ ೧೦ ಮಿಲಿಯನ್ ಪ್ರತಿಗಳು ಜಗತ್ತಿನಾದ್ಯಂತ ಮಾರಾಟವಾದವು. ಈ ಆವೃತ್ತಿಯನ್ನು ವಿಂಡೊಸ್ ನ ಸಂಪೂರ್ಣ ಆವೃತ್ತಿಯೆಂದೇ ಹೇಳಬಹುದು ಏಕೆಂದರೆ ಇದರಲ್ಲಿ ಕಡತ ನಿರ್ವಾಹಕ (ಫೈಲ್ ಮ್ಯಾನೆಜರ್), ಸ್ವ್ಯಾಪ್ ಫೈಲ್, ನೆಟ್-ವರ್ಕ್ ಸಪೊರ್ಟ್ ಮತ್ತು ರೆಜಿಸ್ಟ್ರಿ ಎಡಿಟರ್ ಗಳು ಇದ್ದವು.ಇದಾದ ನಂತರ ವಿಂಡೊಸ್ ೩.೧ ಆವೃತ್ತಿ ಬಿಡುಗಡೆಯಾಯಿತು ಮತ್ತು ಈ ಆವೃತ್ತಿಯಿಂದ ವಿಂಡೊಸ್ ಜಗತ್ತಿನಲ್ಲಿ ಮಲ್ಟಿಮೀಡಿಯಾ ಕ್ರಾಂತಿಯಾಯಿತು ಏಕೆಂದರೆ ಇದರಲ್ಲಿ ಸೌಂಡ್ ಕಾರ್ಡ್ ಮತ್ತು ವಿಂಡೊಸ್ ಮೀಡಿಯಾ ಪ್ಲೇಯರ್ ಅನ್ನು ಅಳವಡಿಸಲಾಗಿತ್ತು ಮತ್ತು ಇದು ಇತರೆ ಯಾವುದೇ ಹಳೆಯ ಆವೃತ್ತಿಗಳಿಗಿಂತ ವೇಗವಾಗಿತ್ತು ಮತ್ತು ನಂಬಿಕರ್ಹವಾಗಿತ್ತು.

ಕಾಲ ಕಳೆದಂತೆ ವಿಂಡೊಸ್ ೩.೧ ಹಳೆಯದಾಗಿತ್ತು ಮತ್ತು ಇದು ೧೬ ಬಿಟ್ ವಿನ್ಯಾಸವನ್ನು ಹೊಂದಿತ್ತು ಅಷ್ಟೇ ಅಲ್ಲದೇ ಇದು DOS ಮೇಲೆ ಅವಲಂಬಿತವಾಗಿತ್ತು ಹೀಗಾಗಿ ಈ ಸಮಯದಲ್ಲಿ ಒಂದು ಹೊಸ ತಂತ್ರಜ್ಞಾನದ ಅವಶ್ಯಕತೆಯಿತ್ತು, ಇದನ್ನು ಅರಿತ ಮೈಕ್ರೊಸಾಫ್ಟ್ NT ಫೈಲ್ ಸಿಸ್ಟಮ್ ಅನ್ನು ಒಳಗೊಂಡ ೩೨ ಬಿಟ್ ವಿನ್ಯಾಸದ ಆಪರೆಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಿತು. ಇದು ವೇಗವನ್ನು ಹೊಂದಿತ್ತು ಮತ್ತು ಹೆಚ್ಚು ನಂಬಿಕರ್ಹವಾಗಿತ್ತು ಆದರೆ ಇದರ ಯಂತ್ರಾಂಶ ಅವಶ್ಯಕತೆಗಳು (Hardware requirements) ಅಧಿಕವಾಗಿದ್ದುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಪಡೆಯಲು ಇದು ವಿಫಲವಾಯಿತು. ಆದರೆ NT ಒಂದು ಅಧ್ಬುತ ತಂತ್ರಜ್ಞಾನವಾಗಿತ್ತು ಆದರೆ ಆಗಿನ ಕಾಲದ ಯಂತ್ರಾಂಶ ಅವಶ್ಯಕತೆಗಳ ಸಮಸ್ಯೆಯಿಂದ ಇದು ಆಗ ಮೆಚ್ಚಿಗೆಯಾಗಲಿಲ್ಲ ಆದರೆ ಈಗಿನ ಆಪರೇಟಿಂಗ್ ಸಿಸ್ಟಿಮ್ ಗಳಲ್ಲಿ ಈ ಫೈಲ್ ಸಿಸ್ಟಮ್ ಅನ್ನೇ ಬಳಸಲಾಗುತ್ತದೆ

