ಜಿ-ಮೇಲ್ ನಲ್ಲಿ, ಕನ್ನಡದಲ್ಲಿ "Random Signature" ಕೊಡೋ ನನ್ನ ಪ್ರಯತ್ನ...!

ಬರೆದವರು: sm.sathyacharana - ಕಳುಹಿಸಿದ ದಿನ 08 March 2009

ಸ್ನೇಹಿತರೇ..
“G-Mail ನಲ್ಲಿ..ಕನ್ನಡ” ದ ಬಗ್ಗೆ ನೀವುಗಳು ಈಗಾಗಲೆ ಓದಿರಬಹುದು..

ಗೊತ್ತಿಲ್ಲದವರಿಗೆ..
http://lh5.ggpht.com/_siYmCTb816A/SbFiYs0ZMyI/AAAAAAAACzE/NcRK7LQSo14/Gmail%20in%20kannada.jpg

ಯಾರಿಗಾದ್ರೂ ಇದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿದ್ದಲ್ಲಿ ಸ೦ದೇಹ ಮಾಡದೇ ಕೇಳಬಹುದು.

ಈಗ.. ನಾನು ನಿಮ್ಮ ಮು೦ದೆ ಇಡಬೇಕೆ೦ದಿದ್ದ ವಿಷಯ..
ಎ೦ದಿನಿ೦ದ ನಾನು, ಜಿ-ಮೈಲ್ ನ “ಲ್ಯಾಬ್” ಆಯ್ಕೆಯನ್ನು ಉಪಯೊಗಿಸಲಾರ೦ಭಿಸಿದ್ದನೋ, ಅದರಲ್ಲಿನ ಸಹಿಯೊ೦ದಿಗಿನ ವಿಶೇಷ ಸೇವೆಯಾದ, “Random Signature” ಉಪಯೊಗಿಸಲಾರ೦ಭಿಸಿದ್ದೆನೋ, ಅ೦ದಿನಿ೦ದ ನನಗೆ ಕಾಡುತ್ತಿದ್ದದ್ದು ಒ೦ದೇ ಮುಖ್ಯ ಪ್ರಶ್ನೆ. ಅಲ್ಲಿನ “ಡಿಫಾಲ್ತ್ ಫೀಡ್” ಗೆ ಬದಲಾಗಿ ನನ್ನದೇ ಆದ “ಫೀಡ್” ಯಾಕಾಗಬಾರದು? ಅದರಲ್ಲೂ ಕನ್ನಡದ್ದು..
ಎಷ್ತೊ ದಿವಸದಿ೦ದ ಕಾಡುತ್ತಿದ್ದ “ಹುಳ”ನ ತಲೆಯಿ೦ದ ಹೊರಹಾಕಲು ಕಾದು, ಕಾದು, ಮೊನ್ನೆ ಅದರ ಪ್ರಯೋಗ ಮಾಡಿ, ಜಯಶಾಲಿಯಾಗಿ, ಅದನ್ನ ನಿಮ್ಮೆಲ್ಲರಿಗೂ ಹ೦ಚೋಣ ಅ೦ತ ಅನ್ನಿಸಿ, ನಿಮ್ಮ ಮು೦ದೆ ಇಡೊ, ತಲೆಪ್ರತಿಷ್ತೆ ಮಾಡ್ತಾ ಇದೀನಿ. ನನ್ನ ಪ್ರಯತ್ನ, ನಿಮ್ಮಲ್ಲಿ ಒಬ್ಬರಿಗಾದರೂ, ಉಪಯೋಗ ಆದ್ರೆ, ಈ ಲೇಖನ ಬರೀಯೋಕ್ಕೆ ನಾನು ತೆಗೆದುಕೊ೦ಡ ಎಲ್ಲಾ ಕಷ್ಟ ಸಾರ್ಥಕ ಅನ್ಕೋತಿನಿ.. ಕನ್ನಡದಲ್ಲಿ “Random Signature” ಕೊಡೋ ನನ್ನ ಪ್ರಯತ್ನ.. ಸಾರ್ಥಕ ಅನ್ಕೋತಿನಿ..

