ಕನ್ನಡಿಗರಿಗೆ ಮಾಹಿತಿ ಕೊಡ್ತೀವಿ, ವಾರ್ತೆ ತಲುಪಿಸ್ತೀವಿ, ಕನ್ನಡದಲ್ಲೇ ಮನರಂಜನೆ ನೀಡ್ತೀವಿ, ಹಾಗೆ ಹೀಗೆ, ನಾವು ಮಿಕ್ಕ ಎಲ್ಲ ಕನ್ನಡದ ಟೀ.ವಿ ವಾಹಿನಿಗಳಿಗಿಂತ ಉತ್ತಮ ಮನರಂಜನೆ ಕೊಡ್ತೀವಿ ಅಂತೆಲ್ಲಾ ಕೇಳಿರೋದು ಎಲ್ರಿಗೂ ನೆನಪಿರಬಹುದು.
ಹೀಗೆಲ್ಲಾ ಸಾರ್ವಜನಿಕವಾಗಿ ಘೋಷಣೆ ಹೊರಡಿಸಿ ದಿನ ಕಳೆದಂತೆ ಇದೀಗ ಒಂದೆರಡು ವಾಹಿನಿಗಳು ಈ ಕನ್ನಡ ವಾಹಿನಿಗಳಲ್ಲಿ ಕನ್ನಡೇತರ ಭಾಷೆಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ಶುರು ಮಾಡಿಕೊಂಡಿವೆ.
ಮುಂದೆ ಓದು
ಪ್ರಾಕ್ಟರ್ ಅಂಡ್ ಗ್ಯಾಮ್ಬೇಲ್ ಕಂಪೆನಿಯವರ "ಹೆಡ್ ಅಂಡ್ ಶೋಲ್ದರ್ಸ್" ಶಾಂಪೂವಿನ ಚಿಕ್ಕ ಪೊಟ್ಟಣದ ಮೇಲೆ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾಹಿತಿ ಇರುವುದರ ಬಗ್ಗೆ ನಾವು ಬರೆದಿದ್ದೆವು. ಮುಂದೆ ಓದು
ರಾಷ್ಟ್ರ ಭಾಷೆ ಎಂಬ ಕಿರೀಟ ಕೂರಿಸಿ ಹಿಂದಿ ಭಾಷೆನ ಕನ್ನಡಿಗರ ಮೇಲೆ ಹೇರಕ್ಕೆ ಏನೆಲ್ಲಾ ಕಸರತ್ತು ಮಾಡ್ತಿದೆ ನಮ್ಮ ಕೇಂದ್ರ ಸರ್ಕಾರ.
ಶಿಕ್ಷಣ, ಉದ್ಯೋಗ ಇಲ್ಲೆಲ್ಲಾ ಹಿಂದಿ ತರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿ ಮಾಡುತ್ತಿರುವಂತಿದೆ.
ಈಗಾಗಲೇ ಓದು ಬರಹ ಮುಗಿಸಿರುವ, ಸರ್ಕಾರೇತರ ಉದ್ಯೋಗ ಮಾಡುತ್ತಿರುವ ಜನರಿಗೆ ಹಿಂದಿ ಹೇರಿಕೆ ಹೇಗೆ ಮಾಡಬಹುದು?
ಅದಕ್ಕೂ ಒಂದು ಪ್ಲಾನ್ ಕಂಡ್ಕೊಂಡಿದಾರೆ ನಮ್ಮ ಸರ್ಕಾರದವರು - ಗ್ರಾಹಕ ಸೇವೆಯಲ್ಲಿ ಹಿಂದಿ ಬಳಕೆ ತರಿಸಿ, ಬೇರೆ ಭಾಷಿಕರಿಗೆ ಹಿಂದಿ ಕಲಿಯದೆ ದಾರಿಯಿಲ್ಲ ಎಂಬಂತಹ ವಾತಾವರಣ ನಿರ್ಮಿಸುವುದು.
