ದಲಿತರನ್ನು ತುಳಿಯುತ್ತಿರುವವರು ಅವರ ಮೇಲಿನ ದಲಿತರು, ಬ್ರಾಹ್ಮಣರು ಇವತ್ತಿನ ನಿಜವಾದ ತುಳಿತಕ್ಕೊಳಗಾದವರು!

ಬರೆದವರು: akshay - ಕಳುಹಿಸಿದ ದಿನ 10 February 2009

4 ಲಕ್ಷ ಕಾಶ್ಮೀರೀ ಬ್ರಾಹ್ಮಣರ ಮೇಲೆ ಹಲ್ಲೆ ಆಯಿತು. ನಿರಾಶ್ರಿತರಾದರು. ಅಷ್ಟು ಸುಂದರಿಯರು ಬೇರೆಲ್ಲೂ ಸಿಗಲಾರರೆಂದು ಮಾನಭಂಗ ಮಾಡಿ ಸಾಯಿಸಲಾಯಿತು. ಎಲ್ಲಿ ಹೋಗಿತ್ತು ಮಾನವ ಹಕ್ಕು ಅಯೋಗ್ಯ ಆಯೋಗ? ದಲಿತರ ಮೇಲೆ ಒಬ್ಬ ದಲಿತ ಹಲ್ಲೆ ಮಾಡಿದರೂ ವಿಷಯ ಮುಚ್ಚಿಟ್ಟು ರಾಷ್ಟ್ರವ್ಯಾಪಿ ಸುದ್ದಿ ಮಾಡುವ ಜನ ಎಲ್ಲಿ ನಿದ್ರಿಸುತ್ತಿದ್ದರು?

ನಿತಿನ ಮುತ್ತಿಗೆ ಲೇಖನ ಓದಿ ಹೇಗೊಂದು ಅಭಿಪ್ರಾಯ ಬರೆಯಬೇಕೆನೆಸಿತು. ಆದರೆ ಅಭಿಪ್ರಾಯ ಲೇಖನವಾಗಿಬಿಟ್ಟಿತು.
ಮಯೂರ ಶರ್ಮನು ಮಯೂರ ವರ್ಮ ಆದ ಜಾತಿ ಪದ್ಧತಿಯಲ್ಲಿ ನಾವೀಗ ಇಲ್ಲ. ಹುಟ್ಟಿನಿಂದ ಬ್ರಾಹ್ಮಣತ್ವ ಬರದೇ ಆಚಾರ ವಿಚಾರದಿಂದ ಬರುತ್ತದೆ ಎನ್ನುವ ಜಾತಿ deffinition ಈಗ ಇಲ್ಲ. ನಿಜವಾದ ಅರ್ಥದಲ್ಲಿ ನಾನೂ ಬ್ರಾಹ್ಮಣನಲ್ಲ. ಬ್ರಹ್ಮ ಜ್ಞಾನ ಈಗ ಯಾರಿಗೂ ಇಲ್ಲ. ಆದ್ರೂ ಸರಕಾರಿ ದಾಖಲೆ ಪ್ರಕಾರ ಬ್ರಾಹ್ಮಣರು. ಬ್ರಿಟೀಷರು ಅವರ ಬೇಳೆ ಬೇಯಿಸಿಕೊಳ್ಳಲು ಹಿಂದು-ಮುಸ್ಲಿಂ, ಹರಿಜನ-ಬ್ರಾಹ್ಮಣರ ನಡುವೆ ಕಂದಕ ನಿರ್ಮಿಸಿ ಹೋದರು. ಈಗಿನ ಮಹಾ ಬುದ್ಧಿವಂತರು, ರಾಜಕಾರಿಣಿಗಳು ಅದನ್ನು ಬಿಡಲು ತಯಾರಿಲ್ಲ. ಈಗ ನಾನು ಅಭಿಪ್ರಾಯ ಬರೆಯುತ್ತಿರುವುದು ಬ್ರಾಹ್ಮಣ ಎಂದು ಕರೆಸಿಕೊಂಡ ಒಂದು ಗುಂಪು ಹೇಗೆ ನರಳುತ್ತಿದೆ ಎನ್ನುವುದರ ಬಗ್ಗೆಯೇ ಹೊರತು ಬ್ರಹ್ಮ ಜ್ಞಾನ ಪಡೆದ ಬ್ರಾಹ್ಮಣರ ಬಗ್ಗೆ ಅಲ್ಲ. ಅವರ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಭಾರತ ನಿರ್ಮಾಣದಲ್ಲಿ ಅವರ ಪಾಲು ದೊಡ್ಡದು. ಅಥವಾ ನಿರ್ಮಿಸಿದವರೇ ಅವರು.

