ಮನಸ್ಸೆಂಬ ಮಂದಗಮನೆಯತ್ತ, ಚೆಲುವ ಚಂಚಲ ನೋಟ
ನಾ ನಿನಗೆ ನೀ ಎನಗೆ ? ನಡುವೆ ನಮಗೇಕೆ ಇನ್ನೋರ್ವರ ಗೊಡವೆ.
ಮನವೆರಡು ಮಿಡಿದಾಯ್ತು, ಕಣ್ಣುಗಳು ಕಲೆತಾಯ್ತು,
ಚೆಲುವ ಚಂದ್ರಿಕೆಯ ಚಿತ್ತಾರ ನಮದಾಯ್ತು.
ಮನಸ್ಸೆಂಬ ಮಂದಗಮನೆಯತ್ತ, ಚೆಲುವ ಚಂಚಲ ನೋಟ
ಕಣ್ಣುಗಳು ತುಂಬಿ, ಮುತ್ತು ಮಳೆಗರೆದಾಯ್ತು,
ಹೊಸ ಕನಸುಗಳ ಹೆಕ್ಕಿ, ಗರಿಬಿಚ್ಚಿ ಹಾರಾಯ್ತು
ಒಲವು ನಲಿವಿನ ಸುತ್ತ ಬದುಕ ಸುಂದರ ಮಾಟ,
ಮನಸ್ಸೆಂಬ ಮಂದಗಮನೆಯತ್ತ, ಚೆಲುವ ಚಂಚಲ ನೋಟ
ಸಂಭ್ರಮದ ಗಳಿಗೆಗಳನ್ನ ಯಾರೂ ಮರೆಯಲು ಇಚ್ಛಿಸುತ್ತಾರೆ ಹೇಳಿ ಕನಸಲ್ಲೂ ಯಾರೂ ಅದನ್ನ ಅಗಲಲು ಇಚ್ಛಿಸೊಲ್ಲ, ಈ ಕ್ಷಣ ಬದುಕಲ್ಲಿ ಹೀಗೆ ಯಾಕೆ ಉಳಿಯಬಾರದು, ಜಗತ್ತು ಈ ಕ್ಷಣಕ್ಕೆ ಹೀಗೆ ಸ್ಥಗಿತವಾಗ ಬಾರದೇಕೆ,ಸುರಿವ ಮಳೆ , ಬೀಸೋ ಗಾಳಿ, ಎಲ್ಲಾ ನನಗಾಗಿ ಒಮ್ಮೆ ಹಾಗೆ ಏಕೆ ನಿಲ್ಲ ಬಾರದು ! ಈ ಕ್ಷಣಕ್ಕೆ ನನ್ನ ಈ ಬದುಕು ಇಲ್ಲಿಗೆ ಕೊನೆಯಾದರೂ ಅಡ್ಡಿ ಇಲ್ಲ, ಜಗತ್ತಿನ ಎಲ್ಲಾ ಸಂತೋಷ ಇಂದು ನನ್ನ ಮಡಿಲಲ್ಲೇ ಇದೆ ಎಂಬ ಆ ಒಂದು ಸಂಭ್ರಮದ ಕ್ಷಣವನ್ನು ಎಲ್ಲಮುಂದೆ ಓದು
ಬದುಕಿನಂಗಡಿಯ ತಟದಿ ಕನಸು ಕಾಣುತ್ತಾ ನಿಂತರೆ
ಕೈ ತುಂಬುವರಾರು, ಶ್ರಮ ಬೇಕು ಬದುಕಲಿ,
ಕಟ್ಟಿದ ಕನಸುಗಳ ನನಸಾಗಿಸಲು,
ಬಿರಿದ ಭಾವಗಳ ಒಂದೊಂದೇ ಪೊಣಿಸಲು,
ಚೆಲ್ಲಿ ನಿಂತ ನಗುವಲಿ, ಮೂಡಿಬರಲಿ ಕಿರು ಹನಿ,
ಬರುತಿರಲಿ ಹೊಸ ಹರವು,
ಮುಂಜಾವಿನ ಚುಮು ಚುಮು ಚಳಿಯಂತೆ,
ಗೋಧೂಳಿಯ ಕೆಂದೂಳಿನಂತೆ,
ಬೆಳದಿಂಗಳಿನ ಬೆಳ್ಳಿ ಬೆಳಕಿನಂತೆ.
ಬಲ್ಲವರಾರು ಇಂದು ನಾಳೆಗಳ
ಕಳೆದು ಹೋದ ನಷತ್ರಗಳ
ಮುಂದೆ ಓದು
ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ...
ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು ರಾಜಿನಾಮೆಯನ್ನು ಕೊಟ್ಟ ದ್ದಾಯಿತು, ಕೇಂದ್ರ ವಸ್ತುವಾಗಿರುವ ಯಡಿಯೂರಪ್ಪನವರ ಸಾಧನೆಗೆ ಮತ್ತೊಂದು ಗರಿ ಬಂತು, ಅಂತು ಇಂತು ಬಿಜೆಪಿಯ ಹದಿನಾಲ್ಕು ದಿನಗಳ ಬೀದಿ ನಾಟಕದಲ್ಲಿ ಒಂದು ಮಹಿಳಾ ಬಲಿಪಶುವಿನ ಮೂಲಕ ನಾಟಕ ಅಂತ್ಯಗೊಂಡಿತು. ಆದರೆ ಇಲ್ಲಿ ಎಲ್ಲರ ಮನದಲ್ಲೂ ಮೂಡುವ ಪ್ರಶ್ನೆ ಒಂದೇ "ಶೋಭಾ ಕರಂದ್ಲಾಜೆ ಮಾಡಿದ ತಪ್ಪೇನು? " ಮುಂದೆ ಓದು
ಆಗಲೇ ಸಂಜೆಯಾಗಿತ್ತು ಹೊರಗೆ ಸಣ್ಣಗೆ ಹನಿಗಳು ಜಿನುಗುಡುಗ ತೊಡಗಿದ್ದವು, ಮುಸ್ಸಂಜೆ ಕವಿದಿತ್ತು, ತಂಪನೆಯ ಹವೆ ಆದರೂ ಮನವೇಕೋ ಮುದಗೊಳ್ಳಲಿಲ್ಲ, ಆಫೀಸ್ ನಲ್ಲಿ ಒಂದು ಸಣ್ಣ ಟ್ರೀಟ್ ಇತ್ತು, ಸ್ನೇಹಿತರದ್ದು, ಅದೇಕೋ ಹೋಗೊಕ್ಕೆ ಮನಸ್ಸು ಒಪ್ಪಲಿಲ್ಲ ಎದ್ದು ಬಂದು ಬಿಟ್ಟೆ ತಲೆನೋವು ಅಂತ ಅವರಿಂದ ಏನೋ ತಪ್ಪಿಸಿ ಕೊಂಡೆ ಆದರೆ ನನ್ನಿಂದ ನಾನು ಹೇಗೆ ತಪ್ಪಿಸಿ ಕೊಳ್ಳಲಿ ?
ಕಣ್ಣುಗಳು ತುಂಬಲಿ, ತುಳುಕದಿರಲಿ ಕಣ್ಣೀರು,
ತುಳಿಕಿದರೆ ಕಣ್ಣೇರು ಅಳಿಸಿ ಹೋದಾವು ಅಕ್ಷರಗಳು,
ಮೊದಲೆದಡು ಸಾಲಿಗೆ ಕಣ್ಣು ತುಂಬಿದರೆ, ಉಳಿದ ಸಾಲುಗಳ ಗತಿಯೇನು,
ತಡೆ ತಡೆ ಒರೆಸದಿರು ಕಂಬನಿಯ, ಕಿರಿದಾಗಿಸದಿರು ಕಣ್ಣಾಲೆಗಳ,
ಬರೆದು ನನ್ನ ಮನ ಹಗುರಾಗಿದೆ, ಅದನ್ನೋಂದಿ ನಿನ್ನ ಮನ ಭಾರವಾಗುವುದು ಬೇಡ,
ಹರಿಯಗೊಡು ಕಂಬನಿಯ ಕರಗಿಸಲಿ ಅವು ನಿನ್ನ ಮನದ ಭಾರಗಳ.
ಕರಗಿ ಹೋಗಲಿ ಅಷ್ಷರಗಳು, ಕೆಂಪಾದ ನಿನ್ನ ಕಣ್ಣುಗಳಿಂದ.
ಮಾತು ಮೌನದ ಮೆರವಣೆಗೆ,
ಮಾತಿನೊಂದಿಗೆ ಮೌನದ ಮೆರವಣೆಗೆ
ಮಾತಿನ ಮೇಲೆ ಮೌನದ ಸವಾರಿ
ಬೆಳ್ಳಿಯ ಮೇಲೆ ಬಂಗಾರದ ಸವಾರಿ
ಮಾತು ಮುಗಿಯಲಿಲ್ಲ, ಮೌನ ಹರಿಯಲಿಲ್ಲ,
ಮಾತು ಎಂದಿದ್ದರು ಮಾತೇ
ಮಾತಿನ ಮೇಲೆ ಮೌನದ ಸವಾರಿ,
ಮಾತಿನ ಮೇಲೆ ಮೌನದ ಸವಾರಿ.
