ಶಿವಕುಮಾರ ಕೆ. ಎಸ್. ಪಿಸುಮಾತು


ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ)  ಮುಂದೆ ಓದು

"ಐ ಲವ್ ಯೂ"
ಚಕ್ರತೀರ್ಥದ ಉತ್ತುಂಗದಲ್ಲಿ ಈರ್ವರ ಮೈಮನಗಳೂ ಝೇಂಕರಿಸುತ್ತಿರುವಾಗ, ತಾನು ಊಟೆ ಊಟೆಯಾಗಿ ಅವಳಾಳದೊಳಗೆ ಬರಿದಾಗುತ್ತಿರುವಾಗ; ತನ್ನದೇ ತಲೆಗೂದಲಿನಲ್ಲಿ ಉತ್ಪತ್ತಿಯಾಗಿ, ಹಣೆ, ಹುಬ್ಬಿನ ಮೇಲೆಲ್ಲ ಧಾರಾಕಾರವಾಗಿ, ಅವಳ ಮುಖಕ್ಕಿಳಿದು ತೋಯಿಸಿದ ತನ್ನ ಬೆವರು, ಅವಳ ಕೆನ್ನೆಯನ್ನು ಸುಡುತ್ತಿದ್ದ ತನ್ನದೇ ಹಸಿ ಬಿಸಿ ತುಟಿಗಳಿಗೆ ತಾಕಿ ಒದ್ದೆ ಒದ್ದೆಯೆನ್ನಿಸುತ್ತಿರುವಾಗ ಅವನು ನಿಲ್ಲದುಸಿರಿನಲ್ಲಿ ಮೆಲ್ಲನುಸುರಿದ, ಮುಂದೆ ಓದು

ಅರವತ್ಮೂರನೇ ಸ್ವಾತಂತ್ಯ ದಿನಾಚರಣೆಯ ಶುಭಾಶಯಗಳು...

ವಂದೇ ಮಾತರಂ
--------------------
ವಂದೇ ಮಾತರಂ, ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ ||

ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ, ವರದಾಂ ಮಾತರಂ ||

ಸಪ್ತ ಕೋಟಿ ಕಂಠ ಕಲಕಲ ನಿನಾದ ಕರಾಲೇ
ದ್ವಿಸಪ್ತ ಕೋಟಿ ಭುಜೈರ್ಧ್ರತ ಖರಕರವಾಲೇ ಮುಂದೆ ಓದು

ಹೊಸ ಬೈಕು ಖರೀದಿಸಿದ ಮೇಲೆ ಸುಕುಮಾರನಿಗೆ ಭೂತ-ಪ್ರೇತಗಳ ಇರುವಿಕೆಯ ಬಗ್ಗೆ ನಂಬಿಕೆ ಬಂತು! ಅಂದರೆ ಇದೂವರೆಗೂ ಈ ವಿಷಯದಲ್ಲಿ ಇವನಿಗೆ ಆಸಕ್ತಿಯಿರಲಿಲ್ಲವೆಂದಾಗಲೀ ಅಥವಾ ಇವೆಲ್ಲವನ್ನೂ ನಂಬದ ಧೈರ್ಯವಿತ್ತೆಂದಾಗಲೀ ಇದರರ್ಥವಲ್ಲ. ಇವನ ಸ್ನೇಹಿತರಿಗೆ ಹೋಲಿಸಿದರೆ ಇವನೇ ಅಳ್ಳೆದೆಯವನು, ಪುಕ್ಕಲ. ಹೇಗೋ ಮೆತ್ತ ಮೆತ್ತಗೆ ಕಾಲೇಜು ಮುಗಿಸಿ ಕೊಂಡು ಬೆಂಗಳೂರಿನಲ್ಲಿ ಕೆಲಸ ಹಿಡಿದ. ಕೆಲಸ ಹಿಡಿದು ನಾಲ್ಕೈದು ವರ್ಷಗಳಾದ ಮೇಲೆ ಅವರಿವರ ಮತ್ತು ಸ್ನೇಹಿತರನೇಕರ ಸಲಹೆ, ಸೂಚನೆಗಳೆಲ್ಲ ಖಾಲಿಯಾಗಿ, ನಾಲ್ಕು ವರ್ಷಗಳಾದರೂ ಕೆಲಸಕ್ಕೆ ಹೋಗಲು ಇನ್ನೂ 'ನಗರ ಸಾರಿಗೆ' ಬಸ್ಸುಗಳನ್ನೇ ಅವಲಂಬಿಸಿಕೊಂಡಿದ್ದ ಇವನ ಪುಕ್ಕಲತನದ ಬಗ್ಗೆ ಬೈಗುಳಗಳು, ಬೆದರಿಕೆಗಳು ಶುರುವಾದ ಮೇಲೆ 'ಅದ್ಯಾವ ಬ್ರಹ್ಮವಿದ್ಯೆಯೋ ನೋಡಿಬಿಡೋಣ' ಎಂದುಕೊಂಡು ಬೈಕು ಖರೀದಿಸಿಯೇ ಬಿಟ್ಟ. ಮತ್ತೆ ಅವರಿವರ ಸಲಹೆ ಸೂಚನೆ, ಬೆದರಿಕೆಗಳನೆಲ್ಲ ಗಾಳಿಗೆ ತೂರಿ, 'ಹೇಗಿದ್ದರೂ ಬೈಕೂಂತ ತಗೋತಾ ಇದೀನಿ' ಎಂದುಕೊಂಡು ಬಲವಾಗಿಯೇ ಇದ್ದ ದೊಡ್ಡ ಬೈಕನ್ನೇ ತೆಗೆದುಕೊಂಡ. ಮುಂದೆ ಓದು