ಅಂದಿನ ಬ್ರಾಹ್ಮಣ ಸಮಾಜ ಈ ದೇಶಕ್ಕೆ ನೀಡಿದ ಕೊಡುಗೆ ಅಪೂರ್ವವಾದದ್ದು. Danielou ಹೇಳಿದ್ದು ಹೀಗೆಃ "the teaching of philosophy, arts, sciences, which constituted the prestigious Indian cultural tradition, became more and more ignored and could only survive thanks to the Brahmins, without any help whatsoever from the State." ಅದಕ್ಕಾಗೇ ಭಾರತ ನಾಶ ಮಾಡಲು ಬಂದ ಪರಕೀಯರಿಗೆ ಬ್ರಾಹ್ಮಣರ ಮೇಲೆ ಇದ್ದಷ್ಟು ದ್ವೇಷ ಇತರರಲ್ಲಿ ಇರಲಿಲ್ಲ. "Alfonso de Albuquerque started a reign of terror in Goa, razing temples to erect churches in their stead, burning "heretics", crucifying Brahmins, converting the lower castes".

ಬ್ರಾಹ್ಮಣರ ಮೇಲೆ ದಬ್ಬಾಳಿಕೆ, ಹಿಂಸೆ ಇವತ್ತಿನದಲ್ಲ. ಆರಂಭವಾದದ್ದು ಮುಸ್ಲಿಂ ದಾಳಿಕೋರರು ದಾಳಿಯಿಟ್ಟಾಗಲೇ. ಅಂದರೆ 9-10 ಶತಮಾನದಷ್ಟು ಹಿಂದೆ. ಅವರು ಕೊಲೆ ಮಾಡಿದ್ದು ಬ್ರಾಹ್ಮಣರನ್ನು, ಕ್ಷತ್ರಿಯರನ್ನು ಮಾತ್ರ. ಅವರ ದಾರಿಗೆ ಅಡ್ಡ ಬಂದವರು ಬುದ್ಧಿ ಬಲದ ಬ್ರಾಹ್ಮಣರು, ತೋಳ್ಬಲದ ಕ್ಷತ್ರಿಯರು. ಉಳಿದವರನ್ನು ಅನಾಯಾಸವಾಗಿ ಮತಾಂತರಿಸಿದರು. ದ್ವೇಶ ಬಿತ್ತಿದವರು ಅವರು. ಬೆಳೆಸಿದವರು ಇಂಗ್ಲೀಷರು.

ಯಾರು ದಲಿತರ, ಹಿಂದುಳಿದವರ ಏಳ್ಗೆಯಲ್ಲಿ ಅಡ್ಡ ಬಂದವರು? ಬ್ರಾಹ್ಮಣರಿಗೆ ಈಗ ಅಧಿಕಾರವೂ ಇಲ್ಲ. ಹುದ್ದೆಯೂ ಇಲ್ಲ. ಹಾಗಾದರೆ ಯಾರು? ನಿಜ. ಬೇರೆ ಯಾರೂ ಅಲ್ಲ. ಇನ್ನೊಬ್ಬ ಸ್ವಲ್ಪ ಮೇಲ್ವರ್ಗದ ದಲಿತ, ಹಿಂದುಳಿದವ. ಅವರಲ್ಲಿ ಭಾಷಣ ಮಾಡುವವರು ತಮ್ಮನ್ನು ಬ್ರಾಹ್ಮಣರ ಸರಿ ಸಮಾನ ಅಂತ ತೋರಿಸಿಕೊಳ್ಳಲು ಹೊರಟರೇ ವಿನಹ ತಮ್ಮದೇ ಸಮಾಜದ ಒಬ್ಬನನ್ನು ಮೇಲೆ ತರಲು ನೋಡಲಿಲ್ಲ. ಖುರ್ಚಿ ಭಯ!! ದಲಿತರನ್ನು ಈಗ ತುಳಿದವರು ಒ.ಬಿ.ಸಿ ಮಂದಿ. ಅನುವಾದಿಸದೇ ನೀಡುತ್ತಿದ್ದೇನೆ ಓದಿಃ "In Tamilnadu, even today Dalits are parked in one corner and cannot enter the area devoted to Vanniars, who are just one rung above them"

