ಹೇ ....ಅನಾಮಿಕ ಬಂಧು !!!

ಬರೆದವರು: ಕೆಎಲ್ಕೆ - ಕಳುಹಿಸಿದ ದಿನ 08 July 2009

ಕೆಲ ದಿನಗಳ ಹಿಂದೆ ವಿಕ ಭಟ್ಟರ ಪುಸ್ತಕ ಬಿಡುಗಡೆಗೆ ಬಂದಿದ್ದ ನಿನ್ನಿಂದಲೇ ಜಯಂತ್ 'ಅನಾಮಿಕರಾಗಿ ಅಂತರ್ಜಾಲದಲ್ಲಿ ಕಾಮೆಂಟ್ ಮಾಡುವರೆಲ್ಲ ಹೇಡಿಗಳು' ಅಂತಾ ಹೇಳಿಕೆ ಕೊಟ್ಟರು! ಇದರ ನಂತರ ಅವರ ಹೇಳಿಕೆಯ ಪರ-ವಿರೋಧ ಬಹಳೇ ಗಮ್ಮತ್ತಿನ ವಾದ-ವಿವಾದಗಳಾದವು. ಅದರ ನಂತರ ನಮ್ಮ ಪ್ರೀತಿಯ ಹುಡುಗಿ ನಾಗ್ತಿ 'ಬ್ಲಾಗಿಗಳಿಗೆ, ಕಮೆಂಟುದಾರರಿಗೆ ಕಡಿವಾಣ ಹಾಕುವ ಅಗತ್ಯವಿದೆ' ಎಂದು ಫರ್ಮಾನು ಹೊರಡಿಸಿದರು. ಹಾಗಾದರೆ, ಈ "ಅನಾಮಿಕ" ಸಣ್ಣವರಿಂದ ಹಿಡಿದು ಸಾಹಿತ್ಯ ಲೋಕದಲ್ಲಿ/ ಪತ್ರಿಕಾ ರಂಗದಲ್ಲಿ ಹೆಸರು ಮಾಡಿರುವವರನ್ನೂ ಬಿಡದೆ ಕಾಡುತ್ತಿದ್ದಾನೆ ಎಂದಾಯಿತು!

ಯಾರು ಈ ಅನಾಮಿಕ? ( 'ಅನಾಮಿಕ' ಎಂಬ ಶಬ್ದದ ಕಾಪಿರೈಟ್ ಶ್ರೀ ರಾಜೇಶ್ ಹೆಗಡೆಯವರಿಗೆ ಸಲ್ಲಬೇಕು. ಉಳಿದೆಲ್ಲ ಕನ್ನಡ ಅಂತರ್ಜಾಲ ತಾಣಗಳು guest , unknown, anonymous ಇತ್ಯಾದಿ ಪದ ಬಳಕೆ ಮಾಡುತ್ತಿವೆ) ಬರಿ ಹೆಸರಿಲ್ಲದವನೇ? ಅಥವಾ ಬೇರೆ ಹೆಸರಲ್ಲಿ ಬರೆಯುವವನೇ? ಬೇರೆ ಹೆಸರಲ್ಲಿ ಬರೆಯುವವನು ಹೇಗೆ ಅನಾಮಿಕನಾಗುತ್ತಾನೆ? ಅನಾಮಿಕ ಎಂಬ ಹೆಸರಿರುವವರೇ ಎಷ್ಟೋ ಇದ್ದಾರಲ್ಲ?( ಹೆಚ್ಚಾಗಿ ಹೆಣ್ಣುಮಕ್ಕಳು). ಅಷ್ಟೇ ಏಕೆ, ಕಾವ್ಯನಾಮಗಳೂ ಅನಾಮಿಕತೆಯ ಇನ್ನೊದು ರೂಪ ಅನ್ನಬಹುದೇ? ( ಜೋಗಿ, ಆನಂದ ಕಾವ್ಯ, ಕಾಮರೂಪಿ...). ನಾನೇ 'ಕೆಎಲ್ಕೆ' ಎಂಬ ಹೆಸರಿನಡಿ ಹೋಗಿ ಯಾವುದೋ ಅಂತರ್ಜಾಲದಲ್ಲಿ ಪ್ರತಿಕ್ರಿಯೆ ಬರೆದರೆ ಅಲ್ಲಿ ಅನಾಮಿಕನಾಗುತ್ತೇನೆಯೆ? ಅಥವಾ ನಾಮಿಕ(ನಾಮವುಳ್ಳ)ಅನಾಮಿಕ ಎಂದಾಗಬಹುದೇ? ಹೀಗೆ ಹತ್ತು ಹಲವು ಉತ್ತರಿಸಲಾಗದ ಪ್ರಶ್ನೆಗಳು...

