ಬೊಕ್ಕುತಲೆಯವನೊಬ್ಬ ಬಿಸಿಲಿನಿಂ ಬೆಂಬಳಲಿ

ನೆರಳನರಸುತ್ತ ಬಂದ ತಾಳೆಮರದಡಿಗೆ |

ದೊಡ್ಡತಾಳೆಯ ಕಾಯಿ ಕಳಚಿ ಮೇಲೆರಗಿತು

ಒಡೆಯಿತವನ ತಲೆ ದಡ್ ಧಢಾರೆಂದು |

ಅದಕೆಂದೆ ಹೇಳುವುದು

ದುರ್ದೈವಿ ಹೋದಲ್ಲಿಗೇ ಕಷ್ಟಗಳೂ ಬರುವುದು. ||

— ಶ್ರೀಕಾಂತ ಹೆಗಡೆ

ಸಂಜೆ ಸುಮಾರು ೬:೩೦ ರ ಸಮಯ ಅ೦ದು ಭದ್ರಾವತಿಯಲ್ಲಿ ಮದುವೆಗೆ ಹೋಗಿ ಹಿ೦ದಿರುಗಿ ಬರುವಾಗ ಮನೆಯ ಎದುರು ಚಿಕ್ಕ ಹುಡುಗರೆಲ್ಲ ಆಚೆ ಈಚೆ ಸುತ್ತುತ್ತಾ ಇದ್ದರೆ ಕೆಲವರು ಕಾ೦ಪೊ೦ಡಿನ ಮೇಲೆ ಕು೦ತ್ತಿದ್ದವರು ನಮನ್ನು ನೋಡಿದ ಕೂಡಲೆ, ಏ ಬ೦ದ್ರು ಕಣೋ, ಏ ಬ೦ದ್ರು ಕಣೇ ಎ೦ದು ಕುತೂಹಲದಿ೦ದ ಜಮಾಯಿಸಿದರು.ಮುಂದೆ ಓದು


ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ)  ಮುಂದೆ ಓದು

kmurthys's picture
ಭಗವದ್ಗೀತೆ - ಭಾಗ 10

ಶನಿ, 06/03/2010 - 11:56 - kmurthys

ಹಿಂದಿನ ಭಾಗದಲ್ಲಿ ನಾವು ಜೀವಿಗಳ ಮೇಲೆ ಪ್ರಕೃತಿಯು ಯಾವ ರೀತಿಯಾಗಿ ತನ್ನ ಪ್ರಭಾವವನ್ನು ತೋರಿಸುವುದು, ಈ ಪ್ರಭಾವದ ಮೂರು ಗುಣಗಳಾದ ಸತ್ವ, ರಜಸ್ಸು ಮತ್ತು ತಮಸ್ಸು ಎಂದರೇನು ಮತ್ತು ಈ ಮೂರು ಗುಣಗಳ ಪ್ರಭಾವವೇ ನಮ್ಮ ಚಾತುರ್ವರ್ಣ ಪದ್ಧತಿಗೆ ಮೂಲವಾಗಿತ್ತು ಎಂಬುದನ್ನು ಅರಿತುಕೊಂಡೆವು. ಈ ಚಾತುರ್ವರ್ಣ ಪದ್ಧತಿಗೆ ಸಂಬಂಧಿಸಿದ ಒಂದು ಮುಖ್ಯವಾದ ಶ್ಲೋಕವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ:

 

ಮುಂದೆ ಓದು

ಬೆಳಗ್ಗೆ ಏಳುತ್ತಿದ್ದ ಹಾಗೆ ಉಮ್ಮಳ ಸಹಸ್ರನಾಮಾರ್ಚನೆ ಕೇಳುತ್ತ ಹನೀಫ ಏಳಬೇಕು, ಇಲ್ಲದಿದ್ದರೆ ಏನೋ ಕಳೆದುಹೋದಹಾಗೆ. ಉಮ್ಮ ಗೃಹಕಾರ್ಯಗಳನ್ನು ಒಂದೆಡೆ ಮಾಡುತ್ತ ಇನ್ನೊಂದೆಡೆ ವಟವಟ ಮಾಡುತ್ತಿರದಿದ್ದರೆ ಉಮ್ಮ ಉಮ್ಮ ಹೇಗಾದಾಳು? ಉಮ್ಮನಿಗೆ ಅವಳ ಒಬ್ಬಳೇ ಮಗ ಹನೀಫ ಮಾಡಿದ್ದೆಲ್ಲವೂ ತಪ್ಪು. ಹನೀಫ ಕೆಲಸಕ್ಕೆ ಹೋದರೆ ತಪ್ಪು. ಹೋಗದಿದ್ದರೆ ತಪ್ಪು. ನಮಾಜಿಗೆ ಹೋದರೆ ಸಮಯ ಹಾಳು, ಹೋಗದಿದ್ದರೆ ಅಲ್ಲಾಹು ಮೆಚ್ಚ.ಮುಂದೆ ಓದು