ಬ್ರಾಹ್ಮಣರ ಇವತ್ತಿನ ಪರಿಸ್ಥಿತಿ ಹೇಗಿದೆ? REWRITING INDIAN HISTORY ಅಂತ ಒಂದು ಪುಸ್ತಕ ಇದೆ- ಫ್ರಾಂಕ್ವೆ ಗೊತಿಯೇ ಬರೆದದ್ದು. ಓದಿ ನೋಡಿ. ಅದರಲ್ಲಿ ಬ್ರಾಹ್ಮಣರ ಬಗ್ಗೆ ನೈಜ ಚಿತ್ರಣ ನೀಡಲಾಗಿದೆ. ಮೇಲೆ ಹೇಳಿದ ಪುಸ್ತಕದಲ್ಲೇ ಹೀಗೆ ಸಾಗುತ್ತದೆ. "..Brahmins, who actually represent today a minority, which is often underprivileged... ...Brahmins never interfered in politics and today they are often a neglected lot..." ನಿಜವಾದ ಪರಿಸ್ಥಿತಿ ಹೇಗಿದೆ ಅಂದರೆ- "...In fact today, it is the Brahmins who have become the Dalits of India..." .

ಅಷ್ಟಕ್ಕೇ ನಿಲ್ಲಲಿಲ್ಲ ಬ್ರಾಹ್ಮಣರ ಮೇಲೆ ದಬ್ಬಾಳಿಕೆ ನಿಲ್ಲಲಿಲ್ಲ. "..most of the intellectual Brahmin Tamil class has emigrated outside Tamil Nadu; the average income of Brahmins is less than that of non-Brahmins; a high percentage of Brahmin students drop out at the intermediate level ; 75% of domestic help and cooks in Andhra Pradesh are Brahmins; and most of Delhi’s public toilets are cleaned by Brahmins...."
ಅಷ್ಟೇ ಅಲ್ಲ. ಕಾಶ್ಮೀರದ ಉಗ್ರವಾದಕ್ಕೆ ನರಳಿದವರೂ ಬ್ರಾಹ್ಮಣರೇ. ಕಾಶ್ಮೀರೀ ಬ್ರಾಹ್ಮ್ರಣರನ್ನೇ ಇಸ್ಲಾಂ ಮತಾಂಧರು ಗುರಿಯಿಟ್ಟಿದ್ದು. ಯಾಕೆ? ಅಸಲಿ ಹಿಂದುತ್ವ ಜೀವಂತ ಇದ್ದದ್ದೇ ಅವರಲ್ಲಿ ಆಗಿತ್ತು. ಅವರನ್ನು ಮುಗಿಸಿದರೆ ಮಾತ್ರ ಹಿಂದುಗಳ ಬಂಡವಾಳ ಮುಗಿದಂತೆ ಅಂತ ಅವರಿಗೂ ಗೊತ್ತು. 4 ಲಕ್ಷ ಕಾಶ್ಮೀರೀ ಬ್ರಾಹ್ಮಣರ ಮೇಲೆ ಹಲ್ಲೆ ಆಯಿತು. ನಿರಾಶ್ರಿತರಾದರು. ಅಷ್ಟು ಸುಂದರಿಯರು ಬೇರೆಲ್ಲೂ ಸಿಗಲಾರರೆಂದು ಮಾನಭಂಗ ಮಾಡಿ ಸಾಯಿಸಲಾಯಿತು. ಎಲ್ಲಿ ಹೋಗಿತ್ತು ಮಾನವ ಹಕ್ಕು ಅಯೋಗ್ಯ ಆಯೋಗ? ದಲಿತರ ಮೇಲೆ ಒಬ್ಬ ದಲಿತ ಹಲ್ಲೆ ಮಾಡಿದರೂ ವಿಷಯ ಮುಚ್ಚಿಟ್ಟು ರಾಷ್ಟ್ರವ್ಯಾಪಿ ಸುದ್ದಿ ಮಾಡುವ ಜನ ಎಲ್ಲಿ ನಿದ್ರಿಸುತ್ತಿದ್ದರು?

ಇನ್ನೂ ಈ ಸಮಾಜ ಏಳದಿದ್ದರೆ, ತಿರುಗಿ ಬೀಳದಿದ್ದರೆ ಇನ್ಯಾವಾಗ?