ಈ ಅನಾಮಿಕ ಚರ್ಚೆಯ ಸಂಧರ್ಭದಲ್ಲಿ ನನ್ನ ಮಿತ್ರನೊಬ್ಬ ಹೇಳುತ್ತಿದ್ದ; ( ಆತನಿನ್ನು ಅನಾಮಿಕನಾಗಿ ಹೋಗಿ ಎಲ್ಲೆಲ್ಲಿ ಎಷ್ಟು ತೊಂದರೆ(?) ಕೊಡುತ್ತಾನೋ ಏನೋ!!) ಲಂಕೇಶ್ ಸುಮಾರು ಹದಿನಾರು ವರ್ಷ 'ನೀಲು' ಎಂಬ ಹೆಸರಲ್ಲಿ ಬರೆದರು. ನೀಲು ಎನ್ನುವವಳು ಹದಿನಾರರ ಹುಡುಗಿ ಎಂದುಕೊಂಡು ಓದುತ್ತಿದ್ದ ನಾವೆಲ್ಲಾ ಹದಿನಾರು ವರ್ಷ ಕಳೆದರೂ ಆಕೆ ಶೋಡಷಿಯೇ ಎಂದು ಕಲ್ಪಿಸಿದ್ದು ಸಾಹಿತ್ಯದ ಸಾಮರ್ಥ್ಯವೇ ಯಾ ಅನಾಮಿಕತೆಯ ಜಾದುವೆ? ಹೀಗೆ, ನೀಲುವನ್ನು, ಜಾನಕಿಯನ್ನು, ಸಿರಿಯನ್ನು ಒಪ್ಪಿಕೊಂಡ ನಾವು ಸಮಾಜಮುಖಿ, ಗಂಧ, ಕೊಂಕುಭಟ್ಟ, ಪೂನಾವಾಲರನ್ನು ಏಕೆ ಒಪ್ಪಿಕೊಳ್ಳುವುದಿಲ್ಲ? ( ಅವರೆಲ್ಲ ಇಲ್ಲೇ ವಿಸ್ಮಯದಲ್ಲಿ ಸದಾ ಓಡಾಡಿಕೊಂಡು, ಬೆರೆ ಬೆರೆ ಹೆಸರಲ್ಲಿ ಲೆಖನ ಬರೆಯುತ್ತಲಿರುವ ಪ್ರಜೆಗಳೇ ಇರಬಹುದೆಂಬ ಊಹೆ ಇದ್ದರೂ ಸಹ)

ನಮಗೆಲ್ಲ ಭಯವೇ? ನಾವು ಏನೇ ಬರೆದರೂ ಯಾವ್ಯಾವುದೋ ರೂಪದಲ್ಲಿ ಬಂದು ಏನೇನಾದರೂ ಝಾಡಿಸಿಯಾರೆಂಬ ಅಳುಕೇ? ಹಾಗಾದರೆ ನಮ್ಮ ಬರವಣಿಗೆಯಲ್ಲಿ ನಮಗೇ ವಿಶ್ವಾಸ ಇಲ್ಲವೆಂದಾಯಿತಲ್ಲವೇ? ಇತ್ತೀಚಿಗೆ ಅಂತರ್ಜಾಲದಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳು, ಅವುಗಳಲ್ಲಿಯ ತಪ್ಪುಗಳು, ಹೆಸರಾಂತ ಲೇಖಕರು ಬರೆಯುವ
(ಉದಾ- ವಿಕ ಭಟ್, ಪ್ರತಾಪ್ ಸಿಂಹ, ರವಿ ಬೆಳಗೆರೆ, ಮಣಿಕಾಂತ್ ಇತ್ಯಾದಿ) ಬರಹಗಳ ಮೂಲ ಹಾಗೂ ಸ್ಪೂರ್ತಿ ಯನ್ನು ಹುಡುಕಿತಂದು ಅಂತರ್ಜಾಲದಲ್ಲಿ ಹರಡಿಬಿಡುವುದು! ಇದನ್ನು ಮಾಡುವವರು ಮತ್ಯಾರೂ ಅಲ್ಲ ;ನಮ್ಮ ಅನಾಮಿಕ ಬಂಧುಗಳೇ! ಇದು ನಮ್ಮ ಬರಹಗಾರರ ತಲೆ ಕೆಡಿಸುತ್ತಿರಬಹುದೇ? ಒಟ್ಟಿನಲ್ಲಿ, 'ಹಂದಿ ಇದ್ದರೆ ಹೇಗೆ ಕೇರಿ ಶುದ್ಧವೋ ಹಂಗೆ' ಎಂಬ ದಾಸರ ಪದ ನೆನಪಿಸಿಕೊಳ್ಳುತ್ತಾ ಅನಾಮಿಕರಿರಬೇಕು ಎಂದು ನಾವು ಸಮಾಧಾನ ಪಟ್ಟುಕೊಳ್ಳುವದು ನಿಜವಾದ ಅನಾಮಿಕ ಕಾಳಜಿಗೋ ಅಥವಾ ಅನಾಮಿಕರನ್ನು ಹಂದಿಗೆ ಹೋಲಿಸಿ ಸೇಡು ತೀರಿಸಿ ಕೊಳ್ಳುವ ಪರಿಯೋ?

