ದಿಗಂತದಿಂ ದಿಗಂತಕ್ಕೇರಿ ಇಳಿಯುವ
ಬೆಳ್ಮುಗಿಲುಗಳೇ, ನನ್ನ ಕಾಮನ ಬಿಲ್ಲು
ಕಳೆದಿದೆ ಎಲ್ಲಾದರೂ ಕಂಡಿರಾ!?
ಏನು? ಎಷ್ಟುದ್ದದ `ಬಿಲ್ಲು' ಎಂದಿರಾ...!?
ಎಂದೋ ಒಮ್ಮೆ ಮಿಂಚಿ ಮರೆಯಾದ
ಮನದ ಬಣ್ಣಗಳೆಲ್ಲವ ಜೋಡಿಸಿ
ಹಲವು ಭಾವನೆಗಳ ಮೀಟಿ
ಮರೆಯಾದ ಕಾಮನ ಬಿಲ್ಲದು
ಗೆಳೆಯರೇ ನೀವೇನಾದರೂ ಕಂಡಿರಾ!?
ಮುಂದೆ ಓದು
(2001 ಸೆಪ್ಟೆಂಬರ್ನಲ್ಲಿ ಬರೆದ ಕವನ)
ಬಟಾಬಯಲಲ್ಲಿ ಗೂಟಕ್ಕೆ ಕಟ್ಟಿದ ಹಸು
ಹಗ್ಗ ಬಿಟ್ಟಷ್ಟೇ ದೂರ
ಸುತ್ತಿ ಮೇಯುವ `ಹಸುಗೂಸು'
ಕಟ್ಟಿಹಾಕಿದ ಗೊಲ್ಲ ಎತ್ತಲೋ ಹೋದನಲ್ಲ
ಹಗ್ಗ ಹರಿದೋಡುವ `ತವಕ';
ವ್ಯಾಖ್ಯಾನವಿಲ್ಲದ ಗಮಕ!
2012 ರಲ್ಲಿ ಪ್ರಳಯವಂತೆ! ಕಾಲ ಚಕ್ರಗಳನ್ನು ಅಳವಡಿಸಿದ ಬದುಕಿನ ಜಟಕಾ ಬಂಡಿಯಲ್ಲಿ ಕುಳಿತು ಸಾಗುತ್ತಿರುವ ಮನುಷ್ಯನ ಮನಸ್ಸಿನಲ್ಲಿ ಬಹಳ ಹಿಂದಿನಿಂದಲೂ ಆಗಾಗ ಇಂತಹ ಏನಾದರೊಂದು `ಪ್ರಳಯ' ಆಗುತ್ತಲೇ ಇದೆ. ಇದಕ್ಕೆ ಪೂರ್ಣ ವಿರಾಮ ಬೀಳುವುದು ಬಹುಷಃ `ಅಂತ್ಯ ಕಾಲ'ದ ಪ್ರಳಯ ಸಂಭವಿಸಿದಾಗಲೇ!!
ಮುಂದೆ ಓದು(ದಿನಾಂಕ 29 ಡಿಸೆಂಬರ್ 2009 ರಂದು ನಮ್ಮನ್ನಗಲಿದ ಸುಗಮ ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಅವರ ಸ್ಮರಣಾರ್ಥ ನನ್ನ ಈ ಕಾವ್ಯ ತರ್ಪಣ ನೀಡಿದ್ದೇನೆ. ಈ ಕವನವನ್ನು ಸಿ. ಅಶ್ವತ್ಥ್ ಅವರೇ ಹಾಡಿರುವ `ಮೈಸೂರು ಮಲ್ಲಿಗೆ'ಯ `ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು' ಗೀತೆಯ ಧಾಟಿಯಲ್ಲಿ ಹಾಡಿಕೊಳ್ಳಬೇಕು)
-----------------------------------------------------------------------
ಮುಂದೆ ಓದು
ಈಗ ನಾನು ಪ್ರಸ್ತಾಪಿಸುತ್ತಿರುವುದು ತುಂಬಾ ವಿಚಿತ್ರ ಸಂಗತಿಯೇ ಆದರೂ, ಆರ್ಥಿಕವಾಗಿ ತುಂಬಾ ಹೊಡೆತ ಕೊಡುವಂತಹುದಾಗಿದೆ! 21ನೇ ಶತಮಾನದಲ್ಲೂ ಈಗ ಪ್ರಚಲಿತವಿರುವ ಸಂಗತಿ (ನಂಬಿಕೆ) ಯೇ ಇದಾಗಿದೆ.!!