ಮುಂದೆ ಓದು
ರಾಷ್ಟ್ರ ಭಾಷೆಯಲ್ಲದ ಹಿಂದಿಯನ್ನು ಶಿಕ್ಷಣದಲ್ಲಿ ಹೇರುತ್ತಿರುವ ಬಗೆ ಈಗಾಗಲೇ ನೋಡಿದ್ದೇವೆ, ಮಾತನಾಡಿದ್ದೇವೆ.
ಒಂದು ಪ್ರಾದೇಶಿಕ ಭಾಷೆಯಾದ ಹಿಂದಿಯನ್ನು ಇತರ ಪ್ರದೇಶಗಳ ಮೇಲೆ ಏನಾದರೂ ಮಾಡಿ ಹೇರಲೇಬೇಕೆಂಬ ಪಣ ತೊಟ್ಟಂತಿರುವ ಕೇಂದ್ರ ಸರ್ಕಾರ, ಉದ್ಯೋಗವೆಂಬ ಪ್ರಬಲ ಅಸ್ತ್ರವನ್ನೂ ಬಳಸುತ್ತಿದೆ.
ನನ್ನ ನೆನ್ನೆಯ ಲೇಖನದಲ್ಲಿ ಹೇಳಿದಂತೆ, ಭಾರತ ಒಕ್ಕೂಟದಲ್ಲಿ ರಾಷ್ಟ್ರ ಭಾಷೆ ಎಂಬ ಸ್ಥಾನ ಯಾವ ಭಾಷೆಗೂ ಇಲ್ಲ.
ಕಾನೂನು ಚೌಕಟ್ಟು ಹೀಗಿದ್ದರೂ, ಹಿಂದಿ ಭಾಷೆಗೆ ರಾಷ್ಟ್ರ ಭಾಷೆಯೆಂಬ ಕಿರೀಟ ತೊಡಿಸಿ, ಕರ್ನಾಟಕದ ಬಹುತೇಕ ಶಾಲೆಗಳಲ್ಲಿ ಹಿಂದಿ ಭಾಷೆಯನ್ನೊಂದು ಕಡ್ಡಾಯ ಭಾಷೆಯನ್ನಾಗಿ ಏಕೆ ಕಲಿಸಲಾಗುತ್ತಿದೆ?
ಬಹಳಷ್ಟು ದಿನಗಳಿಂದ ಕನ್ನಡಿಗರನ್ನು ಹತ್ತಿರದಿಂದ ನೋಡಿದಾಗ ನನಗಾದ ಅನುಭವ ಇದು.
ಕನ್ನಡಿಗರಿಗೆ, ನಿಜವಾಗಿಯೂ ಅಧಿಕೃತ ಭಾಷೆ ಮತ್ತು ರಾಷ್ಟ್ರ ಭಾಷೆಯ ಮಧ್ಯ ಇರುವ ವ್ಯತ್ಯಾಸದ ಬಗ್ಗೆ ಸರಿಯಾದ ಅರಿವು ಇದ್ದಂತಿಲ್ಲ.
ಈ ಲೇಖನ, ಆ ಭಾಷಾ ಗೊಂದಲವನ್ನು ಸ್ವಲ್ಪ ಮಟ್ಟಿಗೆ ಹೋಗಲಾಡಿಸುವ ಪ್ರಯತ್ನವಾಗಿದೆ.