ಏನೇ ಹೇಳಿ, ಈ ಅನಾಮಿಕರ ಕಾಟ ತಪ್ಪದ ಅಂತರ್ಜಾಲ ತಾಣವೇ ಇಲ್ಲ. ದಟ್ಸ್ ಕನ್ನಡವಂತೂ 'ಕಾಮೆಂಟುದಾರರಿಗೆ ಸೂಚನೆ' ನೀಡುತ್ತಲೇ ಇರುತ್ತದೆ. ಕೆಂಡಸಂಪಿಗೆ, ಅವಧಿಗಳಲ್ಲಿ ಕಾಮೆಂಟುಗಳು moderator ಗಳ ಕೃಪಾ ಕಟಾಕ್ಷಕ್ಕೆ ಒಳಗಾಗಲೇ ಬೇಕು. ವಿಸ್ಮಯದಲ್ಲಿ ಈ ಅನಾಮಿಕರ ಬಗ್ಗೆ ನಡೆದ ಚರ್ಚೆಗಳು ನಿಮಗೆ ಗೊತ್ತೇ ಇದೆ. ಪ್ರಜೆಗಳಿಗಿಂತ ಇಲ್ಲಿ ಅನಾಮಿಕರು ಹೆಚ್ಚು ಖ್ಯಾತಿ-ಕುಖ್ಯಾತಿ ಎರಡೂ ಪಡೆದಿದ್ದಾರೆ. ಏನೇ ಆದರೂ ಅಂತರ್ಜಾಲಕ್ಕೆ ಅನಾಮಿಕರು ಅನಿವಾರ್ಯ. ಅವರನ್ನು ಹತ್ತಿಕ್ಕಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ, ಅನಾಮಿಕ ವ್ಯಕ್ತಿತ್ವದ ಅಸ್ತಿತ್ವವನ್ನೇ ಪ್ರಶ್ನಿಸಿದಂತಾಗುತ್ತದೆ, ಕೇರಿ ಕೊಳೆಯಾಗಿಯೇ ಉಳಿಯುತ್ತದೆ. ಸಾಲದೆಂಬಂತೆ 'ಯಾರಿರಬಹುದು ಈ ಅನಾಮಿಕ?' ಎಂಬ ಲೆಖಕನ ಊಹಾ ಶಕ್ತಿಗೆ ಕೆಲಸವಿಲ್ಲದಂತಾಗುತ್ತದೆ. icing on the cake ಅದು ಅಂತರ್ಜಾಲ ತಾಣದ ಬೆಳವಣಿಗೆಗೆ ಮುಳುವಾಗುತ್ತದೆ. ಈ ಅನಿವಾರ್ಯತೆಯ ಲಾಭ ಪಡೆದು ಅನೇಕ 'ವಿಕೃತಾಮಿಕರು' ( ಪತ್ರಿಕಾ ಸಾಹಿತ್ಯದ ಪ್ರಕಾರ 'ದುಷ್ಕರ್ಮಿಗಳು'!) ಸಾಧ್ಯವಾದಷ್ಟು ತೊಂದರೆ ನೀಡುತ್ತಾರೆ, ಮೋಜು ಪಡುತ್ತಾರೆ. ಇದು ಅನವರತ.

ಆದರೆ ವಿಧಿಯಿಲ್ಲ- "ಕಳೆಯಿಲ್ಲದೆ ಬೆಳೆಯಿಲ್ಲ; ಅನಾಮಿಕರಿಲ್ಲದೆ ಅಂತರ್ಜಾಲವಿಲ್ಲ!"

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
Muttige's picture
ಸೋಮ, 20/07/2009 - 23:07 ರಂದು Muttige ಅವರು ಹೇಳುತ್ತಾರೆ
@ಮೊದಲು ಕಾಮೆಂಟ್ ಹಾಕಿದ ಅನಾಮಿಕ

@ಮೊದಲು ಕಾಮೆಂಟ್ ಹಾಕಿದ ಅನಾಮಿಕ ಬಂಧುವಿಗೆ!
"ನಾನವನಲ್ಲ" ಮಾರಾಯ!! ಇನ್ನೇನನ್ನಲಿ...

