ಮನೆ ಕಟ್ಟಿ ನೋಡು!!

ಬರೆದವರು: ಮನೆ - ಕಳುಹಿಸಿದ ದಿನ 24 June 2009

ಸೇವೆಯ ಮಿತಿ:ಅನ್ವಯ ವಾಗುವದಿಲ್ಲ
ಆರಂಭವಾದದ್ದು:1998
ವಿಳಾಸ/ಅಡ್ರೆಸ್:ಬೆಂಗಳೂರಿನ ಯಾವ ಮೂಲೆಯಲ್ಲಿ ಬೇಕಾದರೂ ಮನೆ ಕಟ್ಟಿ ಕೊಡಲಾಗುತ್ತದೆ. ಆಫೀಸು ಇರುವದು ಮಹಾಲಕ್ಕ್ಷ್ಹ್ಮಿಪುರ ದಲ್ಲಿ. ಯಶವಂತ ಪುರದಲ್ಲಿ ಮನೆ- ಮನೆಯಲ್ಲೂ ಪಾರ್ಟ್-ಟೈಮ್ ಆಫೀಸು ಇದೆ.
ಜಿಲ್ಲೆ:ಬೆಂಗಳೂರು ನಗರ
ತಾಲೂಕು:
ರಾಜ್ಯ:ಕರ್ನಾಟಕ
ದೇಶ:ಭಾರತ
ಫೋನ್ ನಂಬರ್1:+91 9845583070
ಫೋನ್ ನಂಬರ್2:+91 9731109144
ಫ್ಯಾಕ್ಸ್:ಇಲ್ಲ
ಮೊಬೈಲ್:9845583070
ಈಮೇಲ್:
ವೆಬ್ ಸೈಟ್:ಸದ್ಯಕ್ಕೆ ಯಾವುದೂ ಇಲ್ಲ
ತೆರೆದಿರುವ ಸಮಯ:ಯಾವುದೇ ವೇಳೆಯಲ್ಲೂ ಸಂಪರ್ಕಿಸಬಹುದು
ಮುಚ್ಚಿರುವ ದಿನಗಳು:ಮುಚ್ಚಿರುವ ಸಮಯ/ದಿನ ಅಂತ ಇಲ್ಲ.ಯಾವುದೇ ವೇಳೆಯಲ್ಲೂ ಸಂಪರ್ಕಿಸಬಹುದು
ವಿವರಗಳು:

ಪ್ರಿಯರೆ,
ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಮನೆ ಕಟ್ಟುವುದೆಂದರೆ ಎಷ್ಟು ಕಷ್ಟ ಎಂಬುದು ನಿಮಗೆಲ್ಲ ಗೊತ್ತಿದ್ದುದೇ. ಹೇಗೋ ಒಂದು ಸೈಟು ಕೊಂಡು ,ಹಣ ಹೊಂದಿಸಿ ಮನೆ ಕಟ್ಟೋಣ ಅಂದರೆ 'ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ' ಎಂಬ ಅವಸ್ಥೆ ಹೆಚ್ಚಿನವರದು- ಅಂದರೆ ಒಳ್ಳೆಯ ಗುತ್ತಿಗೆದಾರರ ( Contractor ) ಗಳ ಕೊರತೆ. ಈ contractor ಗಳ ಕಥೆ, ಗೋಳು ನೀವೆಲ್ಲ ಕೇಳಿ ತಿಳಿದಿದ್ದೆ.
ಈ ಯಾವ ಸಮಸ್ಯೆಗಳೂ ಇಲ್ಲದೆ, ಅತಿ ನೇರ, ಸರಳ ವ್ಯವಹಾರದೊಂದಿಗೆ; ಕಡಿಮೆ ಬೆಲೆಯಲ್ಲಿ, ಉತ್ತಮ ಗುಣಮಟ್ಟದ ಮನೆ ಕಟ್ಟಿಸಿಕೊಳ್ಳಬೇಕೆಂಬ ಬಯಕೆ ನಿಮಗಿದೆಯೇ? ಹಾಗಾದರೆ ನನ್ನನ್ನು ಸಂಪರ್ಕಿಸಿ.
ಎಲ್ಲ ಗುತ್ತಿಗೆದಾರರೂ ಇದನ್ನೇ ಹೇಳುವುದು, ಒಮ್ಮೆ contract ಕೊಟ್ಟಮೇಲೆ ಶುರುವಾಗುತ್ತದೆ ರಗಳೆ ಎಂಬ ಅಭಿಪ್ರಾಯ ನಿಮ್ಮದಿರಬಹುದು. ಆದರೆ ಪ್ರಯತ್ನಿಸದೆ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ. ಯಾರೋ ಅರಿಯದ ( ಅನ್ಯ ಭಾಷಿಗ ಬೇರೆ!), ಯಾರೋ ರೆಫರ್ ಮಾಡಿದ ಗುತ್ತಿಗೆದಾರರಲ್ಲಿ ಹೋಗಿ ನಂತರ ಬೇಸರಿಸದಿರಿ.
ನನ್ನನ್ನೊಮ್ಮೆ ಸಂಪರ್ಕಿಸಿ- ಸರಿಯಿಲ್ಲ ಎನ್ನಿಸಿದರೆ ಬೇರೆಯವರು ಇದ್ದೇ ಇದ್ದಾರಲ್ಲ!

