akshay ಪಿಸುಮಾತು

ಸ್ತೂರಿ ಎನ್ನುವ ಮಾಸಿಕ ಆರಂಭವಾದದ್ದೇ ಕನ್ನಡಿಗರಿಗೊಂದು ರೀಡರ್ಸ್ ಡೈಜೆಸ್ಟ್ ಕೊಡಬೇಕೆನ್ನುವ ಧ್ಯೇಯದೊಂದಿಗೆ. ಕಸ್ತೂರಿ ಕೂಡ ರೀಡರ್ಸ್ ಹಾಗೆಯೇ ಪ್ರೌಢ ಲೇಖನಗಳನ್ನು ಪ್ರಕಟಿಸುತ್ತ ಪ್ರಕಟಣೆಗಳ ಗುಣಮಟ್ಟ ಕಾಪಾಡಿಕೊಂಡು ಬಂದಿದೆ. ಇಲ್ಲೂ ಕೂಡ ಪುಸ್ತಕ ವಿಭಾಗವಿದೆ. ಓದಲೇಬೇಕೆನಿಸುವ ಕನ್ನಡದ ಬರಹಗಳು ಪುಸ್ತಕದ ತುಂಬೆಲ್ಲ ತುಂಬಿರುತ್ತದೆ. ಹೆಸರಾಂತ ಲೇಖಕರ ಬರಹಗಳನ್ನು ಕಸ್ತೂರಿಯಲ್ಲಿ ಓದುವುದೇ ಒಂದು ಹೆಮ್ಮೆ. ಇಂತದ್ದೇ ಹಲವಾರು ಮಾಸಿಕಗಳು ಕನ್ನಡದಲ್ಲಿ ಬಂದು ಹೋದವು. ಕೆಲವು ಇನ್ನೂ ಮಾರುಕಟ್ಟೆಯಲ್ಲೂ ಇವೆ. ಆದರೆ ಯಾವವೂ ಕಸ್ತೂರಿಗೆ ಸರಿಸಮನಾಗಿ ನಿಲ್ಲಲಿಲ್ಲ. ಮುಂದೆ ಓದು

Sharia law in pakistan- beating women to deathSharia law in pakistan- beating women to deathಅಂತೂ ಪಾಕಿಸ್ತಾನಕ್ಕೆ ಕೊನೆ ಕಾಲ ಬಂದ ಹಾಗಾಯಿತು. ಪಾಕಿಸ್ತಾನದ ಉತ್ತರದ ಸ್ವಾತ ಪ್ರದೇಶದಲ್ಲಿ ಮುಸ್ಲಿಂ ಶರಿಯತ ಕಾನೂನು ಎಂಬ ಗುಮ್ಮ ಬಂದು ಕುಳಿತುಕೊಳ್ಳುತ್ತಿದ್ದಂತೆ ಏಷ್ಯಾದ ಇನ್ನೊಂದು ಮುಸ್ಲಿಂ ರಾಷ್ಟ್ರ ಸರ್ವ ನಾಶವಾಗುವ ಕಾಲ ಸನ್ನಿಹಿತವಾದಂತಾಗಿದೆ. ಅಮೇರಿಕದ 17000 ಸೈನಿಕರು ಅಫಘಾನಿಸ್ಥಾನದ ಗಡಿ ತಲುಪಿದ್ದಾರೆ. ಪಾಕಿಸ್ತಾನದ ಸರಕಾರ ತಾನೇ ಸಾಕಿ ಬೆಳೆಸಿದ ಉಗ್ರರ ಕೈಗೊಂಬೆ ಅನ್ನುವುದು ಜಗತ್ತಿಗೇ ಸಾಬೀತಾದ ಮೇಲೆ ಅಮೇರಿಕಾಕ್ಕು ಬೇರೆ ದಾರಿಯಿಲ್ಲವೆನಿಸುತ್ತದೆ. ಅಮೇರಿಕದ ವಿಶ್ವವಿದ್ಯಾಲಯವೊಂದು ಕೈಗೊಂಡ ಸಂಶೋಧನೆ ಒಸಾಮಾ ಪಾಕಿಸ್ತಾನದಲ್ಲೇ ಇರುವದನ್ನು ಖಚಿತಪಡಿಸಿದೆ. ಹಾಗಾಗಿ ಅಮೇರಿಕದ ಸೈನಿಕರು ಪಾಕಿಸ್ತಾನದ ಗಡಿಯಲ್ಲಿ ದಾಳಿ ಮಾಡಲು ಒಬಾಮಾನ ಅಣತಿಗಾಗಿ ಕಾಯುತ್ತ ಕುಳಿತಿದ್ದಾರೆ. ಸಣ್ಣ ಪುಟ್ಟ ದಾಳಿ ಆರಂಭವೂ ಆಗಿದೆ. ಮುಂದೆ ಓದು