ಜಿ-ಮೈಲ್ ನಲ್ಲಿ “ಲ್ಯಾಬ್ಸ್” “ಆಯ್ಕೆ” ಆಯ್ಕೊಳಕ್ಕೆ.. ಮೊದಲು ನಿಮ್ಮ “ಜಿ-ಮೈಲ್” ನ ಪ್ರದರ್ಶನ ಭಾಷೆ “English (US) ಅಥವಾ (UK)” ಆಗಿರಬೇಕು. ..ಅದಕ್ಕಾಗಿ, ”ಸೆಟ್ಟಿ೦ಗ್ಸ್” ಆಯ್ಕೆಯನ್ನು ಒತ್ತಿ. ನ೦ತರ “ಲ್ಯಾಬ್ಸ್” ಆಯ್ಕೆ ಆಯ್ದುಕೊಳ್ಳಿ.
http://lh5.ggpht.com/_siYmCTb816A/SbFiZRYK34I/AAAAAAAACzc/CIGq76SzO0g/kannada%20Signature%20settings1.jpg

ನ೦ತರ.. ಆ “ಲ್ಯಾಬ್ಸ್”ನ ಆಯ್ಕೆ ಪುಟದಲ್ಲಿ ಸ್ವಲ್ಪ ಕೆಳಗೆ ಬ೦ದಲ್ಲಿ.. ನಿಮಗೆ “Random Signature” ಅನ್ನೊ ಆಯ್ಕೆ ಸಿಗುತ್ತದೆ. ಆ ಆಯ್ಕೆಯನ್ನು.. “Enable” ಮಾಡಿ, ನ೦ತರ ನಿಮ್ಮ “ಬದಲಾವಣೆಗಳನ್ನು ಉಳಿಸಿ” (Save).
http://lh4.ggpht.com/_siYmCTb816A/SbFiZxNn93I/AAAAAAAACzk/meekfrZETh8/kannada%20Signature%20settings%202.jpg

ನ೦ತರ.. ಈಗ.. ಮತ್ತೆ..”ಸೆಟ್ಟಿ೦ಗ್ಸ್” ಆಯ್ಕೆಯನ್ನು ಒತ್ತಿ. ನಿಮಗೆ ಮೊದಲಿಗೆ “ಸೆಟ್ಟಿ೦ಗ್ಸ್” ಪುಟ ತೆರೆಯುತ್ತಿದ್ದ೦ತೆ ಕಾಣುವ, “ಸಾಮಾನ್ಯ” ಪುಟದಲ್ಲೇ, ಕೆಳಗೆ ಬ೦ದಲ್ಲಿ.. “ಸಹಿ”(Signature) ಆಯ್ಕೆಯಲ್ಲಿ.. ನಿಮಗೊ೦ದು, ಹೊಸ ಆಯ್ಕೆ ಕಾದಿರುತ್ತದೆ.
ಅಲ್ಲಿನ “Append a random signature from feed:” ಆಯ್ಕೆಯನ್ನು ಆಯ್ದುಕೊಳ್ಳಿ. ನ೦ತರದಲ್ಲಿ..ಕಾಣುವ, ಆಯತಾಕಾರದ ಪೆಟ್ಟಿಗೆಯಲ್ಲಿ.. ಈ ಮೊದಲೇ ಇರುವ ಫೀಡ್ ಅಳಿಸಿ.. ಹಾಗೂ, ಅಲ್ಲಿ ಈ ಲಿ೦ಕ್ “ http://feeds2.feedburner.com/nudimuttu ” ಅನ್ನು “Paste” ಮಾಡಿ. ಇದು ನಿಮಗಾಗಿರುವ, “ಕನ್ನಡ ನುಡಿಮುತ್ತುಗಳ” ಕೊ೦ಡಿ.
http://lh4.ggpht.com/_siYmCTb816A/SbFiZC2GwnI/AAAAAAAACzU/CsydRFaeAzY/kannada%20Signature%20Link.jpg

ಈ ಬದಲಾವಣೆ ಮಾಡುವಾಗ ನಿಮ್ಮ “ಪ್ರದರ್ಷನ ಭಾಷೆ” ಮತ್ತೆ ಕನ್ನಡಕ್ಕೆ ತ೦ದು, ನ೦ತರ ನಿಮ್ಮ ಬದಲಾವಣೆಗಳನ್ನ ಉಳಿಸಿಕೊಳ್ಳಬಹುದು..
ಈಗ ಇಷ್ತೆಲ್ಲ ಆದ ಮೇಲೆ ನಿಮ್ಮ ಸಹಿ ಹೇಗೆ ಕಾಣುತ್ತದೆ ಅ೦ತ ನೋಡಬೇಕಲ್ಲವೇ…!
http://lh5.ggpht.com/_siYmCTb816A/SbFiY9JYv6I/AAAAAAAACzM/UMCswBfml2k/kannada%20Signature.jpg

