ನಿನ್ನೆಡೆಗೆ ,,,

ಬರೆದವರು: ಪಾರ್ವತಿ.ಜಿ.ಆರ್ - ಕಳುಹಿಸಿದ ದಿನ 05 November 2008

ಬೇಕು ಬದುಕಲಿ
ಸಾಕು ಅನಿಸುವಷ್ಟು ಮೌನ
ಬೇಕು ಅನಿಸುವಷ್ಟು ಮಾತು
ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ.

ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟಿಸುವ ಮೌನ, ಇನ್ನು ಪ್ರೀತಿ ಹಿಡಿಯೂ ಇಲ್ಲ, ಮುಡಿಯೂ ಇಲ್ಲ.
ಯಾಕೆ ಹೀಗೆ? ಮನಸ್ಸುಗಳನ್ನು ಹಿಂಡಿ ಹಿಪ್ಪೆ ಮಾಡೊ ನೆನಪುಗಳು ಅರ್ಥವಾಗದ ಭಾವನೆಗಳು. ವ್ಯರ್ಥವಾದ ಮಾತುಗಳು. ಎಲ್ಲಾ ಜೊಳ್ಳು. ಆದರೆ ನನ್ನ ಪ್ರೀತಿ ಜೊಳ್ಳಲ್ಲ ಕಣೋ ಗೆಳೆಯ ಅದರಲ್ಲಿ ಉಸಿರಿದೆ. ನಾನು ನಿನ್ನನ್ನ ಅರಿತ ಭಾವವಿದೆ. ಮುಸ್ಸಂಜೆಯಲ್ಲಿ ನಿನ್ನ ಕೊನೆಯ ಬೆರಳನ್ನು ಹಿಡಿದು ನಿನ್ನೊಂದಿಗೆ ಓಡಾಡುತ್ತಾ ಕಟ್ಟಿದ ಅದೆಷ್ಟೋ ಕನಸಿದೆ! ಹೊಸದೊಂದು ಚುಕ್ಕಿ ಆಗಸದಲ್ಲಿ ಹುಟ್ಟುವಂತೆ ಕ್ಷಣಕ್ಕೊಂದು ಕನಸು. ಅಬ್ಬಾ!! ಅಷ್ಟೊಂದು ಕನಸುಗಳನ್ನು ಕಟ್ಟಲು ನಮಗೆ ಮಾತ್ರ ಸಾಧ್ಯ. ಅಲ್ವಾ...?

ಆದರೆ ವಿಚಿತ್ರ ಏನು ಗೊತ್ತಾ? ಬೇಡ ಅಂದರೂ ಸೂರ್ಯ ಬರುತ್ತಾನೆ. ಚಂದ್ರ ನಗುತ್ತಾನೆ. ಜೊತೆಗೆ ಮತ್ತಷ್ಟು ಚುಕ್ಕಿಯೊಂದಿಗೆ ಆಗಸ ಕಂಗೊಳಿಸುತ್ತೆ!! ಆದರೆ ಆ ಚುಕ್ಕಿ ಜೊತೆ ಸ್ಪರ್ಧೆಗೆ ನಿಲ್ಲಲು ಕನಸು ಕಟ್ಟಲು ನೀನಿಲ್ಲ ಕಣೋ ನನ್ನ ಜೊತೆ. ಆಗಸದ ಬೆಳೆದಿಂಗಳೆಲ್ಲಾ ಸೋರೋಗುತ್ತಿದೆ ಅನಿಸುತ್ತೆ ಕಣೋ ನೀನಿಲ್ಲದೆ.

