ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ ಕೊಲ್ಕತ್ತಾದ ದುರ್ಗಾಪೂಜೆ ೧೬೦೬ರಲ್ಲಿ "ನದಿಯಾ" ಎಂಬ ಜಾಗದಲ್ಲಿ ಪ್ರಪ್ರಥಮವಾಗಿ, ಮಹಾರಾಜ ಶ್ರೀ ಕೃಷ್ಣಚಂದ್ರರಿಂದ ನಡೆಯಿತು. ೧೮೨೯ರಲ್ಲಿ ಲಾರ್ಡ್ ಬೆಂಟಿಕ್ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದನಂತೆ. ೧೯೬೦ರ ದಶಕದಲ್ಲಿ ದುರ್ಗಾ ಪ್ರತಿಮೆಗಳು ಹೊರದೇಶಕ್ಕೆ ಕೂಡ ಪೂಜೆಗೆಂದು ರವಾನಿಸಲ್ಪಟ್ಟವು. ೧೯೮೦ರ ದಶಕದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ತುಂಬಾ ಚೆನ್ನಾಗಿ ಅಲಂಕಾರ ಮಾಡಿರುವ ಪ್ಯಾಂಡಲ್ ಗೆ ಪ್ರಶಸ್ತಿ ಕೊಡಲು ಪ್ರಾರಂಭಿಸಿದರು. ಆದ್ದರಿಂದ ಇಲ್ಲೀಗ ದೊಡ್ಡ ಪೈಪೋಟಿಯೇ ನಡೆಯುತ್ತೆ.
ದುರ್ಗಾಪೂಜೆ ಪಶ್ಚಿಮ ಬಂಗಾಳದ ಅತಿ ದೊಡ್ಡ ಹಾಗೂ ಮುಖ್ಯ ಹಬ್ಬ. ಮಹಾಲಯ ಅಮಾವಾಸ್ಯೆಯಂದು ನದೀ ಸ್ನಾನ ಮಾಡಿ ತರ್ಪಣ ಬಿಡುವುದರಿಂದಲೇ ಹಬ್ಬಕ್ಕೆ ಚಲಾವಣೆ ಬರತ್ತೆ. ಎಲ್ಲಿ ನೋಡಿದರೂ ಸಂಭ್ರಮ, ಸಡಗರ, ಸಂತೋಷ, ರಾಜ್ಯಕ್ಕೆ ರಾಜ್ಯವೇ ಗಿಜಿಗುಡುತ್ತಾ, ಮಿಂಚುತ್ತದೆ. ಮುಂದೆ ಓದು
ಗಡದಿಂ......
ಬಾಗೆಪಲ್ಲಿ, ಕೋಲಾರ ಜಿಲ್ಲೆಯ ಈ ಗಡದಿಂ ಕ್ಷೇತ್ರದಲ್ಲಿ ಅತ್ಯಂತ ಪ್ರಾಚೀನ ಮಂದಿರವಾದ ಶ್ರೀ ಲಕ್ಷ್ಮೀವೆಂಕಟರಮಣನ ಮಂದಿರವಿದೆ. ಈ ದೇವಾಲಯವನ್ನು ಸಪ್ತ ಋಷಿಗಳು ಸ್ಥಾಪಿಸಿದರೆಂದೂ, ಕೆಲವರು ಶ್ರೀ ವೆಂಕಟರಮಣ ಮೂರ್ತಿಯನ್ನು ಧರ್ಮರಾಜನು ಪ್ರತಿಷ್ಠಾಪಿಸಿದನೆಂದೂ ಪ್ರತೀತಿ. ಮುಂದೆ ಅನೇಕ ರಾಜರುಗಳ ಕಾಲದಲ್ಲಿ ಪುನರ್ ನಿರ್ಮಾಣಗೊಂಡಿತೆಂದು ಸ್ಥಳೀಯರಿಂದ ತಿಳಿದುಬರುವ ವಿಷಯ. ದೇವಾಲಯದ ಅಭಿವೃದ್ಧಿಯಲ್ಲಿ, ಚೋಳ ದೊರೆಗಳು, ಪೆನುಗೊಂಡದ ದೊರೆಗಳು, ವಿಜಯನಗರದ ಅರಸರು ಪಾಲ್ಗೊಂಡಿದ್ದರಂತೆ. ದೇವಾಲಯದ ಕಂಭಗಳಿಂದ ಚೋಳರ ಮತ್ತು ವಿಜಯನಗರದ ವಾಸ್ತು ಶಿಲ್ಪ ಕಲಾ ಶೈಲಿಯು ಕಂಡುಬರುವುದು. ಇದರ ವಾಸ್ತು ವಿನ್ಯಾಸವು ೧೪ನೇ ಶನಮಾನದ ಹೊಯ್ಸಳರ ಕಲಾ ಚಾರುರ್ಯದಿಂದ ಕೂಡಿದೆ. ಶಿಲಾ ಶಾಸನದ ಪ್ರಕಾರ ವಿಜಯನಗರದ ಅರಸ ಹರಿಹರನ ಕಾಲದಲ್ಲಿ ಅಂದರೆ ಕ್ರಿ.ಶ. ೧೩೩೬ರಲ್ಲಿ ಅಭಿವೃದ್ಧಿಕಾರ್ಯ ನಡೆದಿತ್ತೆಂದು ತಿಳಿಯುತ್ತದೆ. ಮುಂದೆ ಓದು
http://vismayanagari.com/node/4713
ಚಾರ್ ಧಾಮ್ ಯಾತ್ರೆ - ಋಷಿಕೇಶದ ಮೂಲಕ ಹರಿದ್ವಾರಕ್ಕೆ............(ಕೊನೆಯ ಭಾಗ)
ಬೆಳಿಗ್ಗೆದ್ದು ನಾವು ನಮ್ಮ ಕೊನೆಯ ಹಂತದ ಪ್ರಯಾಣ ಮುಂದುವರೆಸಿದೆವು. ನಾವು ಚಾರ್ ಧಾಮ್ ಯಾತ್ರೆಗಾಗಿ ಹೊರಟ ಸ್ಥಳ ಹರಿದ್ವಾರಕ್ಕೆ ವಾಪಸ್ಸು ಹೊರಟಿದ್ದೆವು. ನಾವು ಹೋಗುವಾಗ ಋಷಿಕೇಶದಲ್ಲಿ ಬರಿಯ ವಾಹನದ ಪರವಾನಿಗಿ ತೆಗೆದುಕೊಂಡಿದ್ದೆವು ಸ್ಥಳ ನೋಡಿರಲಿಲ್ಲ. ಆದ್ದರಿಂದ ಈಗ ಋಷಿಕೇಶದ ಲಕ್ಷಮಣನ ದೇವಸ್ಥಾನ ಮತ್ತು ಲಕ್ಷ್ಮಣ ಜೂಲ, ಗೀತಾ ಮಂದಿರ್, ಸ್ವಾಮಿ ಶಿವಾನಂದರ ಆಶ್ರಮ ಎಲ್ಲಾ ನೋಡುವ ಅವಕಾಶ ಮಾಡಿಕೊಂಡಿದ್ದೆವು. ದಾರಿಯಲ್ಲಿ ಒಂದು ಚಿಕ್ಕ ಉಪಹಾರ ಮಂದಿರದಲ್ಲಿ, ಬೆಳಗಿನ ಉಪಹಾರ ಮಾಡಿ, ನಾವು ಋಷಿಕೇಶಕ್ಕೆ ಬಂದು ತಲುಪಿದಾಗ ಆಗಲೇ ೨ ಘಂಟೆಯ ಹತ್ತಿರವಾಗಿತ್ತು. ಪರ್ವತ ಪ್ರದೇಶದಿಂದ ಹಿಂತಿರುಗಿದ್ದ ನಮಗೆ, ಋಷಿಕೇಶದ ಬಿಸಿಲು ಅಸಾಧ್ಯ ಅನ್ನಿಸಿತು. ಊಟಕ್ಕಾಗಿ ನಮ್ಮ ಹುಡುಕಾಟ ನಡೆಯುತ್ತಿದ್ದಾಗ, ನಮಗೆ ಒಬ್ಬ ಮಾರ್ಗದರ್ಶಿ ಸಿಕ್ಕಿದ. ಮುಂದೆ ಓದು
ಕಸಬ್ ಕೊಲೆಗಾರಮುಂಬೈ ಮಾರಣಹೋಮದ ಕಥೆ - ಮೇಜರ್ ಸಂದೀಪ್ ಹತ್ಯೆ.......
ಮೂಲ ಕೃತಿ - ೨೬/೧೧ ಮುಂಬಯಿ ಅಟ್ಯಾಕ್ಡ್...