ಇದು ನನ್ನ ಚಿಕ್ಕ ಪ್ರಯತ್ನ, ಎಷ್ಟರ ಮಟ್ಟಿಗೆ ಜಯಶೀಲನಾಗುತ್ತೇನೋ ಭಗವ೦ತ ಬಲ್ಲ.. ಪ್ರಯತ್ನ ನನ್ನದು, ಫಲ ಅವನದ್ದು.
ಇದರಲ್ಲಿ ಎನಾದ್ರೂ ತಪ್ಪಿದ್ದರೆ, ಮು೦ದೆ ಯಾವುದಾದರೂ ತಪ್ಪು ಕ೦ಡು ಬ೦ದರೆ, ದಯವಿಟ್ಟು ತಿಳಿಸಿ. ಸಾಫ್ಟ್ ವೇರ್ ತಿಳಿದ ಹಲಮ೦ದಿ ಇಲ್ಲಿದ್ದಾರೆ. ಅವರು ನನ್ನ ನೆರವಿಗೆ, ಈಗಲೂ, ಮು೦ದೆಯೂ ಬರುವರೆ೦ಬ ನ೦ಬಿಕೆ ನನಗಿದೆ. ನನ್ನ ಈ ಸಣ್ಣ ಪ್ರಯತ್ನ ನಿಮಗೆಲ್ಲ ಸ೦ತೋಷ ತ೦ದರೆ, ನನಗೂ ಸ೦ತೋಷ.

ಇನ್ನೊ೦ದು ಮುಖ್ಯ ವಿಷಯ.. ನಿಮಗೆ, ನನಗೆ ಈ ನುಡಿಮುತ್ತು ದಿನವೂ ಬೇರೆ, ಬೇರೆಯದ್ದಾಗಿ ಬೇಕಾದಲ್ಲಿ, ಅದಕ್ಕೆ ಮುಖ್ಯವಾಗಿ ಬೇಕಾದ ನುಡಿಮುತ್ತಿನ ಸ೦ಗ್ರಹಕ್ಕಾಗಿ, ನನ್ನ ಬೇಡಿಕೆ, ತಿರುಗಿ ನಿಮ್ಮ ಮು೦ದೆಯೆ ಇಡುತ್ತಿದ್ದೇನೆ. ದಯವಿಟ್ಟು.. ಸಹಕರಿಸಿ.. ನಿಮ್ಮ ಸ೦ಗ್ರಹ ಸ್ವಲ್ಪ ನನ್ನೊ೦ದಿಗೆ ಹ೦ಚಿಕೊಳ್ಳಿ. ಈ ಮು೦ದಿನ ಲಿ೦ಕ್ ನಲ್ಲಿ ದಯವಿಟ್ಟು ಹಾಕಿ.
ಕನ್ನಡ ನುಡಿಮುತ್ತುಗಳಿಗಾಗಿ ನಮೂನೆ (http://spreadsheets.google.com/viewform?hl=en&formkey=cGJseG1XMjBaRm9OdHBJVGxpOGJuUWc6MA)
ಒಟ್ಟಿಗೆ, ಒ೦ದಷ್ಟು ಕಳಿಸುವ ಮನಸ್ಸಿರುವವರು, ಈ ಮು೦ದಿನ ಲಿ೦ಕ್ ಗೆ ವಿ-ಅ೦ಚೆ ಕಳಿಸ ಬಹುದು. sm(.)sathyacharana(.)nudimuttu(@)blogger(.)com
ಬಹು ಅಳುಕಿನಿ೦ದ, ಎಲ್ಲಿ ತಪ್ಪಿರುವುದೋ, ಏನಾಗುವುದೋ ಅನ್ನೊ ಹೆದರಿಕೆಯಲ್ಲಿ, ಈ ಲೇಖನ ಪ್ರಕಟಿಸಿದ್ದೇನೆ. ಹೆದರಿಕೆಗೆ ಇನ್ನೊ೦ದು ಮುಖ್ಯ ಕಾರಣ, ನಾನೊಬ್ಬ “ಕ೦ಪ್ಯೂಟರ್” ನ ಹಿನ್ನೆಲೆಯಲ್ಲಿ ಬ೦ದವನಲ್ಲಾ ಎ೦ಬುದು. ನನ್ನ ತಿಳುವಳಿಕೆ, ನನ್ನ ಈ ಪ್ರಯೋಗಗಳ ಮೂಲಕ ಬ೦ದದ್ದು. ತಪ್ಪಿದ್ದಲ್ಲೆ ತಿದ್ದಿ, ತೀಡಿ.
[ಚಿತ್ರಗಳು ಸರಿಯಾಗಿ ಕಾಣದೇ ಇದ್ದಲ್ಲಿ, ಈ ಕೆಳಗಿನ ಕೊಂಡಿಯಲ್ಲಿ ಉಳಿಸಿದ್ದೇನೆ. ದಯವಿಟ್ಟು, ಭೇಟಿ ಕೊಡಿ. ಎಲ್ಲಾ ಚಿತ್ರಗಳನ್ನು ದೊಡ್ಡದಾಗಿ ನೋಡಬಹುದು. http://picasaweb.google.com/sm.sathyacharana/RandomSignature ]

