ಇದೇ ಹಂಪಿ ಹಿಂದೆ ತ್ರೇತಾಯುಗದಲ್ಲಿ ವಾಲಿ-ಸುಗ್ರೀವರ ವಾನರ ಸೇನೆಯ ಬೀಡು ಕಿಷ್ಕಿಂದೆ, ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಅದರ ರಾಜಧಾನಿ ಆಗಿತ್ತಂತೆ. ಹಂಪಿ ಬಜಾರ್ ನಲ್ಲಿ ರಸ್ತೆಗಳಲ್ಲಿ ಮುತ್ತು-ರತ್ನ ಮಾರುತ್ತಿದ್ದರಂತೆ. ಆದರೆ ಈಗ? ನಡೆಯುತ್ತಿರುವದು ಗಣಿಯುಗ.ಮುಂದೆ ಓದು
ಮೊನ್ನೆ ತಾನೆ ಟಿವಿ ಚಾನೆಲ್ ಬದಲಾಯಿಸುತ್ತಿದ್ದೆ. ಆಗ ತಮಿಳಿನ ಸನ್ ಟಿವಿಯಲ್ಲಿ ಡೀಲ್ ಔರ್ ನೋ ಡೀಲ್ ಪ್ರೊಗ್ರಾಂ ಬರ್ತಾ ಇತ್ತು. ಆ ಕಾರ್ಯಕ್ರಮದ ಹೆಸರನ್ನು ಸಂಪೂರ್ಣವಾಗಿ ತಮಿಳು ಲಿಪಿಯಲ್ಲೇ ಬರೆದಿದ್ದರು. ಅದೇ ಕಾರ್ಯಕ್ರಮದ ಹೆಸರನ್ನು ಇಂಗ್ಲೀಷ್ ಲಿಪಿಯಲ್ಲಿ ನಮ್ಮ ಉದಯ ಟಿವಿಯಲ್ಲಿ ಬರೆಯುತ್ತಿದ್ದಾರೆ.ಮುಂದೆ ಓದು
ಬ್ಲಾಗ್ ಎಂದರೆ ಇಂದು ಇಂಟರ್ ನೆಟ್ ನಲ್ಲಿ ಅತಿ ಜನಪ್ರಿಯತೆಯನ್ನು ಪಡೆದಿದೆ. ಕನ್ನಡದಲ್ಲಿಯೂ ಸಹ ಈಗ ಸಾವಿರಾರು ಬ್ಲಾಗ್ ಗಳಿವೆ. ಕೆಲವ್ರು ಬ್ಲಾಗ್ ಸ್ಪಾಟ್ ನಂತಹ ತಾಣಗಳಲ್ಲಿ ಬ್ಲಾಗ್ ಮಾಡುತ್ತಿದ್ದರೆ ಇನ್ನೂ ಕೆಲವರು ವಿಸ್ಮಯ ನಗರಿ, ಸಂಪದ ಇತ್ಯಾದಿ ಕನ್ನಡ ತಾಣಗಳಲ್ಲಿ ತಮ್ಮ ಬ್ಲಾಗ್ ಬರೆಯುತ್ತಾರೆ. ನೀವು ಈಗ ಓದುತ್ತಿರುವದು ಈ ವಿಸ್ಮಯ ನಗರಿಯ ಪಿಸುಮಾತು ಕೂಡ ಒಂದು ಕನ್ನಡ ಬ್ಲಾಗ್ ಆಗಿದೆ.
ಮುಂದೆ ಓದುಸಮಯ ಎಷ್ಟು ಬೇಗ ಕಳೆದು ಹೋಗುತ್ತದಲ್ಲ? ನಿನ್ನೆ ಮೊನ್ನೆ ತಾನೆ ಆರಂಭಿಸಿದ ಹಾಗಿದೆ ಈ ವಿಸ್ಮಯ. ಮೂರು ವರ್ಷ ನೋಡುತ್ತ ನೋಡುತ್ತ ಕಳೆದು ಹೋಗಿದೆ.ಮುಂದೆ ಓದು
ಈಗ ವಿಸ್ಮಯ ನಗರಿ ಆರಂಭವಾಗಿ 2 ವರ್ಷ 8 ತಿಂಗಳು ಮುಗಿದಿವೆ. ಖಂಡಿತ ಇದನ್ನು ಇನ್ನೂ ಉತ್ತಮ ಗೊಳಿಸುವ ಅಪರಿಮಿತ ಅವಕಾಶ / ಸಾಧ್ಯತೆ ಇದೆ. ಕನ್ನಡಿಗರ ಕೃಪಾಕಟಾಕ್ಷ ಇರುವವರೆಗೂ ಎಲ್ಲರನ್ನೂ ವಿಸ್ಮಯ ಗೊಳಿಸುವಂತೆ ಇದು ಕಂಗೊಳಿಸಲಿದೆ. ಕನ್ನಡ ಮಾತೆಯನ್ನು ಅಂತರ್ಜಾಲ ಲೋಕದಲ್ಲಿ ಮೆರೆದಾಡಿಸುವ ಉದ್ದೇಶದಿಂದ ಆರಂಭವಾದ ಈ ತಾಣ ತನ್ನ ಉದ್ದೇಶದಲ್ಲಿ ಸಫಲವಾಗಿರುವದಂತೂ ನಿಜ. ಆದರೆ ವಿಸ್ಮಯ ನಗರಿ ತಲುಪಬೇಕಾದ ಗುರಿ ಇನ್ನೂ ದೂರವಿದೆ.
