ಗುರು, 15/10/2009 - 18:58 - ಶ್ರೀನಿವಾಸ
ಡೆಸ್ಕ್‌ಟಾಪ್ ನ ಮೇಲೆ ಕನ್ನಡ ಅಂಕಿಗಳಿರುವ "ಗೋಡೆ ಗಡಿಯಾರ" (analogue clock) ವನ್ನು ಇರಿಸಿದರೆ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಕನ್ನಡವು ನಳನಳಿಸುತ್ತದೆ ಮತ್ತು ಕನ್ನಡ ಅಂಕಿಗಳ ಬಳಕೆಯನ್ನು ನೀವು ಪ್ರೋತ್ಸಾಹಿಸಿದಂತಾಗುತ್ತದೆ.
ಆ ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ವಿಂಡೊಸ್ ಬಂದಿತ್ತು, ವಿಂಡೊಸನ ೧.೦ ಆವೃತ್ತಿಯನ್ನು ನೋಡಿ ಜನ "ಇದು ಮಾರುಕಟ್ಟೆಯಲ್ಲಿ ನಡೆಯೊಲ್ಲ ಏಕೆಂದರೆ ಇದು Apple macintosh ನ ನಕಲು" ಎಂದರು ಮತ್ತೆ ಜನ ಹೇಳಿದಂತೆ Windows ೧.೦ ಆವೃತ್ತಿ Apple Macintosh ನಂತೆಯೇ ಇತ್ತು ಅದರಲ್ಲಿಯ ಮೆನು ಬಾರ್, ಪ್ರೊಗಾಮ್ ವಿಂಡೊ ಡ್ರಾಪ್ ಡೌನ್ ಮೇನು ಹಾಗು ಮೌಸ್ ಸಪೊರ್ಟ್ ಎಲ್ಲದರಲ್ಲಿಯೂ Macintosh ನಂತೆಯೇ. Apple ಕಂಪನಿ ಕೂಡ ಈ ವಿಷಯವಾಗಿ Microsoft ಅನ್ನು ತರಾಟೆಗೆ ತೆಗೆದುಕೊಂಡಿತ್ತು.
ಆ ಸಮಯದಲ್ಲಿ Apple ಮಾಹಿತಿ ತಂತ್ರಜ್ಞಾನದಲ್ಲಿ ದೈತ್ಯವಾಗಿ ಬೆಳೆದು ಮಿಲಿಯನ್ ಡಾಲರ್ ನಷ್ಟು ಟರ್ನ್-ಒವರ್ ಮಾಡುತ್ತಿತ್ತು. ಈ ಸಮಯದಲ್ಲಿ ಮೈಕ್ರೊಸಾಫ್ಟ Apple Macintosh ಗೆ ಆಫಿಸ್ ಪ್ರಾಡಕ್ಟ್ ಗಳನ್ನು ಮಾಡಲು ಮುಂದಾಯಿತು ಆದರೆ Apple ಗೆ ಇದು ಇಷ್ಟವಿರಲಿಲ್ಲ ಆದ್ದರಿಂದ Apple ಕಂಪನಿಯು ಮೈಕ್ರೊಸಾಫ್ಟ ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿತು ಅದೆಂದರೆ Apple ಬಳಸುತ್ತಿದ್ದ Visual Desktop ಲೈಸನ್ಸ್ ಅನ್ನು ಅದು ಮೈಕ್ರೊಸಾಫ್ಟಗೂ ಕೊಟ್ಟುಬಿಟ್ಟಿತು. ಈ ಒಪ್ಪಂದವೇ ಮುಂದೆ ಮೈಕ್ರೊಸಾಫ್ಟ ಬೆಲೆಯಲು ರಹದಾರಿಯಾಯಿತು.
ಮುಂದೆ ಓದು
| ಶ್ರೀನಿವಾಸ ನಾಯಿಕ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನನ್ನ ಹೆಸರು ಶ್ರೀನಿವಾಸ ನಾಯಿಕ. ಊರು ಬೆಳಗಾವಿ, ಬಿ.ಎ ಓದುತ್ತಿದ್ದೇನೆ. ಕನ್ನಡ ಭಾಷೆಯಲ್ಲಿ ಗಣಕದ ಬಗ್ಗೆ ಮಾಹಿತಿ ಕೊಡುವ ಜಾಲತಾಣವನ್ನು ರೂಪಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಬಹುದು http://www.compuinkannada.co.cc | |
| ಇವರ ವಿಸ್ಮಯ ಪುಟ | |