"ನೀನಿಲ್ಲದೆ ನನಗೇನಿದೆ?
ಮನಸಿಲ್ಲಾ ನಿನ್ನಲ್ಲೆ ನೆಲೆಯಾಗಿದೆ.
ಕನಸೆಲ್ಲಾ ಕಣ್ಣಲ್ಲೆ ಸೆರೆಯಾಗಿದೆ. ನೀನಿಲ್ಲದೆ
"

ಅದಕ್ಕೆ ಅಂದು ಕೊಂಡಿದಿನಿ ಮರೆಯಬೇಕು ಅಂತ. ಅದಕ್ಕೆ ಈ ಮಲೆನಾಡಿನ ಜೋರು ಮಳೆಯಲ್ಲಿ ಛತ್ರಿ ಇಲ್ಲದೆ ನಡೆದುಕೊಂಡು ಹೋಗುತ್ತಿರುತ್ತೀನಿ ಒಬ್ಬಳೇ! ಯಾಕೆ ಅಂತ ಗೊತ್ತಿಲ್ವಾ? ಪೆದ್ದ ಕಣೋ ನೀನು. ಕಣ್ಣೀರು ಕಂಡರೆ ಎಲ್ಲರೂ ನನ್ನ ವೀಕ್ ಅಂದು ಕೊಳ್ಳೊಲ್ವಾ? ಅದಕ್ಕೆ ಕಾಲು ನೋಯೋವಷ್ಟು ದೂರ ನಡೆದು ಹೋಗಿ ಬಿಡೋಣ ಅಂದು ಕೊಂಡೆ ಹೊರಡುತ್ತೇನೆ! ಆದರೆ ನನಗೆ ಗೊತ್ತಿಲ್ಲದೆ, ಕಾಲು ನನ್ನ ಇಲ್ಲಿಂದ ಮುಂದೆ ಹೋಗೋಕೆ ಬಿಡುತ್ತಿಲ್ಲ, ಯಾಕಾ? ಇಲ್ಲೆ ಅಲ್ಲವೇನೊ ನನ್ನ ಒಲವಿನ ಸಮಾಧಿ ಕಟ್ಟಿರೋದು? ನೀನು ನನಗೆ ಹೇಳದೆ ಈ ಲೋಕ ಬಿಟ್ಟು ಹೋಗಿದ್ದು, ಕಡೆಯದಾಗಿ ನಿನ್ನ ನೋಡೋಕು , ನಾನು ಬರದೆ ಇದ್ದುದು.( ನಿಜ ಹೇಳಲಾ ನನಗೆ ನಿನ್ನ ನಗು ಮುಖ ನಾ ಮರೆಯೋಕೆ ಇಷ್ಟ ಇರಲಿಲ್ಲ , ಅದಕ್ಕೆ ಬರಲಿಲ್ಲ) ಆದರೆ ದಿನಾ ಸಂಜೆ ಇಲ್ಲಿ ಬರುತ್ತೀನಿ. ಯಾಕೆ ಗೊತ್ತಿಲ್ಲ. ನಿನ್ನ ಜೊತೆ ಮಾತಾಡಬಾರದು ಅಂದುಕೊಳ್ಳುತ್ತೀನಿ. ಆದರೆ, "ಬುದ್ದಿ ಹೇಳೋದು ಒಂದು ಮನಸ್ಸು ಮಾಡೋದು ಒಂದು" ಅಂತಾರಲ್ಲಾ ಮತ್ತೆ ಇಲ್ಲೇ ಬಂದು ಕೂರುತ್ತೇನೆ. ನೀನಾ ಮಾತುಗಾರ. ಮೂಗಿ ಅನ್ನುತ್ತಿದ್ದ ನನಗೇ ಮಾತು ಕಲಿಸಿ ಬಿಟ್ಟೆ. ಆದರೆ ನೋಡು ನಾ ಮಾತಾಡುತ್ತಿದ್ದೀನಿ. ಆದರೆ ನೀ ನನಗೆ ಮಾತು ಕಲಿಸಿ ಮೌನಿಯಾದೆ. ಯಾಕೋ ಹೀಗೆ ಮಾಡಿದೆ? ಇಷ್ಟು ಬೇಗ ನಿನಗೆ ನನ್ನ ಮಾತುಗಳು ಬೇಸರ ಆಯ್ತಾ ನಿನಗೆ?

