ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ ...

ಬರೆದವರು: gopaljsr - ಕಳುಹಿಸಿದ ದಿನ 20 July 2009

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ
ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ !

ಸರಿಯ ತಪ್ಪು ತಿಳಿಯೇ ನಾನು ನಿನ್ನ ಮಾತ್ರ ಮರೆಯೆನು
ನನ್ನ ಕಷ್ಟ ನಿನ್ನದೆಂದು ತಿಳಿದು ನನ್ನ ಬೆಳೆಸೆಯಾ
ಮರೆಯಲಿದ್ದು ಮಾಡುತಿರುವೆ ನನ್ನದೆಂಬ ಕೀರ್ತಿ ಕೆಲಸವ
ನಾನು ಮಾಡಿಹೆನೆಂಬ ಕಾರ್ಯಗಳ ಪ್ರೀತಿಯಿಂದ ಕ್ಷಮಿಸೆಯಾ !!

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ
ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ !

ಮಡದಿ ಮಕ್ಕಳೆಂಬ ಮರಳುನಾಡಿನಲಿ ಅಮೃತದಂತೆ ಬಂದೆಯಾ
ನೀನು ಕೊಟ್ಟವೆಲ್ಲ ಭಾಗ್ಯವೆಂಬ ವಿಷಯವ ಈಗ ನಾನು ಅರಿತಿಹೆ
ನಿನ್ನ ನಾಮಾಮೃತವೆ ಚೆಂದ ಅದ ಅರಿಯುವ ಹಾಗೆ ಮಾಡೆಯಾ
ಗೂಡು ಹಕ್ಕಿ ಹಾಗೆ ನನ್ನ ಹೃದಯ ಮಂದಿರದಲಿ ನೆಲೆಸೆಯ !!

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ
ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ !

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 ಕೂಡಿಸು ಉತ್ತರ 3
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಗೋಪಾಲ್ ಕುಲಕರ್ಣಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಮನಸಿನ ಸುಮಧುರ ಭಾವನೆಗಳ ಮಹಾಸಾಗರದ ಅಲೆಗಳನ್ನು ಈ ಬ್ಲಾಗ್ ಮೂಲಕ ತಡೆಹಿಡಿಯುವ ಕಿರುಪ್ರಯತ್ನ....... ಮೂಲತಃ ಧಾರವಾಡದವನು. ಹೇಳಿಕೊಳ್ಳುವಂತಹ ಸಹಾಸವೇನು ಇಲ್ಲಿಯವರೆಗೂ ಮಾಡಿಲ್ಲ. ನಿಮ್ಮೆಲ್ಲಾ ಕವನ, ಲೇಖನ ಮತ್ತು ಬ್ಲಾಗ್ ಬರಹಗಳನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ನಾನು ಇಗ ಏನಾದ್ರು ಬರೀತಾ ಇದ್ರೆ ಅದೆಲ್ಲಕ್ಕೂ ನೀವುಗಳೇ ಕಾರಣ....... http://jaisrirama.blogspo...
ಇವರ ವಿಸ್ಮಯ ಪುಟ