ಅನಾರ್ಕಲಿ

ಬರೆದವರು: ravikanth143 - ಕಳುಹಿಸಿದ ದಿನ 08 May 2008

ಅನಾರ್ಕಲಿ ........
ಹಾಗಂತ ಒಂದು ಮಿಠಾಯಿ ಸಿಗುತ್ತಿತ್ತು ... ಬಹುಶಃ ಈಗ ಇದೆಯೋ ಇಲ್ಲವೊ ಗೊತ್ತಿಲ್ಲ .. ನಾನು ಚಿಕ್ಕವನಿದ್ದಾಗ ಮಾತ್ರ ಅನಾರ್ಕಲಿ ಅಂದ್ರೆ ನಂಗೆ ಪ್ರಾಣ. ದಿನಕ್ಕೊಂದಾದ್ರು ಅನಾರ್ಕಲಿ ತಿನ್ನದಿದ್ರೆ ಉಹುಂ ಅದೇನೋ ಕಳೆದುಕೊಂಡಂತೆ.. ಶಾಲೆಗೆ ಹೋಗುವಾಗ ಸ್ಲೇಟು , ಕಡ್ಡಿ, ಪೆನ್ನು, ಹೀಗೆಲ್ಲ ಖರೀದಿಸಲು ತಾಯಿ ಕೊಡುತ್ತಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ಅನಾರ್ಕಲಿ ಕೊಳ್ಳಲು ಸುಂದರನ ಅಂಗಡಿಯ ಪಾಲಾಗುತ್ತಿತ್ತು.. ೫ ಪೈಸೆಗೆ ಎರಡು ಅನಾರ್ಕಲಿ ಸಿಗುತ್ತಿತ್ತು ... ಕಲ್ಲಿನಂತೆ ಗಟ್ಟಿಯಾದ ಆ ಮಿಠಾಯಿ ಜಗಿದು ತಿನ್ನೋದಂದ್ರೆ ಅದೇನೋ ಮಜಾ.. ಕೆಲವೊಂದು ಸಾರಿ ಈ ಅನಾರ್ಕಲಿಯೇ ನಮ್ಗೆ ಗೋಲಿ ಆಡಲು ಸಹ ಉಪಯೋಗವಾಗಿತ್ತಿತ್ತು...
ನೋಡಲು ಕಪ್ಪನೆ ಕಲ್ಲಿನಂತೆ ಕಾಣುತ್ತಿದ್ದ ಅದನ್ನು ತಿನ್ನೋವಾಗ ತಾಯಿಯ ಬೈಗುಳ ಬೇರೆ... ಆದ್ರೆ ನಾವು ಕೇಳಬೇಕಲ್ಲ.. ದನ ಕಪ್ಪಾದರೇನು ಹಾಲು ಕಪ್ಪೇ ಅನ್ನೋ ಹಾಗೆ ನಮ್ಗೆ ಅದೇ ಅಮೃತ... ಆ ಕಪ್ಪನೆಯ ಮಿಠಾಯಿಗೆ ಅನಾರ್ಕಲಿ ಅಂತ ಅದ್ಯಾವ ಪುಣ್ಯಾತ್ಮ ಹೆಸರಿಟ್ಟನೋ ಗೊತ್ತಿಲ್ಲ .. ಅಂತೂ ರುಚಿ ಮಾತ್ರ ನಿಜವಾದ ಅನಾರ್ಕಲಿ ಥರಾನೇ ...!!!!
ಮೊನ್ನೆ ತಾನೆ ಅದೇನೋ ಹುಡುಕುತ್ತ ನನ್ನ ಹಳೆಯ ಕೆಲವು ಸಾಮಗ್ರಿಗಳ ಚೀಲ ತೆರೆದು ನೋಡಿದ್ರೆ ಅದರಲ್ಲಿ ಕೆಲವು ೫ ,೧೦ ಹಾಗೂ ೨೦ ಪೈಸೆಯ ನಾಣ್ಯಗಳು ಸಿಕ್ಕವು.. ಅದ್ಯಾಕೋ ಹಳೆಯ ಬಾಲ್ಯದ ನೆನಪುಗಳು, ಆಗಿನ ಅನಾರ್ಕಲಿ , ಒಟ್ಟಾಗಿ ತಿನ್ನುತ್ತಿದ್ದ ನನ್ನ ಗೆಳೆಯರ ಗುಂಪು ಎಲ್ಲವೂ ನೆನಪಾದವು... ಮತ್ತೆ ಆ ದಿನಗಳು ಬರಬಾರದೇ ಅಂತ ಅನಿಸಿದ್ದು ಮಾತ್ರ ಸುಳ್ಳಲ್ಲ... ೫, ೧೦ ಹಾಗೂ ೨೦ ಪೈಸೆಯ ನಾಣ್ಯಗಳನ್ನು ಮತ್ತೆ ಅದೇ ಚೀಲದಲ್ಲಿ ಹಾಕಿ ಜೋಪಾನವಾಗಿಟ್ಟೆ.. ಮತ್ತೆ ಹಳೆಯ ದಿನಗಳು ಬಂದರೆ ಅನಾರ್ಕಲಿ ಖರೀದಿಸಲು ಬೇಕಲ್ಲ?

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 ಕೂಡಿಸು 3 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
Ravikanth Gore
ಈಗಿರುವ ಸ್ಥಳ: ಅಂಗೋಲಾ
ನನ್ನ ಬಗ್ಗೆ
Working in Bangalore.
ಇವರ ವಿಸ್ಮಯ ಪುಟ