4 ಲಕ್ಷ ಕಾಶ್ಮೀರೀ ಬ್ರಾಹ್ಮಣರ ಮೇಲೆ ಹಲ್ಲೆ ಆಯಿತು. ನಿರಾಶ್ರಿತರಾದರು. ಅಷ್ಟು ಸುಂದರಿಯರು ಬೇರೆಲ್ಲೂ ಸಿಗಲಾರರೆಂದು ಮಾನಭಂಗ ಮಾಡಿ ಸಾಯಿಸಲಾಯಿತು. ಎಲ್ಲಿ ಹೋಗಿತ್ತು ಮಾನವ ಹಕ್ಕು ಅಯೋಗ್ಯ ಆಯೋಗ? ದಲಿತರ ಮೇಲೆ ಒಬ್ಬ ದಲಿತ ಹಲ್ಲೆ ಮಾಡಿದರೂ ವಿಷಯ ಮುಚ್ಚಿಟ್ಟು ರಾಷ್ಟ್ರವ್ಯಾಪಿ ಸುದ್ದಿ ಮಾಡುವ ಜನ ಎಲ್ಲಿ ನಿದ್ರಿಸುತ್ತಿದ್ದರು? ಮುಂದೆ ಓದು

ಹೆನ್ರಿ ಛಾರೇರೆಹೆನ್ರಿ ಛಾರೇರೆ ಪ್ಯಾಪಿಲಾನ್ ಅಂದರೆ ಫ್ರೆಂಚ್ ಭಾಷೆಯಲ್ಲಿ ಪತಂಗ. ಪ್ಯಾಪಿಲಾನ್ ನಿಜ ನಾಮಧೇಯ ಹೆನ್ರಿ ಛಾರೇರೆ. ಆತ ಇದ್ದದ್ದು ಜಗತ್ತಿಗೇ ನಾಗರೀಕತೆಯ ಪಾಠ ಮಾಡುವ ಸ್ವಚ್ಚಂದ ಫ್ರಾನ್ಸಿನಲ್ಲಿ. ಅದು ೧೯೩೩ನೇ ಇಸವಿ. ಎರಡನೇ ಮಹಾಯುಧ್ಧಕ್ಕೂ ಸ್ವಲ್ಪ ಮೊದಲಿನ ಕಾಲ. ಪ್ಯಾಪಿಲಾನ್ ಮಾಡಿದ ಒಂದು ಸಣ್ಣ ತಪ್ಪಿಗೆ ಅವನಿಗೆ ದೇಶಾಂತರ ಕಳುಹಿಸಿ ದ್ವೀಪವೊಂದರಲ್ಲಿ ಏಕಾಂತದ ಶಿಕ್ಷೆಗೆ ದೂಡುತ್ತಾರೆ ನಾಗರೀಕತೆಯ ಪಾಠ ಮಾಡಿದ ಜನ. ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಪಲಾಯನದ ಕನಸು ಕಾಣುತ್ತಾನೆ ಪ್ಯಾಪಿ. ಅದು ನೆರವೇರಲು ಹತ್ತು ವರ್ಷ ಬೇಕಾಗುತ್ತದೆ.ಮುಂದೆ ಓದು