ಕೊಡಗಿನ ಕಾವೇರಿ ತೀರದಲ್ಲಿರುವ ಸುಂದರ ಪ್ರವಾಸಿ ತಾಣವೇ ಕಾವೇರಿ ನಿಸರ್ಗಧಾಮ. ಇಲ್ಲಿ ಆನೆ ಸವಾರಿ, ಬೋಟಿಂಗ್, ದೋಣಿ ವಿಹಾರ ಮತ್ತು ಜಿಂಕೆ ಎಲ್ಲ ಇದೆ. ಆನೆ ಸವಾರಿ, ಬೋಟಿಂಗ್ ಮಾಡುವ ಇಚ್ಚೆ ಇದ್ದರೆ ಪ್ರವೇಶ ಟಿಕೆಟ್ ತೆಗೆದುಕೊಳ್ಳುವಾಗಲೇ ಖರೀದಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಮತ್ತೆ ವಾಪಸ್ ಬಂದು ಖರೀದಿಸಬೇಕಾಗುತ್ತದೆ.
ಟಿಕೆಟ್ ತೆಗೆದುಕೊಂಡು ದೊಡ್ಡ ಪ್ರವೇಶ ದ್ವಾರ ದಾಟಿದ ನಂತರ ನಮಗೆ ಸಿಕ್ಕಿದ್ದು ತೂಗು ಸೇತುವೆ. ತೂಗು ಸೇತುವೆ ದಾಟಿ ಬಲಕ್ಕೆ ತಿರುಗಿ ಕೆಳಕ್ಕಿಳಿದರೆ ಅಲ್ಲಿ ಬೋಟಿಂಗ್ , ದೋಣಿ ವಿಹಾರ ನಡೆಯುತ್ತಿತ್ತು. ನಮ್ಮ ಸರದಿ ಕಾದು ಪೆಡಲ್ ಬೋಟಿಂಗ್ ಸಿಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು. ಯಾರೂ ನೀರಲ್ಲಿ ಕೈ ಹಾಕಬೇಡಿ ಮೊಸಳೆ ಇರಬಹುದು ಎಂದು ಪ್ರವಾಸಿಗರನ್ನು ದೋಣಿಯವರು ಎಚ್ಚರಿಸುತ್ತಿದ್ದರು.
ಮುಂದೆ ಓದು
ರಾಮಾಯಣ ವಾಲ್ಮೀಕಿ ಮುನಿ ಬರೆದ ರಾಮನ ಚರಿತ್ರೆಯೇ ರಾಮಾಯಣ. ಇದು ಭಾರತದ ಮಹಾಕಾವ್ಯಗಳಲ್ಲಿ ಒಂದು. ರಾಮಾಯಣ ಎಂದರೆ ರಾಮನ ಆಯನ. ರಾಮನ ಜೀವನ ಪಯಣ.ರಾಮನೇ ಇದರ ನಾಯಕ.
