ವಿಸ್ಮಯ ನಗರಿ ಕನ್ನಡದ ಒಂದು ಸುಂದರ ತಾಣ. ಕನ್ನಡಿಗರ ಅಚ್ಚುಮೆಚ್ಚಿನ ಈ ತಾಣ ಮೂರು ವರ್ಷ ಯಶಸ್ವಿಯಾಗಿ ಪೂರೈಸುತ್ತಿದೆ. ಇಡೀ ಪ್ರಪಂಚಾದ್ಯಂತ ಓದುಗರಿರುವ ಈ ತಾಣ ಈಗಾಗಲೇ ಲಕ್ಷಾಂತರ ಹಿಟ್ಸ್ ಪಡೆದಿದೆ. ಟ್ರಾಫಿಕ್ ಇನ್ನೂ ಹೆಚ್ಚುತ್ತಿದೆ!! ಸಾವಿರಾರು ಜನರನ್ನು ಮನಸೆಳೆದಿರುವ ಈ ತಾಣ ನಿಮಗೂ ಇಷ್ಟವಾಗಬಹುದು.
ವಿಸ್ಮಯ ಪಿಸುಮಾತು
ಇದು ವಿಸ್ಮಯ ಪ್ರಜೆಗಳಾಗಿರುವ ಕನ್ನಡಿಗರ ಬ್ಲಾಗ್. ಇಲ್ಲಿ ನಿಮ್ಮ ಅಭಿಪ್ರಾಯ, ಅನುಭವ, ಕವನ, ಲೇಖನಗಳನ್ನು ಬರೆಯ ಬಹುದು. ಈಗಾಗಲೇ ವಿಸ್ಮಯ ನಗರಿಯಲ್ಲಿ 812 ಬ್ಲಾಗ್ ಗಳಿವೆ. 97 ಜನ ಪಿಸುಮಾತುಗಾರರು ಇದ್ದಾರೆ. ಅಷ್ಟೊಂದು ಜನರ ವಿಚಾರಧಾರೆ ಹರಿದಿದೆ. ಇನ್ನೂ ಬರೆಯುತ್ತಿದ್ದಾರೆ. ಬೇರೆಲ್ಲ ಕನ್ನಡ ಬ್ಲಾಗ್ ಗಳು ಬರಹಗಾರ ನಿಲ್ಲಿಸಿದಾಕ್ಷಣ ಜನಪ್ರೀಯತೆ, ಓದುಗರು ಕಡಿಮೆ ಆಗುತ್ತಾ ಬರುತ್ತೆ. ಆದರೆ ವಿಸ್ಮಯ ಪಿಸುಮಾತಲ್ಲಿ ಹಾಗಲ್ಲ. ತಡ ಯಾಕೆ ವಿಸ್ಮಯ ಪಿಸುಮಾತು ವಿಭಾಗದಲ್ಲಿ ಬರೆಯಿರಿ, ಪ್ರತಿದಿನ ಓದಿರಿ.
ವಿಸ್ಮಯ ಚಿತ್ರಶಾಲೆ
ಈಗಾಗಲೇ 906 ಚಿತ್ರಗಳಿರುವ ಈ ಚಿತ್ರಶಾಲೆಯಲ್ಲಿ ಕಣ್ಣನ್ನು ತಂಪು ಮಾಡುವಂತಹ ಸುಂದರ ಚಿತ್ರಗಳಿವೆ. ನೀವು ಸಹ ನಿಮ್ಮ ಚಿತ್ರ ಹಾಕಬಹುದು! ನಿಮ್ಮ ಫೋಟೋಗ್ರಾಫಿಯನ್ನು ಕನ್ನಡಿಗರಿಗೆ ತೋರಿಸಿ ಹೆಮ್ಮೆಯಿಂದ.
ವಿಸ್ಮಯ ಚರ್ಚಾಕೂಟ
ಕನ್ನಡದಲ್ಲಿ ಚರ್ಚೆ ಮಾಡಲು ಇದು ಉತ್ತಮ ಜಾಗ. ಇಲ್ಲಿ ಬಿಸಿ ಬಿಸಿ ಚರ್ಚೆ ಸಾಮಾನ್ಯ!