ಇಲ್ಲಿ ನಾನು ಹೇಳುವ 2 ಪ್ರಕರಣಗಳಿಗೆ ಸಂಬಂಧಿಸಿದ ಊರು, ಹೆಸರು ಅನಗತ್ಯ ಎನಿಸಿರುವುದರಿಂದ ಅದನ್ನು ಕೈಬಿಟ್ಟು, ಪ್ರಕರಣಗಳಿಂದ ಉಂಟಾಗುತ್ತಿರುವ ದುಷ್ಪರಿಣಾಮವನ್ನು ಮಾತ್ರ ಹೇಳಲಿಚ್ಛಿಸುತ್ತೇನೆ:
ಮುಂದೆ ಓದು
(1994 ಜನವರಿಯಲ್ಲಿ ರಚಿಸಿದ ಕವನ)
ಚಿರ ನೂತನಳೇ; ಚಿರ ಚೇತನಳೇ;
ಪ್ರಕೃತಿಯ ಸೊಬಗಿನ ಪ್ರತಿನಿಧಿಯೇ...!
ನಿನ್ನ ಹಸಿ ಹಸಿರು; ನನ್ನ ಬಿಸಿಯುಸಿರು
ತರ್ಕಕೆ ನಿಲುಕದೆ ನಿಟ್ಟುಸಿರು..!?
ನಾ ಮರವಂತೆ; ನೀ ಲತೆಯಂತೆ...!
ಈ ಜಗದೊಳು ನಮ್ಮಯ ಸಮರುಂಟೆ!?
ಬಾ ಏರುತ ಬೆಳೆಯುವ ಬಾನಲ್ಲಿ;
ಬೇರಿಳಿಸುವ ಭೂಮಿಯ ಒಡಲಲ್ಲಿ
ಜೀವಕೆ ರಾಗವು ನೀನಾಗುವೆ;
ಎಂದೆಂದಿಗು ತಾಳವೆ ನಾನಾಗುವೆ;
ಹೃದಯದ ವೀಣೆಯ ಸುಸ್ವರ ಮೀಟಿ;
ಮುಂದೆ ಓದು
ಅನುಭವ
ಚಟ: ಚಟಚಟ....ಅಕಟಕಟಾ!
80 ರ ದಶಕದಲ್ಲಿ ನಾನು ಬಳ್ಳಾರಿಯಲ್ಲಿದ್ದಾಗ ನಡೆದ ಪ್ರಸಂಗವಿದು. ಬರೆಯಲು ಸಂಕೋಚ ಎನಿಸಿದರೂ ಇದೊಂದು ಜೀನವಾನುಭವ ಎಂಬ ಕಾರಣಕ್ಕೆ ಪ್ರಾಮಾಣಿಕವಾಗಿ ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ!
ಮುಂದೆ ಓದು
ಗುರು, 26/11/2009 - 02:05 - ಎಚ್.ಎಸ್. ಪ್ರಭಾಕರ
ನಾಟಕ ವಿಮರ್ಶೆ: `ಗಾಂಧಿ ವರ್ಸಸ್ ಗಾಂಧಿ'
ಗಾಂಧಿ ನಮ್ಮ ಮೂಗಿನ ನೇರಕ್ಕೆ ನಿಲ್ಲುತ್ತಾರೆಯೇ!?
(ಇದು ನಾನು 1997 ಮಾರ್ಚ್ ನಲ್ಲಿ ಬರೆದ ಅಪ್ರಕಟಿತ ಕವನ)
ಹುಟ್ಟೆಂಬ ಗೆಳೆಯನಾ ಮುಂದೆ ಓಡಲು ಬಿಟ್ಟು
ಹಿಂದೆಯೇ ನೆರಳಾಗಿ ಬೀಸು ಹೆಜ್ಜೆಯನಿಟ್ಟು
ನಿಲ್ಲದೇ ಸಾಗುತಿಹ ನಿಃಶಬ್ದ ಸಾವೇ
ಎಲ್ಲಯ್ಯ ನಿನ್ನ ನಿಲ್ದಾಣ!?
ಗರ್ಭ ಗುಡಿಯಲಿ ಜ್ಯೋತಿ ಅವ್ಯಕ್ತ ಬೆಳಗಿ
ತಾಮಸದಿ ಗೆಳೆಯನಾ ಹಿಂದೆಯೇ ಅಡಗಿ
`ರಕ್ತ ಸಂಬಂಧಿ'ಯ ಬೆನ್ನ ಹಿಂದೆಯೇ ಹೊರ ಬಂದು
ಎಲ್ಲಯ್ಯ ಕಾಯುತಿರುವೆ.....!?
ಯಾವ ಸೀಮೆಯೋ ನಿಂದು; ಎಲ್ಲಿ ಹೊಂಚುವೆ ಕುಂತು? ಮುಂದೆ ಓದು
ಕವನ
ಸಿಲಿಕಾನ್ ರಾಜಧಾನಿಯಲಿ `ಐ.ಟಿ.' ದರ್ಬಾರು
ಕನ್ನಡದ ವಿದೂಷಕ; ಹಾಸ್ಯ-ಅಪಹಾಸ್ಯಕ್ಕೆ ಸೀಮಿತ
ಪಾಶ್ಚಾತ್ಯರಿಗಾಗಿ ರಾತ್ರಿಯೆಲ್ಲ ದುಡಿಯುವ ಜೀತದಾಳು
`ಓದಿ ಓದಿ ಮರುಳಾದ ಕೂಚುಭಟ್ಟ'ರ ಪಾಡು
ಹೆಸರು ನಮ್ಮದು ಬಸಿರು ಮಾತ್ರ ಅವರದು
`ದೇಸೀಯತೆ' ವೀರ್ಯವೇ ಇಲ್ಲದವರ ಕಟ್ಟಿಕೊಂಡು
ಕನ್ನಡ ನಾಡು ಫಲವತ್ತಾಗುವುದಾದರೂ ಎಂತು?
ಹಲವು ತಂತ್ರ-ಕುತಂತ್ರ-ಅತಂತ್ರಗಳ ನಡುವೆ ಮುಂದೆ ಓದು
| ಪ್ರಭಾಕರ. ಎಚ್.ಎಸ್ ಪ್ರಭು | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನಾನು ಕನ್ನಡ ಭಾಷಾ ಪತ್ರಕರ್ತ. ಸಂಯುಕ್ತ ಕರ್ನಾಟಕ ದೈನಿಕದಲ್ಲಿ ಹಾಸನ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪರಿಸರ ಸಂರಕ್ಷಣೆ, ಸಾಹಿತ್ಯ, ಸಂಗೀತ, ಭಾರತೀಯ ಸಂಸ್ಕೃತಿಗಳಲ್ಲಿ \ಆಸಕ್ತ ಹಾಗೂ ಸಕ್ರಿಯನೂ ಆಗಿದ್ದೇನೆ. ಲೇಖಕನೂ ಹೌದು. | |
| ಇವರ ವಿಸ್ಮಯ ಪುಟ | |