ಜೀವನ ಸರಳವಾಗಿದ್ದಷ್ಟೂ ನೆಮ್ಮದಿ ಹೆಚ್ಚುತ್ತದೆ. ಹಾಗೆ ಜೀವನವನ್ನು ಸರಳಗೊಳ್ಳಿಸುವ ವಿಧಾನ ಇಲ್ಲಿದೆ!
- ಇಷ್ಟವಿಲ್ಲದ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಡಿ.
- ಎಲ್ಲಾ ಕೆಲಸವನ್ನು ಪರ್ಫೆಕ್ಟ ಅಥವಾ ನಿಖರವಾಗಿ ಮಾಡಲು ಹೋಗಬೇಡಿ.
- ಮನೆಯನ್ನು ಸ್ವಚ್ಚಗೊಳಿಸುವ ಕೆಲಸವನ್ನು ಸರಳವಾಗಿಸಿಕೊಳ್ಳಿ. ಹಾಗು ಅದನ್ನು ಪ್ರತಿ ಬಾರಿಯೂ ಅನುಸರಿಸಿ.
- ಫೋನ್, ವಾಟರ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳಿಗೆ ಆನ ಲೈನ ಬಿಲ್ ತುಂಬುವದನ್ನು ರೂಡಿಸಿಕೊಳ್ಳಿ. ಇದು ನಿಮ್ಮ ಸಮಯ ಉಳಿಸುತ್ತದೆ. ಅನಗತ್ಯವಾಗಿ ತಡವಾಗಿದ್ದಕ್ಕೆ ದಂಡ ತುಂಬುವದು ತಪ್ಪುತ್ತದೆ.
- ನಿಮ್ಮ ಹಾಡು, ಚಲನಚಿತ್ರ, ಪುಸ್ತಕ ಇತ್ಯಾದಿ ಸಂಗ್ರಹಗಳಲ್ಲಿ ನಿಮಗೆ ತುಂಬ ಇಷ್ಟವಾದುದನ್ನು ಮಾತ್ರ ಇಟ್ಟುಕೊಳ್ಳಿ ಉಳಿದದನ್ನು ಬಿಟ್ಟು ಬಿಡಿ.
- ನಿಮ್ಮ ಪರ್ಸ್ ಅನ್ನು ಕ್ಲೀನ್ ಮಾಡಿ. ಅದರಲ್ಲಿ ಅನಗತ್ಯವಾದುದನ್ನು ತೆಗೆದು ಬಿಡಿ.
- ನಿಮಗೆ ಬೇಡವಾದ ಪೋಸ್ಟ್ ಗಳನ್ನು ನಾಶಪಡಿಸಿ.ಬೇಡವಾದ ಕಾಲ್, ಎಸ್. ಎಂ.ಎಸ್, ಮೇಲ್ ಗಳ ಮೇಲೆ ಸಮಯ ವ್ಯರ್ಥ ಮಾಡದಿರಿ.
- ನಿಮ್ಮ ವಾರ್ಡ್ ರೋಬ್ ಅನ್ನು ನೀಟಾಗಿ ಇಟ್ಟುಕೊಳ್ಳಿ.
- ನೀವು ಉಪಯೋಗಿಸದ ಮೇಲ ಅಥವಾ ಸೋಶಿಯಲ್ ನೆಟ್ ವರ್ಕ್ ಎಕೌಂಟ್ ಅನ್ನು ಅಳಿಸಿಹಾಕಿ.
- ಜಾಹೀರಾತುಗಳು ನಿಮ್ಮ ಫೋನ್ ಗೆ ಬರುತ್ತಿದ್ದರೆ ಅವರಿಗೆ ಇನ್ನು ಮುಂದೆ ಕಾಲ್ ಮಾಡಬಾರದೆಂದು ತಿಳಿಸಿ.
- ನಿಮ್ಮ ಕಾರು ಹಾಗು ಬೈಕುಗಳ ಸರ್ವೀಸ್ ಅನ್ನು ಪ್ಲಾನ ಮಾಡಿ. ಅದರ ಪ್ರಕಾರ ಮಾಡುತ್ತಿರಿ.