@ಕೆಲ್ಕೆ
ಮುದ್ರಣ ಮಾಧ್ಯಮದಲ್ಲಂತೂ ಅನಾಮಧೆಯವರಿಗೆ ಅವಕಾಶ ಇಲ್ಲ, ಅಂತರ್ಜಾಲದಲ್ಲಾದರೂ ಇರಲಿ ಬಿಡಿ.ಅನಾಮಿಕತೆಯಲ್ಲಿ ಬರುವವರೆಲ್ಲ ಎಲ್ಲರೂ ಏನು ಇಲ್ಲದೇ ಇರುವುದನ್ನು ಹೇಳುವುದಿಲ್ಲ...ನನಗಂತು ದಟ್ಸ್ ಕನ್ನಡದಲ್ಲಿನ ಕಮೇಂಟ್ ಓದುವುದು ಪರಮ ಇಷ್ಟ. ಅಲ್ಲಿನ ಲೇಖನ ಓದುವುದಕ್ಕಿಂತ ಕಮೇಂಟ್ ಇಷ್ಟವಾಗುತ್ತದೆ.
ಹೆಸರಿಲ್ಲದೇ ಕಮೇಂಟ್ ಹಾಕಿದರೂ ಹೆಸರಿಟ್ಟು ಕಮೇಂಟ್ ಹಾಕಿದರೂ ಏನಾದರೂ ವ್ಯತ್ಯಾಸ ನನಗಂತೂ ಗೊತ್ತಾಗುತ್ತಿಲ್ಲ.ಬ್ಲಾಗಿಂಗ್,ಪರಿಚಯ ಇದ್ದರಷ್ಟೆ ಅವರ ಪರಿಚಯ ಇರುತ್ತದೆ.ಉದಾ.ಗೆ ನಿತಿನ್ ಹೆಸರಿನಲ್ಲೇ ಮತ್ತೊಬ್ಬ ಕಮೇಂಟ್ ಹಾಕಬಹುದಲ್ಲ...ಅದು ನಾನೇ ಹೇಗಾಗುತ್ತೆನೆ,ಅದರ ಬದಲು ಆತ ಅನಾಮಧೆಯನಾಗಿದ್ದರೆ ಯಾರಿಗೂ ತೊಂದರೆ ಇಲ್ಲವಲ್ಲ...ಹೆಸರು ಹಾಕಿದ ತಕ್ಷಣ ಎಲ್ಲರಿಗೂ "ಅವನೇ" ಅಂಥ ಗೊತ್ತಾಗಿಬಿಡುತ್ತದೆಯೇ? ಅಥವಾ ಬ್ಲಾಗಿಂಗ್,ಕಮೇಂಟ್ ಹಾಕುವವರು ಎಲ್ಲರಿಗೂ ಪರಿಚಯ ಇದ್ದವರು ಮಾತ್ರ ಹಾಕಬೇಕೆ?!!
ಭಾಷಣಗಾರರಿಗೆ ಇದೆಲ್ಲಾ ಗೊತ್ತಾಗುವುದಿಲ್ಲ ಬಿಡಿ..!!ಅದೇಲ್ಲಾ ಭಾಷಣಕ್ಕಷ್ಟೇ ಚೆಂದ...
ಅನಾಮಿಕತೆಯಲ್ಲಿ ವಿಕೃತಿಕಡಿಮೆಯಾದರೆ ಚೆಂದ ಎನ್ನುವುದು ನನ್ನ ಅಭಿಪ್ರಾಯ...

ಶಶಿ's picture
ಮಂಗಳ, 14/07/2009 - 15:37 ರಂದು ಶಶಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
('ಕಾವ್ಯ' ಅನ್ನುವ ಹೆಸರು ವಿನಯರು

('ಕಾವ್ಯ' ಅನ್ನುವ ಹೆಸರು ವಿನಯರು ತಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರೆದು ಕೊಳ್ಳಲು ಬಳಸುವ ಹೆಸರಲ್ಲವೆ?? ಇದೇನು ಇವರಿಬ್ಬರೂ ಯದ್ವಾ ತದ್ವಾ ಜಗಳಾಡುತ್ತಿದ್ದಾರೆ??

ವಿನಯ್_ಜಿ's picture
ಮಂಗಳ, 14/07/2009 - 15:08 ರಂದು ವಿನಯ್_ಜಿ ಅವರು ಹೇಳುತ್ತಾರೆ
'ನಿರ್ಲಜ್ಜೋ ಪರಮಸುಖಿ' ... ಇದು

'ನಿರ್ಲಜ್ಜೋ ಪರಮಸುಖಿ' ... ಇದು (ಅಭಿಮಾನಿ???) ತನನ್ನು ತಾನೇ ಬಣ್ಣಿಸಿಕೊಂಡಿರುವಂತೆ ಕಾಣುತ್ತದೆ.....! Wink

ಕಾವ್ಯ(ಅಭಿಮಾನಿ)'s picture
ಮಂಗಳ, 14/07/2009 - 15:22 ರಂದು ಕಾವ್ಯ(ಅಭಿಮಾನಿ) (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಅದು ಒಂದು ಬೈಗುಳ ಅಂತ ಕೂಡ

ಅದು ಒಂದು ಬೈಗುಳ ಅಂತ ಕೂಡ ಗೊತ್ತಿರಲಿಲ್ಲ ಅಲ್ಲವೇ ದೇವರೂ? ಯಾರೋ ತನ್ನನ್ನು ಹೊಗಳಿದ್ದಾರೆ ಎಂದುಕೊಂಡಿರಬೇಕು. ಯಾರೋ ಸ್ಪಷ್ಟನೆ ಕೇಳಿದ ಮೇಲೆ ಗೊತ್ತಾಯಿತು. ಅದಕ್ಕೇ ಅನ್ನುವದು ignorance is bliss ಅಂತ.

ವಿನಯ್_ಜಿ's picture
ಸೋಮ, 13/07/2009 - 14:14 ರಂದು ವಿನಯ್_ಜಿ ಅವರು ಹೇಳುತ್ತಾರೆ
ಕಾವ್ಯ(ಅಭಿಮಾನಿ???)