ಇದರಿಂದಾಗಿ ವಾಲ್ಮೀಕಿಗೆ ಆದಿಕವಿ ಎಂಬ ಹೆಸರು ಬಂತು. ರಾಮಾಯಣ ಬರೆದು ಶತಮಾನಗಳೇ ಕಳೆದಿವೆ. ಆದರೂ ಭಾರತದಲ್ಲಿ ಈ ಕಥೆ ಜನಪ್ರಿಯ. ಅದಕ್ಕೆ ಕಾರಣ ಈ ಕಥೆಯಲ್ಲಿರುವ ಮೌಲ್ಯಗಳು, ನೀತಿ ಇತ್ಯಾದಿ. ಪೀಳಿಗೆಯಿಂದ ಪೀಳಿಗೆಗೆ ಹೊಸರೂಪ ಪಡೆಯುತ್ತಾ ಮಾನವೀಯ ಮೌಲ್ಯ, ನೀತಿ ಬೋಧಿಸುತ್ತಾ, ಮನರಂಜಿಸುತ್ತಾ ಬಂದಿದೆ. ನಾಟಕ, ಯಕ್ಷಗಾನ, ಕಾವ್ಯ, ಟಿವಿ ಧಾರಾವಾಹಿ ಮತ್ತು ಸಿನಿಮಾ ಹೀಗೆ ವಿವಿಧ ರೂಪ ಪಡೆದಿದೆ. ಮುಂದೆ ಓದು
ದುಬಾರೆ ಕಾಡು ಕೊಡಗಿನ ಒಂದು ಪ್ರವಾಸಿ ತಾಣ. ಕಾವೇರಿ ಈ ಕಾಡಿನ ಮೂಲಕ ಹರಿಯುತ್ತಾಳೆ. ದುಬಾರೆ ಕಾಡಿನಲ್ಲಿ ಆನೆ ಕ್ಯಾಂಪ್ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ. ದುಬಾರೆ ಕಾಡಿನ ಬಗ್ಗೆ ಲೇಖನಕ್ಕಾಗಿ ಇಲ್ಲಿ ಓದಿ. ದುಬಾರೆ ಕಾಡಿನಲ್ಲಿ ಆನೆಗಳ ಜೊತೆ ಮುಂದೆ ಓದು
ದುಬಾರೆ ಕಾಡಿನಲ್ಲಿ ಆನೆಯ ಸ್ನಾನದುಬಾರೆ ಕಾಡು ಕೊಡಗಿನ ಒಂದು ಪ್ರವಾಸಿ ತಾಣ. ಕಾವೇರಿ ಈ ಕಾಡಿನ ಮೂಲಕ ಹರಿಯುತ್ತಾಳೆ. ದುಬಾರೆ ಕಾಡಿನಲ್ಲಿ ಆನೆ ಕ್ಯಾಂಪ್ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ. ಹೀಗೆ ಹಿಡಿದ ಆನೆಗಳಿಗೆ ಕಾವೇರಿ ನದಿಯಲ್ಲೇ ಸ್ನಾನ. ಈ ಆನೆಗಳ ಸ್ನಾನ ನೋಡಲು ಬೆಳಿಗ್ಗೆ 8ರ ಸುಮಾರಿಗೆ ನೀವು ಅಲ್ಲಿರಬೇಕು.ಮುಂದೆ ಓದು
ಇದರ ಹಿಂದಿನ ಭಾಗ ಕಂಚಿ ಪ್ರವಾಸ ಮತ್ತು ಚಿತ್ರಗಳು - 3
ವರದರಾಜ ಪೆರುಮಾಳ್ ದೇವಾಲಯದ ಹಾಗೂ ಕೈಲಾಸನಾಥರ್ ದೇವಾಲಯದ ಆಯ್ದ ಚಿತ್ರಗಳು ಇಲ್ಲಿವೆ. ನೋಡಿ. ಇದು ಈ ಸರಣಿಯ ಕೊನೆಯ ಭಾಗ. ಒಟ್ಟಿನಲ್ಲಿ ಹೇಳುವದಾದರೆ ಕಂಚಿಯಲ್ಲಿ ದೇವಸ್ಥಾನ, ಸೀರೆ ಇತ್ಯಾದಿಗಳನ್ನು ನೋಡಬಹುದಾದರೆ ವೆಲ್ಲೂರಿನ ಚಿನ್ನದ ದೇವಾಲಯ, ಕೋಟೆ ರಂಜಿಸುತ್ತದೆ. ಲಾಂಗ್ ವೀಕೆಂಡುಗಳಲ್ಲಿ ಹೋಗಿ ಬರಬಹುದಾ ಸ್ಥಳ. ನಮ್ಮ ಇತಿಹಾಸ ಕಾಲದ ಗತ ವೈಭವವನ್ನು ನೆನೆಸಿಕೊಡುತ್ತವೆ ಈ ಸ್ಥಳಗಳು. ನೀವು ಹೋಗಿದ್ದರೆ ನಿಮ್ಮ ಅನುಭವವನ್ನೂ ವಿಸ್ಮಯದಲ್ಲಿ ಹಂಚಿಕೊಳ್ಳಿ. ಮುಂದೆ ಓದು