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.8 (4 ಓಟುಗಳು)
ಅನಾಮಿಕನು's picture
ಗುರು, 26/03/2009 - 23:30 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ನಮ್ಮ ದೇಶದಲ್ಲಿ ಬಡತನ ರೆಕೆಗಿ0ತ

ನಮ್ಮ ದೇಶದಲ್ಲಿ ಬಡತನ ರೆಕೆಗಿ0ತ ಕೆಳಗೆ ಕೆಳ್ಗೆ ಎಶ್ಟು ಜನ ಇಲ್ಲಾ?

ವೆಂಕಟೇಶಮಡಿವಾಳ's picture
ಶನಿ, 07/03/2009 - 16:18 ರಂದು ವೆಂಕಟೇಶಮಡಿವಾಳ ಅವರು ಹೇಳುತ್ತಾರೆ
ಹೌದು, ಎಸ್ಟೊಂದು ವರ್ಷಗಳಿಂದ

ಹೌದು, ಎಸ್ಟೊಂದು ವರ್ಷಗಳಿಂದ ಹುಟ್ಟಿದ, ಬಾಳಿದ - ಬದುಕಿದ ನೆಲದಿಂದ ಪಂಡಿತರನ್ನ ಓಡಿಸಿ, ಅವರನ್ನು ಅನಾತರನ್ನಗಿಸಿ,ಹಾಳು ಬಾವಿಗೆ ದೂಡಿದವರು ಯಾರು? ಇಡೀ ಜಗಕ್ಕೆ ಗೊತ್ತು. ಇನ್ನು ಈ ದೇಶವನ್ನು ಆಳಿದ (ಬಹುಪಾಲು ವರ್ಷ) ಕಾಂಗ್ರೆಸ್ ಈ ವಿಷಯದಲ್ಲಿ ಜಾಣ ಮೌನ ವಹಿಸಿ, ಹಿಂದುಗಳಿಗೆ ದೊಡ್ಡ ಮೋಸವನ್ನೇ ಮಾಡಿದೆ, ಈಗಲೂ ಪಂಡಿತರ ಕಷ್ಟ ತಪ್ಪಿಲ್ಲ, ಟೆಂಟ್ ಗಳಲ್ಲಿ ಬದುಕುತ್ತಿರುವ ಅವರ ಸ್ತಿತಿ ನೋಡಿ ಯಾರಿಗಾದರು ಕೋಪ ಬಾರದೆ ಇರದು, ಇನ್ನು ಆಗಾಗ ಬ್ರಾಹ್ಮಣರ ಬಗ್ಗೆ ಕೆಟ್ಟದ್ದಾಗಿ ಬರೆಯುತ್ತಾ (ನಾನು ಬ್ರಾಹ್ಮಣ ಅಲ್ಲ ) ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾರೆ.

ಇದ್ದುದನ್ನು ಇದ್ದಂತೆ ಹೇಳಿದಾಗ ಮೆಣಸಿನಕಾಯಿ ಹತ್ತುವುದು ಸಹಜ! ಯಾರು ತಲೆ ಕೆಡಿಸಿಕೊಳ್ಳಬಾರದು..
ಒಳ್ಳೆ ಲೇಖನ.

ಅನಾಮಿಕನು's picture
ಮಂಗಳ, 24/02/2009 - 12:47 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
It sounds like prejudiced

It sounds like prejudiced article without a base at all. You seem to be suffered Brahmin. In today's meritocratic world there is nothing that stops one to excel. You are smart and intelligent an dyou go up; as simple as that.

One thing I dont agree is Brahmin's descreminating others and the very view point of Brahmins to other castes - sorry not acceptable. I can show you many Brahmins who think they are superiors and all other castes are inferior to them. You know it well.

ಅನಾಮಿಕನು's picture
ಸೋಮ, 16/02/2009 - 08:51 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ತು0ಬಾ ಚನ್ನಾಗಿದೆ ನಿಮ್ಮ

ತು0ಬಾ ಚನ್ನಾಗಿದೆ ನಿಮ್ಮ ಬರವನಿಗೆಯ ವಿಶಯ

ಅನಾಮಿಕನು's picture
ಬುಧ, 11/02/2009 - 02:08 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ತುಂಬಾ ಚೆನ್ನಾಗಿದೆ.

ತುಂಬಾ ಚೆನ್ನಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
3 + 1 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.