ಮನೆ ಕಟ್ಟಿಕೊಡುವುದರ ಜೊತೆ ಈ ಕೆಳಗಿನ ಸೇವೆಗಳೂ ಉಚಿತವಾಗಿ ಲಭ್ಯ:
- ವಾಸ್ತು ಕಂಸಲ್ಟೆನ್ಸಿ
- ಮನೆ ನಕ್ಷೆ- ತಮ್ಮ ಇಷ್ಟಕ್ಕೆ, ಅನುಕೂಲಕ್ಕೆ ತಕ್ಕಂತೆ ವಾಸ್ತು ಪ್ರಕಾರ
- structural ಡಿಸೈನ್, ನಿಮ್ಮ ಮನೆಗೆ
- approval drawings
- ವಿದ್ಯುತ್, ನೀರು ಕನೆಕ್ಷನ್ ಪಡೆದುಕೊಳ್ಳಲು ಸಹಾಯ
- BDA/BMRDA/BBMP ಯಿಂದ ನಕ್ಷೆ ಮಂಜೂರಾತಿಗೆ ಸಹಾಯ

ಇಂಗ್ಲೀಷ್ ನಲ್ಲಿ:ಕನ್ನಡ ಓದಲು ಬಾರದವರು ವಿಸ್ಮಯಕ್ಕೆ ಭೇಟಿ ನೀಡುವುದು ಕಡಿಮೆ ಎಂದುಕೊಂಡಿರುವುದರಿಂದ ಇಂಗ್ಲಿಷ್ ನಲ್ಲಿ ವಿವರಣೆ ಅಗತ್ಯ ಇಲ್ಲ ಎಂದೆನಿಸುತ್ತದೆ.
ಮೇಲಧಿಕಾರಿ's picture
ಬುಧ, 08/07/2009 - 08:05 ರಂದು ಮೇಲಧಿಕಾರಿ ಅವರು ಹೇಳುತ್ತಾರೆ
Re: ಮನೆ ಕಟ್ಟಿ ನೋಡು!!

Quote:
ಕನ್ನಡ ಓದಲು ಬಾರದವರು ವಿಸ್ಮಯಕ್ಕೆ ಭೇಟಿ ನೀಡುವುದು ಕಡಿಮೆ ಎಂದುಕೊಂಡಿರುವುದರಿಂದ ಇಂಗ್ಲಿಷ್ ನಲ್ಲಿ ವಿವರಣೆ ಅಗತ್ಯ ಇಲ್ಲ ಎಂದೆನಿಸುತ್ತದೆ

ಕನ್ನಡ ಬಾರದವರಿಗೆ ವಿಸ್ಮಯ ನಗರಿಯಲ್ಲೇನು ಕೆಲಸ ಇರುವದಿಲ್ಲ. ಸ್ಪ್ಯಾಮ್ ಹಾಕಲು ಪ್ರಯತ್ನ ಪಡುವದನ್ನು ಬಿಟ್ಟು. Laughing out loud
ತುಂಬಾ ಚೆನ್ನಾಗಿ ಬರೆದಿದ್ದೀರಾ. ವಿಸ್ಮಯ ಮಾರ್ಕೆಟ್ ನ ಉದ್ದೇಶ ಕೂಡಾ ಇದೆ. ಕನ್ನಡಿಗರಿಗಾಗಿ ಕನ್ನಡದಲ್ಲಿ ಡೈರೆಕ್ಟರಿ. ನಿಮ್ಮ ಕಂಪನಿ ಅಥವಾ ಸಂಪರ್ಕ ವ್ಯಕ್ತಿಯ ಹೆಸರು ಇದ್ದರೆ ಇನ್ನೂ ಉಪಯೋಗವಾಗುತ್ತಿತ್ತು.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
16 + 0 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಸಿಂಡೀಕೇಟ್
Syndicate content