Manjuladevi's picture
ಮಾತು

ಗುರು, 04/03/2010 - 16:32 - Manjuladevi

ಭೂಮಿಯ ಮೇಲಿರುವ ಕೋಟ್ಯಾಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುವುದರಲ್ಲಿ ಎರಡು ಮಾತಿಲ್ಲ.ಆ ದೇವರ ಅಪರೂಪದ, ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಠಿ. ಮಾನವರಾದ ನಮಗೆ ಆಲೋಚನಾ ಶಕ್ತಿಯಿದೆ. ತರ್ಕಬದ್ಧವಾಗಿ ಯೋಚಿಸುವ ಹಾಗು ತನ್ನ ಭಾವನೆಗಳನ್ನು ಇತರರೊಡನೆ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆದಿದ್ದೇವೆ.ಮುಂದೆ ಓದು

ವರುಗಳು ನಡೆದು ಬರುತ್ತಿದ್ದರೆ ಸಾಕ್ಷಾತ್ ದೇವರು ಬಂದ ಹಾಗೆ ಅವರ ಭಕ್ತರಿಗೆ.! ಅವರಿಗಾಗಿ ಪ್ರಾಣಕೊಡಲು ಸಿದ್ಧರಾಗಿಬಿಡುತ್ತಾರೆ ಈ ಭಕ್ತರು . ಯಾರ ಮನೆಯಲ್ಲೂ ಅವರದೇ ಪೋಟೋ. ಮನದಲ್ಲೂ..! ಯಾವುದೇ ಸರ್ಕಾರ ಬರಲಿ ಅದು, ಸಂವಿಧಾನಕ್ಕೆ ಬಧ್ದವಾಗಿರುತ್ತದೋ ಇಲ್ಲವೋ ತಿಳಿಯದು ಆದರೆ ಅವರುಗಳಿಗೆ ಮಾತ್ರ ಪ್ರಥಮ ಆದ್ಯತೆ. ಅವರು ಅಂದ್ರೆ ಯಾರು.. ಅಂದ್ಕೋತಿದ್ದೀರಾ.? ಮತ್ತ್ಯಾರು ಅಲ್ಲ..ಮುಂದೆ ಓದು

"ಮೀಡಿಯಾ ಕಿಸೀಕಿ ನಹಿ ಹೋತಿ.. ನ ಪಕ್ಷ ಕೀ ನ ವಿಪಕ್ಷ ಕೀ.." (ಮೀಡಿಯಾ ಯಾರದ್ದೂ ಅಲ್ಲ. ಪಕ್ಷದ್ದೂ ಅಲ್ಲ ವಿಪಕ್ಷದ್ದೂ ಅಲ್ಲ..)- ಎಂದು ಕಡಲ ಗಂಭೀರ ಧ್ವನಿಯಲ್ಲಿ, ಕಣ್ಣಲ್ಲೇ ಎದುರಾಳಿಯನ್ನು ಇರಿಯುತ್ತಾ, ಸುನಾಮಿಯ ಶಾಂತತೆಯನ್ನು ಪ್ರದರ್ಶಿಸುತ್ತಾ, ಗ್ರೇಟ್ ಅಮಿತಾಬ್ ಬಚ್ಚನ್ ಹೇಳುವ ಈ ಒಂದು ಡಯಲಾಗ್ ಸಾಕು ಇಡೀ ರಣ್ ಚಿತ್ರದ ಜೀವಾಳವನ್ನು ನಮಗೆ ಕಾಣಿಸಲು. ಆದರೆ ಈಗ ಮಾತ್ರ ಮಾಧ್ಯಮ ಎರಡು ಬಣಗಳಲ್ಲಿ ವಿಂಗಡಿಸಿ ಹೋಗಿರುವುದು ಮಾಧ್ಯಮದೊಳಗಿನ ಸುಳ್ಳಿನಷ್ಟೇ ಸತ್ಯ!


ಮುಂದೆ ಓದು

sksulkeri's picture
ಎರಡು ಪುಟ್ಟ ಕಥೆಗಳು

ಶುಕ್ರ, 26/02/2010 - 00:43 - sksulkeri

ವರಿಬ್ಬರೂ ಬಾಲ್ಯ ಸ್ನೇಹಿತರು.ಪರಸ್ಪರ ಪ್ರೀತಿಸುತ್ತಿದ್ದರು.ಆಕೆ ಓದು ಮುಗಿಸಿ ಕೆಲಸಕ್ಕೆ ಸೇರಿದ್ದರೆ,ಆತ ದೂರದೂರಿಗೆ ಕೆಲಸ ಅರಸಿ ಹೋಗಿದ್ದ. ಅವರಿಬ್ಬರೂ ಪರಸ್ಪರ ಅಗಲಿ ಬಹಳ ವರ್ಷಗಳೇ ಆಗಿದ್ದವು.ಅಂದು ಅವಳು ಕೆಲಸದ ನಿಮಿತ್ತ ದೆಹಲಿಗೆ ಹೊರಟಿದ್ದ ರೈಲು ಸೋಲಾಪುರಕ್ಕೆ ಬಂದಾಗ ಮುಂಜಾನೆ ನಾಲ್ಕು ಗಂಟೆ.ಪಕ್ಕನೆ ನಿದ್ದೆಯಿಂದ ಎದ್ದಳು! ಕಿಟಕಿ ತೆರೆದು ನೋಡಿದರೆ ಕಣ್ಣೆದುರು ಆತ ನಿಂತಿದ್ದ.ನಂಬಲಾಗಲಿಲ್ಲ, ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು,ಅದು ಅವನೇ ಆಗಿದ್ದ.ಮುಂದೆ ಓದು

