ಎತ್ತ ಹೋದೆ ಹುಚ್ಚು ಮನವೇ,
ಕನಸು ನೂರು ಕಾಣದೆ ,
ಮುನಿಯ ಬೇಡ, ದುಗುಡ ಬೇಡ,
ಅರಸದಿರು ಜಗದ ಇರುವನು,
ಬಂದು ಸೇರೆ ನಿನ್ನ ನೆಲೆಯ ,
ತೋರುವೆ ಸ್ವಪ್ನ ನಗರಿಯ.
******************
ಕಾಡಿದೆ ಏಕೆ ನೀ ಹೀಗೆ,
ಕಿವುಡಿ ನಾ ನಿನ್ನ ಮನದ ಮಾತುಗಳಿಗೆ,
ಬೆರಸಲಾರೆ ಕಣ್ಣೋಟವ ನಿನ್ನೋಂದಿಗೆ,
ಭಯವಿದೆ ಎಲ್ಲಿ ಪ್ರೀತಿ ಮೂಡುವುದೋ ಎಂದು,
***********************
ಬದುಕಿನದು ಬರಿಯ ಪರಿಪಾಟಲು,
ಹೊಸ ಉಸಿರು ನಿಡುಸ್ಯುದು,
ನಕ್ಕು ಅತ್ತು ಸುಮ್ಮನಾಗೆ,
ಹಕ್ಕಿಯದು ಬಂದೇಳುತಿದೆ,
ಟುವ್ವಿ. ಟುವ್ವಿ,,,,,,,,,,,,,,,,,,,,,
************************

ನಿಮ್ಮ ಅನಿಸಿಕೆ ತಿಳಿಸಿ