ಕಾವ್ಯ(ಅಭಿಮಾನಿ???) ಗೆ,

"ಸಾಯಿಸುತೆ, ಅನುಪಮಾ ನಿರಂಜನ, ಬಾನು ಮುಷ್ತಾಕ್ , ವೈದೇಹಿಯರಿಗೆ" ... ಹೆಸರುಗಳನ್ನು ಪಟ್ಟಿ ಮಾಡಿ ಬರೆದಿರುವುದನ್ನು ನೋಡಿದರೆ ನೀವು ಇವರೆಲ್ಲರ ಕ್ರತಿಗಳನ್ನ ಓದಿರುವಂತೆ ಕಾಣುತ್ತದೆ... ಇರಲಿ... ಅದರೆ ಇನ್ನು ಮುಂದೆ ಜಾಸ್ತಿ ಓದಬೇಡಿ... ಎಕೆಂದರೆ ಹೀಗೆ ಇದ್ದಬದ್ದದನೆಲ್ಲ "Comparision" ಮಾಡ ಹೊರಟರೆ ಒಂದು ದಿನ ನಿಮ್ಮ ಮೆದುಳು Damage ಆಗೋ Chance ಜಾಸ್ತಿ ಇದೆ...!

ಕಾವ್ಯ(ಅಭಿಮಾನಿ)'s picture
ಸೋಮ, 13/07/2009 - 14:45 ರಂದು ಕಾವ್ಯ(ಅಭಿಮಾನಿ) (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ನಿರ್ಲಜ್ಜೋ ಪರಮಸುಖಿ.

ನಿರ್ಲಜ್ಜೋ ಪರಮಸುಖಿ.

ಡಿ.ಜೆ's picture
ಮಂಗಳ, 14/07/2009 - 14:35 ರಂದು ಡಿ.ಜೆ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ನೀವು 'ನಿರ್ಲಜ್ಜೋ ಪರಮಸುಖಿ'

ನೀವು 'ನಿರ್ಲಜ್ಜೋ ಪರಮಸುಖಿ' ಎಂದದ್ದು ವಿನಯರಿಗೋ ಅಥವಾ ಅನಾಮಿಕರಿಗೊ ತಿಳಿಯಲಿಲ್ಲ !!

ಕಾವ್ಯ(ಅಭಿಮಾನಿ)'s picture
ಮಂಗಳ, 14/07/2009 - 15:12 ರಂದು ಕಾವ್ಯ(ಅಭಿಮಾನಿ) (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಯಾವುದೋ ಲೇಖನದ ಭಾಗ 1 ಮತ್ತು ಭಾಗ

ಯಾವುದೋ ಲೇಖನದ ಭಾಗ 1 ಮತ್ತು ಭಾಗ 2 ಪ್ರಕಟಿಸುವ ಮಧ್ಯೆ ಇನ್ಯವುದೋ ಲೇಖನ ಬರೆಯುವ ಅಸೀಮ ಬಲ ಪರಾಕ್ರಮಿಗೆ. ತಮ್ಮ ಲೇಖನಕ್ಕೆ ತಾವೇ ಹೊಗಳಿಕೊಳ್ಳುವ ಪುರುಷ ಪುಂಗವನಿಗೆ, ಸರಿಯಾಗಿ ಅವಮಾನಿಸಿದರೆ ಗೊತ್ತು ಕೂಡ ಆಗದ ಹನುಮಪ್ಪ ಸ್ವಾಮಿಗೆ, ತನ್ನ ಬರೆಹ ಕೆಟ್ಟದಾಗಿದೆ ಎಂಬ ಅಳುಕು ಕೂಡ ಇಲ್ಲದ ನಿರ್ಲಜ್ಜನಿಗೆ, ಯಾರೇ ಎಷ್ಟೇ ಕೂಗಾಡಿದರೂ, ತೆಗಳಿದರೂ, ಮರ್ಯಾದೆ ಕಳೆದರೂ ಮತ್ತೆ ಮತ್ತೆ ತಮ್ಮ ಹಲ ಹತ್ತು ಕಡೆಗಳಿಂದ ಕದ್ದ, ಕಳಪೆ ಲೇಖನಗಳನ್ನು ಪ್ರಕಟಿಸುವ ವಿನಯವಂತರಿಗೆ 'ನಿರ್ಲಜ್ಜೋ ಪರಮಸುಖಿ' ಎಂದದ್ದು. ಇನ್ನೇನೆನ್ನಲಿ?

ವಿನಯ್_ಜಿ's picture
ಮಂಗಳ, 14/07/2009 - 15:22 ರಂದು ವಿನಯ್_ಜಿ ಅವರು ಹೇಳುತ್ತಾರೆ
ಅಶ್ಚರ್ಯ, ಪರಮಶ್ಚರ್ಯ... ಒಂದೂ

ಅಶ್ಚರ್ಯ, ಪರಮಶ್ಚರ್ಯ... ಒಂದೂ ಲೇಖನ/ಪಿಸುಮಾತು ಬರೆಯದವರಿಂದ ಈ ಹೊಗಳಿಕೆ...! ಮೊದಲು ಬರೆದು ತೋರಿಸಿ ಸ್ವಾಮಿ, ನಂತರ ಎಲ್ಲರನ್ನು ಹೊ(ತೆ)ಗಳಿ....! ಸುಮ್ಮನೆ Comment ಹಾಕೋಕೆ ಎಲ್ಲಾರು ಇದ್ದರೆ ಬಿಡಿ....