ವಿಸ್ಮಯ ಮಾರ್ಕೆಟ್
ನಿಮ್ಮ ಅಂಗಡಿ, ಕಂಪನಿ, ಶಾಲೆ, ಸೇವೆ ವ್ಯಾಪಾರದ ಬಗ್ಗೆ ತಿಳಿಸಲು ಇಲ್ಲಿ ಭೇಟಿ ಕೊಡಿ.
ವಿಸ್ಮಯ ಚಿನ್ನದಂತಾಮಾತು
ಜನಪ್ರಿಯ ನುಡಿಮುತ್ತುಗಳ ಸಂಗ್ರಹ. ನೀವು ಸಹ ನಿಮ್ಮ ಸಂಗ್ರಹವನ್ನು ಸೇರಿಸಬಹುದು.
ವಿಸ್ಮಯ ಸಮೀಕ್ಷೆ
ಇದು ವಿಸ್ಮಯ ನಗರಿಯ ಪ್ರಜೆಗಳ ಅಭಿಪ್ರಾಯಗಳ ಸಮೀಕ್ಷೆ. ಇಲ್ಲಿ ನೀವು ಓಟು ಹಾಕಬಹುದು.
ಬನ್ನಿ ನಮ್ಮ ಹೆಮ್ಮೆಯ ಕನ್ನಡ ಭಾಷೆಯನ್ನು ಅಂತರ್ಜಾಲದಲ್ಲಿ ಬೆಳೆಸೋಣ. ಇದಕ್ಕೆ ನೀವು ಹಣ ನೀಡಬೇಕಾಗಿಲ್ಲ. ವಿಸ್ಮಯ ನಗರಿ ಬಳಸಿ. ಇಲ್ಲಿ ಕನ್ನಡದಲ್ಲಿ ಬರೆಯಿರಿ. ಓದಿರಿ. ನಿಮ್ಮ ಅನಿಸಿಕೆ ತಿಳಿಸಿ. ಕಮೆಂಟ್ ಹಾಕಿ. ವಂದನೆಗಳು.
ವಿಸ್ಮಯ ಸಾಫ್ಟ್ ವೇರ್ ಲಿಮಿಟಡ್ ಮುಖ್ಯ ಗುರಿ ಕನ್ನಡವನ್ನು ಇಂಟರ್ನೆಟನಲ್ಲಿ ಬೆಳೆಸುವದು. ಇದೇ ಉದ್ದೇಶದಿಂದ ಆರಂಭವಾದದ್ದು ಈ ಕನ್ನಡ ತಾಣ ವಿಸ್ಮಯ ನಗರಿ. ಈಗ ಸಾವಿರಾರು ಕನ್ನಡಿಗರು ಭೇಟಿ ನೀಡುತ್ತಿರುವ ಈ ತಾಣ ಜನಪ್ರಿಯಗೊಳ್ಳುತ್ತಿದೆ.
ನೀವು ಸಹ ನಮ್ಮ ಈ ಪ್ರಯತ್ನಕ್ಕೆ ಸಹಾಯ ಮಾಡಬಹುದು.
- ವಿಸ್ಮಯ ನಗರಿಯಲ್ಲಿ ಕನ್ನಡ ಬ್ಲಾಗ ಬರೆಯುವದರ ಮೂಲಕ
- ವಿಸ್ಮಯ ನಗರಿಯಲ್ಲಿ ಕವನ ಬರೆಯುವದರ ಮೂಲಕ
- ಚರ್ಚೆ ಮಾಡುವದರ ಮೂಲಕ
- ವಿಸ್ಮಯ ನಗರಿಯಲ್ಲಿ ಫೋಟೋ ಕಳುಹಿಸುವದರ ಮೂಲಕ
- ವಿಸ್ಮಯ ನಗರಿಯಲ್ಲಿ ಲೇಖನಗಳನ್ನು ಓದುವದರ ಮೂಲಕ ಮತ್ತು ಅವುಗಳಿಗೆ ಕಮೆಂಟ್ ಬರೆಯುವದರ ಮೂಲಕ
Re: ವಿಸ್ಮಯ ನಗರಿಯ ಪರಿಚಯ
ಇದರಲ್ಲಿ ಫೊಟೋ ಹೇಗೆ ಹಾಕುವುದು
Re: ವಿಸ್ಮಯ ನಗರಿಯ ಪರಿಚಯ
ನಮಸ್ಕಾರಗಳು ನಿತೇಶ್ ಅವರೇ,
ವಿಸ್ಮಯ ನಗರಿಗೆ ಸುಸ್ವಾಗತ.