ಮುಂದೆ ಓದು
ಬೆ೦ಗಳೂರಿನ ಹಲವೆಡೆ ರಿಲೈಯನ್ಸ್ ಹಣಕಾಸು ಸ೦ಸ್ಥೆಯ (reliance capital) ಕನ್ಸೂಮರ್ ಫೈನಾನ್ಸ್ ವಿಭಾಗವು ತಮ್ಮ ಹಿ೦ದಿ ಜಾಹೀರಾತುಗಳನ್ನು ಹಾಕಿದ್ದಾರೆ. ಜೊತೆಗೆ ಎಫ್.ಎ೦. ರೇಡಿಯೋಗಳಲ್ಲಿ ಇ೦ಗ್ಲೀಷ್ ನಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ಈ ಸಂಸ್ಥೆಯು ಯಾವುದೇ ಜಾಹೀರಾತುಗಳಲ್ಲೂ ಕನ್ನಡ ಬಳಸುವ ಪ್ರಯತ್ನ ಮಾಡೇ ಇಲ್ಲ.ಬೆ೦ಗಳೂರಿನ ಗುಟ್ಟಳ್ಳಿ ಸರ್ಕಲ್ ನಲ್ಲಿ ರಿಲೈಯನ್ಸ್-ನ ಹಿ೦ದಿ ಜಾಹೀರಾತು ಫಲಕದ ಫೋಟೋ ಲಗತ್ತಿಸಲಾಗಿದೆ. ಮುಂದೆ ಓದು
ಅರವಿಂದ್ ಮಿಲ್ಸ್-ನವರ ಬಟ್ಟೆ ಬರೆ ಮಾರಾಟ ಮಳಿಗೆಯೇ "ಮೆಗಾಮಾರ್ಟ್". ಮೆಗಾಮಾರ್ಟ್ ಅಂಗಡಿಗಳು ಬೆಂಗಳೂರಿನಲ್ಲಿ ಹಲವೆಡೆ ನೀವು ನೋಡಿರಬಹುದು.
ಇವರ ಅತಿದೊಡ್ಡ ಮಳಿಗೆ ಇರುವುದು ಬನಶಂಕರಿಯಲ್ಲಿ. ಈ ನಾಲ್ಕಂತಸ್ತಿನ ಮೆಗಾ ಮಾರ್ಟ್ ಮಳಿಗೆಯಲ್ಲಿ ಕನ್ನಡಕ್ಕೆ ಮೈಕ್ರೋದಷ್ಟು ಜಾಗವೂ ನೀಡಿಲ್ಲ ಎನ್ನಬಹುದು.
ಮಳಿಗೆಯಲ್ಲಿ ಕನ್ನಡದ ಕೊರತೆಯ ದೊಡ್ಡ ಪಟ್ಟಿಯೇ ಮಾಡಬಹುದು. ಮುಂದೆ ಓದು
ಮೊಬೈಲ್ ಫೋನು ಸೇವೆ ನೀಡಲು ಮಾರುಕಟ್ಟೆಗೆ ಹೊಸದಾಗಿ ಇಳಿದಿರುವ ಕಂಪನಿ "ಟಾಟಾ ಡೊಕೊಮೊ ". ಮುಂದೆ ಓದು
ಸ್ಯಾಮ್ಸಂಗ್ ಕಂಪನಿಯು ತಮ್ಮ ಮೊಬೈಲ್ ಫೋನುಗಳ ಜಾಹೀರಾತಿಗಾಗಿ ಬೆಂಗಳೂರಿನ ಸುತ್ತೆಲ್ಲ ಕನ್ನಡದಲ್ಲಿ ದೊಡ್ಡದಾಗಿ ಬರೆದ ಹೋರ್ಡಿಂಗ್-ಗಳನ್ನು ನಿಲ್ಲಿಸುತ್ತಿದ್ದಾರೆ. "ಜೀವನವನ್ನು ಆನಂದಿಸಿರಿ" ಎಂಬ ಪಂಚ್-ಲೈನ್ ಹೊ೦ದಿರುವ ಈ ಹೋರ್ಡಿಂಗ್-ಗಳು ಜಾಹೀರಾತಿನ ಮೂಲಕ ಜನತೆಯನ್ನು ತಲುಪಲು ಸರಿಯಾದ ದಾರಿ ಯಾವುದು ಎಂದು ಸಾರಿ ಹೇಳುತ್ತಿವೆ.
| ಪ್ರಿಯಾಂಕ್ ಭಾರ್ಗವ್ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ಸಮಯ ಸಿಕ್ಕಾಗ ತಿಳಿಸುತ್ತೇನೆ. ಸದ್ಯಕ್ಕೆ ಕ್ಷಮೆ ಇರಲಿ. | |
| ಇವರ ವಿಸ್ಮಯ ಪುಟ | |