ಹೌದು, ಈ ಪ್ರಾಣಿಗಳಲ್ಲಿ ರೋಗಗಳ ಸಂಖ್ಯೆ ಜಾಸ್ತಿಯಾಗಿಲ್ಲ, ಅಸಂಖ್ಯ ಸಸ್ಯಕೋಟಿಗಳಲ್ಲೂ ಹೊಸರೋಗಗಳ ಸುಳಿವಿಲ್ಲ, ಮನುಷ್ಯರಿಗೆ ಮಾತ್ರ ನಿತ್ಯ ನೂತನ ವ್ಯಾಧಿಗಳು, ಹೀಗೇಕೆ ? ! ನಾವು ಉತ್ತರಭಾರತೀಯರ ನಾನ್, ರೋಟಿ, ಕುಲ್ಚ, ದಾಲ್‌ಗಳನ್ನು ಮೆದ್ದು ರಾಷ್ಟ್ರೀಯ ವ್ಯಕ್ತಿ ಎನಿಸಿಕೊಳ್ಳಲು, ವಿಶೀಯ ಪಿಜ್ಜಾ ಬರ್ಗರ‍್ಗಳನ್ನು ತಿಂದು ಅಂತಾರಾಷ್ಟ್ರೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೇವೆ.ಮುಂದೆ ಓದು
ಗರುಡ ಪಕ್ಷಿಯೊಂದು ಮರದ ಮೇಲೆ ಕುಳಿತಿತ್ತು. ಏನನ್ನೂ ಮಾಡದೆ ಸುಮ್ಮನೆ ಕುಳಿತಿರುವ ಗರುಡನನ್ನು ಮರದ ಕೆಳಗೆ ಓಡಾಡಿಕೊಂದಿದ್ದ ಮೊಲವೊಂದು ಕೇಳಿತು. ಅಣ್ಣಾ ಯಾಕೆ ಸುಮ್ಮನೆ ಕುಳಿತಿದ್ದಿಯಾ, ನಾನೂ ಹಾಗೆ ಇರಬಹುದೆ ಎಂದು. ಅದಕ್ಕೆ ಗರುಡನೂ ಸಧ್ಯ ನನಗೇನೂ ಕೆಲಸವಿಲ್ಲ, ನೀನೂ ಹಾಗೇ ಮಾಡಬಹುದು ಎಂದಿತು. ಮೊಲವು ಮರದ ಬುಡದಲ್ಲಿ ಸುಮ್ಮನೆ ಕುಳಿತುಕೊಂಡಿತು. ಸ್ವಲ್ಪಹೊತ್ತಿನಲ್ಲಿ ತೋಳವೊಂದು ಆ ದಾರಿಯಲ್ಲಿ ಬಂದು ಮೊಲವನ್ನು ಹಿಡಿದು ತಿಂದಿತು.
ಸುಮ್ಮನೆ ಕುಳಿತುಕೊಳ್ಳಬೇಕಾದರೆ ಸಾಕಷ್ಟು ಮೇಲೇರಿರಬೇಕು. !!!!
| ಶ್ರೀಕಾಂತ ಹೆಗಡೆ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನಾನೊಬ್ಬ ಸಂಸ್ಕೃತ ಪ್ರೇಮಿ, ಹವ್ಯಾಸಿ ಬರಹಗಾರ, ಕಂಪ್ಯೂಟರ್ ಜತೆಗಾರ, ದೇಶೀಯತೆ ಹರಿಕಾರ. | |
| ಇವರ ವಿಸ್ಮಯ ಪುಟ | |