ಕಾವ್ಯ(ಅಭಿಮಾನಿ)'s picture
ಮಂಗಳ, 14/07/2009 - 15:26 ರಂದು ಕಾವ್ಯ(ಅಭಿಮಾನಿ) (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಭಲೆ, ಎಂತ ಅರ್ಥಗರ್ಹಿತ ಮಾತು

ಭಲೆ, ಎಂತ ಅರ್ಥಗರ್ಹಿತ ಮಾತು ದೇವರೂ. ನಿಮ್ಮ ಛಾಲೇಂಜನ್ನು ನೋಡಿದರೆ ಹಂದಿಯನ್ನು ಹಳಿಯಲು ಹಂದಿಯಾಗಿ ಹುಟ್ಟಬೇಕು.

ವಿನಯ್_ಜಿ's picture
ಮಂಗಳ, 14/07/2009 - 16:00 ರಂದು ವಿನಯ್_ಜಿ ಅವರು ಹೇಳುತ್ತಾರೆ
"ಹಂದಿಯನ್ನು ಹಳಿಯಲು ಹಂದಿಯಾಗಿ

"ಹಂದಿಯನ್ನು ಹಳಿಯಲು ಹಂದಿಯಾಗಿ ಹುಟ್ಟಬೇಕು"... ನಿಜ ಇದು ನಿಮ್ಮ ಮನಸ್ಥಿತಿಯನ್ನು ಯತವತ್ತಾಗಿ ಬಣ್ಣಿಸುತ್ತದೆ... ಮತ್ತೆ ಮುಂದೇನು ಹೇಳುವುದಕ್ಕೆ ಉಳಿದಿಲ್ಲ ಬಿಡಿ...! ದೇವರು ನಿಮಗೆ ಯಾವಾಗಲು ಸದಾ ಒಳಿತನ್ನೆ ಕೊಡಲಿ ಏಂದು ಅಶಿಸುತ್ತ.... Smile ವಿನಯ

ಕಿಟ್ಟಿ's picture
ಶುಕ್ರ, 10/07/2009 - 11:45 ರಂದು ಕಿಟ್ಟಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಎಲೇ ಅನಾಮಿಕ ಬಂಧುವೇ, ನಿಮ್ಮ

ಎಲೇ ಅನಾಮಿಕ ಬಂಧುವೇ,
ನಿಮ್ಮ ಹೆಸರೊಂದನ್ನು ಬಿಟ್ಟು ಇನ್ನೆಲದ್ದನ್ನು ನಿಮ್ಮ ಸ್ವಂತ Reasearch ನ ಬಲದಿಂದ (!?!) ಪಟ್ಟಿ ಹಾಕಿದಿರಲ್ಲರೀ...!
ಇದೊಂದ್ ತರ ಒಳ್ಳೆ ಫಿಲ್ಮ ತೋರಿಸಿ intervel ಗೆ "The End" ನ ಹಾಕ್ದಂಗಾಯ್ತು....!
... ಕಿಟ್ಟಿ (krishnamurty)

ಅನಾಮಿಕ ಬಂಧು's picture
ಶುಕ್ರ, 10/07/2009 - 10:22 ರಂದು ಅನಾಮಿಕ ಬಂಧು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಅನಾಮಿಕರ ಗುಟ್ಟು

ಅನಾಮಿಕರ ಗುಟ್ಟು ರಟ್ಟಾಗಿದೆ!
ಸಮಾಜಮುಖಿ= ವಿ.ಎಂ. ಶ್ರೀನಿವಾಸ್
ಕನ್ನಡಿಗನು= ನಿತಿನ್ ಮುತ್ತಿಗೆ
ಕೊಂಕುಭಟ್ಟ= ಕೆಎಲ್ಕೆ
ಗಂಧ=ಶ್ರೀಕಾಂತ್ ಹೆಗಡೆ(ಸಿರಿರಮಣ)
ಗೆಂಡೆ ತಿಮ್ಮ=ಶಿವಕುಮಾರ್ ಕೆ.ಎಸ್
ಪೂನಾವಾಲ= ರಾಜೇಶ್ ಹೆಗಡೆ
ಬೆಣ್ಣೆ ಗೋವಿಂದು= ಅಚ್ಚು ಹೆಗ್ಡೆ
ಜೇಮ್ಸ್ ಬಾಂಡ್= ವಿನಯ್ ಜಿ.
ಕಾವ್ಯ(ಅಭಿಮಾನಿ)=ವಿನಯ್ ಜಿ.
ಇದನ್ನು ಪಕ್ಕಾ ಎಂದು ಹೇಳಲಾಗದು, ಏಕೆಂದರೆ ಈ ಹೆಸರುಗಳನ್ನು ಉಪಯೋಗಿಸಿಕೊಂಡು ಅನೇಕ ಅನಾಮಿಕರೂ ಕಾಮೆಂಟುಗಳನ್ನು ಹಾಕುತ್ತಿದ್ದಾರೆ, ನೀವೇನಂತೀರಿ?
--ಬರೆದವರು: ಅನಾಮಿಕ ಬಂಧು!@#$%^&