- ನಿಮ್ಮ ಬಿಲ್, ಡಾಕ್ಯುಮೆಂಟ್ ಗಳ ಫೈಲ್ ಮಾಡಿ.
- ಪ್ರತಿದಿನ ಬೆಳಿಗ್ಗೆ ಉತ್ತಮ ತಿಂಡಿಯನ್ನು ತಿನ್ನಿ.
- ನಿಮಗೆ ಶಾಂತಿ, ನೆಮ್ಮದಿ ಬೇಕಾದಾಗ ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ.
- ಒಂದು ಉತ್ತಮ ಗುರಿ ಇಟ್ಟ ಕೊಂಡು ಅದನ್ನು ಸಾಧಿಸಲು ಶ್ರಮ ಪಡಿ.
- ನಿಮ್ಮ ಕೆಟ್ಟ ಚಟಗಳನ್ನು ನಿಯಂತ್ರಿಸಲು ಪ್ರಯತ್ನ ಪಡಿ.
- ಜಾಹೀರಾತು ನೋಡುವದನ್ನು, ಓದುವದನ್ನು ಕಡಿಮೆ ಮಾಡಿ.
- ಸಂತೋಷಕ್ಕಾಗಿ, ಮನೋರಂಜನೆಗಾಗಿ ಓದಿ.
- ನಿಮ್ಮ ಡಾಕ್ಟರ್ ಬಳಿ ರೆಗ್ಯುಲರ್ ಆಗಿ ಆರೋಗ್ಯದ ಚೆಕ್ ಅಪ್ ಮಾಡಿ.
- ಯಾವಾಗಲೂ ಒಂದು ಕೆಲಸವನ್ನು ಒಮ್ಮೆ ಮಾಡಿ.
- ಸಹಾಯಕ್ಕಾಗಿ ಇನ್ನೊಬ್ಬರನ್ನು ಕೇಳಲು ಸಂಕೋಚ ಪಡದಿರಿ.
ಆಧಾರಃ
http://www.onsimplicity.net/2008/07/30-ways-to-make-your-life-more-simple/

Re: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
:? ನಿಮ್ಮ ಸಲಹೆಗಳು ತುಂಬಾ ಸರಳವಾಗಿವೆ. ಆದರೆ ಅದನ್ನು ಅಳವಡಿಸಿಕೊಳ್ಳಬೇಕಷ್ಟೆ.
Re: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
sakkareya haage RAW aagirade, kobri mithai yaMthive!
Re: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
another thing which would really help is start running in life... saying goes ... more fitter physically means mentally more fit...
Re: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
ಕೆಲವೊಂದು ಅಂಶಗಳನ್ನು ಪಾಲಿಸುವುದು ಕಷ್ಟವಾದರೂ ಪಾಲಿಸಿದ್ದಲ್ಲಿ ನೆಮ್ಮದಿಯಿಂದ ಬಾಳಬಹುದೆಂಬುದು ನಿಜ.....
Re: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
ಒಂದು ಮಾತು ಹೇಳ್ಲಾ ಸಾರ್..!
ನೀವು ಹೇಳಿದ ಅಷ್ಟೂ ವಿಷಯಗಳು, ಗಗನಕುಸುಮಗಳಾಗದೇ, ಸಾಮಾನ್ಯರೂ ಅನುಸರಿಸೋ ಆಗಿವೆ. So ನಿಮ್ಮ ಲೇಖನ ಜನಪರ.
ಸುಂದರ ಲೇಖನಕ್ಕೆ ಧನ್ಯವಾದಗಳು.
Re: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
ಕೆಟ್ಟ ಚಟ ಬಿಡಬೇಕು ನಿಜ ಆದರೆ ಹೇಗೆ?ನೀವು ಕೊಟ್ಟ ಎಲ್ಲಾ ಸಲಹೆಗಳು different ಆಗಿ ಇದೆ ಎಲ್ಲರೂ ಹೇಳೋ ಹಳೇ ರಾಗ ಇಲ್ಲ.
ನಿಮ್ಮ ಅನಿಸಿಕೆ ತಿಳಿಸಿ