ಮೈಕೇಲ್ ಜಾಕ್ಸನ್ - ಪಾಪ್ ಜಗತ್ತಿನ ಅನಭಿಷಿಕ್ತ ದೊರೆ ಕಾಲನಲ್ಲಿ ಲೀನನಾದ ಸುದ್ದಿ "ಅಭಿಮಾನಿ" ಗಳಿಗೆ ಮುಂಜಾನೆಯ ಹೊತ್ತಿಗೆ ಬರಸಿಡಿಲಿನಂತೆ ಬಂದೊರಗಿತ್ತು. ಮೈಕಲ್ ಜಾಕ್ಸನ್ ಈ ಶತಮಾನ ಕಂಡ ಶ್ರೇಷ್ಠ ಕಲಾಕಾರ ಎನ್ನುವುದನ್ನು ಹೆಚ್ಚಿನವರು ವಿರೋಧಿಸಲಿಕ್ಕಿಲ್ಲ. ಜೀವನದಲ್ಲಿ ಕೊನೆಯ ಸಮಯದಲ್ಲಿ ಆತ ಸಂಗೀತಕ್ಕಿಂತ ವಿವಾದಗಳಿಂದಾಗಿಯೇ ಹೆಚ್ಚು ಸುದ್ದಿಯಲ್ಲಿದ್ದ. ಇಷ್ಟು ಬೇಗ ಅವರು ಇಹಲೋಕ ತ್ಯಜಿಸಿದ್ದು, ಅವರ ಅಭಿಮಾನಿಗಳಿಗೆ ತೀವ್ರ ನೋವು ತರುವ ಸಂಗತಿಯಾಗಿದೆ. ಆದರು ವಿಧಿಯಾಟದ ಮುಂದೆ ಯಾರದ್ದು ನಡೆಯುವದಿಲ್ಲ. ಪಾಪ್ ಸಂಗೀತದ ಅದ್ವಿತೀಯ ಚೇತನಕ್ಕೆ ನಮನ.

ನಿಮ್ಮ ಅನಿಸಿಕೆ ತಿಳಿಸಿ