ಕಾವ್ಯ(ಅಭಿಮಾನಿ)'s picture
ಸೋಮ, 13/07/2009 - 13:38 ರಂದು ಕಾವ್ಯ(ಅಭಿಮಾನಿ) (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ವಿನಯ್ ಅವರ ಮರ್ಯಾದೆ ಕಳೆಯಲೆಂದೇ

ವಿನಯ್ ಅವರ ಮರ್ಯಾದೆ ಕಳೆಯಲೆಂದೇ ಬರೆದಂತಿದೆ. ಅವರು ವಾರಕ್ಕೆ ನಾಲ್ಕು ಬರೆದು ಬೀಸಾಕಿದರೂ ಸಾಕಾಗಲಿಲ್ಲವೇ? ನೀವು ಹೇಳಿದ್ದಕ್ಕೆಲ್ಲ ಹೆದರಿ ಅವರು ಬರೆಯದಿರಲು ಅವರೇನು ಸ್ವಂತದ್ದಾ ಬರೆಯುವದು? ಅವರ ಕೃತಿಗೆ ಯಾರಾದರೂ ಉಗಿದರೆ ಅದು ಸೀದಾ ಸಾಯಿಸುತೆ, ಅನುಪಮಾ ನಿರಂಜನ, ಬಾನು ಮುಷ್ತಾಕ್ , ವೈದೇಹಿಯರಿಗೆ ತಗಲುತ್ತದೆ. ಹುಷಾರ್ . ಮತ್ತೆ ಈಗೀಗ ಅವರು ಫೋಟೋ ಹಾಕುವದಿಲ್ಲವಲ್ಲ ಅದಕ್ಕಾಗಿ ಜಯಂತ ಕಾಯ್ಕಿಣಿಗಾದರೂ ಉಗಿದು ಉಪ್ಪುಹಾಕಿಯಾರು.

ಕೆಎಲ್ಕೆ 's picture
ಬುಧ, 15/07/2009 - 10:25 ರಂದು ಕೆಎಲ್ಕೆ ಅವರು ಹೇಳುತ್ತಾರೆ
ಕಾವ್ಯ(ಈ 'ಅಭಿಮಾನಿ' ಅಂತಾ

ಕಾವ್ಯ(ಈ 'ಅಭಿಮಾನಿ' ಅಂತಾ ಕಂಸದಲ್ಲಿ ಸೇರಿಸಿರುವದು ಏಕೆ?)
ಯಾರ ಕುರಿತೂ ಈ ಲೇಖನ ಬರೆದದ್ದಲ್ಲ. 'ಅನಾಮಿಕ' ಎಂಬುದು ಒಂದು generalised ಪದ. ಹಾಗೂ ಇಂದಿನ ಅಂತರ್ಜಾಲ ಲೋಕದ 'ಬಿಸಿ ತುಪ್ಪ'. ದಯವಿಟ್ಟು ಲೇಖನದ ಉದ್ದೇಶವನ್ನು ಅಪಾರ್ಥಿಸುವದು ಬೇಡ.

ರಾಜೇಶ ಹೆಗಡೆ's picture
ಶುಕ್ರ, 10/07/2009 - 22:45 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
ಹಾಯ್ ಅನಾಮಿಕ ಬಂಧು ಅವರೇ, ಅವರೇ

ಹಾಯ್ ಅನಾಮಿಕ ಬಂಧು ಅವರೇ,
ಅವರೇ ತಮ್ಮ ಊಹೆಗಳು ಚೆನ್ನಾಗಿವೆ. Smile ಆದರೆ ವಿಸ್ಮಯದಲ್ಲಿ ಅನಾಮಿಕನಾಗಿ ಹಾಕಿದ ಕಮೆಂಟ್ ನನ್ನದು ಒಂದೂ ಇರದಿರುವದು ನಿಮ್ಮ ದುರದೃಷ್ಟ. ಇಲ್ಲಿನ ಲೇಖನಗಳನ್ನು ಮಾಡರೇಟ್ ಮಾಡಿ, ಹೊಸ ಸೌಲಭ್ಯ ಏನು ಕೊಡಲಿ ಎಂಬುದರ ಬಗ್ಗೆ ಮಾತ್ರ ನಾನು ತಲೆ ಕೆಡಿಸಿಕೊಳ್ಳುತ್ತೇನೆ. ಅಪರೂಪಕ್ಕೊಮ್ಮೆ ಲೇಖನ ಬರೆಯಲು ಪ್ರಯತ್ನ ಪಡುತ್ತೇನೆ. ಆದರೆ ವಿಸ್ಮಯದಲ್ಲಿ ಲಾಗಿನ್ ಆಗದೇ ಅಥವಾ ಬೇರೆ ಐಡಿ ಹೆಸರಲ್ಲಿ ಮಾಡಿದ ನನ್ನ ಒಂದೇ ಒಂದು ಅಭಿಪ್ರಾಯ ಸಹ ಇಲ್ಲ ಎಂದು ಹೇಳ ಬಯಸುತ್ತೇನೆ. ಮೇಲಧಿಕಾರಿ ಹಾಗೂ ರಾಜೇಶ ಹೆಗಡೆ ಈ ಹೆಸರಲ್ಲಿ ಮಾಡಿದ ಅಭಿಪ್ರಾಯ ಮಾತ್ರ ನನ್ನವು. ಬಹುಶಃ ಹಾಗೆ ಮಾಡಿದ್ದರೆ ವಿಸ್ಮಯ ಇನ್ನೂ ಜನಪ್ರಿಯವಾಗುತ್ತಿತ್ತೇನೋ ಗೊತ್ತಿಲ್ಲ. ಅದು ನನಗೆ ಬೇಕಾಗಿಲ್ಲ. ವಿಸ್ಮಯದಲ್ಲಿ ನನ್ನ ಹೆಸರಲ್ಲೇ ಕಮೆಂಟ್ ಹಾಕುವದೇ ನನಗೆ ಇಷ್ಟ.
ತಿಂಗಳಿಗೆ 5000 ಕ್ಕೂ ಹೆಚ್ಚು Unique Visitors ಹೊಂದಿರುವ ವಿಸ್ಮಯ ನಗರಿಯಂತಹ ತಾಣದಲ್ಲಿ ಈ ಅನಾಮಿಕರು ಬೇರೆ ಆಗಿರುವ ಸಾಧ್ಯತೆಯೇ ಜಾಸ್ತಿ ಅನ್ನುವದು ನನ್ನ ಅನಿಸಿಕೆ.

