ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಮೈಕ್ರೋಸಾಫ್ಟ ನ ಬಿಲ್ ಗೇಟ್ಸ್ ಪ್ರಪಂಚದ ಅತಿ ಶ್ರೀಮಂತ ಮನುಷ್ಯ ಆಗಿದ್ದಾರೆ. ಹಿಂದಿನ ಬಾರಿ ಮೂರನೇ ಸ್ಥಾನಕ್ಕೆ ಇಳಿದಿದ್ದ ಅವರು ಆಗ 58 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದರು. ಈಗ ಬರೀ 40 ಬಿಲಿಯನ್ ಡಾಲರ್ ಹೊಂದಿದ್ದರೂ ಪ್ರಥಮ ಸ್ಥಾನದಲ್ಲಿದ್ದಾರೆ!
ಹಿಂದಿನ ಬಾರಿಯ ವಾರೆನ ಬಫೆಟ್ 37 ಬಿಲಿಯನ್ ಡಾಲರ್ ನೊಂದಿಗೆ ಎರಡನೆ ಸ್ಥಾನಕ್ಕೆ ಇಳಿದಿದ್ದು ಹಿಂದೆ 62 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದರು. ಆರ್ಥಿಕ ಬಿಕ್ಕಟ್ಟು ಸುಮಾರು 2 ಟ್ರಿಲಿಯನ್ ಮೌಲ್ಯ ಪ್ರಪಂಚದ ಬಿಲೇನಿಯರ್ಗಳಿಂದ ಕಡಿಮೆ ಮಾಡಿದೆ.
ಭಾರತದ ಮುಖೇಶ್ ಅಂಬಾನಿ ಹಾಗೂ ಲಕ್ಷ್ಮಿ ಮಿಟ್ಟಲ್ ಕ್ರಮವಾಗಿ 19.5 ಬಿಲಿಯನ್ ಡಾಲರ್ ಮತ್ತು 19.3 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದಾರೆ.

ನಿಮ್ಮ ಅನಿಸಿಕೆ ತಿಳಿಸಿ