ಆ ನಿನ್ನ ಕಡೆ ಕ್ಷಣದಲ್ಲಿ ನಿನಗೆ ನನ್ನ ನೆನಪು ಬರಲಿಲ್ಲವೇನೋ? ಬಂದಿಲ್ಲದೇ ಏನು. ಬಂದಿರುತ್ತೆ, ಕಣ್ಣಂಚು ತೇವ ಕೂಡ ಆಗಿರುತ್ತೆ. ಆ ನೋವಲ್ಲೂ ತುಟಿ ಬಿರಿಯೇ ನಕ್ಕಿರುತ್ತಿ. ನನ್ನ ನೆನಸಿ, ಅಲ್ವಾ?? ಮನಸ್ಸು ಮರುಳು ಕಣೋ ಮಾತೇ ಕೇಳೋಲ್ಲ!

ಯಾಕೋ ಈಗೀಗ ಮಾತಲ್ಲಿ ಮೊದಲಿನ ಬಿರುಸಿಲ್ಲ. ಹೇಗಿರುತ್ತೆ ಹೇಳು?? ಸಿಕ್ಕ ಸಿಕ್ಕ ಕಲ್ಲು , ಮಣ್ಣು , ಎಲೆ , ಹೂ ಗಳನ್ನೆಲ್ಲಾ ಒಳ್ಳೆ ಅಕ್ಕ ಮಹಾದೇವಿತರ ನೀವು ಖಂಡಿರೆ, ನೀವು ಖಂಡಿರೆ ಅಂತ ಕೇಳುತ್ತಿದ್ದರೆ. ಸಾರಿ ಕಣೋ ಮಾತಿಗೆ ಹೇಳಿದೆ. ಕೋಪ ಇಲ್ಲತಾನೆ? ನಿಜ ಏನು ಗೊತ್ತಾ? ನಿನದೇ ನೆನಪಿನಲ್ಲಿ ನನ್ನಲ್ಲೇ ನಾ ಕಳೆದು ಹೋಗುತ್ತಿದ್ದೀನಿ ಅದಕ್ಕೆ.
ಎನೇ ಆಗಲಿ, ನಿನ್ನ ಬಗ್ಗೆ ನನಗೆ ಹೆಮ್ಮೆ ಕಣೋ!! ಪ್ರೀತಿಗಿಂತ ದೇಶ ದೊಡ್ಡದು ಅಂತ ನೀನು ಹೋದೆ. ಬದುಕಿಗಿಂತ ಪ್ರೀತಿ ದೊಡ್ಡದು ಅಂತ ನಾನು ಹೀಗೆ ಉಳಿದೆ. ರಾಧೆ ವಿರಹಿ ಅಂತಾರಲ್ಲಾ ಹಾಗೆ. ಆದರೆ ನಾನು ರಾಧೆ ತರಾ ವಿರಹಿಯಲ್ಲ. ನಿನ್ನ ಪ್ರೀತಿಯ ಮಳೆಯಲ್ಲಿ ಸಾಕಷ್ಟು ನೆನೆದಿದ್ದೇನೆ. ಸದ್ಯ ಶೀತ ಆಗಲಿಲ್ಲ. ಇನ್ನು ಸ್ವಲ್ಪವೇ ದಿನ ನಾನೂ ನಿನ್ನೊಂದಿಗೆ ಬರುತ್ತೀನಿ. ಕಾಯುತ್ತಿರು ಹೊಸ ಕನಸುಗಳನ್ನ ಕಟ್ಟೋಣ! ಅಲ್ಲಾದರೂ ಜೊತೆಗಿರೋಣ!! ಕಾಯುತ್ತೀಯೆನೋ? ಅಥವಾ ಹೊಸ ಹುಡುಗಿ ಸಿಕ್ಕಿದ್ದಾಳೆ ಹೇಗೆ?!! ಛೇ ಸುಮ್ಮನೆ ಹೇಳಿದೆ ಬರುತ್ತೇನೆ ಕಾಯ್ತಿರು ನಿನ್ನ ನೆನಪುಗಳೊಂದಿಗೆ.

" ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ ಖಂಡಿತ ನಮ್ಮದಾಗುತ್ತೆ"

ನಾ ರಾಧೆನೇ ಆದರೆ ನಿನ್ನ ರಾಧೆ. ವಿರಹಿಯಲ್ಲದ ರಾಧೆ!!ಕುರುಡುಗತ್ತಲಿ ಅಮೃತ ಕ್ಷಣ ಕಣೋ ನಿನ್ನೊಲವು. ಒಲವು ಆ ಪದನೇ ಏಷ್ಟು ಚೆನ್ನಾಗಿದೆ ಅಲ್ವಾ?? ಕಾಯುತ್ತೀಯಾ ತಾನೆ ನನಗೊಸ್ಕರ?