ಹಾಯ್ ಕೆಲ್ಕೆ ಅವರೇ,

ಅನಾಮಿಕರಾಗಿ ಅಭಿಪ್ರಾಯ ವ್ಯಕ್ತ ಪಡಿಸುವವರ ಬಗ್ಗೆ ಒಳ್ಳೆಯ ಲೇಖನ ಬರೆದಿದ್ದೀರಾ. ಎಲ್ಲರಿಗೂ ಅಭಿಪ್ರಾಯ ವ್ಯಕ್ತ ಪಡಿಸಲು ಆಗಲಿ ಎಂಬುದೇ ಈ ಸೌಲಭ್ಯದ ಮೂಲ ಉದ್ದೇಶ. ಅದನ್ನು ದುರುಪಯೋಗ ಪಡಿಸಿಕೊಳ್ಳುವವರೂ ಉಂಟು. ನೆಗಡಿ ಆಗಿದೆ ಎಂದು ಮೂಗನ್ನು ಕೊಯ್ದುಕೊಳ್ಳುವದಕ್ಕಿಂತ ಔಷಧಿ ತೆಗೆದುಕೊಳ್ಳುವದು ಒಳ್ಳೆಯದು. ಅಶ್ಲೀಲತೆ, ವ್ಯಕ್ತಿ ನಿಂದನೆ ಇತ್ಯಾದಿಗಳು ಕಂಡು ಬಂದಾಗ ಮೇಲಧಿಕಾರಿಗಳು ಕತ್ತರಿ ಪ್ರಯೋಗ ಮಾಡುವವರು. Laughing out loud

ಕೆಎಲ್ಕೆ 's picture
ಬುಧ, 15/07/2009 - 10:24 ರಂದು ಕೆಎಲ್ಕೆ ಅವರು ಹೇಳುತ್ತಾರೆ
ಅನಾಮಿಕ ಬಂಧುಗಳೇ, ನಿಮ್ಮ

ಅನಾಮಿಕ ಬಂಧುಗಳೇ,
ನಿಮ್ಮ ಊಹೆಯಡಿಯಲ್ಲಿ ನನ್ನ ಹೆಸರೂ ಇರುವುದು ಆಶ್ಚರ್ಯ. ನನಗೆ ಗೊತ್ತಿರುವ ಮಟ್ಟಿಗೆ 'ಕೊಂಕುಭಟ್ಟ' ಅನ್ನುವವರು ವಿಸ್ಮಯದ ಪ್ರಜೆ. ಅವರು ತಮ್ಮದೇ id ಅಡಿಯಲ್ಲಿ ಬರೆಯುತ್ತಾರೆ. ಈ ನಿಮ್ಮ ಗುಟ್ಟು ರಟ್ಟಿನ ಹಿಂದಿರುವ ಲಾಜಿಕ್ಕನ್ನೂ ತಿಳಿಸಿದ್ದರೆ ಉತ್ತಮವಾಗುತ್ತಿತ್ತು.
ಪ್ರಿಯ ರಾಜೇಶ್,
ಹೌದು, ಅನಾಮಿಕರನ್ನು ಹತ್ತಿಕ್ಕುವದು ಯೋಗ್ಯವಲ್ಲ. ಈಗ ನೀವು ಅನುಸರಿಸುತ್ತಿರುವ ಕ್ರಮ ಸರಿಯಾಗೇ ಇದೆ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 + 13 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಕೆ ಎಲ್ ಕೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಇದು ಇಲ್ಲಿ ಅಪ್ರಸ್ತುತ ಹಾಗು ಅನಗತ್ಯ
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content