ಪತ್ರಕರ್ತೆ ಹರೀಂದರ್ ಬವೇಜಾ ಸಂಪಾದಿಸಿರುವ ಈ ಕೃತಿಯಲ್ಲಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಸ್ಥಾನ ಹೊಂದಿರುವ ಹಾಗೂ ಹೆಚ್ಚಿನವರು ಮುಂಬಯಿಯ ನರಮೇಧಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದವರೂ ಆದ ಅಶೀಶ್ ಖೇತಾನ್, ಬಚಿ ಕರ್ಕಾರಿಯಾ, ಕ್ರಿಸ್ ಖೇತಾನ್, ಜಾರ್ಜ್ ಕೋಷಿ, ಹರೀಂದರ್ ಬವೇಜಾ, ಹರ್ಷ್ ಜೋಶಿ, ಜೂಲಿಯೋ ರೆಬೆರೋ ಮತ್ತು ರಾಹುಲ್ ಶಿವಶಂಕರ್ ಬರೆದಿದ್ದಾರೆ. ಈ ಕೃತಿಯನ್ನು ಕನ್ನಡಕ್ಕೆ ಶ್ರೀ ರವಿ ಬೆಳಗೆರೆಯವರು ಅನುವಾದಿಸಿದ್ದಾರೆ. ಮುಂದೆ ಓದು
ವೇದವ್ಯಾಸಭಗವಾನ್ ಶ್ರೀ ವೇದವ್ಯಾಸರಿಗೆ ಅನೇಕ ಹೆಸರುಗಳು :
೧) ಕಪ್ಪಗಿದ್ದುದರಿಂದ ಕೃಷ್ಣ
೨) ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೈಪಾಯನ
೩) ಬದರೀ ಕ್ಷೇತ್ರದಲ್ಲಿ ಆಶ್ರಮ ನಿರ್ಮಿಸಿಕೊಂಡು ಇದ್ದುದರಿಂದ ಬಾದರಾಯಣ
೪) ಪರಾಶರ ಮಹರ್ಷಿಗಳ ಮಗನಾದ್ದರಿಂದ ಪಾರಾಶರ್ಯ
೫) ತಾಯಿ ವಸುವಿನ ಮಗನಾದ್ದರಿಂದ ವಾಸವೇಯ
೬) ವೇದಗಳನ್ನು ಅನುಕೂಲಕರವಾಗಿ ವಿಂಗಡಿಸಿದ್ದರಿಂದ "ವೇದವ್ಯಾಸ" ಮುಂದೆ ಓದು
http://www.vismayanagari.com/node/4669
ಬದರೀನಾರಾಯಣದ ದರ್ಶನದ ನಂತರ ನಾವು ಅಲ್ಲೇ ಒಂದು ಹೋಟೆಲ್ ನಲ್ಲಿ ತಿಂಡಿ ತಿನ್ನಲು ಹೋದೆವು. ಇಡ್ಲಿ, ದೋಸೆ, ಉಪ್ಪಿಟ್ಟು ಎಲ್ಲಾ ಇದೆ ಅಂದಾಗ, ಖುಷಿಯಾಗೋಯ್ತು. ಮೊದಲು ಉಪ್ಪಿಟ್ಟು ತಿಂದೆವು, ತುಂಬಾ ಚೆನ್ನಾಗಿತ್ತು (ಆದರೆ ೫ ಜನರಿಗೆ ೩ ತಟ್ಟೆ ಸಿಕ್ತು ಅಷ್ಟೆ). ಇಡ್ಲಿ, ದೋಸೆಯೆಲ್ಲಾ ನಮ್ಮ ಕರ್ನಾಟಕದ ರುಚಿ ಇರಲಿಲ್ಲ. ಇವರುಗಳು ಬಹುಶ: ಹೆಸರುಬೇಳೆ ನೆನೆಸಿ ತಿರುವಿ ಮಾಡುತ್ತಾರೆಂದು ಕಾಣತ್ತೆ... ರುಚೀನೇ ಇರೋಲ್ಲ. ಸಾಂಬಾರ್ ಅಂತೂ ಒಳ್ಳೆ ಗಟ್ಟಿಯಾಗಿ ಕೇಕ್ ಇದ್ದಹಾಗಿತ್ತು. ಅದನ್ನೇ ಸ್ವಲ್ಪ ತಿನ್ನಲೇಬೇಕಾದ ಅನಿವಾರ್ಯ ನಮಗೆ....
ಏನೂ ಮಾಡೋಕಾಗೊಲ್ಲ... ನಮಗೆ ಊರಿಗೆ ಬಂದು, ನಮ್ಮ ಅನ್ನ ತಿಳಿಸಾರು ತಿಂದರೆ ಸಾಕು ಎನ್ನುವಂತಾಗಿತ್ತು.