ಇದಾದ ನಂತರ ವಿಂಡೊಸ್ ೯೫ ಮಾರುಕಟ್ಟೆಗೆ ಬಂದಿತು, ಇದು FAT ಫೈಲ್ ಸಿಸ್ಟಮ್ ಅನ್ನು ಒಳಗೊಂಡಿತ್ತು ಮತ್ತು ಇದು ಹೆಚ್ಚು ಜನರನ್ನು ಆಕರ್ಷಿಸಿತು ಏಕೆಂದರೆ ಇದರಲ್ಲಿ ಸ್ಟಾರ್ಟ್ ಮೆನು, ಟಾಸ್ಕ್-ಬಾರ್, ಡಿರೆಕ್ಟ್-ಎಕ್ಸ್, ಇಂಟರ್-ನೆಟ್ ಎಕ್ಸ್ ಪ್ಲೊರರ್, ಪ್ಲಗ್ ಎಂಡ್ ಪ್ಲೆ ಮತ್ತು ವಿಂಡೊಸ್ ಎಕ್ಸ್ ಪ್ಲೊರರ್ ಮುಂತಾದ ಹಲವು ವಿಶೇಷ ತಂತ್ರಜ್ಞಾನವನ್ನು ಮೈಕ್ರೊಸಾಫ್ಟ್ ಅಳವಡಿಸಿತ್ತು ಕೇವಲ ನಾಲ್ಕೇ ದಿನಗಳಲ್ಲಿ ಇದರ ಮಿಲಿಯನ್ ಪ್ರತಿಗಳು ಮಾರಾಟವಾದವು, ಇದು ಜನರಿಗೆ ಒಂದು ಹೊಸ ಡೆಸ್ಕ್-ಟಾಪ್ ಅನುಭವವನ್ನು ನೀಡಿತು.

ಇದಾದ ಮೇಲೆ ವಿಂಡೊಸ್ NT ೪.೦ ಬಿಡುಗಡೆಯಾಯಿತು, ಹೆಸರೇ ಹೇಳುವಂತೆ ಇದು NT ಫೈಲ್ ಸಿಸ್ಟಮ್ ಅನ್ನು ಹೊಂದಿತ್ತು, ಇದರಲ್ಲಿ ಇಂಟರ್-ನೆಟ್ ಎಕ್ಸ್ ಪ್ಲೊರರ್ ೨ ಆವೃತ್ತಿಯನ್ನು ಅಳವಡಿಸಲಾಗಿತ್ತು, ೧೯೯೮ ರಲ್ಲಿ ಜನರು ಅತ್ಯಂತ ಕಾತುರದಿಂದ ನೋಡಲು ಕಾಯುತ್ತಿದ್ದ ವಿಂಡೊಸ್ ೯೮ ಅನ್ನು ಬಿಡುಗಡೆ ಮಾಡಿತು ಮತ್ತಿದು ಅತ್ಯಂತ ಜನಪ್ರಿಯ ಆಪರೆಟಿಂಗ್ ಸಿಸ್ಟಮ್ ಆಗಿತ್ತು ಏಕೆಂದರೆ ಇದರಲ್ಲಿ ಎಕ್ಟಿಮ್ ಡೆಸ್ಕ್-ಟಾಪ್, ಡಿವಿಡಿ ರೊಮ್, ಎಮ್.ಎಮ್.ಎಕ್ಸ್ ಮುಂತಾದ ಗ್ರಾಹಕ ಪ್ರಿಯ ತಂತ್ರಜ್ಞಾನಗಳನ್ನು ಅಳವಡಿಸಲಾಗಿತ್ತು, ಇದು ಗಣಕ ಆಟಗಳಿಗೆ (Computer Games) ಹೆಚ್ಚಿನ ಒತ್ತು ಕೊಡುತ್ತಿತ್ತು ಆದ್ದರಿಂದ ಗಣಕ ಆಟಗಳನ್ನು ಇದರಲ್ಲಿ ಯಾವುದೇ ಅಡೆ-ತಡೆಗಳಿಲ್ಲದೇ ಆಡಬಹುದಿತ್ತು. ಆದ್ದರಿಂದ ಇದು ಹೆಚ್ಚಿನ ಖ್ಯಾತಿಯನ್ನು ಗಳಿಸಿತು.