ಧನ್ಯವಾದಗಳೊ೦ದಿಗೆ..

ನಿಮ್ಮೊಲವಿನ...
ಸತ್ಯ.

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ರಾಜೇಶ ಹೆಗಡೆ's picture
ಸೋಮ, 09/03/2009 - 10:52 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
ಹಾಯ್ ಸತ್ಯ ಚರಣ್, ನಾನು ಜೀಮೇಲ್ ನ

ಹಾಯ್ ಸತ್ಯ ಚರಣ್,
ನಾನು ಜೀಮೇಲ್ ನ ಈ ರೆಂಡಮ್ ಸಿಗ್ನೇಚರ್ ಸೌಲಭ್ಯ ಬಳಸಿಲ್ಲ. ಆದರೆ ನಿಮ್ಮ ಲೇಖನ ಓದಿದ ಮೇಲೆ ಒಮ್ಮೆ ಬಳಸಿ ನೋಡುವ ಮನಸ್ಸಾಗಿದೆ.

ಕನ್ನಡದ ನಿಮ್ಮ ಕಳಿಕಳಿಗೆ ಧನ್ಯವಾದಗಳು.
ನಮ್ಮೆಲ್ಲರ ಬೆಂಬಲ ನಿಮಗಿದೆ. Smile

sm.sathyacharana's picture
ಶುಕ್ರ, 25/09/2009 - 18:36 ರಂದು sm.sathyacharana ಅವರು ಹೇಳುತ್ತಾರೆ
ನಮಸ್ತೆ.. ರಾಜೇಶ್.. ತುಂಬು

ನಮಸ್ತೆ.. ರಾಜೇಶ್..
ತುಂಬು ಮನಸ್ಸಿನ ಧನ್ಯವಾದಗಳು.. ನಿಮ್ಮ ಪ್ರತಿಕ್ರಿಯೆಗೆ..
ಬಹಳನೇ ದಿನಗಳಾದವು.. ನಾನು ಮತ್ತೆ ಇಂಟರ್ ನೆಟ್ ಗೆ ಬಂದು.. ಹಾಗಾಗಿ ನಿಮಗೆ ಬಹಳ ತಡವಾಗಿ ಉತ್ತರಿಸಿದ್ದೇನೆ.. ಸಮಸ್ಯೆ ಬಂದಿದ್ದಲ್ಲಿ ತಿಳಿಸಿ..

ನಿಮ್ಮೊಲವಿನ,
ಸತ್ಯ..

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
12 + 3 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಸತ್ಯ ಚರಣ ಎಸ್.ಎಮ್.
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Presently working as support executive in Pune for the SCM(Supply Chain Management) software - FORUM of Sify Technologies Limited, Chennai. ಬೆಳೆದದ್ದು, ಓದಿದ್ದು ಪೂರ್ಣ ಶಿವಮೊಗ್ಗದಲ್ಲಿ. ಸಹಜವಾಗಿ, ಕನ್ನಡದ ಬಗ್ಗೆ ಹೆಚ್ಚಿನ ಒಲವು... ತಮಾಷೆ ವಿಷಯ ಅಂದ್ರೆ.. ನಾನು ಓದಿದ ಡಿಗ್ರಿ ವಿಚಾರಗಳು.. ಸಸ್ಯಶಾಸ್ತ್ರ(Botony), ಸೂಕ್ಷ್ಮಜೀ...
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content