ಪಾಪು ಪಾಪು ಎ೦ದು ಕೂಗಿದರು ಅಮ್ಮ
ಸಿಕ್ಕಿದರೆ ಸರಿ ಬುದ್ದಿ ಕಲಿಸುವೆ ಎ೦ದರಮ್ಮ
ಮುಗಿಲ ಪಕ್ಶಿಯಾಗಿ ತೆಲುತಲಿದ್ಧೆ ನಾನಮ್ಮ
ನನ್ನ ಲೋಕದ ದೋರೆ ನಾನಾಗಿದ್ದೆನಮ್ಮ
ಸರಿ ತಪ್ಪು ಸುಳ್ಳಿನ ನೆಲೆ ನನದಲ್ಲಮ್ಮ
ಆದರು ಸ್ವಲ್ಪ ಹಟಮಾರಿ ನಾನಮ್ಮ
ಆಸೂಯೆ ಜ೦ಭದ ನೀತಿ ಎಲ್ಲಿದೆಯಮ್ಮ
ಎಲ್ಲ ನಾವು ಕೂಡಿ ಆಡಿದೆವಮ್ಮ
ಆ೦ದು ನಾನು ಹೇಳಲಿಲ್ಲ ಓ೦ದು ಸುಳಮ್ಮ
ಇ೦ದು ಹೇಳುವೆ ನೂರಾರು ದಿನಕಮ್ಮ
ಅ೦ದು ಎಲ್ಲಾ ನನ್ನ ಗೆಳೆಯರಮ್ಮ
ಯಾಕೆ ಇ೦ದು ಅನಿಸುತಾರೆ ಅಪರಿಚಿತರಮ್ಮ
-Rashmi Veerendra
ನಿಮ್ಮ ಅನಿಸಿಕೆ ತಿಳಿಸಿ