ದೇಶ ಪ್ರೇಮ ಮೆರೆವ ೨೦೦೯ರ ವಿ.ಕ ಕ್ಯಾಲೆಂಡರ್

ಬರೆದವರು: akshay - ಕಳುಹಿಸಿದ ದಿನ 29 ಡಿಸೆಂಬರ್ 2008

ಕನ್ನಡ ಕ್ಯಾಲೆಂಡರ್ಕನ್ನಡ ಕ್ಯಾಲೆಂಡರ್ವಿಜಯ ಕರ್ನಾಟಕ, ಕನ್ನಡದ ನಂಬರ್ ೧ ಪತ್ರಿಕೆ ವರ್ಷದ ಕೊನೆಯ ಸಾಪ್ತಾಹಿಕ ಸಂಚಿಕೆಯ ಜೊತೆ ಕ್ಯಾಲೆಂಡರ್ ಕೊಡಮಾಡಿದೆ. ಪ್ರತಿ ವರ್ಷ ಗೂಡಂಗಡಿಗಳ ಗೋಡೆಗೆ (ರಸ್ತೆ ಅಗಲೀಕರಣದಿಂದಾಗಿ ಅವು ಈಗ ಅಪರೂಪ!), ಹೇರ್ ಕಟಿಂಗ್ ಸಲೂನ್ಗಳ ಗೋಡೆಗೆ ಅಂಟಿಸಲು ಮಾತ್ರ ಯೋಗ್ಯವಾದಂತ ಸೀಳೆದೆಯ ನಟಿಯರ ಚಿತ್ರ ಹಾಕಿ ಬರುತ್ತಿದ್ದ ಪೂರ್ತಿ ಪುಟದ ಕ್ಯಾಲೆಂಡರ್ ಈ ಸಲ ಸ್ವಲ್ಪ ದೇಶ ಪ್ರೇಮ ಸಾರುವಂತೆ ಮೂಡಿ ಬಂದಿದೆ.

ಮುಂಬೈ ನಗರ ಉಗ್ರರ ದಾಳಿಗೆ ನಲುಗಿದ್ದಾಗ ಜೀವದ ಹಂಗು ತೊರೆದು ಉಗ್ರರನ್ನು ಮಟ್ಟ ಹಾಕಿದ ಏನ್ ಎಸ್ ಜಿ ಕಮಾಂಡೋಗಳ ವಿಜಯದ ನಗೆಯ ಚಿತ್ರ ಹೊತ್ತು ಬಂದಿದೆ. ಪ್ರತಿಯೊಬ್ಬರೂ ಗೋಡೆಗೆ ಅಂಟಿಸಬಹುದಾದ ಕ್ಯಾಲೆಂಡರ್ (ಗೋಡೆ ಹೊಲಸಾಗುವುದು ಎನ್ನುವ ಚಿಂತೆ ಬಿಟ್ಟು). ಯಾಕೆಂದರೆ ಕಡೆ ಪಕ್ಷ ಒಂದು ವರ್ಷವಾದರೂ ಉಗ್ರರ ದಾಳಿಗೆ ನಲುಗಿದ ಸಮಯದ ನೆನಪು ಆಗುತ್ತಿರಲಿ. ಅವರಿಗೆ ಧನ್ಯವಾದ ಹೇಳುತ್ತಾ ನಮ್ಮ ಗುರುತರ ಜವಾಭ್ದಾರಿಯೂ ಅಗಾಗ ನೆನಪಾಗುತ್ತಿರಲಿ.
ಆ ವಿಜಯೋತ್ಸವದ ಮುಗುಳ್ನಗೆಯ ಸೈನಿಕರ ನಡುವೆ ಸಂದೀಪ್ ಉನ್ನಿಕೃಷ್ಣನ್ ಇಲ್ಲದಿರುವುದು ಎಷ್ಟು ಖೇದದ ವಿಷಯವಲ್ಲವೇ. ಆ ನಗುವಿನ ಹಿಂದೆ ಸಂದೀಪ್ ಉನ್ನಿಕೃಷ್ಣನ್ ತ್ಯಾಗವು ಇದೆ ಎಂಬುದನ್ನೂ ಎಂದೂ ಮರೆಯದೆ ಇರೋಣ. ೨೦೦೯ರಲ್ಲೇ ಮಹಾ ಚುನಾವಣೆ ಬರಲಿದೆ. ಆವತ್ತು ಎಲ್ಲರೂ ಇಂತದ್ದೊಂದು ಚಿತ್ರ ನೋಡಿ ಹೋಗಿ ಮತ ಹಾಕೋಣ (ಉಗ್ರವಾದದ ರಾಜಕಾರಣದ ದೊಂಬರಾಟ ನೋಡಿಯೂ ಮನಸ್ಸು ಬಂದರೆ!).
ಗೋಡೆಯ ಮೆಲಲ್ಲದಿದ್ದರೆ ಕೊನೇಪಕ್ಷ ಕಂಪ್ಯೂಟರ್ ಪರದೆ ಮೇಲಾದರೂ ಇರಲಿ ಎಂದು ಈ-ಸ್ನಿಪ್ ನಲ್ಲಿ ಇಟ್ಟಿದ್ದೇನೆ. ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು (666kb).

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (1 vote)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 ಕೂಡಿಸು 9 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.