ಎಲ್ಲಿದಿಯೇ ಪುಟ್ಟಿ.....
ಹೇಗಿದ್ದೀಯ?? ತುಂಬಾ ನೆನಪಾಗ್ತಾ ಇದ್ದೀಯ, ನಿನ್ನ ನೆನಪನ್ನೆಲ್ಲಾ ಕಂಬನಿಯನ್ನಾಗಿಸಿ ಭೋರ್ಗರೆದು ಅತ್ತು ಹಗುರವಾಗ್ಬೇಕು ಅನ್ಕೊಂಡ್ರೂ, ನಿನ್ನ ನೆನಪುಗಳು ನನ್ನ ಕಣ್ಣಿಂದ ಜಾರ್ತಾನೆ ಇಲ್ಲ ಕಣೆ. ನಿನ್ನ ತುಂಬಾ miss ಮಾಡ್ಕೋತಾ ಇದ್ದೀನಿ.... I miss u a lot ಪುಟ್ಟಿ.
ನಿನ್ನಿಂದ ದೂರಾ ಆಗಿ ಸರಿಸುಮಾರು ಮೂರು ತಿಂಗಳಿಗೆ ಬಂತು..ನಾನು ನಿನ್ನಿಂದ ದೂರ ಆಗಿದೀನೋ, ಇಲ್ಲ ನೀನೇ ನನ್ನಿಂದ ದೂರ ಆದ್ಯೋ ಇವತ್ತಿಗೂ ಉತ್ತರ ಸಿಗ್ತಾ ಇಲ್ಲ...ಮೊದಮೊದಲು ದುಃಖ ಆದ್ರೂ ಅವಡುಗಚ್ಚಿ ಕಣ್ಣೀರನ್ನ ತಡೆಹಿಡಿತಿದ್ದೆ, ಆದ್ರೆ ಈಗ ನಿನ್ನ ನೆನಪೇ ನನ್ನಲ್ಲಿ ಅವಡುಗಚ್ಚಿ ಕುಳಿತುಬಿಟ್ಟಿದೆ....ಏನೋ ಒಂಥರಾ ನೋವು ಕಣೆ... ನಗ್ತಾ ನಗ್ತಾ ಇರೋ ಹಾಗೆ ಅಳು ಒತ್ತರಿಸಿ ಬಂದ್ಬಿಡುತ್ತೆ, ಜೋಡಿಯಾಗಿ ನಡೆದು ಹೋಗೋರು ಕಂಡ್ರೆ ನನ್ನ ಪಕ್ಕ ನೀ ಬಂದು ನಿಂತು ನಿನ್ನ ಮಾಮೂಲಿ ವರಸೇಲಿ "ಡುಮ್ಮಣ್ಣ" ಅಂದ ಹಾಗೆ ಅನ್ಸುತ್ತೆ .... ನಿನ್ನ ನಾನು ಈಗ್ಲೂ ಎಷ್ಟು ಇಷ್ಟ ಪಡ್ತೀನಿ ಅನ್ನೋದು ನನ್ನ ತಲೆದಿಂಬಿಗೆ ಮಾತ್ರ ಗೊತ್ತು... ರಾತ್ರಿ ಹಾಸಿಗೆಯಲ್ಲಿ ನಿನ್ನ ನೆನಪಾಗಿ ಕಣ್ಣೀರಿಡುವಾಗ ನನ್ನ ಜೋತೆಗಿರೋದು ನನ್ನ ತಲೆದಿಂಬು...
ನೀನು ನನ್ನಿಂದ ದೂರಾದ ಮೇಲೆ ನನ್ನ ಬದುಕೇ ನಿರ್ಜೀವ ಆಗ್ಬಿಟ್ಟಿದೆ, ನಿರ್ಜೀವ ವಸ್ತುಗಳೇ ನನ್ನ ಗೆಳೆಯರಾಗಿಬಿಟ್ಟಿವೆ... ನಿನ್ನ ಇಷ್ಟದ ice cream parlor ಹತ್ತಿರ ಹೋಗ್ತಾ ಇದ್ರೆ ನನ್ನ bike ನೀನೆಲ್ಲಿ ಅಂತ ಕೇಳುತ್ತೆ...ಯಾವ್ದೊ ಭ್ರಮಾ ಲೋಕದಲ್ಲಿ ಬದುಕುತ್ತ ಇದೀನ ಅಂತ ನನಗೆ ಸಂಶಯ ಬರ್ತಾ ಇದೆ... ಇದೆಲ್ಲ ನಿನ್ನ ಅನುಪಸ್ಥಿತಿಯಿಂದ ಹುಡುಗಿ.... ಎಲ್ಲ ಅಸ್ಪಷ್ಟ ಕಣೆ, ಕಣ್ಣೀರು ಹೇಳದೆ ಕೇಳದೆ ತುಂಬ್ಕೊಂಡು ಬಿಡುತ್ತೆ.. ಆದ್ರೆ ಕೆಳಜಾರೋಲ್ಲ... ನೀನು ಪಟ ಪಟ ಅಂತ ಮಾತಾಡೋವಾಗ ನಾನು ಸುಮ್ನಿರ್ತಿದ್ದೆ, ಈಗ ನಾನು ಮಾತಾಡಿದ್ರು ನನ್ನ ವಿಷಯದಲ್ಲಿ ನೀನು ಶಾಶ್ವತವಾಗಿ ಮೌನಿಯಾಗಿದೀಯ....