ಇಲ್ಲಿ ಚಿತ್ರ ಹಾಕುವದು ತುಂಬಾ ಸುಲಭ! ಈ ಮುಂದಿನ ಯಾವುದೇ ಮಾರ್ಗದ ಮೂಲಕ ಹೊಸ ಚಿತ್ರ ಸೇರಿಸ ಬಹುದು.
ಅಲ್ಲಿ ನಿಮ್ಮ ಚಿತ್ರ ಆರಿಸಿ ಅದಕ್ಕೆ ಸೂಕ್ತ ಹೆಸರು ಕೊಡಿ. ಎಷ್ಟು ಸಿಂಪಲ್ ಅಲ್ವಾ?
ವಂದನೆಗಳೊಂದಿಗೆ
--ರಾಜೇಶ ಹೆಗಡೆ
Re: ವಿಸ್ಮಯ ನಗರಿಯ ಪರಿಚಯ
ಕವನ ಹೇಗೆ ಬರೆಯಬೇಕು ಅಂತ ತೀಳಿತ್ತಿಲ್ಲ.
Re: ವಿಸ್ಮಯ ನಗರಿಯ ಪರಿಚಯ
ಮೇಲಧಿಕಾರಿ ಯವರೆ,
ನಾವು ವಿಸ್ಮಯನಗರಿ ಗೆ Login ಆಗಿದ್ದಾಗ ಅಕಸ್ಮಾತ್ ನಮ್ಮ Browser/System Hang ಆಗಿ Screen Close ಅದರೆ ಮತ್ತೆ ನಾವು ವಿಸ್ಮಯನಗರಿ Re-Open ಮಾಡಿದರೆ ನಮ್ಮ User Account Active ಆಗಿರುತ್ತದೆ. ಅದರೆ ಒಂದು ತೊಂದರೆ ಏನೆಂದರೆ ನಾವು Logout ಅದರೂ ಸಹ ಮತ್ತೆ ವಿಸ್ಮಯನಗರಿ Site Open ಮಾಡಿದರೆ ಆದು Login Status ನಲ್ಲೇ ಇರುತ್ತದೆ. ಮತ್ತೆ-ಮತ್ತೆ Logout ಮಾಡಿದರೂ ಸಹ ಈ ತೊಂದರೆ ಸರಿಹೋಗುವುದಿಲ್ಲ. ಇದನ್ನು ನಾನು ಹಲವು ಸಲ ನೋಡಿದ್ದೇನೆ (In Internet Explorer Browser). ಈ ತೊಂದರೆ ನಾನು temporary files folder ಕ್ಲಿಯರ್ ಮಾಡಿದರೆ ಮಾತ್ರ ಸರಿಹೋಗುತ್ತದೆ. ನೀವು ಇದನ್ನು ದಯವಿಟ್ಟು ಪರಿಶೀಲಿಸುವಿರಾ?
Re: ವಿಸ್ಮಯ ನಗರಿಯ ಪರಿಚಯ
ಹಾಯ್ ವಿನಯ್ ಅವರೇ,
ಈ ಹೊಸ ವಿಸ್ಮಯ ನಗರಿಯಲ್ಲಿ ಈ ತರಹದ ಸಮಸ್ಯೆ ಇರಕೂಡದು. ಇನ್ನೂ ಇದ್ದರೆ ತಿಳಿಸಿ.
ವಂದನೆಗಳೊಂದಿಗೆ
--ಮೇಲಧಿಕಾರಿ
ವಿಸ್ಮಯ ನಗರಿ
Re: ವಿಸ್ಮಯ ನಗರಿಯ ಪರಿಚಯ
ನನಗೆ ಈ ತಾಣ ಗೂಗಲ ಸರ್ಚ್ ಇಂಜಿನ್ ಮೂಲಕ ತಿಳಿಯಿತು. ನಾನು ನನ್ನ ಬ್ಲೊಗ್ ನಲ್ಲಿ ಬರೆಯುವುದಕ್ಕಿಂತ ಇದರಲ್ಲಿ ತುಂಬಾ ಸುಲಭ ಹಾಗು ಆನಂದದಾಯಕ ಕೂಡ.