ವೈಟ್ ಫಾರ್ ಮೀ

ವಿಸ್ಮಯನಗರಿಯ ಸರ್ವ ಸದಸ್ಯರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (4 ಓಟುಗಳು)
mahadeva_sumi's picture
ಮಂಗಳ, 18/11/2008 - 17:30 ರಂದು mahadeva_sumi ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

ಬೇಕು ಬದುಕಲಿ
ಸಾಕು ಅನಿಸುವಷ್ಟು ಮೌನ
ಬೇಕು ಅನಿಸುವಷ್ಟು ಮಾತು
ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ.

ತು0ಬಾ ಧನ್ಯವಾದಗಳು ಈ ಸು0ದರ ಲೇಖನ ಕೊಟ್ಟಿದ್ದಕ್ಕೆ

madu Cool

mahadeva_sumi's picture
ಮಂಗಳ, 18/11/2008 - 17:28 ರಂದು mahadeva_sumi ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

"ನಿನ್ನ ಪ್ರೀತಿಯ ಮಳೆಯಲ್ಲಿ ಸಾಕಷ್ಟು ನೆನೆದಿದ್ದೇನೆ. ಸದ್ಯ ಶೀತ ಆಗಲಿಲ್ಲ"
ತು0ಬಾ Thyank's
Madu

ಪಾರ್ವತಿ.ಜಿ.ಆರ್'s picture
ಮಂಗಳ, 11/11/2008 - 11:43 ರಂದು ಪಾರ್ವತಿ.ಜಿ.ಆರ್ ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

ಧನ್ಯವಾದಗಳು ಎಲ್ಲರಿಗೂ,

TYAGRAJ S's picture
ಶನಿ, 08/11/2008 - 11:52 ರಂದು TYAGRAJ S ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

Hi Parvathi
Nimma lekana tumba chennagide
"ನಿನ್ನ ಪ್ರೀತಿಯ ಮಳೆಯಲ್ಲಿ ಸಾಕಷ್ಟು ನೆನೆದಿದ್ದೇನೆ. ಸದ್ಯ ಶೀತ ಆಗಲಿಲ್ಲ"
ತು0ಬಾ Thyank's

ಸುಧೀರ ಸೊನ್ನದ's picture
ಶುಕ್ರ, 07/11/2008 - 10:26 ರಂದು ಸುಧೀರ ಸೊನ್ನದ ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

ಹೈ ,
ನಿಮ್ಮ ಈ ಲೇಖನ ತು0ಬಾ ಚೆನ್ನಾಗಿದೆ..ಕೆಲವು ವಾಕ್ಯಗಳು ನಿಜಕ್ಕೂ ಅದ್ಭುತ .. ...
"ಹೊಸದೊಂದು ಚುಕ್ಕಿ ಆಗಸದಲ್ಲಿ ಹುಟ್ಟುವಂತೆ ಕ್ಷಣಕ್ಕೊಂದು ಕನಸು. ಅಬ್ಬಾ!! ಅಷ್ಟೊಂದು ಕನಸುಗಳನ್ನು ಕಟ್ಟಲು ನಮಗೆ ಮಾತ್ರ ಸಾಧ್ಯ."
"ನಿನ್ನ ಪ್ರೀತಿಯ ಮಳೆಯಲ್ಲಿ ಸಾಕಷ್ಟು ನೆನೆದಿದ್ದೇನೆ. ಸದ್ಯ ಶೀತ ಆಗಲಿಲ್ಲ"
ತು0ಬಾ ಧನ್ಯವಾದಗಳು ಈ ಸು0ದರ ಲೇಖನ ಕೊಟ್ಟಿದ್ದಕ್ಕೆ

ರಾಜೇಶ ಹೆಗಡೆ's picture
ಗುರು, 06/11/2008 - 14:54 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