ಹೌದು! ಇದು ನನ್ನನ್ನು ಬಹಳವಾಗಿ ಕಾಡುತ್ತಿರುವ ಬಹುಕಾಲದ ಉತ್ತರ ಸಿಗದ ಪ್ರಶ್ನೆ! ಅದ್ರಲ್ಲೂ ಮೊನ್ನೆ ನಡೆದ ಬೆಂಗಳೂರಿನ ಕಟ್ಟಡವೊಂದರ ಅಗ್ನಿದುರಂತದ ವರದಿಗಳನ್ನು ವೀಕ್ಷಿಸುತ್ತಿದ್ದಾಗ...!!????


ಅಲ್ಲಿಂದ ವರದಿಮಾಡುತ್ತಿದ್ದ ವರದಿಗಾರರು ಬಳಸುತ್ತಿದ್ದ ವಾಕ್ಯಗಳು ಆ ಸುದ್ದಿಯ ತೀವ್ರತೆಗಿಂತ ವಾಕರಿಕೆ ಬರಿಸುವಂತಿದ್ದದ್ದು ಇಂದಿನ ನ್ಯೂಸ್ ಚಾನೆಲ್'ಗಳು ವಿಕೃತ ಮನಸ್ಸಿನವೇನೋ ಎಂದು ಯಾರಿಗಾದರೂ ಅನ್ನಿಸಲು ಸಾಧ್ಯ.

ಮುಂದೆ ಓದು

ವಿಸ್ಮಯ ಹೆಬ್ಬಾಗಿಲು
ವಿಸ್ಮಯ ಕವನ
ವಿಸ್ಮಯ ಹಾಸ್ಯ
-- mahadesha
(0 ಅನಿಸಿಕೆಗಳು)
-- Mahantesh
(0 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(2 ಅನಿಸಿಕೆಗಳು)
-- murthy D
(0 ಅನಿಸಿಕೆಗಳು)
-- murthy D
(0 ಅನಿಸಿಕೆಗಳು)
-- murthy D
(0 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(0 ಅನಿಸಿಕೆಗಳು)
-- Manjunatha HT
(2 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(1 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(0 ಅನಿಸಿಕೆಗಳು)
ವಿಸ್ಮಯ ಸಮೀಕ್ಷೆ
ಇತ್ತೀಚೆಗೆ ತುಂಬಾ ಇಷ್ಟವಾದ ಕನ್ನಡ ಚಿತ್ರ:
ವಿಸ್ಮಯ ಲೆಕ್ಕಾಚಾರ
1936 ಬ್ಲಾಗ್ ಗಳು

172 ಚರ್ಚೆಗಳು

7820 ಅಭಿಪ್ರಾಯಗಳು

1562 ಚಿತ್ರಗಳು

ಸೂಚನಾ ಫಲಕ

ಅಂತರ್ಜಾಲದಲ್ಲಿನ ಕನ್ನಡ ಕ್ರಾಂತಿಗೆ ಕೈಗೂಡಿಸಿ. ನಿಮ್ಮ ಗೆಳೆಯರಿಗೆ ವಿಸ್ಮಯ ನಗರಿಯ ಬಗ್ಗೆ ತಿಳಿಸಿ. ಇಲ್ಲಿ ನಿಮ್ಮ ಲೇಖನ ಬರೆಯಿರಿ.

ವಿಸ್ಮಯ ಸಮಾಚಾರ


ಹೊಸ ಸಮಾಚಾರ

ಬ್ರೆಕಿಂಗ್ ನ್ಯೂಸ್, ವಿಚಿತ್ರ ಸುದ್ಧಿ ಇತ್ಯಾದಿಗಳನ್ನು ಪ್ರಪಂಚಾದ್ಯಂತ ಕನ್ನಡಿಗರಿಗೆ ತಿಳಿಸಲು ಹೊಸ ಸಮಾಚಾರ ಸೇರಿಸಿ.


ಹೊಸ ಪಿಸುಮಾತು

ಕಥೆ, ಅನುಭವ, ಪ್ರವಾಸಿ ಕಥನ, ಕವನ, ಹಾಸ್ಯ, ಅಧ್ಯಾತ್ಮ, ಅಡುಗೆ ಇತ್ಯಾದಿಗಳನ್ನು ಹೊಸ ಪಿಸುಮಾತಿನಲ್ಲಿ ಬರೆಯಿರಿ.
ಇತ್ತೀಚಿನ ಅನಿಸಿಕೆಗಳು
ಸಿಂಡೀಕೇಟ್
Syndicate content