ಮುಂದೆ ಓದು
http://www.vismayanagari.com/node/4642
ನಾವು ಬದರೀನಾಥನ ದೇವಸ್ಥಾನದ ಹೊರಗೆ ನಿಂತು ಕಾಯುತ್ತಿದ್ದೆವು. ನಮ್ಮ ಇನೋವಾದ ಸಾರಥಿ ಪೂರನ್ ಸಿಂಗ್, ತನ್ನ ಸ್ನೇಹಿತರಿಗೆ ದೂರವಾಣಿಯ ಮುಖಾಂತರ ಸಂಪರ್ಕಿಸಿದ್ದರು. ಅವರು ಬಂದು ನಮ್ಮನ್ನು ಒಳಗೆ ಕರೆದೊಯ್ದು ವಿಶೇಷ ದರ್ಶನ ಮಾಡಿಸುವ ಮಾತಾಗಿತ್ತು. ಆದರೆ ಅರ್ಧ ಘಂಟೆ ಕಾದರೂ ಅವರು ಬರದಿದ್ದಾಗ, ನನ್ನವರು, ಅಲ್ಲೇ ವಿಚಾರಿಸಿದಾಗ ನಮಗೆ ತಿಳಿದುಬಂದ ವಿಷಯವೆಂದರೆ, ೧೦೦೦ ರೂಗಳ ಚೀಟಿ ಖರೀದಿಸಿದರೆ, ಸರತಿ ಸಾಲಿಲ್ಲದೆ, ಇಬ್ಬರಿಗೆ ನೇರ ದರ್ಶನವಾಗುತ್ತದೆಂದು. ನಾವು ಐದು ಜನರಿದ್ದೆವು ಮತ್ತು ನನ್ನ ಅತ್ತೆಯವರು, ನಡೆಯುವ ಅಥವಾ ನಿಲ್ಲುವ ಸ್ಥಿತಿಯಲ್ಲಿ ಇರಲಿಲ್ಲ, ಆದ್ದರಿಂದ ನಾವು ೩ ವಿಶೇಷ ಚೀಟಿಗಳನ್ನು ಖರೀದಿಸಿದೆವು. ದೇವಸ್ಥಾನದ ಅಧಿಕಾರಿಗಳು ನಮ್ಮನ್ನು, ೩ನೇ ಸಂಖ್ಯೆಯ ಬಾಗಿಲಿನಿಂದ ಒಳಗೆ ಹೋಗುವಂತೆ ಸೂಚಿಸಿದರು, ಆದರೆ ಅದೆಲ್ಲಿದೆಯೆಂದು, ಯಾರೂ ಸರಿಯಾಗಿ ಏನೂ ಹೇಳಲಿಲ್ಲ. ಅಷ್ಟರಲ್ಲಿ ನಮ್ಮ ಪೂರನ್ ನ ಸ್ನೇಹಿತರು ಬಂದರು ಮತ್ತು ನಮ್ಮನ್ನು ಅವರು ಅದೇ ೩ನೇ ಸಂಖ್ಯೆಯ ದ್ವಾರದಿಂದ ಒಳಗೆ ಕರೆದೊಯ್ದರು.
ಮುಂದೆ ಓದು
http://www.vismayanagari.com/node/4571
ಕೇದಾರದ ದಾರಿಯಲ್ಲಿ ನಾವು ಉಖಿ ಮಠ ಎಂಬ ಜಾಗ ನೋಡುತ್ತೇವೆ. ಇದು, ಕೇದಾರೇಶ್ವರನ ಛಳಿಗಾಲದ ತಂಗುದಾಣವಾಗಿರತ್ತೆ. ಮೇಲೆ ಕೇದಾರೇಶ್ವರನ ದೇವಸ್ಥಾನ ನರಕ ಚತುರ್ದಶಿಯ ದಿನ ಮುಚ್ಚಿದಾಗ, ಮತ್ತೆ, ಅಕ್ಷಯ ತೃತೀಯದ ದಿನ ತೆಗೆಯುವವರೆಗೆ, ಉಖಿ ಮಠದಲ್ಲಿ, ಕೇದಾರೇಶ್ವರನ ಪೂಜೆ ನಡೆಯುತ್ತದೆ. ಕೇದಾರದಲ್ಲಿ ಈಶ್ವರನು ಸದಾಶಿವನೆಂದು ಪೂಜಿಸಲ್ಪಡುತ್ತಾನೆ. ಬೆಳಗಿನ ಜಾವ ೪ ಘಂಟೆಗೆ ಮಾಡುವ ಪೂಜೆಗೆ ’ನಿರ್ವಾಣ ಪೂಜೆ’ ಎಂಬ ಹೆಸರಿದೆ. ಈ ಪೂಜೆಯಲ್ಲಿ, ಶಿವನನ್ನು ಪಿಂಡರೂಪಿಯಲ್ಲಿ, ಮೂಲ ಸ್ವರೂಪದಲ್ಲಿ ತುಪ್ಪ ಮತ್ತು ನೀರಿನಿಂದ ಅಭಿಷೇಕ ಮಾಡಿ ಪೂಜಿಸಬಹುದು. ಇದರ ನಂತರ ಶೃಂಗಾರ ದರ್ಶನದಲ್ಲಿ, ಮುಖವಾಡ, ಹೂವು ಮತ್ತು ಆಭರಣಗಳಿಂದ ಶಿವನನ್ನು ಅಲಂಕರಿಸಿರುತ್ತಾರೆ. ಈಶ್ವರನ ತಲೆಯ ಮೇಲೆ ಬಂಗಾರದ ಛತ್ರಿ ನೇತಾಡುತ್ತಿರುತ್ತದೆ. ಇಲ್ಲಿ ಅಕ್ಕಿ, ಬೇಳೆ, ಕೇಸರಿ ಹಾಕಿ ಮಾಡಿದ ’ಕಿಚಡಿ’ಯನ್ನು ಪ್ರಸಾದ ಎಂದು, ನೈವೇದ್ಯ ಮಾಡಿ, ಭಕ್ತರಿಗೆ ಹಂಚುವ ಪದ್ಧತಿಯಿದೆ. ಮುಂದೆ ಓದು
http://www.vismayanagari.com/node/4567/edit
ಚಾರ್ ಧಾಮ್ ಯಾತ್ರೆ - ೪ (ಗಂಗೋತ್ರಿ)
ಬೆಬೆಳಿಗ್ಗೆ ಬೇಗ ಎದ್ದು ಗುಪ್ತ ಕಾಶಿಗೆ ಹೊರಟೆವು. ಇದು ಕೇದಾರದ ಮಾರ್ಗ. ದಾರಿಯಲ್ಲಿ ಏನಾದರೂ ತಿನ್ನಬಹುದೆಂದುಕೊಂಡು ಹೊರಟುಬಿಟ್ಟೆವು. ಆದರೆ ಈ ಮಾರ್ಗ ಎಷ್ಟು ನಿರ್ಜನವಾಗಿದೆಯೆಂದರೆ, ದಾರಿಯಲ್ಲಿ ಏನೆಂದರೆ ಏನೂ ಸಿಗುವುದಿಲ್ಲ. ಎಲ್ಲೋ ಒಂದೊಂದು ಅತಿ ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ಚಹದ ಅಂಗಡಿಗಳಿವೆ ಅಷ್ಟೆ. ಇಲ್ಲಿಯ ಸ್ಥಳೀಯ ತಯಾರಕರ ಬಿಸ್ಕತ್ತುಗಳು, ಪೆಪ್ಪರಮೆಂಟುಗಳು, ಚಹಾ ಬಿಟ್ಟರೆ ಬೇರೇನೂ ಇಲ್ಲ. ನಾವೂ ಏನನ್ನೂ ತೆಗೆದುಕೊಂಡು ಹೋಗಿರಲಿಲ್ಲ. ಕೊನೆಗೆ ವಿಚಾರಿಸುತ್ತಾ, ವಿಚಾರಿಸುತ್ತಾ ಬಂದು, ಒಂದು ಚಿಕ್ಕ ಚಹದಂಗಡಿಯಲ್ಲಿ, ನನ್ನವರು ಬ್ರೆಡ್ ಇದೆಯೆಂದು, ಆ ಅಂಗಡಿಯವನಿಗೆ ಸಲಹೆ, ಸೂಚನೆಗಳನ್ನು ಕೊಟ್ಟು, ಬ್ರೆಡ್ಡನ್ನು ಚೆನ್ನಾಗಿ ಗರಿಗರಿಯಾಗಿ ಬಿಸಿ ಮಾಡಿಸಿ, ಚಹದೊಂದಿಗೆ (ಅದಕ್ಕೂ, ನೀರೆಷ್ಟು ಇಡಬೇಕು, ಏಲಕ್ಕಿ ಹಾಕು, ಕುದಿಸು, ಕೊನೆಗೆ ಹಾಲು ಸೇರಿಸು, ಸಕ್ಕರೆ ಕಮ್ಮಿ ಹಾಕು ಎಂದೆಲ್ಲಾ ಹೇಳಿಕೊಟ್ಟು) ತಿಂದು ಮುಂದೆ ಹೊರಟೆವು. ಮುಂದೆ ಓದು
| shamala janardhanan | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು. http://antharangadamaathugalu.blogspot.com/ | |
| ಇವರ ವಿಸ್ಮಯ ಪುಟ | |