ಸಾಗರದೆಲ್ಲ ಅಲೆಗಳು ದಡವ ತಲುಪುವುದಿಲ್ಲ,
ಹೃದಯದೆಲ್ಲ ಮಿಡಿತಗಳು ಮನವ ತಾಕುವುದಿಲ್ಲ!
ಕಂಡ ಕಣ್ಣಿನೆಲ್ಲ ಬಿಂಬಗಳು ಎದೆಗಿಳಿಯುವುದಿಲ್ಲ
ತಲುಪಿದ್ದಕ್ಕಿಂತ ತಲುಪದಿದ್ದಕ್ಕೇ ತಪನೆ
ತಾಕದಿದ್ದನ್ನೂ ಕಳೆದುಕೊಂಡ ಬೇನೆ
ಎದೆಗಿಳಿಯದುದಕೆ ಎದೆಯುರಿ-ಸೋನೆ
ದಡವ ತಲುಪದಲೆಯ ನುಂಗಿ ನೊಣೆದ
ಅದರ ಹಿಂದಿನಲೆಯದೇನೂ ಹೆಚ್ಚಲಿಲ್ಲ ಗಮನ -
ಸಣ್ಣಲೆಯ ನುಂಗಿದುದಕೆ ಶಾಪವದಕೆ-ದಡ ಮುಟ್ಟಿ
ಅಂದುಕೊಂಡಷ್ಟೂ ದೂರ ತಲುಪದೇ ಅದರ ಶಕ್ತಿ ಪತನ!
ಸಿಕ್ಕಿದ್ದನ್ನೂ ಸಿಗಲಾರದುದರ ನೋವಿನಲಿ ದೂರ ಸರಿಸಿ, ಮುಂದೆ ಓದು

ಟರ್ಮಿನೇಟರ ಸಾಲ್ವೇಶನ್ಟರ್ಮಿನೇಟರ ಸಾಲ್ವೇಶನ್

'ಟರ್ಮಿನೇಟರ್' ಚಲನಚಿತ್ರಗಳ ಸಾಲಿನಲ್ಲಿ ನಾಲ್ಕನೆಯ ಚಿತ್ರವಾಗಿ ಇವತ್ತು (26/ಜೂನ್/2009) ಭಾರತದಲ್ಲಿ ಬಿಡುಗಡೆಯಾಗಿರುವ ಇಂಗ್ಲೀಷ್ ಚಿತ್ರ - 'ಟರ್ಮಿನೇಟರ್ ಸಾಲ್ವೇಶನ್'.

ಮುಂದೆ ಓದು

ಮ್ಮ ಬಸ್ಸು ನಗರದ ಪರಿದಿಯೊಳಕ್ಕೆ ಬರುತ್ತಿದ್ದಂತೆಯೇ ಶುರುವಾದ ಜನರ ಓಡಾಟ, ವಾಹನ ದಟ್ಟಣಿ, ಧೂಳು ಎಲ್ಲವನ್ನೂ ನೋಡಿ ಕಿಟಕಿ ಪಕ್ಕ ಕುಳಿತ್ತಿದ್ದ ನನ್ನಮ್ಮ ಅಚ್ಚರಿಯಿಂದ ಉದ್ಗರಿಸಿದಳು. “ಅಲ್ಲಾ, ಈ ಪಾಟಿ ಜನ ಎಲ್ಲಿಂದ ಬರ್ತಾರೆ? ಏನು ಮಾಡ್ತಾರೆ?” ನಾನು ಉತ್ತರಿಸಿದೆ, ಮುಂದೆ ಓದು