ಆದರೆ ಇಲ್ಲಿ ನಾವು ಸ್ನೇಹಿತರನ್ನು ನಮ್ಮ ಗುಂಪಿಗೆ ಆಹ್ವಾನಿಸಿದಾಗ ಅಥವಾ ಅವರು ನಮ್ಮನ್ನು ಅವರ ಸ್ನೇಹಕ್ಕಾಗು ಆಹ್ವಾನಿಸಿದಾಗ ನಮಗೆ ತಿಳಿಯುವುದು ಸ್ವಲ್ಪ ಕಷ್ಟ. ಅದಕ್ಕೆ ನನ್ನ ಸಲಹೆಯೇನೆಂದರೆ, ನಾವು ಲಾಗ್ ಇನ್ ಆದ ತಕ್ಷಣ ತಿಳಿಯುವಹಾಗೆ ಅದನ್ನು display ಮಾಡಲು ಸಾದ್ಯವಿಲ್ಲವೇ? ಪರಿಶೀಲಿಸಿ.
Re: ವಿಸ್ಮಯ ನಗರಿಯ ಪರಿಚಯ
ನನಗೆ ವಿಸ್ಮಯ ನಗರಿ ಪರಿಚಯಿಸಿದವರು ಸನ್ಮಾನ್ಯ ಹರಿಹರಪುರ ಶ್ರೀಧರ್ ಅವರು. ಇದೊಂದು `ನೆಮ್ಮದಿಯ ತಾಣ'; `ಹೊಂಗೆಯ ನೆರಳು'; ನನ್ನೆಲ್ಲ `ತುಡಿತ ಮಿಡಿತ' ಗಳಿಗೆ ಸೂಕ್ತವಾದ `ಅರಳಿ ಕಟ್ಟೆ' ಎಂದು ಭಾಸವಾಗಿದೆ. `ಪಿಸುಮಾತಿನಲ್ಲಿ' ನಾನೂ ಭಾಗಿಯಾಗಲು ಆಸಕ್ತಿಯಿದೆ. ಒಂದು ಒಳ್ಳೆಯ ತಾಣ ಸ್ಥಾಪಿಸಿದವರು ಹಾಗೂ ಪರಿಚಯಿಸಿದರಿಗೆ ಧನ್ಯವಾದಗಳು.
Re: ವಿಸ್ಮಯ ನಗರಿಯ ಪರಿಚಯ
ತುಂಬಾ ಚೆನ್ನಾಗಿದೆ
Re: ವಿಸ್ಮಯ ನಗರಿಯ ಪರಿಚಯ
ಬೇರೆ ಸೈಟಗಳಲ್ಲಿ ಲೇಖನಗಳ ಎಲ್ಲಾ ಹಕ್ಕುಗಳು ಲೇಖಕರದ್ದು ಎನ್ನುವ ಸ್ಪಸ್ಟಿಕರಣವಿದೆ. ತಮ್ಮ ವೆಬಸೈಟನಲ್ಲಿ ಅದರ ಬಗ್ಗೆ ಏನು ಹೇಳಿಲ್ಲ.
Re: ವಿಸ್ಮಯ ನಗರಿಯ ಪರಿಚಯ
ಹಾಯ್ ಅನಾಮಿಕರೇ,
ಖಂಡಿತ ವಿಸ್ಮಯ ನಗರಿಯಲ್ಲಿ ಪ್ರಕಟವಾಗುವ ಎಲ್ಲ ಲೇಖನಗಳ ಹಕ್ಕು ಆಯಾ ಲೇಖಕರದ್ದೇ. ವಿಸ್ಮಯ ನಗರಿ ನಿಮ್ಮ ಭಾವನೆ, ವಿಚಾರ ಧಾರೆಗಳ ವ್ಯಕ್ತಪಡಿಸಲು ವೇದಿಕೆ. ಕೇವಲ ತಾಣ ವಿನ್ಯಾಸದ ಮೇಲೆ ಮಾತ್ರ ವಿಸ್ಮಯ ಸಾಫ್ಟ್ ವೇರ್ ಹಕ್ಕನ್ನು ಹೊಂದಿದೆ.