ಹಾಯ್,

ನಿಮಗೆ ವಿಸ್ಮಯ ನಗರಿಗೆ ಸುಸ್ವಾಗತ.
ಹರೀಶ ಅವರು ಹೇಳಿದ್ದು ನಿಜ. ನೀವು ಮೊದಲು ವಿಸ್ಮಯ ನಗರಿಗೆ ಪ್ರಜೆಯಾಗಬೇಕು. ನಂತರ ನೀವು ನಿಮ್ಮ ಚಿತ್ರವನ್ನು, ಪಿಸುಮಾತನ್ನು (ಅಂದರೆ ಲೇಖನಗಳು), ಕವನವನ್ನು, ಚರ್ಚೆಯನ್ನು ಮಾಡ ಬಹುದು.

ಪ್ರಜೆಯಾಗಲು ಈ ಪುಟದ ಮೇಲ್ಗಡೆ ಪ್ರಜೆಯಾಗು ಅನ್ನುವ ಲಿಂಕ್ ಕ್ಲಿಕ ಮಾಡಿ.

ನಿಮ್ಮ ಲೇಖನಗಳಿಗೆ ನಾವೆಲ್ಲಾ ಕಾದಿದ್ದೇವೆ. Smile

ರಾಜೇಶ ಹೆಗಡೆ's picture
ಗುರು, 06/11/2008 - 14:37 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

ಹಾಯ್ ಪಾರ್ವತಿ ಅವರೇ,
ಆರಂಭದಲ್ಲಿ ಭಗ್ನ ಪ್ರೇಮದ ಭಾವನೆಗಳನ್ನು ನಿರೂಪಿಸಿ ಕೊನೆಯಲ್ಲಿ ಮತ್ತೆ ಒಂದಾಗುವ ಆಶಾ ಕಿರಣದೊಂದಿಗೆ ಮುಗಿಯುವ ಈ ಲೇಖನ ಓದುವದೇ ಒಂದು ಸೊಗಸು.
ಕೆಲವು ಸಾಲುಗಳಂತೂ ಮನಮುಟ್ಟುತ್ತವೆ. ಉದಾಹರಣೆಗೆ:

Quote:
ನಿನ್ನ ಪ್ರೀತಿಯ ಮಳೆಯಲ್ಲಿ ಸಾಕಷ್ಟು ನೆನೆದಿದ್ದೇನೆ. ಸದ್ಯ ಶೀತ ಆಗಲಿಲ್ಲ.

Quote:
ನೀನಾ ಮಾತುಗಾರ. ಮೂಗಿ ಅನ್ನುತ್ತಿದ್ದ ನನಗೇ ಮಾತು ಕಲಿಸಿ ಬಿಟ್ಟೆ. ಆದರೆ ನೀ ನನಗೆ ಮಾತು ಕಲಿಸಿ ಮೌನಿಯಾದೆ. ಯಾಕೋ ಹೀಗೆ ಮಾಡಿದೆ?

ಎಂ. ಜಿ. ಹರೀಶ's picture
ಗುರು, 06/11/2008 - 12:18 ರಂದು ಎಂ. ಜಿ. ಹರೀಶ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

ನೀವು ಮೊದಲು ವಿಸ್ಮಯನಗರಿಗೆ ರಿಜಿಸ್ಟರ್ ಆಗಬೇಕು..

ಅನಾಮಿಕನು's picture
ಬುಧ, 05/11/2008 - 18:20 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ನಿನ್ನೆಡೆಗೆ ,,,

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಈ ಸೈಟು ಚೆನ್ನಾಗಿದೆ ನಾವು ಸಹ ಇಲ್ಲಿ ಬರೆಯಬಹುದಾ? ನಮ್ಮ ಲೇಖನ ಯಾರಿಗೆ ಕಳುಹಿಸಬೇಕು? ಯಾರಾದ್ರೂ ಹೆಲ್ಪ ಮಾಡ್ಟೀರಾ ಪ್ಲೀಸ್

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 + 1 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಪಾರ್ವತಿ.ಜಿ.ಆರ್ ಪಾರ್ವತಿ.ಜಿ.ಆರ್
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, , ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content