ತಾಜಮಹಲ್ತಾಜಮಹಲ್"ನೀವು ಯಾವುದೇ ಚರಿತ್ರೆಯ ಪುಸ್ತಕ ತೆರೆದರೂ ಅದರ ಮೊದಲ ಪುಟದಲ್ಲೇ ಭಾರತದ ಪ್ರಸ್ತಾಪ ಇರಲೇಬೇಕು. ಒಂದೊಮ್ಮೆ ಇಲ್ಲವೆಂದಾದರೆ ಆ ಪುಸ್ತಕದ ಲೇಖಕ ಉದ್ಧೇಶಪೂರ್ವಕವಾಗಿಯೇ ಸೇರಿಸಿಲ್ಲ ಅಥವಾ ಮೊದಲ ಪುಟ ಹರಿದು ಹೋಗಿದೆ ಎಂದೇ ಅರ್ಥ." ಹೀಗೆ ಶುರು ಆಗುತ್ತದೆ ಭಾರತ ದರ್ಶನ. ಮುಂದೆ ಓದು

ಕನ್ನಡ ಕ್ಯಾಲೆಂಡರ್ಕನ್ನಡ ಕ್ಯಾಲೆಂಡರ್ವಿಜಯ ಕರ್ನಾಟಕ, ಕನ್ನಡದ ನಂಬರ್ ೧ ಪತ್ರಿಕೆ ವರ್ಷದ ಕೊನೆಯ ಸಾಪ್ತಾಹಿಕ ಸಂಚಿಕೆಯ ಜೊತೆ ಕ್ಯಾಲೆಂಡರ್ ಕೊಡಮಾಡಿದೆ. ಪ್ರತಿ ವರ್ಷ ಗೂಡಂಗಡಿಗಳ ಗೋಡೆಗೆ (ರಸ್ತೆ ಅಗಲೀಕರಣದಿಂದಾಗಿ ಅವು ಈಗ ಅಪರೂಪ!), ಹೇರ್ ಕಟಿಂಗ್ ಸಲೂನ್ಗಳ ಗೋಡೆಗೆ ಅಂಟಿಸಲು ಮಾತ್ರ ಯೋಗ್ಯವಾದಂತ ಸೀಳೆದೆಯ ನಟಿಯರ ಚಿತ್ರ ಹಾಕಿ ಬರುತ್ತಿದ್ದ ಪೂರ್ತಿ ಪುಟದ ಕ್ಯಾಲೆಂಡರ್ ಈ ಸಲ ಸ್ವಲ್ಪ ದೇಶ ಪ್ರೇಮ ಸಾರುವಂತೆ ಮೂಡಿ ಬಂದಿದೆ. ಮುಂದೆ ಓದು

ದೀಪಿಕಾ ಪಡುಕೊಣೆದೀಪಿಕಾ ಪಡುಕೊಣೆದೀಪಿಕಾ ಪಡುಕೋಣೆಗೆ ಮನೆ ಹೆಸರೇ ಮರೆತು ಹೋಗಿದೆಯಂತೆ. ಕನ್ನಡದ ಚಿತ್ರೋದ್ಯಮಕ್ಕೆ ಸ್ಯಾಂಡಲ್ವುಡ್ ಅನ್ನುವುದು ಮರೆತುಹೋಗುವಷ್ಟು ಸೊಕ್ಕಿದ್ದಾಳಂತೆ.
ಆವತ್ತು ಓಂ ಶಾಂತಿ ಓಂ ನೋಡುತ್ತಿದ್ದ ಬೆಂಗಳೂರಿನ ಜನ, ದೀಪಿಕಾ ಪಡುಕೋಣೆ ತಾನು ಬೆಂಗಳೂರಿನಿಂದ ಬಂದವಳು ಎಂದು ಡೈಲಾಗ್ ಹೊಡೆಯುತ್ತ ಎಂಟರ್ ಆಗುತ್ತಿದ್ದಂತೆ ಹೋ ಎಂದು ಕಿರುಚಿದ್ದನ್ನು ನೋಡಬೇಕಿತ್ತು. ನಮ್ಮೂರಿನ ಹುಡುಗಿ ಎಂಬ ಅಭಿಮಾನ ನಮ್ಮವರಿಗೆ. ಆದರೆ ಅದೇ ಅಭಿಮಾನ ದೀಪಿಕಾಗೂ ಇರಬೇಕಿತ್ತಲ್ಲ? ಮುಂದೆ ಓದು

ಬರೆದವರು
ಅಕ್ಷಯ ಭಾಗ್ವತ್
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
http://risingindian.blogspot.com
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content