ಎಲ್ಲೋ ಒಮ್ಮೊಮ್ಮೆ ಕನಸಲ್ಲಿ ಬರ್ತೀಯ, ಅಲ್ಲೂ ಅಸ್ಪಷ್ಟ ನೀನು, ಕಾರಣ ನಿನ್ನ ನೆನಪೆಂಬ ಕಂಬನಿ....ಹುಚ್ಚನ ಹಾಗೆ ನಿನ್ನ ಹೆಸರನ್ನ ಗೀಚಿದೀನಿ ಈ ಪುಟ್ಟ ಹೃದಯದಲ್ಲಿ, ಅದ್ಹೇಗೆ ಮರೆಯಲೇ ನಿನ್ನ??!.....ನೀನು ಚೆನ್ನಾಗಿರ್ಬೇಕು ಪುಟ್ಟಿ, ನಾನಿಲ್ಲದೆ ನಿನ್ನ ಜೀವನ ಸುಂದರವಾಗಿರುತ್ತೆ ಅನ್ನೋದು ನೆನಪಿಗೆ ಬಂದಾಗಲೆಲ್ಲಾ ನನ್ನಷ್ಟಕ್ಕೇ ನನಗೆ ಸಮಾಧಾನ...ಆದ್ರೆ ನೀನಿಲ್ಲದ ನನ್ನ ಜೀವನ ಸುಂದರವಾದ ಚಿತ್ರಕ್ಕೆ ಕಪ್ಪು ಮಸಿ ಬಳಿದಂತೆ, ಯಾವುದಕ್ಕೂ ಪ್ರಯೋಜನ ಇಲ್ಲಾ....... ನಿನ್ನ ಫೋನ್ ನಂಬರ್ ನ contact ನಿಂದ ಡಿಲೀಟ್ ಮಾಡಿದ್ರೂ ಅರ್ಧ ನಿದ್ರೇಲಿ ಎಬ್ಬಿಸಿ ಕೇಳಿದರೂ ಒಂದೇ ಉಸಿರಲ್ಲಿ ಹೇಳಿಬಿಡ್ತೀನಿ ನಿನ್ನ ಫೋನ್ ನಂಬರ್ ನ ..ನಿನ್ನ ಕೆಲವು message ನನ್ನ ಕಾಡ್ಸೋಕೆ ಅಂತಾನೆ ಇನ್ನೂ ನನ್ನ inbox ನಲ್ಲಿ ಪಟ್ಟುಹಿಡಿದು ಕುಳಿತುಬಿಟ್ಟಿವೆ.... ಎಲ್ಲ ಹೇಳ್ಬೇಕು ಅಂತ ಪ್ರತೀ ಸಲ ಇದೇ ರೀತಿ ಬರಿತೀನಿ, ಆದ್ರೆ ಅದೆಲ್ಲ ಕೊನೆಗೆ ಸೇರೋದು ಇಲ್ಲೇ ಮೂಲೆಯಲ್ಲಿ ಕುಳಿತಿರೋ ಕಸದ ಬುಟ್ಟಿಗೆ...
ಆಗ್ತ ಇಲ್ಲ ಪುಟ್ಟಿ, ಮತ್ತೆ ಕಣ್ಣು ಮಂಜಾಗ್ತಾ ಇದೆ ಕಣ್ಣೀರಿಂದ.... As usual ಈ ಪತ್ರಾನೂ ಇಲ್ಲೇ ಕಾಯ್ತಾ ಇರೋ ಕಸದ ಬುಟ್ಟಿ ಸೇರ್ತಾ ಇದೆ....
-ನಿನ್ನ ನೆನಪೆಂಬ ಕಂಬನಿಯ ಜೊತೆ ಬದುಕುತ್ತಿರುವವ.....

ತುಂಬಾ ಚೆನ್ನಾಗಿ ಬರೆದಿದ್ದೀರಿ
ತುಂಬಾ ಚೆನ್ನಾಗಿ ಬರೆದಿದ್ದೀರಿ ಹಾಗೇ ಮನಸನ್ನು ಆವರಿಸುತ್ತೆ ಓದುತ್ತಿರುವಾಗ ಇದು ನನ್ನ ಜೀವನದಲ್ಲಿ ನಡೆದ ಘಟನೆಯನ್ನು ನೆನಪಿಗೆ ತಂದಿತು....ಹೇಳದೆ ಕೇಳದೆ ಕಣ್ಣಿನಿಂದ ನೀರು ಜಾರಿ ಹೋಯಿತು
ಯಾರು ಮಗ ಸುಪರು ಕವಿಥೆ
ಯಾರು ಮಗ ಸುಪರು ಕವಿಥೆ
hi.. ಚನ್ನಾಗಿದೆ. ಇದು ನಿಮ್ಮ
hi.. ಚನ್ನಾಗಿದೆ. ಇದು ನಿಮ್ಮ ಕಲ್ಪನೆಯಲ್ಲಿ ಬರೆದ ಕಥೆ ಅಂತ ಅನ್ನಿಸುತ್ತದೆ. ನಿಜಾನಾ?????????
ಧನ್ಯವಾದಗಳು ರಾಣಿ ಅವರೆ
ಧನ್ಯವಾದಗಳು ರಾಣಿ ಅವರೆ ....
ಧನ್ಯವಾದಗಳು ಭಾಸ್ವಾನ್ ...ಹೌದು, ಇದು ಕಲ್ಪನೆಯಲ್ಲಿ ಅರಳಿದ ಪತ್ರ....
its very nice... is it ur own
its very nice... is it ur own story???
ನಿಮ್ಮ ಅನಿಸಿಕೆ ತಿಳಿಸಿ