ಇದಾದ ನಂತರ ೨೦೦೦ ರಲ್ಲಿ ವಿಂಡೊಸ್ ೨೦೦೦ ಆವೃತ್ತಿಯ ಬಿಡುಗಡೆಯಾಯಿತು, ಇದರಲ್ಲಿ ಹೊಸತಾಗಿ ಫೈಲ್ ಎನ್ ಸ್ಕ್ರಿಪ್ಷನ್, ಗ್ರುಪ್ ಪಾಲಿಸಿಸ್ ಮತ್ತು ಡಿವೈಸ್ ಮ್ಯಾನೆಜರ್ ಮುಂತಾದವುಗಳನ್ನು ಅಳವಡಿಸಲಾಗಿತ್ತು ಇದೂ ಕೂಡ ಗ್ರಾಹಕರನ್ನು ತನ್ನತ್ತ ಸೆಳೆಯಿತು.ಕೆಲವೇ ಸಮಯದಲ್ಲಿ ವಿಂಡೊಸ್ ME ಯ ಆಗಮನವಾಯಿತು ಮತ್ತು ಇದರಲ್ಲಿ ಸಿಸ್ಟಮ್ ರಿಕವರಿ ಮಿಡಿಯಾ ಪ್ಲೆಯರ್ ೭ ಮತ್ತು ಮುವಿ ಮೇಕರ್ ಅನ್ನು ಅಳವಡಿಸಲಾಗಿತ್ತು.

೨೦೦೨ ನೇ ಇಸವಿಯಲ್ಲಿ ಮೈಕ್ರೊಸಾಫ್ಟ ಜಗತ್ತಿಗೆ ಒಂದು ಅಧ್ಬುತ ಆಪರೆಟಿಂಗ್ ಸಿಸ್ಟಮ್ ನ ಪರಿಚಯ ಮಾಡಿಸಿತು, ಅದೇ ವಿಂಡೊಸ್ XP. ಇಲ್ಲಿ XP ಎಂದರೆ ಎಕ್ಸಪಿರಿಯನ್ಸ್ ಎಂದರ್ಥ. ಇದು ಗಣಕ ಜಗತ್ತಿನಲ್ಲಿ ಒಂದು ಹೊಸ ಕ್ರಾಂತಿಯನ್ನು ಉಂಟುಮಾಡಿತು. ಇದರಲ್ಲಿ ಟಾಸ್ಕ್-ಬಾರ್, ಸ್ಟಾರ್ಟ್ ಮೆನು ಮುಂತಾದವುಗಳನ್ನು ಹೊಸತಾಗಿ ನಿರ್ಮಿಸಲಾಗಿತ್ತು, ಇದರಲ್ಲಿ ಹೊಸತಾಗಿ ಇಂಟರ್ ನೆಟ್ ಎಕ್ಸ್-ಪ್ಲೊರರ್ ೬ ಅನ್ನು ಅಳವಡಿಸಲಾಗಿತ್ತು ಅಷ್ಟೇ ಅಲ್ಲದೇ ಇದರಲ್ಲಿ ಹೊಸ ಫೈರ್-ವಾಲ್, ರಿಮೋಟ್ ಡೆಸ್ಕ್-ಟಾಪ್ ಗಳನ್ನೂ ಸಹ ಅಳವಡಿಸಲಾಗಿತ್ತು. ಈಗ ಇದು ಎಷ್ಟು ಜನಪ್ರಿಯವಾಗಿದೆ ಎಂದರೆ ವಿಂಡೊಸ್ Vista ಕ್ಕೂ ಕೂಡ ಇಷ್ಟು ಜನಪ್ರಿಯತೆಯನ್ನು ಗಳಿಸಲು ಸಾಧ್ಯವಾಗಿಲ್ಲ.