ಈ ತಾಣದಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಆಯ್ದ ಕೆಲವನ್ನು ವಿಸ್ಮಯ ನಗರಿಯ ಪುಸ್ತಕದಲ್ಲಿ ಪ್ರಕಟಿಸಲಾಗುವದು. ಅಕಸ್ಮಾತ್ ಯಾವುದಾದರೂ ಲೇಖಕರಿಗೆ ಅದು ಇಷ್ಟ ಇಲ್ಲದಿದ್ದರೆ ಅದನ್ನೂ ಸಹ ತಿಳಿಸಿದರೆ ಅಲ್ಲಿ ಪ್ರಕಟವಾಗುವದಿಲ್ಲ.
ಆದರೆ ಆಯಾ ಲೇಖಕರ ಅನುಮತಿ ಇಲ್ಲದೇ ಇಲ್ಲಿನ ಲೇಖನವನ್ನು ಬೇರೆ ತಾಣಕ್ಕೆ ಕಾಪಿ ಮಾಡುವಂತಿಲ್ಲ.
ತಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ.
ವಂದನೆಗಳು
--ಮೇಲಧಿಕಾರಿ
ವಿಸ್ಮಯ ನಗರಿ
Re: ವಿಸ್ಮಯ ನಗರಿಯ ಪರಿಚಯ
ನನ್ನ ಅಭಿಪ್ರಾಯ ಅಂದ್ರೆ ನಿಜ ಹೇಳೋದೇ ಅಲ್ವೇ? ಹಾಗಾದರೆ ದಿಢೀರನೆ ಇಲ್ಲಿ ಭೇಟಿಕೊಡಲು ಕಾರಣ ಹೇಳಿಬಿಡ್ತೀನಿ. ವಿಸ್ಮಯನಗರಿ ಪ್ರವೇಶಮಾಡಿಸಿದವರು ಬೆಂಗಳೂರಿನ ನನ್ನ ಮಿತ್ರ ಪ್ರಸನ್ನ. ಅದು ಒಳ್ಳೆಯ ಕಾಲಕ್ಕೆ ಉಪಯೋಗಕ್ಕೆ ಬಂತು. ಸಂಪದದ ಆಧುನೀಕರಣ ಕಾಮಗಾರಿ ನಡೀತಾ ಇದೆ. ಈಗ ಸುಮ್ಮನೆ ಕೂರೋ ಬದಲು ಇಲ್ಲಿ ಬಂದೆ. ಇಲ್ಲಿ ಜಾಂಡಾ ಊರೋ ಪರಿಸ್ಥಿತಿ ನಿರ್ಮಾಣ ವಾದರೆ ಉಳಿದು ಬಿಡುವ ಲೆಕ್ಕಾಚಾರ.ಸಂಪದದಂತೆ ಇಲ್ಲೂ ಸನ್ಮಿತ್ರರು ಕಾಲು ಕೆರೆದುಕೊಂಡು ಬಂದರೆ ಶಿವಾ ಅಂತಾ ಸುಮ್ಮನಿರುವ ಅಭಿಪ್ರಾಯವೂ ಇದೆ.ಇಷ್ಟು ನನ್ನ ವಿಚಾರ. ಅರರೆ ನನ್ನ ವಿಚಾರ ನಿಮಗೆಲ್ಲಿ ಹೇಳಿದ್ದೀನಿ. ಮುಂದೆ ಹೇಳಬೇಕಷ್ಟೆ. ನೋಡೋಣಾ, ನಮ್ಮಂತ ಹಳ್ಳೀ ಹೈದರ ವಿಚಾರ ನಿಮಗೆ ಹಿಡಿಸುತ್ತಾ ಅಂತಾ! ಒಂದು ವಿಚಾರ ಅಂತೂ ನಿಮಗೆ ತಿಳಿದಿರಲಿ. ನಂದು ಬುದ್ಧಿ ಕೆಲಸ ಕಡಿಮೆ. ಭಾವನೆಯೇ ಹೆಚ್ಚು.
ನಿಮ್ಮ ಅನಿಸಿಕೆ ತಿಳಿಸಿ