******************************
ಕನಸುಗಳವು ನಿನ್ನವು ನನಸಾಗಿಸದಿರಲಿ ಹೇಗೆ ?
ಕಣ್ಣುಗಳವು ನಿನ್ನವು ಕಣ್ಣರೆಪ್ಪೆ ನಾನಾಗದಿರಲಿ ಹೇಗೆ?
ಹೆಸರದು ನಿನ್ನದು ನಿನ್ನೆಸರೊಡನೆ ನನ್ನ ಹೆಸರದು ಬೆಸೆಯದಿರಲಿ ಹೇಗೆ?
ಮುಂದೆ ಓದು
ಇರಲಿರಲಿ ಒಲವು
ಚಿತ್ತಾರದ ಚೆಲುವು
ಚಂದ್ರಮನ ಚಂದ್ರಿಕೆಯ
ಸವಿಸವಿಯ ನೆನಪು.
*************
ಮಾತು ಮುಗಿದು, ಮೌನವರಳಿ
ಹೇಳದೆ ಉಳಿದಿದ್ದೇನೋ,
ಮನದಲ್ಲೇ ಉಳಿಯಿತಲ್ಲ,
ಏನದು?
****************
ಚಂದ್ರನ ಚದುರಿಕೆಯ, ಕಮಲದ ಕಮರಿಕೆಯ
ಕಂಡು ಕನಲಲಿಲ್ಲ ಗೆಳತಿ ಮನವು,
ನಿನ್ನೊಂದು ಕಣ್ಣ ಬಿಂದುವಿಗೆ ಕಾರ್ಮೋಡದೆ ಸಿಡಿಲು ಸಿಡಿದಂತಾಯ್ತು,
ಏಕೆ ಮನವು ?
----------------
ಹಾರಿ ಹೋಗಿತ್ತು ಉಲ್ಕೆ
ಬೇಡ ಬಯಸಿದ್ದೊಂದು ಬಯಕೆ,
ಮುಂದೆ ಓದು
"ಒಗಟಿನೊಳಗೊಂದು ಒಗಟು, ಮುಟ್ಟ ಹೋದಷ್ಟೂ ಜಿಗುಟು
ಬಿಚ್ಚ ಹೋದಷ್ಟೂ ಗಂಟು, ಬಿಡಿಸಬಲ್ಲನು ಅವನು
ಇದಕುತ್ತರವೇನು? "
"ಬದುಕು"........................... ನಿಜ, ಬದುಕು.
ಬದುಕು ತುಂಬಾ ಚಿಕ್ಕದು, ಹೇಗೇ ಅಂದರೆ ಹಾಗೆ ಬದುಕೋದು ಸ್ವಲ್ಪ ಕಷ್ಟ ಅಲ್ವಾ, ಹತ್ತರಲ್ಲಿ ಹನ್ನೋಂದನೆಯವರಾಗಿ ಬದುಕುವ ಬದಲು, ತನ್ನದೇ ಆದ ಪ್ರತ್ಯೇಕತೆಯನ್ನು ಮನುಷ್ಯ ಬೆಳೆಸಿಕೊಳ್ಳಬೇಕು, ೧೦ ಜನ ಮೆಚ್ಚಿ ನುಡಿಯೋವಂತಹ ಬದುಕು ಬೇಕು ಅಂತ ಸಹಜವಾಗಿ ಮನುಷ್ಯ ಬಯಸುವುದು ತಪ್ಪಲ್ಲಾ , ಅಲ್ಲವಾ ?
ಬೇಕು ಬದುಕಲಿ
ಸಾಕು ಅನಿಸುವಷ್ಟು ಮೌನ
ಬೇಕು ಅನಿಸುವಷ್ಟು ಮಾತು
ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ.
ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟಿಸುವ ಮೌನ, ಇನ್ನು ಪ್ರೀತಿ ಹಿಡಿಯೂ ಇಲ್ಲ, ಮುಡಿಯೂ ಇಲ್ಲ. ಮುಂದೆ ಓದು
| ಪಾರ್ವತಿ.ಜಿ.ಆರ್ ಪಾರ್ವತಿ.ಜಿ.ಆರ್ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, , ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,, | |
| ಇವರ ವಿಸ್ಮಯ ಪುಟ | |