೨೦೦೭ರಲ್ಲಿ ಮೈಕ್ರೊಸಾಫ್ಟ್ ತನ್ನ ಆಧುನಿಕ ತಂತ್ರಜ್ಞಾನದ ವಿಂಡೊಸ್ Vista ವನ್ನು ಬಿಡುಗಡೆ ಮಾಡಿತು, ಇದರಲ್ಲಿ ೩ಡಿ ಎರೊ, ಸೈಡ್-ಬಾರ್, ಡಿರೆಕ್ಟ್-ಎಕ್ಸ್ ೧೦, ಯುಸರ್ ಅಕೌಂಟ್ ಕಂಟ್ರೊಲ್ ಮತ್ತು ವಿಂಡೊಸ್ ಡಿಫೆಂಡರ್ ಗಳನ್ನು ಅಳವಡಿಸಿತು, ಇದರ ಯಂತ್ರಾಂಶ ಅವಶ್ಯಕತೆಗಳು (Hardware Requrements) ಗಳು ಅಧಿಕವಾಗಿದ್ದು, ಇದು ಸರಾಗವಾಗಿ ಕಾರ್ಯ ನಿರ್ವಹಿಸಲು ಕನಿಷ್ಟ ೧ ಜಿಬಿ ರಾಮ್ ನ ಅವಶ್ಯಕತೆಯಿದೆ.

ಚಿತ್ರ ಸಹಿತ ಮಾಹಿತಿಗಾಗಿ ನನ್ನ ಜಾಲತಾಣಕ್ಕೆ ಒಮ್ಮೆ ಭೇಟಿಕೊಡಿ, ನನ್ನ ಜಾಲತಾಣದ ವಿಳಾಸವನ್ನು ನನ್ನ ವಿಸ್ಮಯನಗರಿ ಪ್ರೊಫೈಲ್ ನಲ್ಲಿ ಕಾಣಬಹುದು.

ಶ್ರೀನಿವಾಸ

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4 (1 vote)
ಅನಾಮಿಕನು's picture
ಮಂಗಳ, 01/12/2009 - 22:11 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
thumba chennagide, ide reethi

thumba chennagide, ide reethi mahithigalannu kodi

ಸಂತೋಶ ಇನಾಮದಾರ್'s picture
ಶುಕ್ರ, 18/09/2009 - 12:05 ರಂದು ಸಂತೋಶ ಇನಾಮದಾರ್ ಅವರು ಹೇಳುತ್ತಾರೆ
ಸಕ್ಕತ್ತ್ ಹಾಟ್ ಮಗಾ, ನಿಜಕ್ಕೂ

ಸಕ್ಕತ್ತ್ ಹಾಟ್ ಮಗಾ, ನಿಜಕ್ಕೂ ಕನ್ನಡದಲ್ಲಿ ಈ ಥರ ಪೂರ್ತಿ ಪರಿಚಯ windows ಬಗ್ಗೆ ಸಿಗೋದು ಕಮ್ಮಿ. ಒಳ್ಳೆಯ ಪ್ರಯತ್ನ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
14 + 6 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಶ್ರೀನಿವಾಸ ನಾಯಿಕ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಹೆಸರು ಶ್ರೀನಿವಾಸ ನಾಯಿಕ. ಊರು ಬೆಳಗಾವಿ, ಬಿ.ಎ ಓದುತ್ತಿದ್ದೇನೆ. ಕನ್ನಡ ಭಾಷೆಯಲ್ಲಿ ಗಣಕದ ಬಗ್ಗೆ ಮಾಹಿತಿ ಕೊಡುವ ಜಾಲತಾಣವನ್ನು ರೂಪಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಬಹುದು http://www.compuinkannada.co.cc
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content