ಒಂದೂರಿನಲ್ಲಿ ಒಬ್ಬಳು ಮಹಾ-ಜಿಪುಣಿ ಮುದುಕಿಯಿದ್ದಳು. ಆಕೆಗೆ ಒಬ್ಬನೇ ಮಗ, ಆ ಮಗನಿಗೊಬ್ಬಳು ಹೆಂಡತಿ. ಮಗ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಮುದುಕಿ ಯಾವಾಗಿನಿಂದಲೂ ತರಕಾರಿ ವ್ಯಾಪಾರ ಮಾಡುತ್ತಿದ್ದಳು. ಹಿತ್ತಲಿನಲ್ಲಿ ಸಣ್ಣ ಸಣ್ಣ ಪಾತಿ ಮಾಡಿ ಇಷ್ಟಿಷ್ಟೇ ಬದನೇಕಾಯಿ, ಗೆಣಸು; ಸಣ್ಣ ಸಣ್ಣ ಚಪ್ಪರ ಹಾಕಿ ತೊಂಡೇಕಾಯಿ, ಚಪ್ಪರದವರೆ; ಬೇಲಿಯ ಮೇಲಕ್ಕೆಲ್ಲ ಬಳ್ಳಿ ಹಬ್ಬಿಸಿ ಹೀರೇಕಾಯಿ, ಸೋರೆಕಾಯಿ, ಹಾಗಲ ಬೆಳೆಯುತ್ತಿದ್ದಳು.ಮುಂದೆ ಓದು

ನಾನೀಗ ಅಜ್ಞಾತವಾಸಿ. ರಾಜಾಗೃಹಕ್ಕೆ ಹೆದರಿ ತಲೆಮರೆಸಿಕೊಂಡು ಪರದೇಶಿಯಾಗಿ, ಜನಪರ ಚಳುವಳಿಯ ರಹಸ್ಯ ರಾಯಭಾರಿಯಾಗಿ ಮಲೆಯಾಳ ದೇಶದ ಈ ಕುಗ್ರಾಮಕ್ಕೆ ಬಂದಿಳಿದಿದ್ದೇನೆ, ನಮ್ಮ ಚಳುವಳಿಯ ಈ ಭಾಗದ ಮುಖ್ಯಸ್ಥರಾದ ರಾಧೇಯರ ಮನೆಗೆ. ಘನಕಾಡಿನ ನಡುವಿನ ಈ ಗ್ರಾಮದ ಜನತೆಗೆ ನಾನು ಮೂಡಣದೇಶದಲ್ಲಿರುವ ರಾಧೇಯರ ದೂರ ಸಂಬಂಧಿ ಅಕ್ಕನ ಮಗ. ಹುಟ್ಟಿನಿಂದ ಇದ್ದ ಜಾಡ್ಯದ ಔಷಧೋಪಚಾರಕ್ಕಾಗಿ ಇಲ್ಲಿಗೆ ಬಂದಿದ್ದೇನೆ!ಮುಂದೆ ಓದು

ಳಿಗಾಲದ ಸಂಜೆ ಮೆತ್ತಗೆ ರಾತ್ರಿಯಾಗುತ್ತಿತ್ತು. ಶನಿವಾರವಾದುದರಿಂದ ರಸ್ತೆಗಳಲ್ಲಿ ವಾಹನದಟ್ಟಣಿ ಜಾಸ್ತಿಯಿತ್ತು. ವಾರವೆಲ್ಲ ಮೈಮುರಿದು ದುಡಿದ ಜನ, ಬರುವ ಭಾನುವಾರದ ವಿರಾಮಕ್ಕೆ ಹಾತೊರೆಯುತ್ತಿದ್ದುದು ಕಾಣಿಸುತ್ತಿತ್ತು. ನಾನೂ ನನ್ನ ಸ್ನೇಹಿತನೂ ವಾಕಿಂಗ್ ಹೊರಟಿದ್ದೆವು. ಮನುಷ್ಯನ ವ್ಯಕ್ತಿತ್ವ-ವರ್ತನೆಗಳ ಬಗ್ಗೆ ನಮ್ಮದೇ ಸಿದ್ಧಾಂತಗಳಾಧಾರಿತ ಮಾತು-ಹರಟೆ ನಡೆಯುತ್ತಿತ್ತು.

ಮುಂದೆ ಓದು

ಬರೆದವರು
ಶಿವಕುಮಾರ ಶೇಷಪ್ಪ ಕುಂದೂರು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content